ಗೂಗಲ್ ಮ್ಯಾಪ್ ದಾರಿತಪ್ಪಿಸಿತ್ತು
ತಡಿಯಂಡ ಮೋಳ್ ಚಾರಣಕ್ಕೆಂದು ಕೇರಳದಿಂದ ಬಂದಿದ್ದ 36 ವಷ೯ದ ಜಿ.ಎಸ್. ಶರಣ್ಯ ಕಾಣೆಯಾದ ಪ್ರಕರಣ ಭಾನುವಾರ ಸಂಜೆ ಆದಿವಾಸಿಗಳು ಆಕೆಯನ್ನು ಪತ್ತೆ ಮಾಡುವ ಮೂಲಕ ಸುಖಾಂತ್ಯಗೊಂಡಿದೆ.
ಕೇರಳದ ಕೊಚ್ಚಿಯಲ್ಲಿ ಸಾಫ್ಟವೇರ್ ಉದ್ಯೋಗಿಯಾಗಿರುವ ಶರಣ್ಯ ಮೂಲತ ಕೇರಳದ ಎಯ್ಯನ್ ಕೋಡ್ ಎಂಬ ಗ್ರಾಮದವರು. ತಂದೆ ಗೋಪಿ ತಾಯಿ ಶೈಲಜ.
ಗೂಗಲ್ ನಲ್ಲಿ ತಡಿಯಂಡಮೋಳ್ ಶಿಖರದ ಬಗ್ಗೆ ತಿಳಿದುಕೊಂಡ ಶರಣ್ಯ ಚಾರಣ ಮಾಡುವ ಇಚ್ಚೆಯಿಂದ ಏಪ್ರಿಲ್ 1 ರಂದು ಕಬ್ಬಿನಕಾಡಿಗೆ ಬಂದು ಸ್ಥಳೀಯ ಹೋಂಸ್ಟೇಯಲ್ಲಿ ಇದ್ದಳು. ಏಪ್ರಿಲ್ 2 ರಂದು ಬೆಳಗ್ಗೆ 7.30 ಗಂಟೆಗೆ ತಡಿಯಂಡಮೋಳ್ ಚಾರಣಕ್ಕೆಂದು ತೆರಳಿದ ಈಕೆಯನ್ನು ತಪ್ಪಲಿನ ಗೇಟ್ ನಲ್ಲಿ ಅರಣ್ಯ ಸಿಬ್ಬಂದಿಗಳು ತಡೆದ ಒಬ್ಬಂಟಿಯಾಗಿ ಚಾರಣಕ್ಕೆ ತೆರಳುವಂತಿಲ್ಲ ಎಂದು ಹೇಳಿದರು. ಕೆಲ ಸಮಯದಲ್ಲಿಯೇ 12 ಮಂದಿಯಿದ್ದ ಮತ್ತೊಂದು ತಂಡ ಚಾರಣಕ್ಕೆಂದು ಬಂದಾಗ ಅರಣ್ಯ ಸಿಬ್ಬಂದಿಗಳು ಶರಣ್ಯಳನ್ನು ಆ ತಂಡದೊಂದಿಗೆ ಚಾರಣಕ್ಕೆ ಕಳುಹಿಸಿದ್ದರು.
ಏಪ್ರಿಲ್ 2 ರಂದು ಬೆಳಗ್ಗೆ 8.30 ಗಂಟೆಗೆ ಚಾರಣ ಪ್ರಾರಂಭಿಸಿದ ಶರಣ್ಯಳ ಕಥೆ ಮುಂದೇನಾಯಿತು? ಹೇಗೆ ಆಕೆ ಕಾಡಿನಲ್ಲಿ ದಾರಿ ತಪ್ಪಿದಳು.
ಟಿವಿ 1 ಗೆ ಶರಣ್ಯ ನೀಡಿರುವ ವಿಶೇಷ ಸಂದಶ೯ನ ಇಲ್ಲಿದೆ.
1. ಚಾರಣಕ್ಕೆ ತೆರಳಿದ ಸಂದಭ೯ ಏನಾಯಿತು? ಹೇಗೆ ದಾರಿ ತಪ್ಪಿದಿರಿ? ತಡಿಯಂಡಮೋಳ್ ಹೋಲಿಕೆಯಲ್ಲಿ ಅಂಥ ದುಗ೯ಮ ಶಿಖರವೇನಲ್ಲ. 2-3 ದಿನ ದಾರಿತಪ್ಪುವಂಥ ಚಾರಣ ಮಾಗ೯ವೂ ಅಲ್ಲ. ಹೀಗಿದ್ದರೂ ಯಾಕೆ ಹೀಗಾಯಿತು? ಏನು ಆಯಿತು ಅಲ್ಲಿ?
