ಈಗ ಜೆನ್ ಜಿಗಳ ಕಾಟ ಶುರುವಾಗಿದೆ. ಎಚ್ಚರ ವಹಿಸಬೇಕು.
ಈಗ ಜೆನ್ ಜಿಗಳ ಕಾಟ ಶುರುವಾಗಿದೆ. ಎಚ್ಚರ ವಹಿಸಬೇಕು.
ದಾರವಾಡದಲ್ಲಿ ವಿದ್ಯಾರ್ಥಿಗಳು ದಿಢೀರನೆ ಪ್ರತಿಭಟನೆ ಮಾಡುತ್ತಿದ್ದಾರೆ. ತಮ್ಮನ್ನು ಜೆನ್ ಜಿ ಎಂದು ಕರೆದುಕೊಂಡು ಪ್ರತಿಭಟನೆಯನ್ನು ಮುಂದುವರಿಸುತ್ತಿದ್ದಾರೆ. ಕಾಲೇಜಿನ ಅದ್ಯಯನ ಮುಗಿಸಿ ಹೊರ ಬರುತ್ತಿರುವ ವಿದ್ಯಾರ್ಥಿ ಸಮುದಾಯವದು. ತಮಗೆ ಸರಕಾರಿ ನೌಕರಿ ಬೇಕು, ಸರಕಾರಿ ನೌಕರಿ ನೇಮಕಾತಿಗೆ ಇರುವ ವಯಸ್ಸಿನ ಮಿತಿಯನ್ನು ಹೆಚ್ಚಿಸ ಬೇಕು ಇತ್ಯಾದಿ ಬೇಡಿಕೆಗಳನ್ನು ಮುಂದಿಟ್ಟು ಕೊಂಡು ಪ್ರತಿಭಟನೆಯನ್ನು ಮಾಡುತ್ತಿದ್ದಾರೆ. ಈ ಪ್ರತಿಭಟನೆಯನ್ನು ಧಾರವಾಡದ ಭಾಗದಲ್ಲಿ ನಡೆಯುತ್ತಿರುವುದು ಗಮನಾರ್ಹವಾಗಿದೆ.
ಈ ವಿದ್ಯಾರ್ಥಿ ಸಮುದಾಯಗಳು ವಿದ್ಯಾವಂತರಾಗುವುದು, ಪದವೀಧರರಾಗುವುದು ಸರಕಾರಿ ನೌಕರಿಯನ್ನು ಪಡೆಯುವುದಕ್ಕಾಗಿಯೇ ಎಂದು ಭ್ರಮಿಸಿಕೊಂಡಂತಿದೆ. ಸರಕಾರದ ವಿರುದ್ಧ ಹೋರಾಡಿದರೆ ನೌಕರಿ ಸಿಗುತ್ತದೆ, ನಾವು ವಿದ್ಯಾರ್ಥಿಗಳು ಹೇಳುವುದನ್ನು ಕೇಳ ಬೇಕು ಎಂಬ ರೀತಿಯಲ್ಲಿ ದಾರ್ಷ್ಟ್ಯತೆಯಿಂದ ಹೋರಾಟವನ್ನು ಮಾಡುತ್ತಿದ್ದಾರೆ.
ಆಲ್ ಕರ್ನಾಟಕ ಸ್ಟೇಟ್ ಸ್ಟುಡೆಂಟ್ಸ್ ಅಸೋಸಿಯೇಶನ್ ಎಂಬ ಸಂಘಟನೆಯ ಅಡಿಯಲ್ಲಿ ಈ ಪ್ರತಿಭಟನೆಯನ್ನು ಆಯೋಜಿಸಿ ಕೊಂಡಿದ್ದಾರೆ. ಮುಷ್ಕರ ಮಾಡುವುದೇನೋ ಸರಿ. ಸಧ್ಯಕ್ಕೆ ರಾಜ್ಯದಲ್ಲಿ ಕಾಂಗ್ರೇಸ್ ಸರಕಾರವಿರುವುದರಿಂದ ಸರಕಾರದ ಗಮನಸೆಳೆಯಲು ಪ್ರತಿಭಟನೆ ಮಾಡುವುದಕ್ಕೆ ವಿದ್ಯಾರ್ಥಿಗಳಿಗೆ ಅವಕಾಶವಿದೆ. ಕೇಸುಗಳನ್ನೇನೂ ಹಾಕುವುದಿಲ್ಲ. ಪ್ರಜಾಪ್ರಭುತ್ವದಲ್ಲಿ ಪ್ರತಿಭಟನೆ ಮತ್ತು ಚಳುವಳಿಯು ವ್ಯಕ್ತಿ ಸ್ವಾತಂತ್ರ್ಯದ ಭಾಗವಾಗಿದೆ. ವಯಸ್ಸಿನ ಗರಿಷ್ಟ ಮಿತಿಯನ್ನು ಏರಿಸ ಬೇಕೆನ್ನುವ ವಿದ್ಯಾರ್ಥಿಗಳ ಬೇಡಿಕೆ ಸಮಂಜಸವಾಗಿದೆ. ನೌಕರಿಗೆ ಇರಬೇಕಾದ ಗರಿಷ್ಟ ವಯಸ್ಸಿನ ಮಿತಿಯನ್ನು ಆದರೆ ಈ ಹೋರಾಟದಲ್ಲಿ ಕಂಡು ಆಂಶವೇನೆಂದರೆ ಸರಕಾರವನ್ನು ಹಿಗ್ಗಾಮುಗ್ಗವಾಗಿ ತೆಗಳುತ್ತಿರುವುದು, ಸರಕಾರದ ವಿರುದ್ಧ ದಂಗೆಯೇಳುತ್ತಿರುವ ರೀತಿಯಲ್ಲಿ ನಡೆದುಕೊಂಡಿದ್ದಾರೆ. ಈಗ ಬೆಳೆದು ರೂಪುಗೊಳ್ಳುತ್ತಿರುವ ಬಾಲಜನ ಸಮುದಾಯ್ಕೆ ನೈಜ ಪ್ರಪಂಚದ ಬಗ್ಗೆ ಸರಿಯಾದ ಒಳನೋಟ ವಿಲ್ಲದೇ ಇರುವುದು ಅಸಮಾಧಾನಕರ. ಸರಕಾರವು ನೀಡಿದ ಹಲವು ಸವಲತ್ತು ಸೌಜನ್ಯಗಳ ನೆರವಿನೊಂದಿಗೆ ವಿದ್ಯಾವಂತರಾಗಿ ಸಮಾಜದಲ್ಲಿ ಕಾಲಿಡುತ್ತಿರುವಾಗಲೇ ಸರಕಾರವನ್ನೇ ಅಸ್ಥಿರಗೊಳಿಸುವ ಬೆದರಿಕೆಯ ಮಾತನಾಡುತ್ತಿರುವುದು ಸರಿಯಲ್ಲ.
ಈ ವಿದ್ಯಾರ್ಥಿ ಸಮುದಾಯವು ತಾನು ಸರಕಾರಿ ನೌಕರಿಯನ್ನು ಪಡೆಯುವುದಕ್ಕಾಗಿಯೇ ವಿದ್ಯಾವಂತರಾಗುತ್ತಿದ್ದೇವೆ ಎಂಬ ದೃಷ್ಟಿಕೋನವನ್ನು ಹೊಂದಿರುವಂತಿದೆ. ಸಾಮಾಜಿಕ ಮಾಧ್ಯಮ ವೇದಿಕೆಗಳಲ್ಲಿ ಸ್ವಯಂ-ಸುಧಾರಣಾ ವಿಷಯಗಳನ್ನು ಪ್ರತಿಪಾಧಿಸುವ ಅಭ್ಯಾಸ ಕಲಿತ ಬಹುಪಾಲು ಜನರು ವಿತಂಡವಾದ ಮತ್ತು ತರ್ಕಗಳೇ ಜ್ಞಾನದ ಭಾಗವೆಂದು ತಿಳಿದುಕೊಂಡಿದ್ದಾರೆ. ಇದು ವಿದ್ಯಾರ್ಥಿ ಮತ್ತು ಅವರಿಂದ ರೂಪಗೊಳ್ಳುವ ಯುವ ಸಮುದಾಯದಲ್ಲಿ ದುರಹಂಕಾರ ಮತ್ತು ಸಂಕುಚಿತ ಮನೋಭಾವವನ್ನು ಬೆಳೆಸುತ್ತಿರುವುದಕ್ಕೆ ಸಹಕಾರಿಯಾಗಿದೆ. ಯಾರ ಬಗ್ಗೆಯು ಗೌರವವಿಲ್ಲದ ವೈಯುಕ್ತಿಕ ಬೆಳವಣಿಗೆಗಳು ಸಮಾಜಕ್ಕೆ ವಿನಾಶಕಾರಿಯಾಗಲಿದೆ ಎಂಬ ವಿಚಾರವನ್ನು ವಿದ್ಯಾರ್ಥಿ ಸಮುದಾಯವು ಮೊದಲು ಗಮನದಲ್ಲಿಟ್ಟುಕೊಂಡು ತನ್ನ ಸಮಾಜವನ್ನು ಅರ್ಥಮಾಡಿಕೊಳ್ಳುವಷ್ಟು ಪ್ರಬುದ್ಧವಾಗಿರಬೇಕು.
