ಪಶ್ಚಿಮ ಬಂಗಾಳದ ಮುಖ್ಯ ಮಂತ್ರಿಯಾಗಿರುವ ಶ್ರೀ. ಸುವೇಂದು ಅಧಿಕಾರಿಯ  ಟೈಂ ಲೈನ್ ತಗಳ್ಳಿ!

ಇನ್ನು  ಮುಂದೆ  ಪಶ್ಚಿಮ ಬಂಗಾಳದಲ್ಲಿ ಮುಖ್ಯಮಂತ್ರಿ  ಸುವೇಂದು ಅಧಿಕಾರಿಯ ಆಡಳಿತದಿಂದಾಗಿ  ಮುಸ್ಲೀಂ ಸಮುದಾಯಕ್ಕೆ ಕಿರುಕುಳವಾದರೆ, ಕಷ್ಟಗಳು ಬಂದರೆ,  ಅವರೇನೂ ಕಳವಳ ಪಡಬೇಕಾಗಿಲ್ಲ.  ಕೊರಗ ಬೇಕಾಗಿಲ್ಲ.   ಏಕೆಂದರೆ ಅಲ್ಲಿನ  ಮುಸ್ಲೀಮರು  ಸುವೇಂದು ಅಧಿಕಾರಿ ಜೊತೆ ಸೇರಿಕೊಂಡು  ತಮ್ಮ ಗುಂಡಿಗಳನ್ನು 15 ವರ್ಷದ ಹಿಂದೆಯೇ ತೋಡಿ ಕೊಂಡಿದ್ದರು. 

ಪಶ್ಚಿಮ ಬಂಗಾಳದ ಮುಖ್ಯ ಮಂತ್ರಿಯಾಗಿರುವ ಶ್ರೀ. ಸುವೇಂದು ಅಧಿಕಾರಿಯ  ಟೈಂ ಲೈನ್ ತಗಳ್ಳಿ!

ಪಶ್ಚಿಮ ಬಂಗಾಳದ ಮುಖ್ಯ ಮಂತ್ರಿಯಾಗಿರುವ ಶ್ರೀ. ಸುವೇಂದು ಅಧಿಕಾರಿ ಟೈಂ ಲೈನ್ ತಗಳ್ಳಿ!

ಶ್ರೀ. ಸುವೇಂದು ಅಧಿಕಾರಿ ಇವರು ಪಶ್ಚಿಮ ಬಂಗಾಳದ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದ್ದಾರೆ.  ಅಧಿಕಾರ ವಹಿಸಿಕೊಂಡ ಕೂಡಲೇ ತಾನು ಇನ್ನು ಮೇಲೆ ಮುಸ್ಲೀಮರಿಗೆ ಕೆಲಸ  ಮಾಡಲಾರೆ, ಏಕೆಂದರೆ ಅವರು ಮತಗಳೆಲ್ಲವನ್ನೂ ತೃಣಮೂಲ ಕಾಂಗ್ರೇಸ್ಸಿಗೆ ಕೊಟ್ಟಿದ್ದಾರೆ ಎಂದು ಒಂದು ರೀತಿಯಲ್ಲಿ ರಾಜಧರ್ಮದ ಮರ್ಯಾದೆಯನ್ನು ಬಿಟ್ಟು  ಮಾತನಾಡಿದ್ದಾರೆ.  ಮುಖ್ಯಮಂತ್ರಿಯೊಬ್ಬರು ಈ ರೀತಿ ಮಾತನಾಡಿದ ಬಗ್ಗೆ ಮುಖ್ಯಧಾರೆ ಮಾಧ್ಯಮಗಳೇನೂ ಮಾತನಾಡುತ್ತಿಲ್ಲ.  ಅದಿರಲಿ ಸುವೇಂದು ಅಧಿಕಾರಿ ಇವರು ಮುಖ್ಯಮಂತ್ರಿಯವರೆಗೆ ಬಂದ ದಾರಿಯ ಟೈಂ ಲೈನ್ ಸ್ವಲ್ಪ ತಿಳಿದು ಕೊಂಡರೆ ಮಾತ್ರ ಅವರ ಮಾತಿನ ಒಟ್ಟಾರೆ ಅರ್ಥವನ್ನು ಗ್ರಹಿಸಲು ಸಾಧ್ಯ.

