ಅಮೇರಿಕ ಮತ್ತು ಇರಾನ್ ನಡುವಣ ಯುದ್ಧ ಮುಗಿಯುತ್ತದಾ?  ಭಾಗ-3

ಖೊಮೆನಿ ಸರಕಾರದ ವಿರುದ್ಧ ಹೋರಾಟಕ್ಕೆ ನೇರ ನಿಂತುಬಿಟ್ಟಿತ್ತು.  ಅಮೇರಿಕದ ಎಲ್ಲಾ ನಿಯಂತ್ರಣಗಳನ್ನು ಇರಾನ್ ತೆಗೆದು ಹಾಕಿತು. ತೈಲ ಕಂಪನಿಗಳನ್ನು ಸಂಪೂರ್ಣ ರಾಷ್ಟ್ರೀಕರಣಗೊಳಿಸಿತು.  ಅಮೇರಿಕದ ಜೊತೆಗಿನ ಎಲ್ಲಾ ರಾಜತಾಂತ್ರಿಕ ಸಂಬಂಧಗಳನ್ನು ಕಡಿದುಕೊಂಡಿತು.  ತಕ್ಷಣ ಅಮೇರಿಕ ಮತ್ತು ಇರಾನ್ ಬದ್ಧ ವೈರಿ ದೇಶಗಳಾದವು.  ಇರಾನಿನ ಮೇಲೆ ಅಮೇರಿಕ ಅಂತರಾಷ್ಟ್ರೀಯ ದಿಗ್ಭಂದನವನ್ನು ಹಾಕಿತು.  ಖೊಮಿನಿ ಅಮೇರಿಕಾವನ್ನು ದೊಡ್ಡ ಸೈತಾನ ಮತ್ತು ಇಸ್ರೇಲನ್ನು ಸಣ್ಣ ಸೈತಾನನೆಂದು ಜರೆಯಿತು.  ಅಮೇರಿಕಾವು ಇರಾನನ್ನು ಜಗತ್ತಿನ ದುಷ್ಟಶಕ್ತಿಯೆಂದು ಕರೆಯಿತು. 

ಅಮೇರಿಕ ಮತ್ತು ಇರಾನ್ ನಡುವಣ ಯುದ್ಧ ಮುಗಿಯುತ್ತದಾ?  ಭಾಗ-3

ಅಮೇರಿಕ ಮತ್ತು ಇರಾನ್ ನಡುವಣ ಯುದ್ಧ ಮುಗಿಯುತ್ತದಾ?  ಭಾಗ-3

ಈ ಮದ್ಯೆ ಇರಾನಿನ ಷಾ ರಾಜನ ಸೈನಿಕರ ಭಯದಿಂದ ದೇಶತೊರೆದು ಅಯತೊಲ್ಲಾ ಖೊಮೆನಿ ಇರಾಕಿನ ನಜಾಫ್ ಗೆ ಬಂದಿದ್ದಾಗ ಇರಾಕಿನಲ್ಲಿ ಅಧ್ಯಕ್ಷ  ಅಹಮ್ಮದ್ ಹಸನ್ ಅಲ್ಬಕರ್ ರವರು ಧ್ಯಕ್ಷರಾಗಿದ್ದರು. ಅವರು ಆಗಿನ ಸೋವಿಯತ್ ರಶಿಯಾದ ನಿಕಟವರ್ತಿಯಾಗಿದ್ದರು.  ಅಯತೊಲ್ಲಾ ಖೊಮೆನಿಗೆ ಬೆಂಬಲ ನೀಡಿದ್ದರು.  ಅಹಮ್ಮದ್ ಹಸನ್ ಅಲ್ಬಕರ್ ರವರು ಇರಾಕಿನಲ್ಲಿ ಅಧ್ಯಕ್ಷರಾಗಿರುವುದು ಅಮೇರಿಕನ್ ಸಾಮ್ರಾಜ್ಯ ಶಾಹಿಗಳಿಗೆ ಸಹಿಸಲಾಗುತ್ತಿರಲಿಲ್ಲ. ಅಮೇರಿಕದ ಸಿಐಎ ಬೇಹುಗಾರಿಕಾ ಸಂಸ್ಥೆಯು ಕುತಂತ್ರದಲ್ಲಿ ನಡೆದ ಇರಾಕಿನಲ್ಲಿ ಉಪ ಪ್ರಧಾನಿಯಾಗಿದ್ದ ಸದ್ದಾಂ ಹುಸೇನ್ ಮಿಲಿಟರಿ ಕ್ರಾಂತಿ ನಡೆಸಿ   ಅಹಮ್ಮದ್ ಹಸನ್ ಅಲಬಕರನ್ನು ಪದಚ್ಯುತಗೊಳಿಸಿ ಇರಾಕಿನ ಮಿಲಿಟರಿ ಅಧ್ಯಕ್ಷರಾದರು.  

