ಅಮೇರಿಕ ಮತ್ತು ಇರಾನಿನ ನಡುವಿನ ಯುದ್ಧ ಮುಗಿಯುತ್ತದಾ? - ಭಾಗ-6
ಅಮೇರಿಕ ಮತ್ತು ಇರಾನ್ ನಡುವಿನ ಯುದ್ಧವನ್ನು ಅಸಮ ಶಕ್ತಿಗಳ ಯುದ್ಧವೆಂದು ಕರೆಯಲಾಗುತ್ತದೆ. ಏಕೆಂದರೆ ಯುದ್ಧದಲ್ಲಿ ಭಾಗವಹಿಸುವ ದೇಶಗಳ ನಡುವೆ ಮಿಲಿಟರಿ ಶಕ್ತಿ, ತಂತ್ರಜ್ಞಾನ, ಅಥವಾ ಸಂಪನ್ಮೂಲಗಳಲ್ಲಿ ಭಾರಿ ವ್ಯತ್ಯಾಸವಿದ್ದಲ್ಲಿ ಆ ದೇಶಗಳ ನಡುವಿನ ಯುದ್ಧವನ್ನು ಅಸಮ ಯುದ್ದ Asymmetric Warfare ಎಂದು ಕರೆಯಲಾಗುತ್ತದೆ. ಈ ಅಸಮ ಯುದ್ಧದ ವಿಶೇಷತೆ ಏನೆಂದರೆ ದುರ್ಬಲ ದೇಶ ತಾನು ಸತ್ತರೂ ಪರವಾಗಿಲ್ಲ ಆದರೆ ಪ್ರಭಲ ದೇಶವನ್ನೂ ಸಾಯಿಸುತ್ತೇನೆ ಎಂಬ ಹೋರಾಟದ ಸಂಕಲ್ಪವನ್ನು ಹೊಂದಿರುತ್ತದೆ. ಯುದ್ಧ ಮುಖದಲ್ಲಿ ಈ ನಿಲುವು ಹೊಂದಿರುವವರನ್ನು ಎದುರಿಸುವುದು ಕಷ್ಟ.
ಇರಾನ್ ಸರಕಾರ ಸ್ವತಹ ಅಸ್ಥಿರವಾಗುವುದನ್ನು ಮನಗಂಡ ಚೀನಾ ಮತ್ತು ರಶ್ಯಾ ಕೂಡಲೇ ಇರಾನಿನ ಪರಿಸ್ಥಿತಿಯನ್ನು ತನ್ನ ನಿಯಂತ್ರಣಕ್ಕೆ ತೆಗೆದುಕೊಂಡು ಇರಾನಿಗೆ ಸಲಹೇ ನೀಡತೊಡಗಿತು! ಕೂಡಲೇ ಅಮೇರಿಕಾಕ್ಕೆ ನೆರವು ನೀಡುತ್ತಿದ್ದ ಜಿಪಿಎಸ್ ಗೂಗಲ್ ಇಂಟರ್ ನೆಟ್ ವ್ಯವಸ್ಥೆಯನ್ನು ಇರಾನ್ ಪೂರ್ಣ ಬಂದ್ ಮಾಡಿತು. ಹೊಸದಾಗಿ ಚೀನಾವು ಬೀದೌ ಉಪಗ್ರಹ ಇಂಟರ್ ನೆಟ್ ವ್ಯವಸ್ಥೆಯನ್ನು ಇರಾನಿನಲ್ಲಿ ತಕ್ಷಣ ಸ್ಥಾಪಿಸಿತು. ಇರಾನಿನಲ್ಲಿ ಪ್ರತಿಭಟನಾಕಾರರು ಬಳಸುತ್ತಿದ್ದ ಸಾಮಾಜಿಕ ಜಾಲವನ್ನು ಚೀನಾದ ಅತ್ಯಾಧುನಿಕ ಜಾಮರ್ ಬಳಸಿ ಕಡಿತಗೊಳಿಸಿದರು. ಆವಾಗ್ಗೆ ಇರಾನಿನಲ್ಲಿ ಅಮೇರಿಕಾದ ಸ್ಪೇಸ್ ಎಕ್ಸ್ ಕಂಪನಿಯ ಸ್ಟಾರ್ ಲಿಂಕ್ ಉಪಗ್ರಹದಿಂದ ನೇರವಾಗಿ ಪಡೆಯುವ ಇಂಟರ್ ನೆಟ್ ಸೌಲಭ್ಯಗಳು ಪತ್ತೆಯಾದವು! ಇರಾನ್ ನಿಷೇಧಿಸಿದ್ದ ಸ್ಟಾರ್ ಲಿಂಕ್ ಕಂಪನಿಯು ಸುಮಾರು 1 ಲಕ್ಷ ಸೆಟ್ ಗಳನ್ನು ಇರಾನಿನಾದ್ಯಂತ ರಹಸ್ಯವಾಗಿ ಬಳಕೆಯಾಗುತ್ತಿರುವುದು ಕಂಡು ಬಂತು. (ನಮ್ಮ ದೇಶದಲ್ಲಿಯೂ ಸ್ಟಾರ್ ಲಿಂಕ್ ನೆಟ್ ವರ್ಕ ಸಂಸ್ಥೆಗೆ ಅನುಮತಿಯನ್ನು ನೀಡಿರುವುದಿಲ್ಲ.) ಸರಕಾರಿ ವಿರೋಧಿ ಏಜೆಂಟರುಗಳು ಇವುಗಳನ್ನು ಕಳ್ಳಸಾಗಾಟದ ಮೂಲಕ ಇರಾನಿನೊಳಗೆ ತಂದಿದ್ದರು. ಅಲ್ಲದೇ ಉಚಿತ ಇಂಟರ್ ನಟ್ ಉಚಿತವಾಗಿ ಪ್ರತಿಭಟನಾಕಾರಿಗೆ ನೀಡುತ್ತಿತ್ತು. ಕೂಡಲೇ ರಶ್ಯಾ ಇಂಟರ್ ನೆಟ್ ಜಾಮರ್ ಗಳನ್ನು ಪೂರೈಕೆ ಮಾಡಿತು. ಚೀನಾವು ಸ್ಟಾರ್ ಲಿಂಕ್ ನ ತರಂಗಾಂತರಗಳನ್ನು ಪತ್ತೆ ಮಾಡುವ ಉಪಕರಣಗಳನ್ನು ಪೂರೈಸಿತು. ಇರಾನ್ ಇವುಗಳ ಸಹಾಯದಿಂದ ಸ್ಟಾರ್ ಲಿಂಕ್ ಗಳ ಇಂಟರ್ ನೆಟ್ ಸೌಲಭ್ಯ ಮೂಲಕ ಪ್ರತಿಭಟನೆಗೆ ಪ್ರಚೋಧಿಸವ ಮೊಸ್ಸಾದ್ ಮತ್ತು ಸಿಐಎ ಏಜೆಂಟರನ್ನು ಸುಲಭವಾಗಿ ಗುರುತಿಸ ತೊಡಗಿತು. ಈ ಕಾರಣದಿಂದಾಗಿ ಇರಾನಿನ ಅಂತರಿಕ ಪ್ರತಿಭಟನೆಗಳು ತಕ್ಷಣದಲ್ಲೇ ನಿಯಂತ್ರಣಕ್ಕೆ ಬಂದವು.
ಇಸ್ರೇಲ್ ಬೇಹುಗಾರಿಕೆ ಸಂಸ್ಥೆ ಮೊಸ್ಸಾದ್ ಮತ್ತು ಅಮೇರಿಕದ ಸಿಐಎ ಸಂಸ್ಥೆಯ ಗೂಡಾಚಾರರು, ಬೇಹುಗಾರರು, ಮತ್ತು ಅದರ ಏಜೆಂಟರುಗಳು ಪ್ರತಿಭಟನೆಯಲ್ಲಿ ನೇರ ಭಾಗಿಯಾಗಿದ್ದರು. ಪ್ರತಿಭಟನೆಗೆ ಇರಾನಿನ ಹಲವು ನಾಯಕರು, ಸೇನಾಧಿಕಾರಿಗಳು, ಸರಕಾರಿ ಅಧಿಕಾರಿಗಳು ಸಹಾ ಮೊಸ್ಸಾದ್ ಏಜೆಂಟರಾಗಿ ರಹಸ್ಯವಾಗಿ ಪ್ರಚೋಧನೆ ಮತ್ತು ಕುಮ್ಮಕ್ಕು ನೀಡುತ್ತಿದ್ದರು. ಇರಾನಿನ ನೂತನ ತಂತ್ರಜ್ಞಾನದ ಸಹಾಯವು ಇರಾನಿನಲ್ಲಿ ಕಾರ್ಯಾಚರಿಸುವ ಎಲ್ಲಾ ಮೊಸ್ಸಾದ್ ಏಜೆಂಟರನ್ನು, ಸಿಐಎ ಏಜೆಂಟರನ್ನು ಪತ್ತೆ ಮಾಡಿ ಅವರ ನಿರ್ಧಯವಾಗಿ ಕ್ರಮ ಕೈಗೊಳ್ಳುತ್ತಿದ್ದರಿಂದ ಈ ಏಜೆಂಟರುಗಳು ನಿರ್ನಾಮವಾಗ ತೊಡಗಿದರು. ಈ ಏಜೆಂಟರುಗಳ ಸಂರಕ್ಷಣೆಯು ಅಮೇರಿಕ ಮತ್ತು ಇಸ್ರೇಲಿಗೆ ಒಂದು ದೊಡ್ಡ ಜವಾಬ್ದಾರಿಯಾಯಿತು.
