ಅಂಬೇಡ್ಕರ್: ಇಂದಿಗೆ-ನಾಳೆಗೆ

ಅಂಬೇಡ್ಕರ್: ಇಂದಿಗೆ-ನಾಳೆಗೆ

ಅದು ಪೋಲೆಂಡ್‌ನ ವಾರ್ಸಾದ ಸಿಟಿ ಬಸ್ಸು. ಕಟ್ಟುಮಸ್ತಾಗಿದ್ದ ಕಪ್ಪು ಜೋಡಿಯೊಂದು ಬಸ್ಸೇರಿತು. ನನ್ನನ್ನು ಹೊರತುಪಡಿಸಿ ಬಸ್ಸಿನಲ್ಲಿದ್ದ ಪ್ರಯಾಣಿಕರೆಲ್ಲ ಬಿಳಿಯರೇ, ಬಿಳಿಯನ ಪಕ್ಕದಲ್ಲಿ ಒಂದು ಸೀಟು ಖಾಲಿ ಇತ್ತು. ಅಲ್ಲಿ ಕಪ್ಪು ಹುಡುಗ ಕುಳಿತ. ಕೂಡಲೇ ಆ ಬಿಳಿಯ, ಬೆಂಕಿ ತುಳಿದವನಂತೆ ಎದ್ದು ನಿಂತ. ಕಪ್ಪು ಹುಡುಗಿ ತನ್ನ ಗೆಳೆಯನ ಬದಿ ಕುಳಿತಳು. ಒಂದೂ ಮಾತಾಡದೆ ಮೌನವಾಗಿ ಆಚರಿಸಿದ ಆ ವರ್ಣಭೇದ, ಸೂಕ್ಷ್ಮ ಮನಸ್ಸುಳ್ಳವರಿಗೆ ತಿಳಿಯುವಂತಿತ್ತು. ಸೀಟು ಬಿಟ್ಟುಕೊಟ್ಟ ಬಿಳಿಯ, ಆ ಜೋಡಿಯನ್ನು ತಿರಸ್ಕಾರದಿಂದ ನೋಡುತ್ತಿದ್ದ. ಆ ಕಪ್ಪು ಹುಡುಗ ಸಿಡಿದೆದ್ದ. 'ಯಾಕೆ ಹಾಗೆ ವಕ್ರವಾಗಿ ನೋಡುತ್ತಿದ್ದಿ? ನಾನೂ ನಿನ್ನಂತೆ ಮನುಷ್ಯ. ಒಬ್ಬನೇ ದೇವರು ಇಬ್ಬರನ್ನೂ ಸೃಷ್ಟಿಸಿರೋದು... ಇತ್ಯಾದಿ ಶುರು ಮಾಡಿದವನು ಅಶ್ಲೀಲ ಪದಗಳನ್ನು ಬಳಸಿ ಹಿಗ್ಗಾಮುಗ್ಗಾ ಬೈದ, ಬಿಳಿಯ ಪೆಚ್ಚಾದ. ಅವನ ನೆರವಿಗೆ ಬಸ್ಸಿನಲ್ಲಿದ್ದ ಯಾವ ಬಿಳಿಯನೂ ಬರಲಿಲ್ಲ.