ಸದ್ದಾಂ ಹುಸೇನ್ ಇರಾಕಿನ ಅಧ್ಯಕ್ಷನಾದ ಕೂಡಲೇ ಅಮೇರಿಕವು ಇರಾನ್ ದೇಶದ ರಾಜ ರೇಜಾ ಷಾನ ವಿರುದ್ಧ ಕ್ರಾಂತಿಗೆ ಕರೆನೀಡಿದ್ದ  ಅಯತೊಲ್ಲಾ ಖೊಮೆನಿಯನ್ನು ಇರಾಕಿನಿಂದ ಹೊರ ಹಾಕುವಂತೆ ಸದ್ದಾಂ ಹುಸೇನರಿಗೆ ಒತ್ತಡ ಹಾಕಿತು. ಸದ್ದಾಂ ಹುಸೇನ್ ಅಮೇರಿಕಾವನ್ನು ಸಂತೋಷಪಡಿಸಲು ಅಯತೊಲ್ಲಾ ಖೊಮೆನಿಯನ್ನ ಬೇಟೆಯಾಡಲು ಶುರು ಮಾಡಿದ! ಅಯತೊಲ್ಲಾ ಖೊಮೆನಿ ಇರಾಕ್ ದೇಶವನ್ನು ಬಿಟ್ಟು ಫ್ರಾನ್ಸ್ ದೇಶಕ್ಕೆ ಸ್ಥಳಾಂತರಗೊಂಡರು.

1979ರಲ್ಲಿ  ಇರಾನಿನಲ್ಲಿ ಕ್ಷಿಪ್ರಕ್ರಾಂತಿಯಾಯಿತು.  ಪಹ್ಲವಿ ರಾಜಪ್ರಭುತ್ವ ಪದಚ್ಯುತಗೊಂಡು ರಾಜ ಮೊಹಮ್ಮದ್ ರೇಜಾ ಪೆಹ್ಲಾವಿ ಅಧಿಕಾರದಿಂದಿಳಿದರು. ನಂತರ ದೇಶಭ್ರಷ್ಟನಾಗಿ ಈಜಿಪ್ತಿನಲ್ಲಿ ರಾಜಾಶ್ರಯ ಪಡೆದರು.  ಹೆಸರುವಾಸಿ ಇರಾನ್ ಕ್ರಾಂತಿಯ ನಂತರ ಅಯಾತೊಲ್ಲಾ ಖೊಮೆನಿರವರು ಇರಾನಿಗೆ ಬಂದು  ಇಸ್ಲಾಮಿಕ್ ಗಣರಾಜ್ಯವನ್ನು ಸ್ಥಾಪಿಸಿ ಅದರ ಸರ್ವೋಚ್ಚ ನಾಯಕರಾಗಿ (Supreme Leader) 1989ರಲ್ಲಿ ನಿಧನರಾಗುವವರೆಗೂ ಆಡಳಿತ ನಡೆಸಿದರು. ಆನಂತರ ಅವರ ಶಿಷ್ಯರಾಗಿದ್ದ ಅಲಿ ಖೊಮೆನಿಯವರು ಇರಾನ್‌ನ ಸರ್ವೋಚ್ಚ ನಾಯಕರಾಗಿ ಆಯ್ಕೆಗೊಂಡು ಮೊನ್ನೆ ಫೆಬ್ರವರಿ ತಿಂಗಳಿನಲ್ಲಿ ಅಮೇರಿಕದ ವಾಯುದಾಳಿಯಲ್ಲಿ ಸಾಯುವವರೆವಿಗೂ ಅಧಿಕಾರವನ್ನು ನಡೆಸಿದ್ದರು. ಆನಂತರದ ಇರಾನಿನಲ್ಲಿ ಷಿಯಾ ಧರ್ಮದ ಆಧ್ಯಾತ್ಮಿಕ ನಾಯಕ ಮತ್ತು ಧರ್ಮಗುರುವು ದೇಶದ ಸರ್ವೋಚ್ಛ ನಾಯಕರಾಗಿರುತ್ತಾರೆ.  ಉಳಿದ  ಅಧ್ಯಕ್ಷರು ಪ್ರಧಾನಿಗಳು ಸೇನಾ ದಂಡ ನಾಯಕರುಗಳ ಸರ್ವೋಚ್ಛ ನಾಯಕರ  ಅನುಮತಿ ಮತ್ತು ಮಾರ್ಗದರ್ಶನವನ್ನು ಪಡೆದು ಕೊಂಡು ಆಡಳಿತ ನಡೆಸುವ ಹೊಸ ರಾಜಕೀಯ ವ್ಯವಸ್ಥೆಯು ಇರಾನಿನಲ್ಲಿ ಜ್ಯಾರಿಯಲ್ಲಿದೆ.