- ಗುಂಪಿನೊಂದಿಗೆ ನಾನು ಚಾರಣ ತೆರಳಿದ್ದೆ. ಆ ಗುಂಪು ಬಹಳ ವೇಗವಾಗಿ ಹೆಜ್ಜೆ ಹಾಕುತ್ತಿದ್ದರು. ನಾನು ಹಾಯಾಗಿ ಕಾಡಿನ ಸೌಂದಯ೯ ನೋಡುತ್ತಾ ಮೆಲ್ಲನೆ ಹೆಜ್ಜೆಯಿಡುತ್ತಿದ್ದೆ. ಮಧ್ಯಾಹ್ನವಾಗುವಾಗ ಆ ಗುಂಪಿನ ಇಬ್ಬರು ಮಾತ್ರ ನನ್ನ ಮುಂದೆ ಇದ್ದರು. ನೋಡನೋಡುತ್ತಿದ್ದಂತೆಯೇ ಅವರೂ ವೇಗವಾಗಿ ಸಾಗಿದ್ದರಿಂದ ನನ್ನ ಕಣ್ಣಳತೆಯಿಂದಲೂ ದೂರವಾದರು. ಆ ಸಂದಭ೯ ಅಲ್ಲಿ ಯಾರೂ ಇರಲಿಲ್ಲ. ಬೆಟ್ಟದ ಮೇಲೆ ಅವರು ಸಿಕ್ಕುತ್ತಾರೆ ಎಂಬ ನಂಬಿಕೆಯಿಂದ ಚಾರಣ ಮುಂದುವರೆಸಿದೆ.
ಆದರೆ, ಅದೊಂದು ಕಡೆಯಲ್ಲಿ ನಾನೂ ಎಡಬದಿಗೆ ತಿರುಗಿಬಿಟ್ಟೆ. ಈಗ ಯೋಚಿಸಿದರೆ ಅಲ್ಲಿಯೇ ನಾನು ದಾರಿತಪ್ಪಿದ್ದೆ. ಎಡಬದಿಗೆ ತಿರುಗಿದ್ದರಿಂದಾಗಿ ಚಾರಣದ ಮೂಲ ದಾರಿಯನ್ನೇ ಮಿಸ್ ಮಾಡಿಕೊಂಡು ಬಿಟ್ಟಿದ್ದೆ. ಸಾಕಷ್ಟು ದೂರ ಅದೇ ಮಾಗ೯ದಲ್ಲಿ ಸಾಗಿ ಬಂದ ಮೇಲೆ ನಾನು ದಾರಿ ತಪ್ಪಿದ್ದು, ಒಬ್ಬಂಟಿಯಾಗಿರುವುದು ಗೊತ್ತಾಯಿತು. ವಾಪಾಸ್ ಬರಲೆಂದು ಗೂಗಲ್ ಮ್ಯಾಪ್ ನೆರವು ಪಡೆದೆ. ಅಲ್ಲೂ ಎಡವಟ್ಟಾಯಿತು. ಗೂಗಲ್ ಮ್ಯಾಪ್ ಯಾವುಯಾವುದೋ ದಾರಿ ತೋರಿಸತೊಡಗಿತು. ನನಗಾಗ ದಾರಿಯನ್ನು ಸಂಪೂಣ೯ವಾಗಿ ತಪ್ಪಿಸಿಕೊಂಡಿರುವುದು ಅರಿವಾಯಿತು. ಕೂಡಲೇ ನನ್ನ ಗೆಳೆಯನಿಗೆ ಕರೆ ಮಾಡಿ ದಾರಿ ತಪ್ಪಿರುವ ಬಗ್ಗೆ ತಿಳಿಸಿದೆ. ಕೆಲ ಹೊತ್ತಿನಲ್ಲಿ ಕಂಟ್ರೋಲ್ ರೂಮ್ ಸಹಾಯವಾಣಿಗೆ ಕರೆ ಮಾಡಲು ನೋಡಿದಾಗ ನೆಟ್ ವಕ್೯ ದೊರಕಲಿಲ್ಲ. ಮಧ್ಯಾಹ್ನ 2.20 ರ ವೇಳೆಗೆ ಮೊಬೈಲ್ ಬ್ಯಾಟರಿಯೂ ಡೆಡ್ ಆಯಿತು. ಮೊಬೈಲ್ ಸಂಪಕ೯ವೂ ಕಡಿತಗೊಂಡಿತ್ತು
