ಇರಾನ್ ಯುದ್ಧ ಮುಗಿಯುತ್ತದಾ? (ಮುಂದುವರಿಯುವುದು) ಭಾಗ-1
ಇರಾನ್ ಮತ್ತು ಅಮೇರಿಕ ನಡುವಿನ ಯುದ್ಧ ಸಂಧಾನವಾಗುತ್ತದಾ? ಅಥವಾ ಯುದ್ಧ ಸಂಧಾನ ಮುಂದುವರಿಯುತ್ತದಾ? ಅಮೇರಿಕ ಮತ್ತು ಇರಾನ್ ನಡುವಿನ ಮಾತುಕತೆ ಯಶಸ್ವಿಯಾಗುತ್ತದಾ?
ಅಮೇರಿಕ ಮತ್ತು ಇರಾನ್ ನಡುವಣ ಯುದ್ಧ ಮುಗಿಯುತ್ತದಾ?-1
ಇರಾನ್ ಮತ್ತು ಅಮೇರಿಕ ನಡುವಿನ ಯುದ್ಧ ಸಂಧಾನವಾಗುತ್ತದಾ? ಅಥವಾ ಯುದ್ಧ ಸಂಧಾನ ಮುಂದುವರಿಯುತ್ತದಾ? ಅಮೇರಿಕ ಮತ್ತು ಇರಾನ್ ನಡುವಿನ ಮಾತುಕತೆ ಯಶಸ್ವಿಯಾಗುತ್ತದಾ? ಈ ಎಲ್ಲಾ ಸಮಚಾರವನ್ನು ತಿಳಿದು ಕೊಳ್ಳಲು ಯಾವುದೇ ಟಿವಿ, ಪತ್ರಿಕೆ, ಯೂಟ್ಯೂಬ್ಗಳನ್ನು ನೋಡಿದರೂ ಸರಿಯಾದ ಮಾಹಿತಿ ಸಿಗುವುದಿಲ್ಲ. ಅವುಗಳು ಅಷ್ಟು ಗೊಂದಲ ಗೋಜಲುಗಳ ಸುದ್ಧಿಗಳನ್ನೇ ಪ್ರಚಾರ ಮಾಡುತ್ತಿರುತ್ತವೆ. ಯಾವುದನ್ನು ನಂಬುವುದು ಯಾವುದನ್ನು ನಂಬದಿರುವುದು ಒಂದೂ ಗೊತ್ತಾಗುವುದಿಲ್ಲ. ಆ ರೀತಿಯಲ್ಲಿ ಇರಾನ್ ಮತ್ತು ಅಮೇರಿಕ ಯುದ್ಧದ ಗತಿಯು ಚಲಿಸುತ್ತಿದೆ. ಯುದ್ಧ ಏಕೆ ಆಯಿತು ಮತ್ತು ಯಾಕೆ ನಿಂತು ಹೋಗುತ್ತೇ ಎಂಬ ಬಗ್ಗೆ ಯುದ್ಧದಲ್ಲಿ ಆಸ್ತಿಪಾಸ್ತಿ, ಜೀವಗಳನ್ನು ಕಳೆದುಕೊಂಡು ಸಾವಿರಾರು ಅಮಾಯಕರುಗಳಿಗೆ ಭಾವಪೂರ್ಣ ಶ್ರದ್ಧಾಂಜಲಿಯನ್ನು ಸಲ್ಲಿಸಿ ಮದ್ಯ ಪ್ರಾಚ್ಯ ದೇಶಗಳ ಇತಿಹಾಸದ ಒಂದು ಅವಲೋಕನವನ್ನು ಮಾಡೋಣ.
ಇರಾನ್ ಸುಮಾರು 5ಸಾವಿರ ವರ್ಷದ ಇತಿಹಾಸವಿರುವ ಒಂದು ಸಾಂಪ್ರದಾಯಿಕ ದೇಶ. ಹಿಂದೆ ಇದನ್ನು ಕ್ರಿ.ಶ 17ನೇ ಶತಮಾನದಿಂದ 20ನೇ ಶತಮಾನದ ಆರಂಭದವರೆಗೆ ಕಜರ್ ಎಂಬ ರಾಜವಂಶದವರು ಆಳ್ವಿಕೆ ಮಾಡಿದ್ದರು. ಇರಾನ್ ತನ್ನದೇ ಆದ ಪರ್ಶಿಯನ್ ಸಂಸ್ಕಾರದಿಂದ ಪ್ರಭಾವಿತಗೊಂಡಿರುವ ಶ್ರೀಮಂತವಾಗಿರುವ ಸಮಾಜ. ಸರಿ ಸುಮಾರು 10 ಕೋಟಿ ಜನಸಂಖ್ಯೆಯನ್ನು ಹೊಂದಿರುವ ದೇಶ. ಸುಮಾರು 1 ಲಕ್ಷ 65ಸಾವಿರ ಚ.ಕಿ.ಮೀಟರ್ ವಿಸ್ತೀರ್ಣ ಹೊಂದಿರುವ ಬೃಹತ್ ದೇಶ. ಜನಸಂಖ್ಯೆಯ ಶೇಕಡಾ ತೊಂಬತ್ತರಷ್ಟು ಜನ ಮುಸ್ಲಿಂ ಜನಾಂಗದವರು, ಷಿಯಾ ಸಮುದಾಯದವರು. ಇರಾನಿನ ರಾಜಕೀಯ ಇತಿಹಾಸವನ್ನು ತಿಳಿಯ ಬೇಕಾದರೆ ಸುಮಾರು 2 ಶತಮಾನಗಳ ಹಿಂದಕ್ಕೆ ಹೋಗಬೇಕು. ಶತಮಾನಗಳಿಂದಲೂ ವಿದೇಶಿಯರ ಆಳ್ವಿಕೆ ಅಥವಾ ಪರೋಕ್ಷ ಆಳ್ವಿಕೆಗೆ ಒಳಪಟ್ಟಿರುವ ದೇಶ. ಇರಾನನ್ನು ಬ್ರಿಟೀಷರು ಬಹುಕಾಲ ತಮ್ಮ ಅಧೀನದಲ್ಲಿರಿಸಿಕೊಂಡಿದ್ದರು. 