ಬಿಡದಿ ಟೌನ್ ಶಿಪ್ ಯೋಜನೆ ಆರಂಭವಾಗಿದೆಯಂತೆ!
ಮೈಸೂರು ತಾಲೂಕಿನ ಕಸಬಾ ಹೋಬಳಿಯ ಕಡಕೊಳದ ಸಮೀಪದಲ್ಲಿ ಕೋಚನಹಳ್ಳಿ ಎಂಬ ಗ್ರಾಮವಿದೆ. ಸುಮಾರು 1000 ಜನಸಂಖ್ಯೆಯ ಆ ಊರಿನವರೆಲ್ಲರೂ ರೈತಬಂಧುಗಳೇ ಆಗಿದ್ದು, ಬಹುತೇಕ ಸೊಪ್ಪು, ತರಕಾರಿಗಳನ್ನು ಬೆಳೆದು ಬದುಕುವ ರೈತ ಜೀವಿಗಳಾಗಿದ್ದರು. ಜೊತಗೆ ಹೈನುಗಾರಿಕೆಯನ್ನು ಮಾಡಿಕೊಂಡಿದ್ದರು. ಮೈಸೂರು ನಗರದಿಂದ ಸುಮಾರು 15 ಕಿ.ಮೀ ದೂರದಲ್ಲಿರುವ ಈ ಗ್ರಾಮದ ಮೇಲೆ ಹಿಂದೆಯೇ ಅದೇಗೋ ರಿಯಲ್ ಎಸ್ಟೇಟ್ ಮಾಫಿಯಾಗಳ ಕಣ್ಣು ಬಿತ್ತು. 2006ರಲ್ಲಿ ಆ ಗ್ರಾಮದಲ್ಲಿ ಹೆರಿಟೇಜ್ ಗಾಲ್ಫ್ ಕಂಪನಿಯನ್ನು ಸ್ಥಾಪಿಸುವುದಕ್ಕಾಗಿ ರೈತರ ಜಮೀನುಗಳನ್ನು ಲಪಟಾಯಿಸುವ ಹುನ್ನಾರ ಮಾಡಿಕೊಂಡರು. ರೈತರನ್ನು ಪುಸಲಾಯಿಸಿ ಎರೆಡು ಲಕ್ಷ, 3 ಲಕ್ಷ ಹೀಗೆ ಕಡಿಮೆ ಬೆಲೆಗಳಿಗೆ ರೈತರಿಂದ ಅವರ ಜಮೀನಗಳನ್ನು ವಶಕ್ಕೆ ತೆಗೆದುಕೊಂಡರು. ಕಂಪನಿಯವ ಮಾತ್ರ ಕಂಪನಿಯನ್ನು ಆರಂಭಿಸಲೇ ಇಲ್ಲ! ಕೋಚನಹಳ್ಳಿಯ ಗ್ರಾಮದ ಸ್ವರ್ಗವನ್ನು ಬೇಕಿದ್ದರೇ ಅಲ್ಲಿನ ಗ್ರಾಮಸ್ಥರು ಈಗ ಸ್ವರ್ಗವಾಸಿಗಳಾಗ ಬೇಕಷ್ಟೇ.
ಬಿಡದಿ ಟೌನ್ ಶಿಪ್ ಯೋಜನೆ ಆರಂಭವಾಗಿದೆಯಂತೆ!