ಕಪ್ಪು ಹುಡುಗನ ಉಚ್ಚಾರಣೆ ಗಮನಿಸಿದಾಗ ಅವನು ಅಮೆರಿಕನ್ ಪ್ರಜೆ ಅನ್ನಿಸಿತು. ಅವನ ಪ್ರತಿಭಟನೆ ಇಷ್ಟವಾಯಿತು. ಬಹುಸಂಖ್ಯಾತ ಬಿಳಿಯರಿಗೆ, ಅವರ ನೆಲದಲ್ಲೇ ತಪ್ಪು ಎತ್ತಿತೋರಿಸಿ ಜೋಡಿ ಇಳಿದುಹೋಯಿತು. ಉದ್ಯಾನ, ಈಜುಕೊಳ, ಸಾರ್ವಜನಿಕ ಸಾರಿಗೆ ಇಂಥ ಕಡೆ ಬರಿಯ ನೋಟದಿಂದ ಅವಮಾನಕ್ಕೊಳಗಾಗುವ ಅನುಭವ ನನಗೆ ಬಹಳ ಸಲ ಆಗಿದೆ. ತಿರಸ್ಕಾರದ ನೋಟಕ್ಕೂ ತಿರುಗಿ ಬೀಳುವ ಪ್ರತಿಭಟನೆಯನ್ನು ಮೊದಲ ಬಾರಿಗೆ ಕಂಡೆ. ಈ ಬಗೆಯ ವಕ್ರನೋಟವು ಕಾನೂನಿನ ದೃಷ್ಟಿಯಲ್ಲಿ ಅಪರಾಧವೋ ಅಲ್ಲವೋ ಕಾಣೆ. ಆದರೆ, ನಾಗರಿಕ ನಡವಳಿಕೆಯಲ್ಲಿ ಅಪರಾಧ.

'ಮುಟ್ಟಿಸಿಕೊಳ್ಳಬಾರದು' ಎನ್ನುವುದು ಕೇವಲ ದೈಹಿಕ ಸ್ವಚ್ಛತೆಗೆ ಸಂಬಂಧಿಸಿದ್ದಲ್ಲ; ಅದೊಂದು ಮಾನಸಿಕ ರೋಗ. ಹಳ್ಳಿಗಾಡಿನಲ್ಲಿ ವಾಚ್ಯವಾಗಿದ್ದರೆ, ನಗರಗಳಲ್ಲಿ ಸೂಚ್ಯವಾಗಿ ಕಾಣುವ ರೋಗ. ಎರಡೂ ಸಮಾನ ಅಪಾಯಕಾರಿಗಳೇ, ಹಳ್ಳಿಗಾಡಿನಲ್ಲಿ ಜಾತಿ ನಿಂದೆಯು ಕೇರಿಗಳಲ್ಲಿ ಪ್ರತ್ಯೇಕ ವಾಸ, ಕುಡಿಯುವ ಬಳಸುವ ನೀರಿಗೆ ನಿಷೇಧ, ದೇವಾಲಯ ಪ್ರವೇಶ ನಿರ್ಬಂಧ, ಕ್ಷೌರ ಮಾಡುವುದಕ್ಕೆ ತಾರತಮ್ಯ, ಮರ್ಯಾದೆಗೇಡು ಹತ್ಯೆ ಇತ್ಯಾದಿಗಳ ರೂಪದಲ್ಲಿ ವ್ಯಕ್ತವಾಗುತ್ತದೆ. ನಗರಗಳಲ್ಲಿ, ಬಾಡಿಗೆಗೆ ಮನೆ ಕೊಡಲೂ ಜಾತಿ ಕೇಳುವ, ಸಾಂಸ್ಕೃತಿಕವಾಗಿ ದೂರ ಇರಿಸುವ ಹಲವು ಬಗೆಯಲ್ಲಿ ಸೂಚ್ಯವಾಗಿ ವ್ಯಕ್ತವಾಗುತ್ತದೆ. ಶ್ರೀಮಂತ ಮತ್ತು ಅಧಿಕಾರಸ್ಥ ದಲಿತ ಮಾತ್ರ ಕೊಂಪಚಮಟ್ಟಿಗೆ ಇವುಗಳಿಂದ ಪಾರಾಗಬಲ್ಲ. ಕೆಳಜಾತಿಯವನು ಹಳ್ಳಿಯಾಗಲೀ ನಗರವಾಗಲೀ ನರಕವೇ. 