ಹಾಗೂ ಹೀಗೂ ತಪ್ಪಿರುವ ದಾರಿಯಲ್ಲಿಯೇ ಮುಂದುವರಿದೆ. ಬೆಟ್ಟದ ಏರು ಹಾದಿಯನ್ನು ಹತ್ತಿಕೊಂಡೇ ಹೋದೆ. ಕೊನೆಗೆ ಅದು ಮತ್ತೆ ಇಳಿಜಾರು ಮಾಗ೯ ತೋರಿಸಿತು. ಅಲ್ಲಿ ಬೆಟ್ಟದಿಂದ ಇಳಿಯತೊಡಗಿದೆ. ದಾರಿಯಲ್ಲಿ ಯಾರಾದರು ಕಂಡಾರು ಎಂಬ ಆಶಾಭಾವನೆ ಮೂಡತೊಡಗಿತ್ತು. ಆದರೆ ಸಂಜೆಯಾದರೂ ಯಾರೂ ಕಂಡುಬರಲಿಲ್ಲ. ಕತ್ತಲಾವರಿಸುತ್ತಿದ್ದಂತೆಯೇ ಬೆಟ್ಟದ ತಪ್ಪಲಲ್ಲಿ ಕಲ್ಲುಬಂಡೆಯೊಂದು ಕಂಡಾಗ ಅಲ್ಲಿಯೇ ರಾತ್ರಿ ಕಳೆಯಲು ನಿಧ೯ರಿಸಿದ್ದೆ.
TV 1 SPECIAL
2.ರಾತ್ರಿಗಳನ್ನು ಹೇಗೆ ಕಳೆದಿರಿ? ವನ್ಯಜೀವಿಗಳ ಭಯ ಇರಲಿಲ್ಲವೇ?
ಬಂಡೆಯ ಮಧ್ಯೆ ಪುಟ್ಟ ಜಾಗದಲ್ಲಿ ಅಡಗಿಕೊಂಡಂತೆ ಕುಳಿತು ರಾತ್ರಿ ಕಳೆದೆ. ವನ್ಯಜೀವಿಗಳು ಇಲ್ಲಿಗೆ ಬರುತ್ತವೆ ಎಂಬುದು ಸ್ಪಷ್ಟವಾಗಿರಲಿಲ್ಲ. ಹೀಗಾಗಿ, ಕತ್ತಲಲ್ಲಿ ನಡೆದಾಡುವ ಬದಲಿಗೆ ನಿದ್ದೆ ಮಾಡದೇ ಆ ರಾತ್ರಿಯನ್ನು ಕಳೆದೆ. ಮರುದಿನ ರಾತ್ರಿಯನ್ನು ಇದೇ ರೀತಿ ಅದೇ ಸ್ಥಳಧಲ್ಲಿ ಕಳೆದೆ. ನಿದ್ದೆಯನ್ನೇ ಮಾಡಲಿಲ್ಲ.
3. ಮರುದಿನ ಅಂದರ ಎರಡನೇ ದಿನ ಏನಾಯಿತು?
ಶುಕ್ರವಾರ ಬೆಳಕಾದೊಡನೇ ನಡೆಯಲು ನೋಡಿದಾಗ ಕಾಲು ಭಯಂಕರವಾಗಿ ನೋವಾಗುತ್ತಿತ್ತು. ಹೆಜ್ಜೆಯೂರಲೇ ತ್ರಾಸವಾಗುತ್ತಿತ್ತು. ಇಂಥ ಸ್ಥಿತಿಯಲ್ಲಿ ನಡೆಯುವುದಕ್ಕಿಂತ ಇದ್ದಲ್ಲಿಯೇ ವಿಶ್ಱಾಂತಿ ಪಡೆಯುವುದೇ ಸೂಕ್ತ ಎಂದು ಅಲ್ಲಿಯೇ ಇದ್ದೆ.
4. ತಿಂಡಿಗೇನು ಮಾಡಿದಿರಿ? ಹಸಿವಾಗಲಿಲ್ಲವೇ? ನಾಲ್ಕೂ ದಿನವೂ ಆಹಾರ ಇಲ್ಲದೇ ಕಳೆದಿರಾ?