ಬೆಂಗಳೂರಿನ ರಾಮನಗರ ಜಿಲ್ಲೆಯ ಬಿಡದಿ ಸಮೀಪದಲ್ಲಿ ಸರಕಾರವು ಗ್ರೇಟರ್ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದ ವತಿಯಿಮದ 20,000 ಕೋಟಿ ವೆಚ್ಚದಲ್ಲಿ ಬೆಂಗಳೂರು ಇಂಟಿಗ್ರೇಟೆಡ್ ಟೌನ್‌ಶಿಪ್ ಅನ್ನು ನಿರ್ಮಾಣ ಮಾಡಲು ಕಾನೂನು ರಚನೆಗಳನ್ನು ಮಾಡಿಕೊಂಡಿದೆಯಂತೆ. ಬಿಡದಿ ಸಮೀಪ ಕೆಂಪಯ್ಯನಪಾಳಯ ಗ್ರಾಮ ಸರಹದ್ದಿನಲ್ಲಿ ಸುಮಾರು ಹತ್ತು ಸಾವಿರ ಏಕರೆ ವ್ಯಾಪ್ತಿಯಲ್ಲಿ ಈ ಉಪ ನಗರವನ್ನು ನಿರ್ಮಾಣ ಮಾಡಲಾಗುತ್ತಿದೆ. ಬೆಂಗಳೂರಿನ ಜನದಟ್ಟಣೆಯನ್ನು ಕಡಿಮೆ ಮಾಡಲು ಮತ್ತು ಸುಮಾರು 100,000 ಸ್ಥಳೀಯ ಉದ್ಯೋಗಗಳನ್ನು ಸೃಷ್ಟಿಸಲು, ಆರ್ಥಿಕ ಪ್ರಗತಿ ಸಾಧಿಸಲು ಈ ಉಪನಗರವನ್ನು ನಿರ್ಮಿಸಲಾಗುತ್ತಿರುವುದಾಗಿ ಕಾರಣ ನೀಡಲಾಗಿದೆ. ಇದು ಬೆಂಗಳೂರಿನ ಹೊರ ವಲಯದಲ್ಲಿ ನಿರ್ಮಾಣ ಮಾಡಲಾಗುತ್ತಿದೆ ಎಂಬುದು ಸರಕಾರದ ವಾದ.
ಈ ಉಪ ನಗರವನ್ನು ಬೆಂಗಳೂರಿನ ಹೊರ ವಲಯದಲ್ಲಿ ಬಿಡದಿಯಲ್ಲಿ ಎಂಬುದಾಗಿ ಸರಕಾರ ಹೇಳಿಕೊಂಡಿದ್ದರೂ, ರಾಮನಗರದವರೆಗೆ ಬೆಂಗಳೂರಿಗೆ ಸೇರಿಕೊಂಡಂತೆಯೇ ಈಗಾಗಲೇ ಬೆಂಗಳೂರು ಮಹಾ ನಗರವು ಬೆಳೆದುಕೊಂಡು ನಿಂತಿದೆ. ಹಾಗಿದ್ದ ಮೇಲೆ ಬೆಂಗಳೂರು ನಗರದ ದಟ್ಟಣೆಯನ್ನು ಕಡಿಮೆ ಮಾಡಲು ಬಿಡದಿಯಲ್ಲಿ ಉಪ ನಗರವನ್ನು ನಿರ್ಮಾಣ ಮಾಡಲಾಗುತ್ತಿದೆ ಸರಕಾರ ಉದ್ದೇಶದಲ್ಲಿಯೇ ಅನುಮಾನವಿದೆ. ಸರಕಾರವು ಈ ಪ್ರದೇಶದ ಜಮೀನಿಗೆ ಏಕರೆಗೆ 2.5 ಕೋಟಿ ಪರಿಹಾರವನ್ನು ಕೊಡುವುದಾಗಿ ಹೇಳಿಕೊಂಡಿದೆ.
ಈ ಯೋಜನೆಗೆ ರೈತರು ವಿರೋಧ ವ್ಯಕ್ತಪಡಿಸುತ್ತಿದ್ದಾರೆ. ಇದು ಸರಕಾರದ ಉದ್ದೇಶವೆಂದ ಮೇಲೆ ಅದನ್ನು ಯಾರಿಗೂ ವಿರೋಧಿಸಲು ಸಾಧ್ಯವಾಗದು. ಹೇಗಿದ್ದರೂ ಆಡಳಿತದ ಬಲ, ಪೊಲೀಸ್ ಬಲದಿಂದ ರೈತರು ಒಪ್ಪಲೀ ಬಿಡಲೀ, ರಾಜಕೀಯ ಬಲ್ಯಾಡರು ನೈಸಾಗಿ ಅಮಾಯಕ ರೈತರುಗಳ ಜಮೀನಗಳನ್ನು ಕಿತ್ತು ರಿಯಲ್ ಎಸ್ಟೇಟ್ ದಂಧೆಯ ಷಡ್ಯಂತರಕ್ಕೆ ಒಪ್ಪಿಸಿ, ಅಧಿಕಾರವಿರುವವರು, ರೈತರ ಜಮೀನನ್ನು ತಿಂದು ರೈತರ ಜೀವನವನ್ನು ಕಂಗಾಲು ಮಾಡಿ ಬಿಡುವುದರಲ್ಲಿ ಅನುಮಾನವಿಲ್ಲ.