ಬಡತನವು ಅರ್ಥಿಕ ಸ್ಥಿತಿಯಾದ್ದರಿಂದ ಬದಲಾಗುವ ಸಾಧ್ಯತೆ ಉಳ್ಳದ್ದು. ಆದರೆ, ಜಾತಿ ಬೆನ್ನಿಗಂಟಿದ ಶಾಪ. ಎಂದೂ ಬದಲಾಗದ್ದು. ಭಾರತದಲ್ಲಂತೂ ಇದು ಕಠೋರ ವಾಸ್ತವಗಳಿಂದ ಹಬ್ಬಿರುವ ಹೆಣಿಗೆ. ಸಂತರು, ದಾರ್ಶನಿಕರು, ಶರಣರು, ಬರಹಗಾರರು, ಕಲಾಕಾರರು ಮತ್ತು ಬದ್ಧತೆಯುಳ್ಳ ರಾಜಕಾರಣಿಗಳು ಕಾಲಕಾಲಕ್ಕೆ ಅಸ್ಪೃಶ್ಯತೆಯ ವಿರುದ್ಧ ದನಿ ಎತ್ತಿದ್ದಾರೆ. ಸಂವಿಧಾನವಿದೆ. ತತ್ತ್ವಗಳಿವೆ. ಇಲಾಖೆಗಳಿವೆ. ಪರಿಸ್ಥಿತಿ ಮೊದಲಿಗಿಂತ ಸುಧಾರಿಸಿದೆ ಎಂದು ಮೇಲ್ನೋಟಕ್ಕೆ ಕಂಡರೂ ಕಂದರಗಳು ಅಲ್ಲಲ್ಲಿ ಹಾಗೆಯೇ ಇವೆ. 

ಮನುಷ್ಯ ಮನುಷ್ಯನನ್ನು ಮನುಷ್ಯನಂತೆ ಪರಿಭಾವಿಸಿ ಸಮಾನತೆಯಿಂದ ಒಳಗೊಳ್ಳುವುದೊಂದೇ ಜಾತಿ ಸಮಸ್ಯೆಗೆ ಪರಿಹಾರ. ಈ ಪರಿಹಾರವನ್ನು ರಾಜಕೀಯ ಅಧಿಕಾರದಿಂದ, ಶಿಕ್ಷಣದಿಂದ, ಹೋರಾಟಗಳಿಂದ, ಸಂಘಟನೆಯ ಮೂಲಕ ಕಂಡುಕೊಳ್ಳಬಹುದು ಎಂದು ಕೂಗಿ ಹೇಳಿದವರು ಬಿ.ಆರ್. ಅಂಬೇಡ್ಕರ್.

ಬಾಬಾ ಸಾಹೇಬರ ಬಾಲ್ಯದಲ್ಲಿ ಕರಾಳ ಘಟನೆಗಳಿವೆ. ಅಲ್ಲೆಲ್ಲಾ ಅವಮಾನ ಹೆಪ್ಪುಗಟ್ಟಿದೆ. ಅವು ಬಡತನದ ಬದಲು, ಜಾತಿ ಕಾರಣದಿಂದ ಅದ ಅವಮಾನಗಳಾಗಿವೆ. ಒಂಬತ್ತು ವರ್ಷದ
ಬಾಲಕನಾಗಿದ್ದಾಗ ಮೊದಲ ರೈಲು ಪ್ರಯಾಣ ಮತ್ತು ಎತ್ತಿನಗಾಡಿ ಪ್ರಯಾಣಗಳಲ್ಲಿ ಆದ ಅವಮಾನದ ಗಾಯಗಳನ್ನು ಎಂದೂ ಮರೆಯಲಾಗದ ಘಟನೆಗಳೆಂದು ಅಂಬೇಡ್ಕರ್ ದಾಖಲಿಸಿದ್ದಾರೆ. ರೈಲು ಎಂಬುದು ಬ್ರಿಟಿಷರ ಸಂಕೇತದಂತಿದೆ. ದಕ್ಷಿಣ ಅಫ್ರಿಕಾದಲ್ಲಿ ಗಾಂಧೀಜಿಯವರನ್ನು ಎಳೆದು ಹೊರಹಾಕಿದ್ದೂ ರೈಲಿನಿಂದಲೇ. ಬಹಳಷ್ಟು ಮಂದಿ ಅಪಮಾನಗಳನ್ನು ನುಂಗಿಕೊಂಡು ವಿಧಿಬರಹದ ಪಟ್ಟಿಗೆ ಸೇರಿಸಿ ಸುಮ್ಮನಾಗುತ್ತಾರೆ. ಆದರೆ ಗಾಂಧಿ, ಅಂಬೇಡ್ಕರ್ ಅಂತಹ ಚೇತನಗಳು ಅವಮಾನಗಳಿಂದ ಬಿಡುಗಡೆ ಪಡೆಯಲು ಶೋಷಿತರ ಪರ ಹೋರಾಟಗಳನ್ನು ರೂಪಿಸುತ್ತವೆ. ಗಾಂಧಿ ಮತ್ತು ಅಂಬೇಡ್ಕರ್ ಹೋರಾಟದ ಸ್ವರೂಪಗಳು ಭಿನ್ನವಾಗಿ ದ್ದರೂ, ಇಬ್ಬರ ಅಂತಿಮ ಗುರಿ ಒಂದೇ ಆಗಿತ್ತು. ಅವರಿಬ್ಬರಿಲ್ಲದೆ ಭಾರತವನ್ನು ಕಲ್ಪಿಸಿಕೊಳ್ಳಲು ಆಗದು.