ತಡಿಯಂಡಮೋಳ್ ಚಾರಣ ಕೆಲವೇ ಗಂಟೆಗಳ ಚಾರಣವಾಗಿದ್ದರಿಂದಾಗಿ ಹೆಚ್ಚು ಆಹಾರ ಕೊಂಡೊಯ್ಯಲಿಲ್ಲ. ಬಿಸ್ಕೆಟ್ ಪ್ಯಾಕೇಟ್ ಮತ್ತು ಬಾಳೆಹಣ್ಣು, ನೀರಿನ ಬಾಟಲ್ ಇತ್ತು. ಅದು ಮೊದಲನೇ ದಿನವೇ ಖಾಲಿಯಾಯಿತು.! ಮತ್ತೆ ಮೂರು ದಿನಗಳು ಬಂಡೆಕಲ್ಲಿನ ಪಕ್ಕದಲ್ಲಿ ಹರಿದುಹೋಗುತ್ತಿದ್ದ ಎರಡು ಝರಿಗಳ ನೀರನ್ನೇ ಕುಡಿದು ಹೊಟ್ಟೆ ತುಂಬಿಸಿಕೊಂಡಿದ್ದೆ. ಹೇಳಿಕೊಳ್ಳುವಷ್ಟು ಹಸಿವು ನನಗಾಗಲೇ ಇಲ್ಲ. ಹಾಗೇ ನೋಡಿದರೆ ನಾನು ಹೆಚ್ಚು ಆಹಾರ ತಿನ್ನುವವಳೂ ಅಲ್ಲ.
TV 1 SPECIAL*
5. ದಾರಿತಪ್ಪಿ ಈ ರೀತಿ 3-4 ದಿನ ಕಾಡಿನಲ್ಲಿ ಕಳೆಯುವಾಗ ಭಯವಾಗಲಿಲ್ಲವೇ? ಯಾರಾದರು ನಿಮ್ನನ್ನು ರಕ್ಷಿಸುತ್ತಾರೆ ಎಂಬ ನಂಬಿಕೆಯಿತ್ತೇ?
- ಖಂಡಿತಾ ಆ ನಂಬಿಕೆಯಿತ್ತು. ಹೀಗಾಗಿಯೇ ಒಂದು ಕ್ಷಣವೂ ಭಯವಾಗಲಿಲ್ಲ. ನನ್ನಣ್ಣ ಶ್ಯಾಮ್ ಮತ್ತು ನನ್ನ ಗೆಳೆಯ ಹೇಗಾದರೂ ಮಾಡಿ ನನ್ನನ್ನು ಹುಡುಕುತ್ತಾರೆ ಎಂಬ ಪ್ರಬಲ ನಂಬಿಕೆಯಿತ್ತು. ಮೂರೂ ದಿನಗಳೂ ಬಂಡೆ ಮೇಲೆ ಕುಳಿತು ಹೆಲಿಕಾಪ್ಟರ್ ಹಾರಾಡುತ್ತಾ ನನ್ನ ಹುಡುಕಿಕೊಂಡು ಬರಬಹುದು ಎಂದು ಆಕಾಶ ನೋಡುತ್ತಾ ಕಾಯುತ್ತಿದ್ದೆ. ದ್ರೋಣ್ ಕೂಡ ಮೂರೂ ದಿನಗಳು ನಾನಿದ್ದ ಜಾಗದ ಮೇಲೆ ಹಾರಲಿಲ್ಲ.. ಹೇಗಾದರೂ ಇಲ್ಲಿಂದ ನನ್ನ ಬಚಾವ್ ಮಾಡುತ್ತಾರೆ ಎಂಬ ನಂಬಿಕೆಯಿದ್ದ ಹಿನ್ನಲೆ ಭಯವಾಗಲೇ ಇಲ್ಲ. ಕಾಡಿನಲ್ಲಿ ನಡೆಯುವ ಸಂದಭ೯ ಅನೇಕ
- ಕಡೆಗಳಲ್ಲಿ ಕಾಡಾನೆಯ ಲದ್ದಿಯನ್ನು ಕಂಡೆ. ಆದರೆ ಎಲ್ಲಿಯೂ ಕಾಡಾನೆ, ವನ್ಯಜೀವಿ ಕಾಣಿಸಲಿಲ್ಲ.
6. ದೇವರನ್ನು ಪ್ರಾಥಿ೯ಸುತ್ತಾ ಕಾಲಕಳೆದಿರಾ ಹೇಗೆ?