ಹಿಂದೆ ಹೀಗೆ ಒಂದು ಪ್ರಕರಣ ನಡೆದಿತ್ತು. ಮೈಸೂರು ತಾಲೂಕಿನ ಕಸಬಾ ಹೋಬಳಿಯ ಕಡಕೊಳದ ಸಮೀಪದಲ್ಲಿ ಕೋಚನಹಳ್ಳಿ ಎಂಬ ಗ್ರಾಮವಿದೆ. ಸುಮಾರು 1000 ಜನಸಂಖ್ಯೆಯ ಆ ಊರಿನವರೆಲ್ಲರೂ ರೈತಬಂಧುಗಳೇ ಆಗಿದ್ದು, ಬಹುತೇಕ ಸೊಪ್ಪು, ತರಕಾರಿಗಳನ್ನು ಬೆಳೆದು ಬದುಕುವ ರೈತ ಜೀವಿಗಳಾಗಿದ್ದರು. ಜೊತಗೆ ಹೈನುಗಾರಿಕೆಯನ್ನು ಮಾಡಿಕೊಂಡಿದ್ದರು.
ಮೈಸೂರು ನಗರದಿಂದ ಸುಮಾರು 15 ಕಿ.ಮೀ ದೂರದಲ್ಲಿರುವ ಈ ಗ್ರಾಮದ ಮೇಲೆ ಹಿಂದೆಯೇ ಅದೇಗೋ ರಿಯಲ್ ಎಸ್ಟೇಟ್ ಮಾಫಿಯಾಗಳ ಕಣ್ಣು ಬಿತ್ತು. 2006ರಲ್ಲಿ ಆ ಗ್ರಾಮದಲ್ಲಿ ಹೆರಿಟೇಜ್ ಗಾಲ್ಫ್ ಕಂಪನಿಯನ್ನು ಸ್ಥಾಪಿಸುವುದಕ್ಕಾಗಿ ರೈತರ ಜಮೀನುಗಳನ್ನು ಲಪಟಾಯಿಸುವ ಹುನ್ನಾರ ಮಾಡಿಕೊಂಡರು. ರೈತರನ್ನು ಪುಸಲಾಯಿಸಿ ಎರೆಡು ಲಕ್ಷ, 3 ಲಕ್ಷ ಹೀಗೆ ಕಡಿಮೆ ಬೆಲೆಗಳಿಗೆ ರೈತರಿಂದ ಅವರ ಜಮೀನಗಳನ್ನು ವಶಕ್ಕೆ ತೆಗೆದುಕೊಂಡರು. ವಿರೋಧಿಸಿದವರಿಗೆ ಕಂಪನಿಯಲ್ಲಿ ಕೆಲಸ ಕೊಡಿಸುವುದಾಗಿ ಅಮಿಷವೊಡ್ಡಿದರು. ಪ್ರಶ್ನಿಸಲು ಹೋದ ಸಮಾಜ ಹಿತಚಿಂತಕರಿಗೆ ಯೋಜನೆಗೆ ಬೆಂಬಲವಾಗಿ ಬಗ್ಗೆ ರಿಯಲ್ ಎಸ್ಟೇಟ್ ಏಜೆಂಟ್ ಗಳಿಗೆ ದಲಾಳಿಗಳಾಗಿ ಕೆಲಸ ಮಾಡುವ ಸರಕಾರಿ ಅಧಿಕಾರಿಗಳು, ರೈತರು ಜಮೀನು ನೀಡಿದರೆ, ಮುಂದೆ ಈ ಊರಿನಲ್ಲಿ ಕಂಪನಿಗಳು ಬೆಳೆದು, ದೊಡ್ಡ ದೊಡ್ಡ ಕಂಪನಿಗಳು ಬಂದು, ಊರಿನ ಮೇಲೆ ಹಣಕಾಸು ಹೂಡಿಕೆಗಳು ಮುಗಿಬಿದ್ದು, ಅಲ್ಲಿ ಕೋಟ್ಯಾಂತರ ರೂಪಾಯಿಗಳ ವ್ಯವಹಾರಗಳಾಗಿ, ಜನರಿಗೆ ಉಧ್ಯೋಗಗಳು ಸಿಕ್ಕಿ, ಆರ್ಥಿಕ ಸಂಕಷ್ಟ ಪರಿಹಾರವಾಗಿ, ಜನ ಜೀವನದಲ್ಲಿ ಅದ್ಭುತ ಸುಧಾರಣೆಗಳಾಗಿ, ಬಡಪಾಯಿ ರೈತರುಗಳ ಈ ಗ್ರಾಮವು ಸ್ವರ್ಗ ಕೇಂದ್ರಗಳಾಗಿ ಬದಲಾವಣೆಯಾಗುತ್ತದೆ ಎಂಬುದಾಗಿ ದ ನೆಲೆಗಳಾಗಿ ಬದಲಾಗುವುದಾಗಿ ಪುಂಗಿ ಊದಿದರು. ಕನಸಿನಲ್ಲೂ ನೋಡಲಿಕ್ಕೆ ಆಗದ ಮುಂದಿನ ವೈಭವದ ಜೀವನವನ್ನು ನೆನೆಯುತ್ತಾ ಬಡಪಾಯಿ ರೈತರುಗಳು ತಮ್ಮ ಜಮೀನುಗಳನ್ನು ಯಾವ ತಕರಾರು ಇಲ್ಲದೆಯೇ ಕೊಟ್ಟು ಬಿಟ್ಟರು.