ನಿಮಗೆ ಬುದ್ಧದೇಬ್ ಬಟ್ಟಾಚಾರ್ಯ ಇವರ ಬಗ್ಗೆ ಗೊತ್ತಿರಬೇಕು.  ಪಶ್ಚಿಮ ಬಂಗಾಳದಲ್ಲಿ ಜ್ಯೋತಿ ಬಸು ನಂತರ ಮುಖ್ಯ ಮಂತ್ರಿಯಾದ ಕಮ್ಯೂನಿಸ್ಟ ನಾಯಕ. ಸಾಮ್ರಾಜ್ಯಶಾಹಿ ವಿರೋಧಿ ಹೋರಾಟಗಾರ ಮತ್ತು ಸಾಮಾಜಿಕ ಸುಧಾರಣೆಯ ಸಕ್ರೀಯ ಕಾರ್ಯಕರ್ತರಾಗಿ ಭಾರತ ಕಮ್ಯುನಿಸ್ಟ್ ಪಕ್ಷದ (ಮಾರ್ಕ್ಸ್ ವಾದಿ)  ಆದರ್ಶ ನಾಯಕರಾಗಿದ್ದರು. ಪೊಲಿಟ್ ಬ್ಯೂರೋ ಸದಸ್ಯರಾಗಿದ್ದರು.  ಪಶ್ಚಿಮ ಬಂಗಾಳದ ಮುಖ್ಯಮಂತ್ರಿಯಾಗಿ 2000 ರಿಂದ 2011 ರವರೆಗೆ ಪಶ್ಚಿಮ ಬಂಗಾಳದ 7ನೇ  ಸೇವೆ ಸಲ್ಲಿಸಿದ್ದರು.  ಅವರ ಜೀವನವು ತ್ಯಾಗ ಮತ್ತು ಸರಳ ಜೀವನವನ್ನು ಮಾದರಿಯಾಗಿತ್ತು.  ಸರಕಾರವು ನೀಡಿದ್ದ ಒಂದು ಫ್ಲಾಟಿನಲ್ಲಿ ಜೀವನದ ಕೊನೆಯ ದಿನದವರೆವಿಗೂ ಕುಟುಂಬದೊಂದಿಗೆ ವಾಸವಿದ್ದರು.  ತತ್ವಬದ್ಧ ನಿಲುವುಗಳಿಗಾಗಿ ಅವರು ಎಲ್ಲಾ ವರ್ಗದ ಜನರಿಂದ ಗೌರವಿಸಲ್ಪಟ್ಟಿದ್ದರು. ಸಹಜವಾಗಿ ಅವರು ಮುಖ್ಯಮಂತ್ರಿಯಾದರು. ಇವರ ನೇತೃತ್ವದಲ್ಲಿ 2006ರ ವಿಧಾನ ಸಬಾ ಚುನಾವಣೆಯಲ್ಲಿ ಎಡರಂಗ 294 ವಿಧಾನ ಸಭಾ ಕ್ಷೇತ್ರಗಳ ಪೈಕಿ 235ರಲ್ಲಿ ಪ್ರಚಂಡ ಗೆಲುವು ಸಾಧಿಸಿ ಅಧಿಕಾರಕ್ಕೆ ಬಂದಿತು.   ಆ ಬಾರಿ ಅವರು ಪಶ್ಚಿಮ ಬಂಗಾಳದಲ್ಲಿ  ಕೈಗಾರಿಕೀಕರಣ ಮತ್ತು ಉದ್ಯೋಗ ಸೃಷ್ಟಿಯ ಕಡೆಗೆ ಗಮನ ಹರಿಸಿ ಕಲ್ಕತ್ತಾದಿಂದ 35 ಕಿಮೀ ದೂರದಲ್ಲಿರುವ ಹೂಗ್ಲಿ ಜಿಲ್ಲೆಯ  ಸಿಂಗೂರು ಎಂಬ ಗ್ರಾಮವನ್ನು  ಕೈಗಾರಿಕಾ ನೆಲೆಯಾಗಿ ಗುರುತಿಸಲಾಯಿತು.  ಹಾಗೆಯೇ ಮಿಡಿನಿಪುರ ಜಿಲ್ಲೆಯ ನಂದಿಗ್ರಾಮವನ್ನು ವಿಶೇಷ ಆರ್ಥಿಕ ವಲಯವನ್ನಾಗಿ ಕೈಗಾರಿಕಾ ಬಡಾವಣೆಯನ್ನು ನಿರ್ಮಿಸಲು ಗುರುತಿಸಲಾಯಿತು. ಸಿಂಗೂರಿನಲ್ಲಿ ಟಾಟಾ ನ್ಯಾನೋ ಕಾರು ತಯಾರಿಕಾ ಸಂಸ್ಥೆಗೆ ಸುಮಾರು 1,100 ಸಾವಿರ ಏಕರೆ ರೈತರ ಜಮೀನುಗಳನ್ನು ಸ್ವಾಧೀನ ಪಡಿಸಿಕೊಳ್ಳುವ ಪ್ರಕ್ರಿಯೆ ಆರಂಭಿಸಿತು. ಟಾಟಾ ಸಂಸ್ಥೆಯು ಒಂದು ಸಾವರಿ ಕೋಟಿ ರೂಪಾಯಿಗಳ ಹೂಡಿಕೆ ಮಾಡಿ ಕೈಗಾರಿಕೆಯನ್ನು ಸ್ಥಾಪಿಸಿತು. ಹಾಗೆಯೇ ನಂದಿಗ್ರಾಮದಲ್ಲಿ  ವಿಶೇಷ ಆರ್ಥಿಕ ವಲಯವನ್ನು ನಿರ್ಮಿಸಿ ಇಂಡೋನೇಷಿಯಾದ ರಾಸಾಯನಿಕ ಕಂಪನಿಗೆ  ಕೈಗಾರಿಕೆಗಳನ್ನು ಸ್ಥಾಪಿಸ ಜಮೀನು ಖರೀದಿಗೆ ಸರಕಾವು ಅನುಮೋದನೆ ನೀಡಿತು. ನಿರ್ಮಾಣಕ್ಕೆ ವಿಶೇಷ ಆರ್ಥಿಕ ಹೂಡಿಕೆಗೆ ಪ್ರೋತ್ಸಾಹ, ಹೊಸ ಕೈಗಾರಿಕೆಗಳ ಸ್ಥಾಪನೆ, ವಿದೇಶಿ ಬಂಡವಾಳ ಆಕರ್ಷಣೆ, ಉತ್ಪಾಧನಾ ಕ್ಷೇತ್ರದಲ್ಲಿ ಪುನಶ್ಚೇತನ, ಆರ್ಥಿಕವಾಗಿ ಪ್ರಗತಿ ಲಕ್ಷಾಂತರ  ಹೊಸ ಉದ್ಯೋಗಗಳ ಸೃಷ್ಟಿ  ಮುಂತಾದ ಪ್ರಗತಿಪ್ರ ಯೋಜನೆಗೆ ಪಶ್ಚಿಮ ಬಂಗಾಳದ ಸರಕಾರವು ಮುಂದಾಯಿತು.