ಷಾ ಇರಾನ್ ದೇಶವನ್ನು ತೊರೆದು ಈಜಿಪ್ಟ್ ನಲ್ಲಿ ರಾಜಾಶ್ರಯ ಪಡೆದು ಅಲ್ಲಿಯೇ ಮರಣ ಹೊಂದಿದರು.  ರೇಜಾ ಷಾ ಪಹ್ಲಾವಿಯ ಮಗ ಮೊಹಮ್ಮದ್ ಷಾ ಪಹ್ಲಾವಿ ಅಮೇರಿಕದಲ್ಲಿ ರಾಜಕೀಯ ಆಶ್ರಯವನ್ನು ಪಡೆದು ಅಲ್ಲಿಂದ ಖೊಮೆನಿ ಆಡಳಿತದ ವಿರುದ್ಧ ಹೋರಾಡುತ್ತಿದ್ದು ಮತ್ತೆ ರಾಜನಾಗಿ  ಇರಾನಿಗೆ ಬಂದು ದೇಶವನ್ನು ಕಟ್ಟುವ ಕನಸಿನೊಂದಿಗೆ  ನಾಗರೀಕ ಹೋರಾಟವನ್ನು ನಡೆಸುತ್ತಲೇ ಇದ್ದಾರೆ. ಮೊಸ್ಸಾದ್ ಮತ್ತು ಸಿಐಎ ಬೇಹುಗಾರಿಕೆಯ ನೆರವಿನೊಂದಿಗೆ  ಇರಾನಿನಲ್ಲಿ  ರಾಜಕೀಯ ಸಂಘರ್ಷಕ್ಕೆ ನಿರಂತರ ಯತ್ನವನ್ನು ಮಾಡುತ್ತಿದ್ದಾರೆ.   ಇವರ ಹೋರಾಟಕ್ಕೆ ಅಮೇರಿಕಾ ಸಂಪೂರ್ಣ ಬೆಂಬಲ ನೀಡಿದ್ದು ಇರಾನಿನ ವಿರುದ್ಧ ಎತ್ತಿಕಟ್ಟುವ ಕೆಲಸವನ್ನು ನಿರಂತರ ಮಾಡುತ್ತಲೇ ಇದೆ.  ಇದರಿಂದಾಗಿ ಇರಾನಿನಲ್ಲಿ  ಖೊಮೆನಿ ಪರವಿರುವವರು ಮತ್ತು ಪದಚ್ಯತ ರಾಜವಂಶದ  ಪರ ಸಹಾನುಭೂತಿ ಇರುವ ಎರೆಡು ವರ್ಗ ಇರಾನಿನಲ್ಲಿ ಸುಮಾರು 46 ವರ್ಷಗಳಿಂದ ಬೆಳೆದು ನಿಂತಿವೆ.  ಹೆಚ್ಚಾಗಿ ಪಾಶ್ಚಿಮಾತ್ಯ ದೇಶಗಳೊಂದಿಗೆ ಸಂಪರ್ಕವಿರುವವರು ಖೊಮೆನಿ ಸರಕಾರದ ವಿರುದ್ಧ ವಿದ್ದಾರೆ.