ಇರಾನಿನ ಮೇಲೆ ಮಿಲಿಟರಿ ಕಾರ್ಯಾಚರಣೆಯನ್ನು ನಡೆಸದೇ ಕೇವಲ ಅಂತರಿಕ ಪ್ರತಿಭಟನೆಗಳನ್ನು ತೀವ್ರಗೊಳಿಸಿ ಪ್ರತಿಭಟನಕಾರರಿಂದ ಖೊಮೆನಿ ಸರಕಾರವನ್ನು ಅಸ್ಥಿರಗೊಳಿಸಲು ಸಾಧ್ಯವಿಲ್ಲವೆಂದು ಮನದಟ್ಟಾಯಿತು. ಆದರೆ ಅಮೇರಿಕಕ್ಕೆ ಇರಾನ್ ಮೇಲೆ ಆರೋಪ ಹೊರಿಸಲು ಅಂತಹ ನೇರ ಕಾರಣಗಳೇನೂ ಇಲ್ಲ. ಇರಾನ್ ಸ್ವಂತವಾಗಿ ಪರಮಾಣು ಅಭಿವೃದ್ಧಿಯನ್ನು ಮಾಡುತ್ತಿದೆ ಎಂಬುದೊಂದೇ ಆರೋಪ. ಯುರೇನಿಯಂ ಸಮೃದ್ಧೀಕರಣ ಮತ್ತು ಸಂಶೋಧನೆ ಮಾಡುವುದನ್ನು ನಿಲ್ಲಿಸುವ ಬಗ್ಗೆ ಅಮೇರಿಕ ಮತ್ತು ಇರಾನಿನ ನಡುವೆ ಸಂಧಾನ ಮಾತುಕತೆ ನಡೆಯುತ್ತಿತ್ತು. ಒಮನ್ ರಾಜ ಈ ಮಾತುಕತೆಗೆ ಮದ್ಯಸ್ಥಿಕೆ ವಹಿಸಿದ್ದರು. ಆದರೆ ಸಂಧಾನ ಸಮಯದಲ್ಲೇ ಇಸ್ರೇಲ್ ವೈಮಾನಿಕ ದಾಳಿ ನಡೆಸಿ ಇರಾನ್ ಸರ್ವೋಚ್ಛ ನಾಯಕ ಅಯತೊಲ್ಲಾ ಖೊಮೆನಿ ಸೇರಿದಂತೆ ಹಲವು ಮುಖಂಡರು ಮತ್ತು ಸೇನಾಧಿಕಾರಿಗಳನ್ನು ಹತ್ಯೆಮಾಡಿದರು.
ಹೀಗೆ ದಿಢೀರ್ ವೈಮಾನಿಕ ದಾಳಿ ನ ಡೆಸಲು ಒಂದು ಕಾರಣವಿದೆ. ಇರಾನಿನ ನಾಯಕರುಗಳು ಇರಾನ್ ತೆಗೆದುಕೊಳ್ಳಬೇಕಾದ ಮುಂದಿನ ಕ್ರಮಗಳನ್ನು ಚರ್ಚಿಸಲು ಆ ದಿವಸ ಮಾತ್ರ ಸೇರುವುದಾಗಿ ಬೇಹುಗಾರಿಕಾ ಮಾಹಿತಿ ಇತ್ತು ಇಂತಹದೊಂದು ಅಸಾಧಾರಣಾ ಸಂದರ್ಭ ಇನ್ನೊಮ್ಮೆ ಒದಗಿ ಬರಲಾರದೆಂದು ಮತ್ತು ಈ ಸಂದರ್ಭವನ್ನು ಉಪಯೋಗಿಸಿ ವಾಯುದಾಳಿ ಮೂಲಕ ಇರಾನಿನ ಅಲಿ ಖೊಮೆನಿ ಸೇರಿದಂತೆ ಎಲ್ಲಾ ನಾಯಕರನ್ನು ಹತ್ಯೆ ಮಾಡಿದರೇ ಇರಾನನ್ನು ಸುಲಭವಾಗಿ ವಶಕ್ಕೆ ತೆಗೆದುಕೊಳ್ಳಬಹುದೆಂದು ಅಮೇರಿಕಾ ಮತ್ತು ಇಸ್ರೇಲಿಗೆ ಬೇಹುಗಾರ ಏಜೆಂಟರು ಮಾಹಿತಿ ನೀಡಿದ್ದರು.