ಗೋಣಿತಾಟನ್ನು ತೆಗೆದುಕೊಂಡು ಹೋಗಿ
ಕೂರುತ್ತಿದ್ದರು- ಅಲ್ಲ ಕೂರಿಸುತ್ತಿದ್ದರು- ಬಾಲಕ ಅಂಬೇಡ್ಕರ್‌ರನ್ನು. ಪ್ರತಿಭಾವಂತ ವಿದ್ಯಾರ್ಥಿ ಎನಿಸಿಯೂ ಅಪಮಾನ. ಸವರ್ಣೀಯ ಮಕ್ಕಳು ನಲ್ಲಿಯಲ್ಲಿ ನೀರು ಬಿಟ್ಟಾಗ ಮಾತ್ರ ಕುಡಿಯಬೇಕು. ನಲ್ಲಿಯನ್ನು ಮುಟ್ಟುವಂತಿಲ್ಲ. ದಲಿತರು ಸಾರ್ವಜನಿಕವಾಗಿ ನಲ್ಲಿಯನ್ನು ಬಳಸಿದ ರೆಂದು ಗಂಗಾಜಲ ಪ್ರೋಕ್ಷಣೆ ಮಾಡಿದ ಸರ್ವಣೀಯರ ವರ್ತನೆಯೊಂದು ಇತ್ತೀಚೆಗೆ ವರದಿಯಾಗಿತ್ತು. ನನ್ನ ಕಣ್ಣಿಗೆ ಕಟ್ಟಿದಂತಿರುವ ಒಂದು ಅಸಹಾಯಕ ಚಿತ್ರ ಹೀಗಿದೆ. ಪ್ರೌಢಶಾಲೆಯಲ್ಲಿ ಓದುವಾಗ ಪರಿಶಿಷ್ಟ ಜಾತಿಯ ಬಾಲಕನೊಬ್ಬ ಹೊಸ ಚಪ್ಪಲಿ ಧರಿಸಿ ಬಂದಿದ್ದಕ್ಕೆ ವ್ಯಾಯಾಮ ಶಿಕ್ಷಕ ಅವನ ಕಾಲಿಗೆ ಬಾಸುಂಡೆ ಬರುವಂತೆ ಹೊಡೆದಿದ್ದರು. ಅಪಮಾನ, ನೋವು ತಾಳಲಾರದೆ ಅವನು ಶಾಲೆಯನ್ನೇ ಬಿಟ್ಟ. ಕಣ್ಣೀರು ಸುರಿಸುತ್ತಿದ್ದ ಆ ನನ್ನ ಸಹಪಾಠಿಯ ಚಿತ್ರ, ಏನೂ ಮಾಡಲಾಗದ ನನ್ನ ಅಸಹಾಯಕತೆ ಪಾಪಪ್ರಜ್ಞೆಯಂತೆ ನನ್ನಲ್ಲಿ ಉಳಿದುಬಿಟ್ಟಿದೆ. ಹೊಸ ಚಪ್ಪಲಿ ಧರಿಸಬಲ್ಲಷ್ಟು ಸ್ಥಿತಿವಂತನಾಗಿದ್ದೇ ಸವರ್ಣೀಯ ಮನಸ್ಸಿನ ಹೊಟ್ಟೆಕಿಚ್ಚಿಗೆ ಕಾರಣ. ಈ ನೀಚ ಪ್ರವೃತ್ತಿ ಈಗಲೂ ಕೆಲವರಲ್ಲಿದೆ. ಅಸ್ಪೃಶ್ಯರು ಒಳ್ಳೆಯ ಬಟ್ಟೆ ಧರಿಸಬಾರದು, ಒಳ್ಳೆಯ ಊಟ ಮಾಡಬಾರದು, ಒಳ್ಳೆಯ ಮನೆಯಲ್ಲಿ ವಾಸಿಸಬಾರದು, ಒಟ್ಟಿನಲ್ಲಿ ತನಗಿಂತ ಉತ್ತಮ ರೀತಿಯಲ್ಲಿ ಬದುಕಬಾರದು. ಅಂಬೇಡ್ಕರ್ ತಂದೆ ಸರ್ಕಾರಿ ನೌಕರಿಯಲ್ಲಿ  ದ್ದುದರಿಂದ ಹಣ ಕೊಡಲು ಶಕ್ತರಾಗಿದ್ದರೂ ಅಸ್ಪೃಶ್ಯರಾದ್ದರಿಂದ ಅಗಸರು ಬಟ್ಟೆ ಒಗೆ ಯುವುದಿಲ್ಲ. ಕ್ಷೌರಿಕರು ಹತ್ತಿರ ಸುಳಿಯುವುದಿಲ್ಲ. ಬಾಲ್ಯದಲ್ಲಿ ತನ್ನ ಹಿರಿಯಕ್ಕನೇ ನನಗೆ ಕ್ಷೌರ ಮಾಡುತ್ತಿದ್ದಳು ಎಂದಿದ್ದಾರೆ ಅಂಬೇಡ್ಕರ್. ಒಮ್ಮೆ ಬಾಯಾರಿಕೆ ತಾಳದೆ ತನ್ನನ್ನು ತಾನು ಮುಸ್ಲಿಂ ಎಂದು ಪರಿಚಯಿಸಿ ಕೊಳ್ಳುತ್ತಾರೆ.ಹಿಂದೂ ಧರ್ಮದ ಅಸ್ಪೃಶ್ಯಎಲ್ಲ ಧರ್ಮದಲ್ಲೂ ಅಸ್ಪೃಶ್ಯನೇ. ಹಲ್ಲೆಯ ಭಯ, ಬಾಯಾರಿಕೆ, ಹೆಪ್ಪುಗಟ್ಟಿದ ಆಕ್ರೋಶ ಮತ್ತು ಒಂಟಿತನ ಎಲ್ಲಕ್ಕೂ ಉತ್ತರವನ್ನು ಶಿಕ್ಷಣದ ಬೆಳಕಿನಲ್ಲಿ ಕಾಣಬಯಸುತ್ತಾರೆ.