ಕೋಚನಹಳ್ಳಿ ಗ್ರಾಮದಲ್ಲಿ ಏನಾಗಿದೆಯೆಂದರೆ ರೈತರು ಏಜೆಂಟರು ಅಷ್ಟೋ ಇಷ್ಟೋ ಕೊಟ್ಟರು. ಯಾರೋ ದಲ್ಲಾಳರು, ಪುಡಾರಿಗಳು, ಜಮೀನುಗಳನ್ನು ರೈತರಿಂದ ಅಡ್ವಾನ್ಸಿಗೆ ಹಾಕಿಕೊಂಡರು. ನಂತರ ಅವರು ಕಂಪನಿಗೆ ಮಾರಾಟ ಮಾಡಿ ಹಣ ಮಾಡಿಕೊಂಡರು. ರೈತರುಗಳು ಜಿಪಿಎ, ಅಡ್ವಾನ್ಸ್, ಕೈಸಾಲ ಹೀಗೆ ಹಣ ಪಡೆದುಕೊಂಡು, ಅವಾಗ್ಗೆ ಜೊತೆಗೆ ಏರಿಕೊಂಡು ಬರುತ್ತಿದ್ದ ಸಾಲ ಸೋಲ ಮುಗಿಸಿಕೊಂಡು ತಲೆತಲಾಂತರುಗಳಿಂದ ಇದ್ದ ಜಮೀನುಗಳನ್ನು ಕಳೆದುಕೊಂಡರು. ಬದುಕಿನ ಆಸರೆಗಾಗಿ ಅಲ್ಲಿ ಇಲ್ಲಿ ಇಟ್ಟಿಗೆ ಗೂಡುಗಳಿಗೆ ಮಣ್ಣು ಹೊರಲು ಹೋಗುತ್ತಿದ್ದಾರೆ.
ರಿಯಲ್ ಎಸ್ಟೇಟ್ ಮಾಫಿಯಾಗಳು ಮತ್ತು ಅವರಿಗೆ ಸಹಕರಿಸಿದ ಸರಕಾರಿ ಅಧಿಕಾರಿಗಳು ರೈತರ ಜಮೀನುಗಳನ್ನು ಅಪಹರಿಸಿ ಕೋಟಿ ಕೋಟಿಗಳ ಲೂಟಿ ಹೊಡೆದರು. ರೈತರು ಜಾಗೃತರಾಗುವುದರೊಳಗೆ ಅವರ ಜಮೀನುಗಳು ಕೋಟ್ಯಾಂತರ ರೂಪಾಯಿಗಳಿಗೆ ಮಾರಾಟವಾಗಿ ಹೋಗಿತ್ತು! ಕೋಚನಹಳ್ಳಿ ಗ್ರಾಮದ ಈ ಜಮೀನುಗಳು ಈಗ ಟೊಟಲ್ ಎನ್ವಿರಾನ್ ಮೆಂಟ್ ಎಂಬ ರಿಯಲ್ ಎಸ್ಟೇಟ್ ಕಂಪನಿಯ ವಶದಲ್ಲಿವೆ! ಅಲ್ಲಿ ಸೈಟು ಮಾಡಿ ಕೋಟ್ಯಾಂತರ ರೂಪಾಯಿಗಳ ಲೂಟಿ ಹೊಡೆಯಲು ತಕ್ಕ ಸಮಯ ಕಾಯುತ್ತಿದ್ದಾನೆ. ಇವೆಲ್ಲವೂ ಅಮಾಯಕ ರೈತರುಗಳ ಮುಂದೆಯೇ ನಡೆಯುತ್ತಿದೆ!