ಆದರೆ ಅದೇನಾಯಿತೋ ಏನೋ ಗೊತ್ತಿಲ್ಲ. ಪಶ್ಚಿಮಬಂಗಾಳದಲ್ಲಿ ಸರಕಾರದ  ಈ ಯೋಜನೆಗಳನ್ನು ಸಿಂಗೂರು ಮತ್ತು ನಂದಿಗ್ರಾಮದ ಜನರು ಹಿಂದೆಂದೂ ಯೋಚಿಸದ ರೀತಿಯಲ್ಲಿ ವಿರೋಧಿಸಿದರು. ಸರಕಾರವು ಸ್ವಾಧೀನ ಪಡಿಸುತ್ತಿರುವುದು ರೈತರ ಫಲವತ್ತಾದ ಜಮೀನುಗಳೆಂದು ವರ್ಣಿಸಲಾಯಿತು, ಜಮೀನುಗಳನ್ನು ಕಳೆದುಕೊಂಡರೆ ಲಕ್ಷಾಂತರ ರೈತರು ಕೂಲಿ ಕಳೆದು ಕೊಂಡು ನಿರ್ಗತಿಕರಾಗುತ್ತಾರೆ ಎಂಬ ಆತಂಕಗಳು ಸೃಷ್ಟಿಯಾದವು.

 ಕಮ್ಯೂನಿಸ್ಟ್ ಸರಕಾರ ಜನವಿರೋಧಿ ನೀತಿಯನ್ನು ಅನುಸರಿಸುತ್ತಿದೆಯೆಂದು ಆರೋಪಿಸಿದರು.  ಪತ್ರಿಕೆಗಳು ಮಾದ್ಯಮಗಳು ಈ ನೀತಿಯ ವಿರುದ್ಧ ಜನರನ್ನು ಎತ್ತಿಕಟ್ಟಿದವು.   ದೇಶದ ಎಲ್ಲಾ ಕಮ್ಯೂನಿಸ್ಟ್ ವಿರೋಧಿಗಳು ಪಶ್ಚಿಮಬಂಗಾಳದ ಸರಕಾರದ ವಿರುದ್ಧ ಟಾರ್ಗೆಟ್ ಮಾಡಿ ನಿರಂತರ ಅಪಪ್ರಚಾರಕ್ಕೆ ಇಳಿದು ಬಿಟ್ಟರು.   ಪಶ್ಚಿಮ ಬಂಗಾಳವನ್ನು ಕೈಗಾರಿಕೀಕರಣಗೊಳಿಸಿ  ಹೊಸ ಬಂಡಸವಾಳಿಗರನ್ನು ಕರೆಸಿ ಹೊಸ ಉಧ್ಯಮಗಳನ್ನು ಸ್ಥಾಪಿಸಿ, ಆರ್ಥಿಕ ಸಬಲೀಕರಣವನ್ನು ಪುನಶ್ಚೇತನಗೊಳಿಸಿ  ಪಶ್ಚಿಮ ಬಂಗಾಳವನ್ನು ಚಿನ್ನದ ಕಣವನ್ನಾಗಿ ಪರಿವರ್ತಿಸಲು ಬುದ್ಧ  ದೇಬ್  ಈ ಚಳುವಳಿ ಹೋರಾಟಗಳಿಂದಾಗಿ ರಾತೋರಾತ್ರಿ ಕಳನಾಯಕರಾಗಿ ಬಿಟ್ಟರು.

 ಕಾಂಗ್ರೇಸ್ ಪಕ್ಷವನ್ನು ತೊರೆದು ಹೊಸದಾಗಿ  ತೃಣಮೂಲ್  ಪಕ್ಷವನ್ನು ಕಟ್ಟಿದ್ದ ಮಮತಾ ಬ್ಯಾನರ್ಜಿಯವರು ಈ ಹೋರಾಟ, ಪ್ರತಿಭಟನೆ, ಚಳುವಳಿಯ ನೇತೃತ್ವವನ್ನು ವಹಿಸಿದ್ದರು.  ಭೂಮಿ ಉಚ್ಛೇದ್ ಪ್ರತಿರೋಧ್ ಸಮಿತಿಯನ್ನು ಕಟ್ಟಿ ಅದರ  ನೇತೃತ್ವ ವಹಿಸಿದ್ದರು.    ಆವಾಗ ಅವರ ಜೊತೆಯಲ್ಲಿ  ದಂಡನಾಯಕರಾಗಿದ್ದವರೇ ಈಗಿನ ಈ ಸುವೇಂದು ಅಧಿಕಾರಿ!   ಅಂದಿನ  ಜನ ಅದನ್ನೇಕೆ ವಿರೋಧಿಸಿದರೆಂಬುದಕ್ಕೆ ಒಂದು ಯುಕ್ತವಾದ ಸಕಾರಣ ಇಂದಿಗೂ ಪಶ್ಚಿಮಬಂಗಾಳದ ಜನರಿಗೆ ಸಿಕ್ಕಿಲ್ಲ. ಹಾಗಿದ್ದರೂ ಮಮತಾ ಬ್ಯಾನರ್ಜಿ, ಸುವೇಂದು ಅಧಿಕಾರಿ ಜೊತೆಗೆ  ಜಮಾತ್ ಉಲೇಮಾ ಹಿಂದ್ ಎಂಬ ಹೆಸರಿನ ಸಂಘಟನೆಯು ತಲೆಗೆ ಸೈತಾನ ಹತ್ತಿದ ರೀತಿಯಲ್ಲಿ ವಿರೋಧಿಸಿದರು. ಕಮ್ಯೂನಿಸ್ಟ್ ಸರಕಾರದ ವಿರುದ್ಧ  ಪ್ರಚಾರ, ಅಪಪ್ರಚಾರದಲ್ಲಿ ತೊಡಗಿದರು.  ವದಂತಿಗಳನ್ನು ಹಬ್ಬಿಸಿದರು. ಪಶ್ಚಿಮ ಬಂಗಾಳದಲ್ಲಿ ಶೇಕಡಾ 30ರಷ್ಟಿರುವ ಮುಸ್ಲೀಂ ಸಮಾಜದವರು ಈ ಹೋರಾಟಕ್ಕೆ ಕುರುಡು ಬೆಂಬಲವನ್ನು ನೀಡಿದರು.   ಕಮ್ಯೂನಿಸ್ಟ್ ಸರಕಾರವನ್ನು ಪತನಗೊಳಿಸುವುದಷ್ಟೇ ಅವರ ಉದ್ದೆಶವಾಗಿತ್ತು. 2007ರ ಮಾರ್ಚ್ ತಿಂಗಳಿನಲ್ಲಿ ನಂದಿಗ್ರಾಮದಲ್ಲಿ ನಡೆದ  ಒಂದು ಪ್ರತಿಭಟನೆಯು ಗಲಭೆಗ್ರಸ್ತವಾದಾಗ  ಪೊಲೀಸ್ ನಡೆಸಿದ ಗೋಲಿಬಾರಿನಲ್ಲಿ 14 ಜನ ಮೃತಪಟ್ಟರು. ಪ್ರತಿಭಟನೆಯು ರಾಜ್ಯಾದ್ಯಂತ ಹಬ್ಬಿತು.

      ಮಮತಾ ಬ್ಯಾನರ್ಜಿ ಮತ್ತು ಸುವೇಂದು ಅಧಿಕಾರಿ ನಡೆಸಿದ ಈ ಹೋರಾಟವು ಪಶ್ಚಿಮ ಬಂಗಾಳದಲ್ಲಿ  ಕಮ್ಯೂನಿಸ್ಟರನ್ನು ಅಪಮಾನಿಸಲು, ಕಾಂಗ್ರೇಸನ್ನು ಬದಿಗೆ ಸರಿಸಲು, ಬಿಜೆಪಿಯನ್ನು ಬೆಳೆಸಲು, ನಕ್ಸಲೈಟರಿಗೆ ಜನರ ಮದ್ಯೆ ನಿಂತು ಘೋಷಣೆ ಕೂಗಲು  ಈ ಪ್ರತಿಭಟನೆಯು ಅವಕಾಶ ಮಾಡಿಕೊಟ್ಟಿತು. ನಂತರದ ಸನ್ನಿವೇಶದಲ್ಲಿ 400 ಜನ ಕಮ್ಯೂನಿಸ್ಟರು ಮೃತಪಟ್ಟಿದ್ದರು.

ಹೊಸ ಕೈಗಾರಿಕೆಗಳನ್ನು ಬೆಳೆಸಿ ಉದ್ಯೋಗ ಸೃಷ್ಟಿಸಿ ತೋಟವನ್ನಾಗಿ ಮಾಡಲು ಹೊರಟಿದ್ದ ಈ ಯೋಜನೆಯು ಸರಕಾರದ ವಿರುದ್ಧ ಷಡ್ಯಂತ್ರವಾಗಿ ಹೇಗೆ ಬದಲಾಯಿತೆಂಬುದು ಈ ವರೆವಿಗೂ ಅರ್ಥವಾಗದ ನಿಗೂಢ ವಿಚಾರವಾಗಿದೆ. ಏಕೆಂದರೆ ಪಶ್ಚಿಮ ಬಂಗಾಳದಲ್ಲಿ ವಿರೋಧಿಸಿದ ಟಾಟಾ ನ್ಯಾನೋ ಕಾರು ಉತ್ಪಾಧನಾ ಸ್ಥಾವರವನ್ನು ಇಡೀ ದೇಶದಲ್ಲಿರುವ ಬುದ್ಧಿ ಜೀವಿಗಳು, ಎಡ-ಬಲ ಪಂಥವಾದಿಗಳು, ಆರ್ಥಿಕ ತಜ್ಞರು, ಕೃಷಿ ಪಂಡಿತರುಗಳು, ಒಣ ರಾಜಕಾರಿಣಿಗಳು, ಮಾದ್ಯಮಗಳು ಸೇರಿ ಒಟ್ಟಾರೆ ಎಲ್ಲರೂ  ಬುದ್ಧದೇಬರ ಈ ಯೋಜನೆಯನ್ನು ಜನವಿರೋಧಿ ಕ್ರಮವೆಂದು ಆಕ್ಷೇಪಿಸಿ ವಿರೋಧಿಸಿದ್ದರು.   ಆದರೆ ಆವಾಗ್ಗೆ ಗುಜರಾತಿನಲ್ಲಿ ಮುಖ್ಯಮಂತ್ರಿಯಾಗಿದ್ದ ಈಗಿನ ಪ್ರಧಾನಿ ನರೇಂದ್ರ ಮೋದಿಯವರು ಟಾಟಾ ಸಂಸ್ಥೆಯನ್ನು ಕರೆದು ಅಹಮದಾಬಾದಿನ ಸನದ್ ಎಂಬಲ್ಲಿ ನ್ಯಾನೋ ಕಾರು ನಿರ್ಮಾಣಕ್ಕೆ ಅನುಮತಿ ನೀಡಿದರು.