ಈ ಕೃತ್ಯದಿಂದಾಗಿ ಇರಾನ್-ಅಮೇರಿಕಾ –ಇಸ್ರೇಲ್ ನಡುವಿನ ಯುದ್ಧ ಪ್ರಾರಂಭವಾಯಿತು. ಸುಮಾರು 47 ವರ್ಷದಿಂದ ದಿಗ್ಬಂಧನ ವಿಧಿಸಿದ್ದ ಇರಾನ್ ಬಳಿ ಶಸ್ತ್ರಾಸ್ತ್ರಗಳು ಇರಲಾರದೆಂದು ಕೇವಲ ಒಂದೆರೆಡು ದಿವಸಗಳಲ್ಲಿ ಯುದ್ಧ ಕಾರ್ಯಾಚರಣೆ ಮುಗಿಸಿ ಇರಾನಿನಲ್ಲಿ ಕೈಗೊಂಬೆ ಸರಕಾರವನ್ನು ಸ್ಥಾಪಿಸಬಹುದೆಂದು ಅಮೇರಿಕಾ ಅಂದಾಜಿಸಿತ್ತು.
ಆದರೆ ಅಮೇರಿಕಕ್ಕೆ ಇರಾನಿನ ಶಕ್ತಿ ಯುದ್ಧ ಮತ್ತು ಸಾಮರ್ಥ್ಯದ ಬಗ್ಗೆ ಇದ್ದ ಊಹೆಗಳು ತಲೆಕೆಳಗಾಯಿತು. ಇರಾನಿನ ವಿರುದ್ಧದ ಅಮೇರಿಕ ಮತ್ತು ಇಸ್ರೇಲಿನ ಜಂಟಿ ಯುದ್ಧ ಜಾಗತಿಕ ಯುದ್ಧ ಕೌಶಲ್ಯ ಮತ್ತು ಯುದ್ಧ ಸೆಣಸಾಟದಲ್ಲಿ ಹೊಸ ವ್ಯಾಖ್ಯಾನವನ್ನು ಬರೆಯಿತು! ಒಂದು ಮಹಾಯುದ್ಧಕ್ಕೆ ಮುನ್ನುಡಿ ಬರೆಯಿತು. ಅಸಮ ಬಲದ ಯುದ್ಧವು ಬಲಶಾಲಿ ಸೈನ್ಯದ ಬಲಕ್ಕೆ ಅಪಾಯವನ್ನು ತಂದೊಡ್ಡುತ್ತದೆ ಎಂಬ ವಾದವನ್ನು ಪುಷ್ಟೀಕರಿಸಿತು.
ಅಮೇರಿಕ ಮತ್ತು ಇರಾನ್ ನಡುವಿನ ಯುದ್ಧವನ್ನು ಅಸಮ ಶಕ್ತಿಗಳ ಯುದ್ಧವೆಂದು ಕರೆಯಲಾಗುತ್ತದೆ. ಏಕೆಂದರೆ ಯುದ್ಧದಲ್ಲಿ ಭಾಗವಹಿಸುವ ದೇಶಗಳ ನಡುವೆ ಮಿಲಿಟರಿ ಶಕ್ತಿ, ತಂತ್ರಜ್ಞಾನ, ಅಥವಾ ಸಂಪನ್ಮೂಲಗಳಲ್ಲಿ ಭಾರಿ ವ್ಯತ್ಯಾಸವಿದ್ದಲ್ಲಿ ಆ ದೇಶಗಳ ನಡುವಿನ ಯುದ್ಧವನ್ನು ಅಸಮ ಯುದ್ದ Asymmetric Warfare ಎಂದು ಕರೆಯಲಾಗುತ್ತದೆ. ಇಲ್ಲಿ ಸಾಂಪ್ರದಾಯಿಕ ಯುದ್ಧತಂತ್ರಗಳನ್ನು ಬಳಸಲು ಸಾಧ್ಯವಾಗದ బలಹೀನ ತಂಡವು, ಶಕ್ತಿಶಾಲಿ ಎದುರಾಳಿಯ ವಿರುದ್ಧ ಅಸಾಂಪ್ರದಾಯಿಕ ತಂತ್ರಗಳನ್ನು ಬಳಸುತ್ತದೆ. ಈ ಅಸಮ ಯುದ್ಧದ ವಿಶೇಷತೆ ಏನೆಂದರೆ ದುರ್ಬಲ ದೇಶ ತಾನು ಸತ್ತರೂ ಪರವಾಗಿಲ್ಲ ಆದರೆ ಪ್ರಭಲ ದೇಶವನ್ನೂ ಸಾಯಿಸುತ್ತೇನೆ ಎಂಬ ಹೋರಾಟದ ಸಂಕಲ್ಪವನ್ನು ಹೊಂದಿರುತ್ತದೆ. ಯುದ್ಧ ಮುಖದಲ್ಲಿ ಈ ನಿಲುವು ಹೊಂದಿರುವವರನ್ನು ಎದುರಿಸುವುದು ಕಷ್ಟ. (ಮುಂದುವರಿಯುವುದು)
-ಕರೀಂ ರಾವತರ್