ಅಲ್ಲಿ ಈಗಲೂ ರೈತರು ತಮ್ಮ ಜಮೀನುಗಳನ್ನು ಹಿಂಪಡೆಯುವುದಕ್ಕಾಗಿ, ತಮಗೆ ಆಗಿರುವ ಅನ್ಯಾಯವನ್ನು ಸರಿಪಡಿಸಿ ಕೊಳ್ಳುವುದಕ್ಕಾಗಿ ಜಮೀನಿನ ಮುಂದೆ ಒಂದು ಕೊಟ್ಟಿಗೆ ಕಟ್ಟಿಕೊಂಡು ಹಗಲಿರುಳು ಕಾಯುತ್ತಾ ಹೋರಾಟ ಮಾಡುತ್ತಿದ್ದಾರೆ.
ತಮಗೆ ಆದ ಅನ್ಯಾಯದ ಬಗ್ಗೆ ಜಮೀನು ಕಳೆದುಕೊಂಡ ರೈತರುಗಳು 2010 ರಿಂದಲೂ ಹೋರಾಟ ಮಾಡುತ್ತಿದ್ದಾರೆ. ಸಭೆ ಪ್ರತಿಭಟನೆಗಳನ್ನು ನಡೆಸುತ್ತಿದ್ದಾರೆ. ಇವರ ಸಮಸ್ಯೆಯನ್ನು ಬಗೆಹರಿಸಲು ಯಾರಿಗೂ ಸಾಧ್ಯವಿಲ್ಲದಂತಾಗಿದೆ. 2013ರಲ್ಲಿ ರೈತರುಗಳ ಸಮಸ್ಯೆಗಳನ್ನು ಗಮನಿಸಿ ಕಂಪನಿ ಮತ್ತು ಸರಕಾರಿ ಅಧಿಕಾರಿಗಳ ಮೇಲೆ ಮೈಸೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಒಂದು ಕ್ರಿಮಿನಲ್ ಪ್ರಕರಣ ದಾಖಲು ಮಾಡಲಾಯಿತು! ಪೊಲೀಸ್ ಪ್ರಕರಣ ದಾಖಲು ಮಾಡಲು ಬರೋಬ್ಬರಿ 15 ವರ್ಷಗಳನ್ನು ತೆಗೆದುಕೊಂಡರು! ಆದಾಗ್ಯೂ ಈ ಕ್ರಿಮಿನಲ್ ಪ್ರಕರಣದ ವಿರುದ್ಧ ಆರೋಪಿಗಳು ಹೈಕೋರ್ಟಿನಿಂದ ತಡೆಯಾಜ್ಞೆ ತಂದಿದ್ದಾರೆ. ಕೇಸು ಅಲ್ಲಿಗೆ ನಿಂತಿದೆ. ರೈತರಿಗೆ ಮಾತ್ರ ನ್ಯಾಯ ಸಿಗಲೇ ಇಲ್ಲ. ನ್ಯಾಯ ಸಿಗುವುದು ಅವರಿಗೆ ಕನಸಿನ ಮಾತಾಗಿದೆ.