ಒಂದು ವಿಡಂಬನೆಯೆಂದರೆ ಪಶ್ಚಿಮ ಬಂಗಾಳದಲ್ಲಿ  ಟಾಟಾ ನ್ಯಾನೋ ಕಾರು ತಯಾರಿಕಾ ಘಟಕ ಪ್ರಗತಿಗೆ ಮಾರಕವಾಗಿದ್ದೆಂದು ಎಲ್ಲರೂ ಸಮರ ಸಾರಿದ್ದರೇ, ಅದೇ ಟಾಟಾ ನ್ಯಾನೋ ಕಾರು ಗುಜರಾತಿಗೆ ಸ್ಥಳಾಂತರಗೊಂಡಾಗ ಅದನ್ನು ಪ್ರಗತಿಯ ಮಾದರಿಯೆಂದು ಕೊಂಡಾಡುತ್ತಿದ್ದುದನ್ನು ಈ ದೇಶ ನೋಡಿತು. ಮಾದ್ಯಮಗಳು ಹೇಗೆ ವೈಪರೀತ್ಯದ ಅಭಿಪ್ರಾಯಗಳನ್ನು ರೂಪಿಸುತ್ತವೆ ಮತ್ತು ವಿಚಾರಗಳ ಕುರಿತು ಪಕ್ಷಪಾತದ ವ್ಯಾಖ್ಯಾನಗಳನ್ನು  ಹೇಗೆ ನಡೆಸುತ್ತವೆ ಎಂಬುದನ್ನೂ ಸಹಾ ದೇಶವು ನೋಡ ತೊಡಗಿತು.

ಅದಿರಲಿ, ಈವಾಗ್ಗೆ ಸಿಂಗೂರು ಜನರು ಮತ್ತು ನಂದಿಗ್ರಾಮದ ಜನರು ಮಾತ್ರ ಸೂತಕದ ಜೀವನವನ್ನು ನಡೆಸುತ್ತಿದ್ದಾರೆ. ಜಮೀನುಗಳ ಸ್ವಾಧೀನವನ್ನು ತಡೆದರು. ಮಂಜೂರಾಗಿದ್ದ ಕೈಗಾರಿಕೆಗಳನ್ನು ರದ್ದುಗೊಳಿಸಿದರು. ಕೈಗಾರಿಕಾ ವಲಯಗಳ ನಿರ್ಮಾಣ ಸ್ಥಗಿತಗೊಂಡಿತು.  ಜನರು ತಾವು ಜೀವ ಹೋದರು ಜಮೀನು ಬಿಡಲಾರೆವು ಎಂದು ಹೋರಾಡಿದ ಜಮೀನುಗಳು ಹಾಗೇ ಬರಡಾಗಿವೆ.   ಈವಾಗ್ಗೆ ಜಮೀನಿನಲ್ಲಿ ಬೆಳೆ ಇಲ್ಲ, ಬೆಳೆದ ಬೆಳೆಗೆ ಬೆಲೆ ಇಲ್ಲ!  ಮಾಲೀಕರು  ಕೃಷಿಉತ್ಪಾಧೆ ಕೈಬಿಟ್ಟರು.  ರೈತ ಕಾರ್ಮಿಕರಿಗೆ ಕೂಲಿಗಾಗಿ ಆಂಡಲೆಯುತ್ತಿದ್ದಾರೆ. ಅಭಿವೃದ್ಧಿ ಯೋಜನೆಯನ್ನು ಅನ್ಯಾಯವಾಗಿ ತಡೆದ ಬಗ್ಗೆ ಇವಾಗ್ಗೆ ಪಶ್ಚಾತಾಪ ಪಡುತ್ತಿದ್ದಾರೆ.  ಆ ಊರಿಗೆ ಯಾರೂ ಹೋದರು ಅವರ ಮುಂದೆ ತಮ್ಮ ಗೋಳನ್ನು ತೋಡಿಕೊಳ್ಳುತ್ತಿದ್ದಾರೆ. ಇವರ ಗೋಳನ್ನು 2021ರಲ್ಲಿ ಎಕನಾಮಿಕ್ ಟೈಂಸ್ ವಿವರವಾದ ವರದಿಯನ್ನು ಪ್ರಕಟಿಸಿತ್ತು.