               ಆದರೆ ಇರಾನಿನ ವಿಚಾರದಲ್ಲಿ ಅಮೇರಿಕದ ಕುತಂತ್ರ ಬುದ್ಧಿಯು ಬೇರೆ ಲೆವೆಲಿನಲ್ಲಿಯೇ ಇದೆ.  ಕೊಲ್ಲಿ ರಾಷ್ಟ್ರಗಳು ಅಷ್ಟರಲ್ಲಿ ಅಪಾರವಾದ ತೈಲ ಸಂಪತ್ತಿನ ಪ್ರದೇಶಗಳಾಗಿರುವುದರಿಂದ ಇದರ ಮೇಲೆ ಅಮೇರಿಕ ಸದಾ ನಿಗಾ ಇಟ್ಟುಕೊಂಡಿರುತ್ತದೆ. ಅಮೇರಿಕ ಮತ್ತು ಇತರೇ ಪಾಶ್ಚಿಮಾತ್ಯ  ದೇಶಗಳಲ್ಲಿರುವ ಬಂಡವಾಳಿಗರಿಗೆ ಬಹುರಾಷ್ಟ್ರೀಯ ಕಂಪನಿಗಳಿಗೆ ಗುತ್ತಿಗೆ ನೀಡಿ ಈ ಪ್ರದೇಶಗಳಲ್ಲಿರುವ  ಅಪಾರವಾದ ತೈಲ ಮತ್ತು ನೈಸರ್ಗಿಕ ಸಂಪತ್ತುಗಳ ಮೇಲೆ ಸಂಪೂರ್ಣ ನಿಯಂತ್ರಣವಿಟ್ಟುಕೊಳ್ಳುವುದು ಅಮೇರಿಕದ ಪ್ರಮುಖ ರಾಜಕೀಯ ನೀತಿಯಾಗಿದೆ.  ಈ ನೀತಿಯನ್ನು ಯಶಸ್ವಿಗೊಳಿಸಲು ಇರುವ ಸುಲಭ ಮಾರ್ಗೋಪಾಯವೆಂದರೆ  ಆ ದೇಶದ ನಾಯಕರುಗಳನ್ನು ತನ್ನ ಹತೋಟಿಯಲ್ಲಿಟ್ಟು ಕೊಳ್ಳುವುದು.

ಮದ್ಯಪ್ರಾಚ್ಯ ತೈಲಕೊಲ್ಲಿ ಪ್ರದೇಶಗಳು ಮುಸ್ಲೀಂ ದೇಶಗಳಾಗಿವೆ. ಅಲ್ಲಿ ರಾಜವಂಶಜರ ಆಳ್ವಿಕೆಗೆ ಬೆಂಬಲಕೊಟ್ಟು ತನ್ನ ಕೈಗೊಂಬೆಗಳನ್ನಾಗಿ ಇರಿಸಿಕೊಂಡು  ಜೊತೆಯಲ್ಲಿ ಇಸ್ರೇಲ್ ನನ್ನು ಏಜೆಂಟಾಗಿ ಮಾಡಿಕೊಂಡು ಅಮೇರಿಕವು ಈ ಪ್ರದೇಶಗಳಲ್ಲಿನ ಸಂಪತ್ತನ್ನು ಲೂಟಿ ಮಾಡಿ ಜಗತ್ತಿನ ತೈಲ ಮತ್ತು ನೈಸರ್ಗಿಕ ಅನಿಲ ಮಾರಾಟದಲ್ಲಿ ಅಧಿಪತ್ಯವನ್ನು ಸಾಧಿಸಿ ಶ್ರೀಮಂತವಾಗುವ ತೈಲನಿಯಂತ್ರಣದ ರಾಜತಾಂತ್ರಿಕ ನೀತಿಯನ್ನು ಅನುಸರಿಸುತ್ತಿದೆ.   