ವಿಪರ್ಯಾಸವೆಂದರೆ, ವಿದೇಶ ವ್ಯಾಸಂಗ ಮುಗಿಸಿ ೧೯೧೮ರಲ್ಲಿ ಭಾರತಕ್ಕೆ ಬಂದಾಗಲೂ, ಇಲ್ಲಿನ ಸಾಮಾಜಿಕ ಸನ್ನಿವೇಶದಲ್ಲಿ ಬದಲಾವಣೆ ಆಗದೆ ಇದ್ದುದು. ಯುರೋಪ್, ಅಮೆರಿಕಗಳಲ್ಲಿ ಕೆಲಕಾಲ ಅಸ್ಪೃಶ್ಯನೆಂಬುದನ್ನು ಮರೆತಿದ್ದ ಅಂಬೇಡ್ಕರ್‌ಗೆ ಭಾರತ ಮತ್ತೆ ಜಾತಿಯನ್ನು ನೆನಪಿಸುತ್ತದೆ. ಇದು ಸಾಧಾರಣ ಭಾರತವಲ್ಲ. ಶೂದ್ರರಿಗೆ ಮತ್ತು ಸ್ತ್ರೀಯರಿಗೆ ಶಿಕ್ಷಣ ನೀಡಿದ ಸಾವಿತ್ರಿಬಾಫುಲೆ ಅವರನ್ನು ಸಗಣಿ ಎಸೆದು ಅಪಮಾನಿಸಿದ ಭಾರತ. ಜಾತಿಯಾಚೆಗೆ ಪ್ರೀತಿ ಮಾಡಿ ಮದುವೆಯಾದರೆ, ಕುಲದ ಮರ್ಯಾದೆಯೆಂದು ಕರುಳಕುಡಿಯನ್ನೇ ಹತ್ಯೆಮಾಡುವ ಮರ್ಯಾದಸ್ಥರ ಭಾರತ. ಇಂಥ ಭಾರತ, ವಿದೇಶದಲ್ಲಿ ಓದಿಕೊಂಡು ಬಂದ ದಲಿತನನ್ನು ವಸತಿಗೃಹ ನೀಡದೆ ಅಪಮಾನಿಸಿದ್ದು ಅಚ್ಚರಿ ಏನಲ್ಲ. ಅಂಬೇಡ್ಕರ್ ಭಾವೋದ್ರೇಕಕ್ಕೊಳಗಾಗುವ, ತನಗೆ ಮಾತೃಭೂಮಿ ಎಂಬುದೇ ಇಲ್ಲ ಎಂದು ಗದ್ಗದಿತರಾಗುವ ಸನ್ನಿವೇಶಗಳು ಅವರ ಬದುಕಿನಲ್ಲಿ ಇವೆ. ಸಂಕಟಗಳು ಸಿಟ್ಟಾಗಿ ಪರಿವರ್ತನೆಗೊಂಡು ಅವರು ಹಟಮಾರಿಯಾಗುತ್ತಾರೆ.