1890ರಲ್ಲಿ ಕಜರ್ವಂಶದ ರಾಜ ಮೊಹಮ್ಮದ್ ಶಾ ಕಜರ್ ಬ್ರಿಟೀಷರೊಂದಿಗೆ ಒಪ್ಪಂದ ಮಾಡಿಕೊಂಡು ಇರಾನ್ ನಲ್ಲಿ ಬೆಳೆಯುತ್ತಿದ್ದ ಹೊಗೆಸೊಪ್ಪಿನ ಸಂಪೂರ್ಣ ಹಕ್ಕು ಸ್ವಾಮ್ಯವನ್ನು ಬ್ರಿಟೀಷರಿಗೆ ಒಪ್ಪಿಸಿದ. ಆಗ ಹೊಗೆಸೊಪ್ಪು ಇರಾನಿನ ಪ್ರಮುಖ ಬೆಳೆಯಾಗಿದ್ದು ಸರಿಯಾದ ಬೆಲೆ ಸಿಗದ ಕಾರಣ ಇರಾನ್ ಜನರು ರಾಜನ ವಿರುದ್ಧ ತಿರುಗಿ ಬಿದ್ದರು. ಅದರಿಂದಾಗಿ ನಂತರ ಅಧಿಕಾರವೇರಿದ ರಾಜ ಅಹಮ್ಮದ್ ಶಾ ಕಜರ್ ಅನಿವಾರ್ಯವಾಗಿ ಈ ರಿಯಾಯಿತಿಯನ್ನು ರದ್ಧುಗೊಳಿಸ ಬೇಕಾಯಿತು. ಆದರೆ ವ್ಯಾಪಾರಿ ಬುದ್ಧಿಯ ಬ್ರಿಟೀಷರು ಸಿಟ್ಟುಗೊಂಡರು. ಅಹಮ್ಮದ್ ಶಾ ಕಜರ್ ನನ್ನು ಅಧಿಕಾರದಿಂದ ಪದಚ್ಯುತಗೊಳಿಸಿ ಬ್ರಿಟೀಷ್ ಸೇನೆಯಲ್ಲಿ ಪ್ರಾಧೇಶಿಕ ಅಧಿಕಾರಿಯಾಗಿದ್ದ ಪೆಹಲಾವಿ ರಾಜವಂಶದ ಶಾ ರೇಜಾ ಪೆಹಲಾವಿಯನ್ನು ಇರಾನಿನ ರಾಜನನ್ನಾಗಿ ಅಧಿಕಾರದಲ್ಲಿ ಕೂರಿಸಿರು ಬಿಟ್ಟರು. ಈ ರಾಜ ಬ್ರಿಟೀಷರು ಮತ್ತು ಅಮೇರಿಕನ್ನರು ಏನು ಹೇಳುತ್ತಾರೋ ಅದನ್ನೇ ಮಾಡುತ್ತಿದ್ದ. ಇರಾನಿನಲ್ಲಿ ಅಮೇರಿಕ ಮತ್ತು ಬ್ರಿಟೀಷ ಪಾಶ್ಚಿಮಾತ್ಯರ ಕೈಗೊಂಬೆಯಾಗಿ ರಾಜಪ್ರಭುತ್ವ ನಡೆಸುತ್ತಿದ್ದ. ಇವರ ನಂತರ ಮಗ ಮೊಹಮ್ಮದ್ ರೇಜಾ ಪಹಲಾವಿ ಇರಾನಿನ ರಾಜನಾದ. ಈ ಸಮಯದಲ್ಲಿ ಇರಾನಿನಲ್ಲಿ ಅಪಾರವಾದ ತೈಲ ಸಂಪತ್ತಿನ ಪತ್ತೆಯಾಯಿತು. ತೈಲ ಸಂಪತ್ತಿನ ಉತ್ಪಾಧನೆ ಮತ್ತು ಮಾರಾಟಕ್ಕಾಗಿ ಹೊಸದಾಗಿ ವಿಧೇಶಿ ಕಂಪನಿಗಳು ಬರತೊಡಗಿದವು. ಯಾವುದೇ ನಿಯಂತ್ರಣವಿಲ್ಲದೇ ಬೇಕಾಬಿಟ್ಟಿ ತೈಲ ಉತ್ಪಾದನೆ ಮಾಡಿ ಲೂಟಿ ಹೊಡೆಯುವ ವ್ಯವಹಾರವನ್ನು ನಡೆಸಲು ಆರಂಭಿಸಿದ್ದವು. ಈ ಕಂಪನಿಗಳು ಅಮೇರಿಕದ ಬೃಹತ್ ಬಂಡವಾಳಗಾರರ ಕಂಪನಿಗಳಾಗಿದ್ದು ಅಮೇರಿಕ ಮತ್ತು ಬ್ರಿಟೀಷ್ ಸರಕಾರಗಳು ಅವುಗಳಿಗೆ ಬೆಂಬಲ ಮತ್ತು ರಕ್ಷಣೆಯನ್ನು ನೀಡುತ್ತಿದ್ದವು. (ಮುಂದುವರಿಯುವುದು)
-ಕರೀಂ ರಾವತರ್