ಇರಾನಿನಲ್ಲಿ ಷಾ-ಪಹ್ಲಾವಿ ರಾಜವಂಶ, ಸೌದಿ ಅರೇಬಿಯಾದಲ್ಲಿ ಸವುದ್ ರಾಜವಂಶ, ಕತಾರಿನಲ್ಲಿ ಅಲ್ತಾನಿ ರಾಜವಂಶ, ಒಮನಿನಲ್ಲಿ ಅಲ್-ಸಯಿದ್ ರಾಜ ವಂಶ, ಬಹರೀನ್ ನಲ್ಲಿ ಅಲ್-ಖಲೀಫ ರಾಜವಂಶ, ಕುವೈತಿನಲ್ಲಿ ಅಲ್-ಸಭಹ ರಾಜವಂಶ, ದುಬೈಯಲ್ಲಿ ಅಲ್-ಮಕ್ತೂಮ್ ರಾಜವಂಶ,  ಅಬುಧಾಬಿಯಲ್ಲಿ ಅಲ್-ನಹಿಯಾನ್ ರಾಜವಂಶ ಹೀಗೆ ಅಲ್ಲಿ ಪ್ರತಿಯೊಂದು ದೇಶಲ್ಲೂ ರಾಜಾಡಳಿತವಿದೆ. ಎಲ್ಲಾ ರಾಜರುಗಳು ಮತ್ತು ಮಿಲಿಟರಿ ಅಧ್ಯಕ್ಷರುಗಳು ಅಮೇರಿಕಾದ ಬೆಂಬಲದಿಂದಲೇ ಆಡಳಿತವನ್ನು ನಡೆಸುತ್ತದೆ. ಅಲ್ಲಿನ ತೈಲ ಸಂಪತ್ತಿನ ನಿಯಂತ್ರಣವನ್ನು ಅಮೇರಿಕವು ನೋಡಿಕೊಳ್ಳುತ್ತಿದ್ದು  ಈ ದೇಶಗಳ ಸಂಕ್ಷಣೆಗೆ ಅಮೇರಿಕವು ಸೈನಿಕ ರಕ್ಷಣೆಯನ್ನು ನೀಡುತ್ತಿದೆ.

ರಾಜರುಗಳು  ಯಾವ ಭಯವಿಲ್ಲದೇ ಅರಸೊತ್ತಿಗೆಯನ್ನು ಅನುಭವಿಸುತ್ತಾನೆ ಇತ್ತ ವಿದೇಶಿ ಕಂಪನಿಗಳು ತೈಲ ಕೊರೆದು ಸಾಗಿಸಿ ಸಂಪತ್ತನ್ನು ದೋಚುತ್ತವೆ.  ವಿದೇಶಿ ಕಂಪನಿಗಳು ನೀಡುವ ಗೌರವ ಧನ, ರಾಜಸ್ವಗಳು ಮತ್ತು ನೀಡುವ ಲಾಭಾಂಶವನ್ನು ಪಡೆದುಕೊಂಡು ದೇಶಗಳು ಬೆಳೆಯುತ್ತವೆ. ಅಲ್ಲಿನ ಎಲ್ಲಾ ತೈಲ ಸಂಬಂಧಿಸಿದ ಮಾರಾಟಗಳನ್ನು ಅಮೇರಿಕದ ಡಾಲರಿನಲ್ಲಿ ಮಾಡಬೇಕೆಂಬ ಷರತ್ತು ಇರುವುದರಿಂದ ಅಮೇರಿಕದ ಆರ್ಥಿಕತೆಯು ಬೆಳೆಯುತ್ತದೆ.

ಗಲ್ಫ್ ಕೊಅಪರೇಷನ್ ಕೌನ್ಸಿಲ್ (ಜಿಸಿಸಿ) ಎಂಬ ಹೆಸರಿನಲ್ಲಿ ಈ ದೇಶಗಳ ಪ್ರಾದೇಶಿಕ ಗುಂಪು ರಚಿಸಿ ಈ ದೇಶಗಳನ್ನು ಹತೋಟಿಯಲ್ಲಿಡುವ ಮೂಲಕ ವಿದೇಶಗಳು ಅಲ್ಲಿನ ತೈಲ ಸಂಪತ್ತಿನ  ಉತ್ಪಾಧನೆ, ಸಂಸ್ಕರಣೆಯಲ್ಲಿ ಹತೋಟಿಯಲ್ಲಿಟ್ಟುಕೊಂಡು ಜಗತ್ತಿನ ತೈಲ ಸಂಪತ್ತಿನ  ಮಾರಾಟ ಮತ್ತು ಆಧಾಯಗಳ ಮೇಲೆ ಸಂಪೂರ್ಣ ನಿಯಂತ್ರಣವನ್ನು ಇಟ್ಟುಕೊಂಡಿವೆ.  ಮದ್ಯಪ್ರಾಚ್ಯ ಈ ದೇಶಗಳಲ್ಲಿ  ಅಮೇರಿಕವು ಒಟ್ಟಾರೆ 19 ಸೇನಾ ನೆಲೆಗಳನ್ನು ಹೊಂದಿವೆ! ಕತಾರಿನಲ್ಲಿ ಅಮೇರಿಕಾದ ಸೆಂಟ್ರಲ್ ಕಮಾಂಡ್ ಕಾರ್ಯನಿರ್ವಹಿಸುತ್ತಿದೆ.  ಸುಮಾರು 50 ಸಾವಿರ ಅಮೇರಿಕನ್ ಯೋಧರು ಈ ದೇಶಗಳ ರಕ್ಷಣೆಯ ಜವಾಬ್ದಾರಿಯನ್ನು ನೋಡಿಕೊಳ್ಳುತ್ತಿವೆ.