ಹಾಗೆಯೇ ಇದರ ಜೊತೆಗೆ ಇನ್ನೊಂದು ವಿಚಾರವೂ ಇದೆ; ಇದೇ ಮೈಸೂರು ತಾಲೂಕಿನ ವರುಣಾ ಹೋಬಳಿಯ ಮೆಲ್ಲಹಳ್ಳಿ ಗ್ರಾಮದಲ್ಲಿ ಈಗಲ್ ಬರ್ಗ ಎಂಬ ದೈತ್ಯ ರಿಯಲ್ ಎಸ್ಟೇಟ್ ಕಂಪನಿಯು ಗಾಲ್ಫ್ ರೆಸಾರ್ಟ್ ಮಾಡುವುದಕ್ಕಾಗಿ ಸರಕಾರದಿಂದ ಅಧಿಸೂಚನೆ ಹೊರಡಿಸಿ ರೈತರಿಂದ ಏಕರೆಗೆ ಎರೆಡು ಲಕ್ಷ ಮೂರು ಲಕ್ಷಕ್ಕೆ ಜಮೀನುಗಳನ್ನು ರೈತರಿಂದ ಎಗರಿಸಿಕೊಂಡಿದೆ. ಈಗ ಅಲ್ಲಿ ಗಾಲ್ಫ್ ವಿಲ್ಲೇಜ್ ನಿರ್ಮಾಣವಾಗಿದೆ. ಏಕರೆಗೆ ಲಕ್ಷ ಕೊಟ್ಟು ರೈತರ ಜಮೀನು ಪಡೆದುಕೊಂಡು ಕೋಟಿಗಳಿಗೆ ಸೈಟುಗಳನ್ನು ಮಾರಿ ಲೂಟಿ ಹೊಡೆದಿದ್ದಾರೆ. ಬಡ ರೈತರ ಜಮೀನಿನ ಮೇಲೆ ಸಾವಿರಾರು ಕೋಟಿಗಳ ವ್ಯವಹಾರ! ಅಕ್ರಮ ಸಂಪತ್ತಿನ ಮದವೇರಿದವರಿಗೆ ಗಾಲ್ಫ್ ಆಡಿ ಜೀವ ಕಳೆಯುವ ತೆವಲಿಗಾಗಿ ಮೆಲ್ಲಹಳ್ಳಿಯ ರೈತರು ತಮ್ಮ ಮಣ್ಣನ್ನು ಕಳೆದುಕೊಂಡಿದ್ದಾರೆ. ಬದುಕನ್ನು ಬರೀದು ಮಾಡಿಕೊಂಡಿದ್ದಾರೆ.
ನ್ಯಾಯ ಕೇಳುವ ಹಾಗಿಲ್ಲ. ಅವರ ಎಲ್ಲಾ ನ್ಯಾಯಯುತ ಬೇಡಿಕೆಗಳನ್ನು ದೌರ್ಜನ್ಯದಿಂದ ಹತ್ತಿಕ್ಕಲಾಗಿದೆ. ಬೇಕಿದ್ದಲ್ಲಿ ಮೆಲ್ಲಹಳ್ಳಿ ಗ್ರಾಮ ಮತ್ತು ಕೋಚನಹಳ್ಳಿ ಗ್ರಾಮಗಳಿಗೆ ಬೇಟಿ ನೀಡಿ. ಜಮೀನು ಕಳೆದುಕೊಂಡ ನತದೃಷ್ಟ ರೈತರುಗಳು ಈಗ ಯಾವ ಪರಿಸ್ಥಿತಿಯಲ್ಲಿ ಜೀವನ ಕಳೆಯುತ್ತಿದ್ದಾರೆ ಎಂಬುದನ್ನು ತಿಳಿದು ಕೊಳ್ಳಿ. ಹಾಗೇ ಮಾಡಿದಲ್ಲಿ ಅದು ಅವರಿಗೆ ನಾವು ತೋರಿಸುವ ಸಾಂತ್ವಾನವಾಗಬಹುದು! ಹಾಗೆಯೇ ಎಲ್ಲಿಂದಲೋ ಹೆಲಿಕಾಪ್ಟರಿನಲ್ಲಿ ಬಂದು ಗಾಲ್ಫ್ ಆಡಿಕೊಂಡು, ಊಡಿಕೊಂಡು ಜೀವನವನ್ನು ಸಂಭ್ರಮಿಸಿಕೊಂಡು ಹೋಗುವ ಸಂಪತ್ತಿನ ಸವಾಲಿಗರನ್ನೂ ನೋಡಿಕೊಂಡು ಬನ್ನಿ. ಈ ರಣಹದ್ದುಗಳು ಒಂದು ಕಡೆಯಾದರೇ ರೈತರುಗಳ ಮಾರಣ ಮುಖ ಇನ್ನೊಂದು ಕಡೆ!
ಬಿಡದಿಯ ಅಮಾಯಕ ರೈತರಿಗೂ ಮುಂದೆ ಇದೇ ಗತಿ! ಐಡಿಯಾಗಳು ಮಾತ್ರ ಬೇರೆ ಬೇರೆ!!