 ಆದರೆ ಅಷ್ಟರಲ್ಲಾಗಲೇ ಪಶ್ಚಿಮ ಬಂಗಾಳದಲ್ಲಿ ಬುದ್ಧ ದೇಬ್ ರಾತೋರಾತ್ರಿ ಪಾಲಿಗೆ ಕಳನಾಯಕರಾಗಿದ್ದರು.  ಈ ಘಟನೆಯಿಂದಾಗಿ 2009ನೇ ಲೋಕಸಭಾ ಚುನಾವಣೆಯಲ್ಲಿ ಸುವೇಂದು ಅಧಿಕಾರಿ ನಂದಿಗ್ರಾಮದಿಂದ ಲೋಕಸಭಾ ಸದಸ್ಯರಾಗಿ ಆಯ್ಕೆಯಾಗಿದ್ದರು.  ಆ ಬಾರಿ ತೃಣಮೂಲ ಕಾಂಗ್ರೇಸಿನ 19 ಪ್ರತಿನಿಧಿಗಳು ಲೋಕಸಭೆಗೆ ಆಯ್ಕೆಯಾಗಿದ್ದರು!  2011 ನೇ ವಿಧಾನಸಭಾ ಚುನಾವಣೆಯಲ್ಲಿ ಕಮ್ಯೂನಿಸ್ಟ ಪಕ್ಷ ನಿರ್ನಾಮವಾಯಿತು.  ಸ್ವತ: ಮುಖ್ಯ ಮಂತ್ರಿ ಬುದ್ಧ ದೇಬ್ ಚುನಾವಣೆಯಲ್ಲಿ ಸೋತ ಮುಖ್ಯ ಮಂತ್ರಿಯೆಂಬ ರಾಷ್ಟ್ರೀಯ ಅವಮಾನಕ್ಕೆ ಗುರಿಯಾದರು.  ಒಂದೇ ಒಂದು ಹೋರಾಟದಿಂದ ಮಮತಾ ಬ್ಯಾನರ್ಜಿಯವರು ಪಶ್ಚಿಮ ಬಂಗಾಳದಲ್ಲಿ ತೃಣಮೂಲ್ ಕಾಂಗ್ರೇಸ್ ಪಕ್ಷವನ್ನು ಅಧಿಕಾರಕ್ಕೆ ತರಲು ಯಶಸ್ವಿಯಾದರು.  ನಂತರ 2011ರ ವಿದಾನಸಭಾ ಚುನಾವಣೆಯಲ್ಲಿ  ಮಮತಾ ಬ್ಯಾನರ್ಜಿ ಮುಖ್ಯ ಮಂತ್ರಿಯಾದರು.  ಅಲ್ಲಿಂದ ಬರೋಬರಿ 15 ವರ್ಷ ಕಾಲ ಅಧಿಕಾರದಲ್ಲಿದ್ದರು. ಸುವೇಂದು ಕುಮಾರ್ ತೃಣಮೂಲ ಕಾಂಗ್ರೇಸಿನಲ್ಲಿ  ಒಮ್ಮೆ ಸಾರಿಗೆ ಸಚಿವರಾಗಿ ಹಾಗೂ ಮತ್ತೊಮ್ಮೆ ನೀರಾವರಿ ಮತ್ತು ಜಲ ಸಂಪನ್ಮೂಲ ಸಚಿವರಾಗಿ ಸರಕಾರದಲ್ಲಿದ್ದರು.

ನಂದಿಗ್ರಾಮದ ಕೈಗಾರಿಕಾ ಬಡಾವಣೆಯ ವಿರುದ್ಧ ನಡೆದ ಹೋರಾಟದೊಂದಿಗೆ ನಾಯಕನಾಗಿ ಹುಟ್ಟಿಕೊಂಡವರೇ ಈ ಸುವೇಂದು ಅಧಿಕಾರಿ. ಈ ಹೋರಾಟದಲ್ಲಿ ಮುಸ್ಲೀಮ ರೈತ ಕಾರ್ಮಿಕ ಬದುಕಿಗೆ ಕಮ್ಯೂನಿಸ್ಟ್ ಸರಕಾರ ಅನ್ಯಾಯ ಮಾಡಿದೆ ರಾಜ್ಯವಿಡೀ ಅಬ್ಬರಿಸಿದ್ದ ಸುವೇಂದು ಅಧಿಕಾರಿ ಆವಾಗ್ಗೆ ಪಶ್ಚಿಮ ಬಂಗಾಳದ  ಮುಸ್ಲೀಮರ ಸಂರಕ್ಷನ ವೇಷವನ್ನು ಹಾಕಿಕೊಂಡಿದ್ದರು. ಇವರು ನಡೆಸುತ್ತಿದ್ದ ಪ್ರಚಾರಗಳು ಆವಾಗ್ಗೆ ಪಶ್ಚಿಮ ಬಂಗಾಳದಲ್ಲಿ ಕೋಮು ಭಾವನೆಗಳನ್ನು ಕೆರಳಿಸುತ್ತಿತ್ತು.  ಸಂಘಪರಿವಾರಕ್ಕೆ ಬೆಳೆಯಲು ಇದೊಂದು ಅವಕಾಶವಾಗಿ ಹೋಯಿತು. ನೆಲೆ ಕಳೆದುಕೊಂಡ ಕಾಂಗ್ರೇಸ್  ಮತ್ತು ಕಮ್ಯೂನಿಸ್ಟ್ ಪಕ್ಷಗಳ ಕಾರ್ಯಕರ್ತರು ನಂತರ ತೃಣಮೂಲ ಪಕ್ಷವನ್ನು ಬೆಂಬಲಿಸಲಿಲ್ಲ,  ಬಿಜೆಪಿ ಪಕ್ಷವನ್ನು  ಬೆಂಬಲಿಸಿದರು!