ಆ ದೇಶಗಳಿಗೆ ಸಂರಕ್ಷಣೆಯ ನೆಪದಲ್ಲಿ ಸೇನಾ ನೆಲೆಯನ್ನು ಇರಿಸಿಕೊಂಡಿರುವುದು ಮತ್ತು ಅದರ ವೆಚ್ಚವನ್ನು ಸ್ಥಳೀಯ ರಾಜರುಗಳು ಭರಿಸುವುದು ಹಿಂದೆ ಬ್ರಿಟೀಷರು ನಮ್ಮ ದೇಶದಲ್ಲಿ ಜ್ಯಾರಿಗೆ ತಂದಿದ್ದ ಸಹಾಯಕ ಸೈನ್ಯ ಪದ್ಧತಿಯಂತಿದೆ.

ಅಮೇರಿಕದ ಯೋಜನೆಯಂತೆ ಎಲ್ಲಾ ರಾಜರುಗಳು ಮತ್ತು ಅವರ ದೇಶಗಳ ಇರಾನಿನ ಖೊಮೆನಿ ಸರಕಾರ ಅಮೇರಿಕದ ಷಡ್ಯಂತ್ರದ ವಿರುದ್ಧ ತಿರುಗಿಬಿದ್ದಿತ್ತು.   ಖೊಮೆನಿ ಸರಕಾರದ ವಿರುದ್ಧ ಹೋರಾಟಕ್ಕೆ ನೇರ ನಿಂತುಬಿಟ್ಟಿತ್ತು.  ಅಮೇರಿಕದ ಎಲ್ಲಾ ನಿಯಂತ್ರಣಗಳನ್ನು ಇರಾನ್ ತೆಗೆದು ಹಾಕಿತು. ತೈಲ ಕಂಪನಿಗಳನ್ನು ಸಂಪೂರ್ಣ ರಾಷ್ಟ್ರೀಕರಣಗೊಳಿಸಿತು.  ಅಮೇರಿಕದ ಜೊತೆಗಿನ ಎಲ್ಲಾ ರಾಜತಾಂತ್ರಿಕ ಸಂಬಂಧಗಳನ್ನು ಕಡಿದುಕೊಂಡಿತು.  ತಕ್ಷಣ ಅಮೇರಿಕ ಮತ್ತು ಇರಾನ್ ಬದ್ಧ ವೈರಿ ದೇಶಗಳಾದವು.  ಇರಾನಿನ ಮೇಲೆ ಅಮೇರಿಕ ಅಂತರಾಷ್ಟ್ರೀಯ ದಿಗ್ಭಂದನವನ್ನು ಹಾಕಿತು.  ಖೊಮಿನಿ ಅಮೇರಿಕಾವನ್ನು ದೊಡ್ಡ ಸೈತಾನ ಮತ್ತು ಇಸ್ರೇಲನ್ನು ಸಣ್ಣ ಸೈತಾನನೆಂದು ಜರೆಯಿತು.  ಅಮೇರಿಕಾವು ಇರಾನನ್ನು ಜಗತ್ತಿನ ದುಷ್ಟಶಕ್ತಿಯೆಂದು ಕರೆಯಿತು. 