ಬಾಬಾ ಸಾಹೇಬರು ಜಾತಿ, ಅಸ್ಪೃಶ್ಯತೆ, ಧರ್ಮ, ಬೌದ್ಧಮತ, ಮತಾಂತರ, ಸಂವಿಧಾನ, ಮಹಿಳೆಯ ಸ್ಥಾನಮಾನ, ಅಲ್ಪಸಂಖ್ಯಾತರು, ಭಾಷಾವಾರು ಪ್ರಾಂತ್ಯ ರಚನೆ, ಗಾಂಧಿವಾದ, ಆರ್ಥಿಕತೆ, ನಿಮ್ನ ವರ್ಗಕ್ಕೆ ರಾಜಕೀಯ ಅಧಿಕಾರದ ಅವಶ್ಯಕತೆ - ಮುಂತಾದ ವಿಷಯಗಳ ಬಗ್ಗೆ ಆಳವಾಗಿ ಚಿಂತಿಸಿ ಬರೆದಿದ್ದಾರೆ. ಅವರು ಬರಿಯ ಅಸ್ಪೃಶ್ಯ ಜಾತಿಗಳ ನಾಯಕ ಎಂಬ ಸೀಮಿತ ದೃಷ್ಟಿಕೋನವನ್ನು ಕಿತ್ತೊಗೆದು 'ಅಂಬೇಡ್ಕರ್ ಎಲ್ಲರಿಗಾಗಿ' ಎಂಬ ಮುಕ್ತ ಮನಸ್ಸಿನಿಂದ, ಯಾರಿಗೆ ಸಮಾನತೆಯಲ್ಲಿ ನಂಬಿಕೆ ಇದೆಯೋ, ಅವರೆಲ್ಲ ಅಧ್ಯಯನ ಮಾಡಬೇಕಿದೆ. ಮುಟ್ಟಿಸಿಕೊಳ್ಳದ ರೋಗಿಷ್ಟರಿಗೆ ಇದೇ ಸರಿಯಾದ ಮದ್ದು.