ಸುವೇಂದು ಅಧಿಕಾರಿಯ ತಂದೆ ಸಿಸಿರ್ ಕುಮಾರ್ ಅಧಿಕಾರಿ ಕಾಂಗ್ರೇಸ್ ಪಕ್ಷದಲ್ಲಿದ್ದು ಕೊಂಡು ಮನಮೋಹನ್ ಸಿಂಗ್ ಅಧಿಕಾರದಲ್ಲಿ ಸಚಿವರಾಗಿದ್ದವರು. ಆದುದರಿಂದ ಸಿಸಿರ್ ಅಧಿಕಾರಿಗೆ ಮಿಡಿನಿಪುರ ನಂದಿಗ್ರಾಮ ಪ್ರದೇಶಗಳ ಮೇಲೆ ರಾಜಕೀಯ ಪ್ರಭಾವವಿದೆ.  ಸುವೇಂದು  ಅಧಿಕಾರಿಯವರ   ಸಹೋದರರಾಗಿರುವ  ದಿಬ್ಯೇಂದು ಅಧಿಕಾರಿ ಮತ್ತು ಸೌಮೇಂದು ಅಧಿಕಾರಿ ಕೂಡ ತೃಣಮೂಲ್ ಪಕ್ಷದಲ್ಲಿ ಸಂಸದರು ಮತ್ತು ಶಾಸಕರಾಗಿದ್ದವರು. ಇವರೆಲ್ಲರೂ ಕಾಂಗ್ರೇಸ್ ನ ಶುದ್ಧ  ಸಂಸ್ಕಾರವನ್ನು ಹೊಂದಿದ್ದವರೆ!

ತೃಣಮೂಲ ಕಾಂಗ್ರೇಸ್ ಅತಿಯಾದ ಬ್ರಷ್ಟಾಚಾರದಲ್ಲಿ ತೊಡಗಿಕೊಂಡಿದೆ ಎಂಬ ಆರೋಪ ಹುಟ್ಟಿಕೊಂಡಿತು. ನಾರದ ಎಂಬ ಮಾಧ್ಯಮ ಸಂಸ್ಥೆಯು 2019ರಲ್ಲಿ ಬೇನಾಮಿ ಕಂಪನಿಗೆ ಅನುಮತಿ ನೀಡಬೇಕೆಂದು ಸುವೇಂದು ಅಧಿಕಾರಿ ಮತ್ತು ತೃಣಮೂಲ್ ಕಾಂಗ್ರೇಸ್ಸಿನ ಇತರೇ ಮಂತ್ರಿಗಳನ್ನು ಸಂಪರ್ಕಿಸಿ  ಹಣ ನೀಡುವ ಕುಟಕು ಕಾರ್ಯಾಚರಣೆಯನ್ನು ನಡೆಸಿತು. ಮಂತ್ರಿಗಳು ಹಣ ಸ್ವೀಕರಿಸಿ ವಿಡಿಯೋಗಳು ಹರಿದಾಡಿದವು. ಬ್ರಷ್ಟಾಚಾರವೆಸಗಿದ  ಸುದ್ಧಿಯಾಯಿತು! ಆ ಕಾರ್ಯಾಚರಣೆಯ ಆಧಾರದಲ್ಲಿಯೇ ಕೇಂದ್ರದ ಇ.ಡಿ. ಮತ್ತು ಸಿಬಿಐ ಸಂಸ್ಥೆಗಳು ತನಿಖೆಯನ್ನು  ನಡೆಸಿ ಮಂತ್ರಿಗಳಾದ   ಫಿರ್ ಹದ್ ಹಕೀಂ, ಸುಬ್ರತಾ ಮುಖರ್ಜಿ, ಮದನ್ ಮಿತ್ರ ಸೊವನ್ ಚಟರ್ಜಿ ಇವರುಗಳ ಮೇಲೆ ಕೇಸು ದಾಖಲು ಮಾಡಿ ಜೈಲಿಗಟ್ಟಿದವು.  ಆದರೆ ಆವಾಗ್ಗೆ ಲಂಚದ ಹಣವನ್ನು ಸ್ವೀಕರಿಸುತ್ತಿದ್ದ ಸುವೇಂದು ಅಧಿಕಾರಿಯನ್ನು ಮಾತ್ರ ಇ.ಡಿ. ಮತ್ತು ಸಿಬಿಐ ಏನೂ ಮಾಡಲಿಲ್ಲ. ಬಿಜೆಪಿ ಮತ್ತು ಸುವೇಂದು ಅಧಿಕಾರಿಯ ನಡುವೆ ಒಂದು ಡೀಲ್ ನಡೆಯಿತು.

ಅದರ ಪರಿಣಾಮವಾಗಿ  ಸುವೇಂದು ಅಧಿಕಾರಿ ನವೆಂಬರ್ 27, 2020 ರಂದು ಪಶ್ಚಿಮ ಬಂಗಾಳ ಸಾರಿಗೆ ಸಚಿವ ಹುದ್ದೆಗೂ ರಾಜೀನಾಮೆ ನೀಡಿದರು. ಡಿಸೆಂಬರ್ 16, 2020 ರಂದು ಪಶ್ಚಿಮ ಬಂಗಾಳ ವಿಧಾನಸಭೆಯ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. ಡಿಸೆಂಬರ್ 17, 2020 ರಂದು ಅವರು ಅಖಿಲ ಭಾರತ ತೃಣಮೂಲ ಕಾಂಗ್ರೆಸ್‌ನ ಪ್ರಾಥಮಿಕ ಸದಸ್ಯತ್ವಕ್ಕೆ ರಾಜೀನಾಮೆ ನೀಡಿದರು. ಡಿಸೆಂಬರ್ 19, 2020 ರಂದು  ಭಾರತೀಯ ಜನತಾ ಪಕ್ಷವನ್ನು ಸೇರಿದರು! ನಂತರ ಬಿಜೆಪಿ ಪಕ್ಷದ ನಾಯಕರಾಗಿ ಆಯ್ಕೆಯಾದರು. ಕಟ್ಟಾ ಬಿಜೆಪಿ ಕಾರ್ಯಕರ್ತರಾದರು! 