 ಪಕ್ಕದಲ್ಲಿಯೇ ಇದ್ದ ಇರಾಕಿನ ಅಧ್ಯಕ್ಷ  ಸದ್ದಾಂ ಹುಸೇನನ್ನು   ಪುಸಲಾಯಿಸಿ ಇರಾನಿನ ವಿರುದ್ಧ ಯುದ್ದ ಮಾಡಲು ಬೆಂಬಲ ನೀಡಿತು.  ಇರಾಕಿನಲ್ಲಿದ್ದಾಗ ಖೊಮೆನಿಯನ್ನು ದೇಶದಿಂದ ಓಡಿಸಲು ಕಾರಣಕರ್ತರಾಗಿದ್ದ ಸದ್ದಾಂ ಹುಸೇನನ ಮೇಲೆ ಇರಾನ್ ಸಹಾ ಯುದ್ದಕ್ಕಿಳಿಯಿತು.  1980ರಲ್ಲಿ ಇರಾನ್-ಇರಾಕ್ ಯುದ್ಧವು ಸದ್ದಾಂ ಹುಸೇನ್ ನೇತೃತ್ವದ ಇರಾಕ್, ಇರಾನ್‌ನ ಇಸ್ಲಾಮಿಕ್ ಕ್ರಾಂತಿಯ ನಂತರದ ಅಸ್ಥಿರತೆಯನ್ನು ಬಳಸಿಕೊಂಡು, ತೈಲ ಸಮೃದ್ಧ ಖುಜೆಸ್ತಾನ್ ಪ್ರದೇಶವನ್ನು ವಶಪಡಿಸಿಕೊಳ್ಳಲು ಮತ್ತು ಶತ್-ಅಲ್-ಅರಬ್ ಜಲಮಾರ್ಗದ ಮೇಲಿನ ನಿಯಂತ್ರಣಕ್ಕಾಗಿ ಹಠಾತ್ ಆಕ್ರಮಣ ಮಾಡಿದಾಗ ಪ್ರಾರಂಭವಾಯಿತು. ಇದು ಪ್ರಾದೇಶಿಕ ಆಧಿಪತ್ಯ, ಧಾರ್ಮಿಕ ಭಿನ್ನಾಭಿಪ್ರಾಯ ಮತ್ತು ಗಡಿ ವಿವಾದಗಳಿಂದಾಗಿ ಸಂಭವಿಸಿದ 8 ವರ್ಷಗಳ ದೀರ್ಘ ಸಂಘರ್ಷವಾಗಿದೆ. ಬರೋಬ್ಬರಿ ಅಯತೊಲ್ಲಾ ಖೊಮೆನಿ ಸಾಯುವವರೆಗೂ ಯುದ್ಧ ನಡೆಯಿತು!

ಇರಾನ್ ಷಿಯಾ ನಾಯಕನ ಆಡಳಿತದಲ್ಲಿರುವುದರಿಂದ  ಇರಾಕಿಗೆ ಸೊವಿಯತ್ ರಷ್ಯಾ, ಅಮೇರಿಕ ಮತ್ತು ಫ್ರಾಣ್ಸ್ ದೇಶಗಳು ಆಯುಧಗಳನ್ನು ಸರಬರಾಜು  ಮಾಡಿತು. ಇರಾನಿಗೆ ಉತ್ತರ ಕೊರಿಯ, ಚೀನಾ ದೇಶಗಳು ಆಯುಧಗಳನ್ನು ಸರಬರಾಜು ಮಾಡಿ ಬೆಂಬಲ ನೀಡಿದವು.   ಇರಾನ್ ನಾಯಕ ಷಿಯಾ ಆಗಿರುವುದರಿಂದ ಇರಾಕ್ ನಾಯಕ ಸುನ್ನಿ ಆಗಿದ್ದರಿಂದ ಈ ಯುದ್ಧವನ್ನು ಷಿಯಾ ಮತ್ತು ಸುನ್ನಿಗಳ ನಡುವಿನ ಧಾರ್ಮಿಕ ಯುದ್ಧವೆಂಬತ್ತೆ ಪ್ರಚಾರವಾಯಿತು.  ಗಲ್ಫ್ ದೇಶಗಳ ಎಲ್ಲಾ ರಾಜರುಗಳು ಇರಾಕನ್ನು ಬೆಂಬಲಿಸಿದರು.  ಇದರಿಂದಾಗಿ ತೈಲ ಕೊಲ್ಲಿ ದೇಶಗಳು ಷಿಯಾ-ಸುನ್ನಿ ಜಾತಿ ಆಧಾರದಲ್ಲಿ ಮುಂದೆ ಚೆನ್ನಾಗಿ ದ್ವೇಷಬೆಳೆಸಿಕೊಂಡರು.(ಮುಂದುವರಿಯುವುದು)

-ಕರೀಂ ರಾವತರ್