ಅಂಬೇಡ್ಕರ್ ಜಯಂತಿ ಸಂದರ್ಭದಲ್ಲಿ ಎರಡು ವಿದ್ಯಮಾನಗಳು ಏರ್ಪಟ್ಟಿವೆ. ಮೊದಲನೆಯದು ಸರ್ಕಾರದ ಜನಗಣತಿ, ಸಿನಿಕರಾಗದೆ, ಅಲಸ್ಯ ತೋರದೆ, ಕುಂಟುನೆಪ ಹೇಳಿ ತಪ್ಪಿಸಿಕೊಳ್ಳದೆ ಪ್ರತಿಯೊಬ್ಬರೂ ಇದರಲ್ಲಿ ಭಾಗವಹಿಸುವುದು ಅಗತ್ಯ. ಈ ಮಹಾರಣ್ಯದಲ್ಲಿ ಆನೆ, ಸಿಂಹ, ತೋಳ, ಕಾಗೆ, ವೇಷತೊಟ್ಟ ನರಿ ಎಷ್ಟಿವೆ ಮತ್ತು ಎಲ್ಲಿವೆ ಎಂಬ ಮಾಹಿತಿ ಪ್ರಭುತ್ವಕ್ಕೆ ಬೇಕಾದೀತು. ಈ ಅಂಕಿಅಂಶಗಳಿಂದ ಪವಾಡಗಳೇನೂ ಆಗದಿದ್ದರೂ ಪ್ರಜಾಪ್ರಭುತ್ವದ ಸಂಚಲನೆ ಮತ್ತು ಸ್ಪಷ್ಟತೆಗೆ ಇದು ಅಗತ್ಯ. ಎರಡನೆಯದು, ಈಗ ಎದ್ದಿರುವ ಒಳಮೀಸಲಾತಿಯ ಪರ ಮತ್ತು ವಿರೋಧಗಳು. ಇದರ ಸೂಕ್ತ ನಿರ್ಣಯಕ್ಕೂ ಅಂಬೇಡ್ಕರ್ ಅವರ ತಾತ್ವಿಕ ಅಧ್ಯಯನವೇ ದಿಕ್ಕು. ಎರಡೂ ಬಣಗಳು ಬಾಬಾ ಸಾಹೇಬರನ್ನು ಒಪ್ಪಿರುವುದರಿಂದ ತಕ್ಕ ಪರಿಹಾರವನ್ನು ಸಂವಿಧಾನ ಮತ್ತು ಅದರ ಶಿಲ್ಪಿಯ ವಿಚಾರಧಾರೆಗಳಿಂದಲೇ ಪಡೆಯಬೇಕಿದೆ.

-------
ಒಬ್ಬ ಮನುಷ್ಯ ಇನ್ನೊಬ್ಬ ಮನುಷ್ಯನನ್ನು ಮುಟ್ಟಿಸಿಕೊಳ್ಳಲು ಹಿಂಜರಿಯುವ ವರ್ತಮಾನದಲ್ಲಿ, ಮನಸ್ಸುಗಳು ಒಂದಾಗುವುದು ಹೇಗೆ? ನಮ್ಮ ಸಣ್ಣತನಗಳನ್ನು ನೀಗಿಕೊಳ್ಳಲು ಹಾಗೂ ವರ್ತಮಾನದ ಬಹುತೇಕ ಸಂಕಷ್ಟಗಳ ಕುದಿಗೆ ಬಾಬಾಸಾಹೇಬ್ ಅಂಬೇಡ್ಕರ್ ಅವರ ಬದುಕು ಮತ್ತು ವಿಚಾರಗಳಲ್ಲಿ ಉತ್ತರವಿದೆ.

ವಿಶ್ಲೇಷಣೆ : ನಾಗತಿಹಳ್ಳಿ ಚಂದ್ರಶೇಖರ