ನಾನು ದೇವರನ್ನು ನಂಬುವುದಿಲ್ಲ. ಆದರೆ ಪ್ರಕೖತ್ತಿಯನ್ನು ನಂಬುತ್ತೇನೆ. ಪ್ರಕೖತ್ತಿಯಲ್ಲಿ ಇರುವಾಗ ಅದು ನನ್ನನ್ನು ರಕ್ಷಿಸುತ್ತೆ ಎಂದು ನಂಬಿದ್ದೆ
7. ಈ ಮೊದಲು ಚಾರಣಕ್ಕೆ ತೆರಳಿದ್ದೀರ? ಚಾರಣದ ಅನುಭವ ಇತ್ತೇ?
ಕೇರಳದಲ್ಲಿ ಎರಡು ಸಲ ಅಗಸ್ತ್ಯ ಮಲೆ ಎಂಬ ಬೆಟ್ಟದಲ್ಲಿ ಚಾರಣ ಮಾಡಿದ್ದ ಅನುಭವ ಇತ್ತು. ಎರಡು ದಿನ ಚಾರಣ ಕೈಗೊಂಡಿದ್ದೆ. ಅದು ಬಿಟ್ಟರೆ ನಾನೇನು ಚಾರಣದಲ್ಲಿ ಅನುಭವಿ ಖಂಡಿತಾ ಅಲ್ಲ.
8. ಮಳೆ ಕೂಡ ಬಂತಲ್ಲ?
ಹೌದು ಶನಿವಾರ ಸುಮಾರು 1 ಗಂಟೆ ಕಾಲ ಮಳೆಬಂದಾಗ ಸಂಪೂಣ೯ ಒದ್ದೆಯಾಗಿದ್ದೆ. ಬಂಡೆಯ ಮಧ್ಯೆಯೇ ಆಶ್ರಯ ಪಡೆದುಕೊಂಡಿದ್ದೆ.
TV 1 SPECIAL
9. ಕೊನೆಗೂ ಸ್ಥಳೀಯರು ನಿಮ್ಮನ್ನು ಬಚಾವ್ ಮಾಡಿದರು. ನಂತರ ಮನೆಯವರನ್ನು ಕಂಡಾಗ ಆ ಕ್ಷಣ ಏನನ್ನಿಸಿತು?
ಬಹಳ ಸಂತೋಷವಾಯಿತು. ನಗುತ್ತಲೇ ಅವರನ್ನು ಅಪ್ಪಿಕೊಂಡೆ. ಗ್ರಾಮಸ್ಥರು, ಕನಾ೯ಟಕ ಸಕಾ೯ರ, ,ಇಲಾಖೆಗಳು, ಶಾಸಕ ಪೊನ್ನಣ್ಣ ಸರ್, ಎಸ್ ಪಿ ಮೇಡಂ, ಪಾರೆಸ್ಟ್ ಡಿಪಾಟ್೯ಮೆಂಟ್ ನೀಡಿದ ಸಹಕಾರ ಮರೆಯಲಾರೆ. ಭಾನುವಾರ ಮಧ್ಯಾಹ್ನದ ವೇಳೆ ನಾನು ಕೊನೆಗೆ ಇದ್ದ ಸ್ಥಳ ತಲುಪಿದ್ದೆ. ಅಲ್ಲಿ ಬಂಡೆಯೊಂದರ ಮೇಲೆ ಕುಳಿತುಕೊಂಡಿರುವಾಗ ಸಂಜೆ 4 ಗಂಟೆ ವೇಳೆಗೆ ದೂರದಿಂದ ಶರಣ್ಯ ಕೂ ಎಂಬ ಕೂಗು ಕೇಳಿಬಂತು. ಇನ್ನೂ 1-2 ಬಾರಿ ಧ್ವನಿಕೇಳಿದಾಗ ನನ್ನನ್ನು ಹುಡುಕಿಕೊಂಡು ಬಂದವರು ಹತ್ತಿರದಲ್ಲಿಯೇ ಇದ್ದಾರೆ ಎಂದು ಗೊತ್ತಾಗಿ ಧೈಯ೯ಬಂತು. ನಾನೂ ಕೂ ಎಂದೆ ಕೂಗತೊಡಗಿದೆ. ಕೆಲವೇ ಹೊತ್ತಿನಲ್ಲಿ ಸ್ಥಳೀಯರು ನನ್ನ ಬಳಿ ಬಂದು ಕ್ಷೇಮವಾಗಿ ಬೇಸ್ ಕ್ಯಾಂಪ್ ಗೆ ಕರೆದುಕೊಂಡು ಹೋದರು.