    ಬುದ್ಧದೇವ್ ಭಟ್ಟಾಚಾರ್ಯ  ಅವರು  ಆಗಸ್ಟ್ 8, 2024 ರಂದು ಕೋಲ್ಕತ್ತಾದಲ್ಲಿ ನಿಧನರಾದರು. ತಮ್ಮ ಕೊನೆಯ ದಿನಗಳವರೆವಿಗೂ ತಾನು ಬಂಗಾಳದ ಜನತೆಗೆ ಮಾಡಿದ ತಪ್ಪಾದರೂ ಏನು ಎಂಬುದನ್ನೇ ಕೇಳುತ್ತಿದ್ದರು.  ಎಲ್ಲರೊಂದಿಗೆ ಅದನ್ನೇ ಚರ್ಚಿಸುತ್ತಿದ್ದರು.  ಅವರೆಷ್ಟು ನೊಂದು ಕೊಂಡಿದ್ದರೆಂದರೇ ಅವರಿಗೆ ಮಾನ್ಯಮಾಡಲಾದ  ಪದ್ಮಭೂಷಣ ಪ್ರಶಸ್ತಿಯನ್ನೂ ನಿರಾಕರಿಸಿದರು. 

ಇನ್ನು  ಮುಂದೆ  ಪಶ್ಚಿಮ ಬಂಗಾಳದಲ್ಲಿ ಮುಖ್ಯಮಂತ್ರಿ  ಸುವೇಂದು ಅಧಿಕಾರಿಯ ಆಡಳಿತದಿಂದಾಗಿ  ಮುಸ್ಲೀಂ ಸಮುದಾಯಕ್ಕೆ ಕಿರುಕುಳವಾದರೆ, ಕಷ್ಟಗಳು ಬಂದರೆ,  ಅವರೇನೂ ಕಳವಳ ಪಡಬೇಕಾಗಿಲ್ಲ.  ಕೊರಗ ಬೇಕಾಗಿಲ್ಲ.   ಏಕೆಂದರೆ ಅಲ್ಲಿನ  ಮುಸ್ಲೀಮರು  ಸುವೇಂದು ಅಧಿಕಾರಿ ಜೊತೆ ಸೇರಿಕೊಂಡು  ತಮ್ಮ ಗುಂಡಿಗಳನ್ನು 15 ವರ್ಷದ ಹಿಂದೆಯೇ ತೋಡಿ ಕೊಂಡಿದ್ದರು.  ಈಗ ಹೋಗಿ ಬೀಳುತ್ತಿದ್ದಾರೆ ಅಷ್ಟೇ. ಈಗ ಪಶ್ಚಿಮ ಬಂಗಾಳದಲ್ಲಿ ಕಮ್ಯೂನಿಸ್ಟರೂ ಇಲ್ಲ, ಕಾಂಗ್ರೇಸಿಗರೂಇಲ್ಲ, ತೃಣಮೂಲ ಕಾಂಗ್ರೇಸಿಗರೂಲ್ಲ ಬರೀ ಬಿಜೆಪಿ ಮಾತ್ರ ಇರುತ್ತದೆ. ಹೀಗಾಗುತ್ತದೆ ಎಂದು ಎಲ್ಲರಿಗೂ ಚೆನ್ನಾಗಿ ಗೊತ್ತಿತ್ತು.  ಗೊತ್ತಿರಲೇ ಬೇಕಾದವರಿಗೆ ಗೊತ್ತಾಗದೇ ಹೋಗಿದ್ದರೆ ಅದು ಅವರ ತಪ್ಪು ಅಷ್ಟೇ.  

ಇನ್ನೊಂದು ದೃಷ್ಟಾಂತ:  ಈಗ ಕೇರಳದಲ್ಲಿಯೂ ಅದೇ ಮಾದರಿ  ಆಗುತ್ತಿದೆ!  ಆದರೆ ಅದರ ಪೂರ್ಣ ಫಲಿತಾಂಶಕ್ಕೆ ಇನ್ನೂ ಹತ್ತು ವರ್ಷ ಕಾಯಬೇಕಷ್ಟೇ!   ಕೊಲ್ಲುವವರ ಜೊತೆ ಬಂದು ಸತ್ತಾಗ ಜೊತೆಗೆ ಕೂತು ಅಳುವವರ ಮೇಲೆ ನಂಬಿಕೆ ಇಡುವ ಮುಸ್ಲಿಂ ಸಮುದಾಯದವು  ಅನುಕರಿಸುವ ವಿಲಕ್ಷಣ ರಾಜಕಾರಣದ     ಒಟ್ಟಾರೆ ಫಲವಿದು.  #ಕರೀಂ ರಾವ್ ತರ್