10. ಕೊಡಗಿಗೆ ಮತ್ತೆ ಬರುತ್ತೀರಾ?
ಖಂಡಿತಾ ಬರುತ್ತೇನೆ. ಅನೇಕರಿಗೆ ಧನ್ಯವಾದ ತಿಳಿಸುವುದಿದೆ. ಕುಟುಂಬ ಸಹಿತ ಕೊಡಗಿಗೆ ಬಂದು ಎಲ್ಲರನ್ನೂ ಮಾತನಾಡಿಸುವೆ.
11. ಚಾರಣ ಮಾಡುವವರಿಗೆ ಅದರಲ್ಲಿಯೂ ನಿಮ್ಮಂತೆ ಚಾರಣ ಮಾಗ೯ದಲ್ಲಿ ದಾರಿ ಮಿಸ್ ಮಾಡಿಕೊಳ್ಳುವವರಿಗೆ ನಿಮ್ಮ ಸಲಹೆ ಏನು?
ಚಾರಣ ಸಂದಭ೯ ದಾರಿ ತಪ್ಪಿದ್ದೇ ಆದಲ್ಲಿ ಎಲ್ಲಿ ಎಲ್ಲಿಯೋ ಹೋಗುವ ಪ್ರಯತ್ನ ಮಾಡಬೇಡಿ. ನನ್ನಂತೆ ದಾರಿ ತಪ್ಪಿಸಿಕೊಳ್ಳುತ್ತೀರಿ. ಬದಲಿಗೆ, ನೇರವಾಗಿ ಬೆಟ್ಟದ ತುದಿಯತ್ತಲೇ ಸಾಗುತ್ತೀರಿ. ಬೆಟ್ಟದ ತುದಿ ತಲುಪಿಯಾದ ಮೇಲೆ ಅಲ್ಲಿಯೇ ಇರಿ. ಆಗ ಬೇರೊಂದು ಚಾರಣಿಗರ ಗುಂಪು ನಿಮಗೆ ಸಿಕ್ಕಬಹುದು. ಚಾರಣದಲ್ಲಿ ಅಡ್ಡಾದಿಡ್ಡಿಯಾಗಿರುವ ಮಾಗ೯ದಲ್ಲಿ ಸಾಗುವ ಪ್ರಯತ್ನ ಬೇಡ.
12. ಕೊನೇ ಪ್ರಶ್ನೆ. ಕೊಡಗಿನ ತಡಿಯಂಡಮೋಳ್ ಕಾಡು ಹೇಗನ್ನಿಸಿತ್ತು? !!
ನಿಜಕ್ಕೂ ಸುಂದರವಾಗಿತ್ತು ಸಾರ್. ವಿಶಾಲವಾದ ಕಾಡು. ಎಲ್ಲೆಲ್ಲಿಯೂ ಹಸಿರು. ಕಾಡಿನ ಮಧ್ಯೆ ನೀರಿನ ಝರಿಗಳು. ಬಹಳ ಚೆನ್ನಾಗಿದೆ. ಆದರೆ ದಾರಿ ಹುಡುಕುತ್ತಿದ್ದ ನನಗೇ ಮನಪೂವ೯ಕವಾಗಿ ಕಾಡಿನ ಸೌಂದಯ೯ ಗಮನಿಸಲು ಆಗಲೇ ಇಲ್ಲ. ಮುಂದೆ ಒಂದು ದಿನ ಗೈಡ್ ಜತೆಗೂಡಿ ತಡಿಯಂಡಮೋಳ್ ಚಾರಣಕ್ಕೆ ಬರುತ್ತೇನೆ.!!!
TV 1 SPECIALTV 1 SPECIAL
ಗೂಗಲ್ ಮ್ಯಾಪ್ ದಾರಿತಪ್ಪಿಸಿತ್ತು - ನೀರು ಕುಡಿದುಕೊಂಡೇ ಮೂರು ದಿನ ಆ ಕಾಡಿನಲ್ಲಿ ಕಳೆದೆ. !
ಟಿವಿ 1 ವಿಶೇಷ ಸಂದಶ೯ನದಲ್ಲಿ - ಕಾಡಿನ ಅನುಭವದ ಸಂಪೂಣ೯ ಮಾಹಿತಿ ನೀಡಿದ ಜಿ.ಎಸ್. ಶರಣ್ಯ
ವಿಶೇಷ ಸಂದಶ೯ನ - ಅನಿಲ್ ಹೆಚ್.ಟಿ.