ಶಾಲೆಯಿಂದ ಕಲಿತು ಬರುವವರೆಲ್ಲರಿಗೂ ಸರಕಾರಿ ನೌಕರಿ ನೀಡಲು ಸಾಧ್ಯವಿದೆಯೇ? ಶಾಲಾ ಮಕ್ಕಳನ್ನು ರಾಜಕೀಯ ಮತ್ತು ಸಾಮಾಜಿಕ ಸಮಸ್ಯೆಗಳಿಗೆ ಬಗ್ಗೆ ಪ್ರತಿಕ್ರಿಯಿಸಲು ಪ್ರಚೋಧಿಸುವುದು ಸರಿಯಲ್ಲ. ವಿದ್ಯಾರ್ಥಿಗಳ ಸಮಸ್ಯೆ ಮತ್ತು ಅಳಲು ನ್ಯಾಯಯುತವಾದ್ದೇ ಆದರೆ ಆ ಸಮಸ್ಯೆಗೆ ಪರಿಹಾರ ಕೇಳುತ್ತಿರುವ ರೀತಿ ಸರಿಯಿಲ್ಲ. ಬಾಲ ಮಕ್ಕಳು ಮತ್ತು ಹದಿಹರೆಯ ದವರನ್ನು ರಾಜಕೀಯ ಮತ್ತು ಸಾಮಾಜಿಕ ಸಮಸ್ಯೆಗಳ ಬಗ್ಗೆ ಸೂಕ್ತ ಪ್ರಜ್ಞೆ ಇಲ್ಲದಿದ್ದರೂ ಸಾಮಾಜಿಕ ಮಾಧ್ಯಮಗಳ ಪ್ರಭಾವದಿಂದ ಈ ಸಮೂಹ ಮೊದಲಿಗಿಂತ ಹೆಚ್ಚು ಕೆಟ್ಟದಾಗಿ ವರ್ತಿಸುತ್ತಿದೆ.
ತಮಿಳುನಾಡಿನಲ್ಲಿಯೂ ಹಾಗೆಯೆ ಆಯಿತು. ತಮಿಳುನಾಡು ಇದೇ ತರಹದ ಜೆನ್ ಜಿಗಳ ಹಾವಳಿಗೆ ತತ್ತರಿಸಿದೆ! ಚಿತ್ರನಟ ವಿಜಯ್ ಹೊಸದಾಗಿ ಆರಂಭಿಸಿದ ತಮಿಳ್ ವೆಟ್ರಿ ಕಳಗಂ ಪಕ್ಷಕ್ಕೆ ಈ ಜೆನ್ ಜಿಗಳೇ ಹಿಂಬಾಲಕರು! ಇವರ ನೀಡುತ್ತಿರುವ ಬೆಂಬಲವನ್ನು ನೋಡಿ ಚಿತ್ರ ನಟ ವಿಜಯ್ ತಮಿಳುನಾಡಿನ ಮುಂದಿನ ಮುಖ್ಯಮಂತ್ರಿ ತಾನೇ ಎಂದು ಬೀಗಿ ಕೊಂಡಿದ್ದರು. ಜನಾಭಿಪ್ರಾಯಗಳು ಹಾಗೇ ಮೂಡಿ ಬರುತ್ತಿತ್ತು. ಇದರಿಂದ ಉತ್ತೇಜಿತರಾದ ವಿಜಯರ್ ಮುಂದಿನ ಚುನಾವಣೆಗೆ ಈಗಿನಿಂದಲೇ ಪ್ರಚಾರ ಕಾರ್ಯವನ್ನು ಕೈಗೊಂಡಿದ್ದರು. ಪ್ರತೀ ಜಿಲ್ಲೆಯಲ್ಲಿಯೂ ಮಹಾ ಸಭೆಗಳನ್ನು ನಡೆಸುತ್ತಿದ್ದರು. ಹೋದಲ್ಲೆಲ್ಲಾ ಮಕ್ಕಳು, ಬಾಲಕರು ಮತ್ತು ವಿದ್ಯಾರ್ಥಿ ಯುವ ಸಮುದಾಯ ಲಕ್ಷಾಂತರ ಸಂಖ್ಯೆಯಲ್ಲಿ ಭಾಗವಹಿಸುತ್ತಿತ್ತು. ವಿಜಯ್ ಬಂದಲ್ಲಿ ಹೋದಲ್ಲೇಲ್ಲಾ ಹಿಂಬಾಲಿಸುತ್ತಿತ್ತು. ವಿಜಯ್ ಈ ಜೆನ್ ಜಿಗಳ ಮೇಲೆ ವಿಶ್ವಾಸವಿಟ್ಟಿದ್ದರು. ಜೆನ್ ಜಿಗಳು ನಟ ವಿಜಯ್ ಮೇಲೆ ಭರವಸೆಯನ್ನು ಇಟ್ಟುಕೊಂಡಿದ್ದರು ಅಷ್ಟೇ! ಮೊನ್ನೆ ಸೆಪ್ಟೆಂಬರ್ 27ನೇ ಶನಿವಾರದಂದು ನಟ ವಿಜಯ್ ತಮಿಳುನಾಡಿನ ಕರೂರಿನಲ್ಲಿ ತಮಿಲು ವೆಟ್ರಿ ಕಳಗಂ ಪಕ್ಷದ ಜಿಲ್ಲಾ ಸಭೆಯನ್ನು ನಡೆಸಿತ್ತು. ಅಲ್ಲಿಗೂ ಸಾವಿರಾರು ಸಂಖ್ಯೆಯಲ್ಲಿ ಈ ಜೆನ್ ಜಿ ಸಮೂಹ ಭಾಗವಹಿಸಿದ್ದರು. ಈ ಗುಂಪುಗಳು ಯಾವುದೇ ಸಲಹೆ ಸೂಚನೆಗಳನ್ನು ಪಾಲಿಸುತ್ತಿರಲಿಲ್ಲ, ಶಿಸ್ತೂ ಇರಲಿಲ್ಲ, ರಾಜಕೀಯ ಪಕ್ಷದ ನೀತಿ ಸಿದ್ಧಾಂತಗಳ ಬಗ್ಗೆ ಯಾವುದೇ ಜ್ಞಾನವು ಇರಲಿಲ್ಲ, ಸಾರ್ವಜನಿಕ ಸಭೆ ಸಮಾರಂಭಗಳಲ್ಲಿ ಹೇಗೆ ನಡೆದುಕೊಳ್ಳಬೇಕು ಎಂಬ ಪರಿಜ್ಞಾನವೂ ಇಲ್ಲ. ಅಕ್ಷರಶ: ಬಾಳೆತೋಟಕ್ಕೆ ನುಗ್ಗಿದ ಕೋತಿಗಳ ತರಹ ವರ್ತಿಸುತ್ತಿತ್ತು. ಸಾಯಂಕಾಲ ವಿಜಯ್ ಕರೂರಿನ ಸಮಾರಂಭದ ಸ್ಥಳಕ್ಕೆ ಬಂದಾಗ ವಿಜಯ್ ನನ್ನು ನೋಡಲು ನೂಕು ನುಗ್ಗಲು ಉಂಟು ಮಾಡಿದರು. ಮನೆಗಳ ಮೇಲೆ ಹತ್ತಿದರು. ಮರಗಳ ಮೇಲೆ ಹತ್ತಿದರು. ಜನರೇಟರ್ ಗಳ ಮೇಲೆ ಹತ್ತಿ ಕೂತರು. ಸೌಂಡ್ ಸಿಸ್ಟಂಗಳ ಮೇಲೆ ಹತ್ತಿ ಕೂತರು. ಮದವೇರಿದಂತೆ ವರ್ತಿಸಿದರು. ಹುಡುಗರಲ್ಲವೇ ತುಂಬಾ ಉತ್ಸಾಹದಿಂದ ಇದ್ದಾರೆ ಎಂದು ಭಾವಿಸಿದ್ದರು. ಜನರೇಟರ್ ಮೇಲೆ ಏರದಂತೆ ಪರಿಪರಿಯಾಗಿ ಕಾರ್ಯಕ್ರಮದ ಆಯೋಜಕರು ವಿನಂತಿ ಮಾಡುತ್ತಿದ್ದರೂ ಕೇಳುವವರಿರಲಿಲ್ಲ. ಮರವೇರಿದವರು, ಫ್ಲೆಕ್ಸ್ ಬೋರ್ಡ ಏರಿದವರು ಜನರೇಟರ್ ಶೆಡ್ ಮೇಲೆ ಬಿದ್ದರು. ಕರೆಂಟ್ ಶಾಕಿನಿಂದ ಸ್ಥಳದಲ್ಲಿಯೇ ಯುವಕರು ಧಾರುಣವಾಗಿ ಮೃತಪಟ್ಟರು. ಆನಂತರ ಉಂಟಾದ ಆಯೋಮಯವಾದ ದಿಕ್ಕೆಟ್ಟ ಜನಸಂಧಣಿ, ನೂಕು ನುಗ್ಗಲಿಗೆ ಸಿಕ್ಕಿ ಏನು ಅರಿಯದ ಮುಗ್ದರು, ಹಸುಳೆಗಳು ಅಮಾಯಕರು ಸುಮಾರು 40 ಜನರು ಪ್ರಾಣ ಕಳೆದು ಕೊಂಡ ದುರಂತ ಘಟನೆಯು ನಡೆದುಹೋಯಿತು. ಅತಿಯಾದ ಆತ್ಮವಿಶ್ವಾಸವನ್ನು ಇರಿಸಿಕೊಂಡು ತಾನು ತಮಿಳುನಾಡಿನ ಮುಂದಿನ ಎಂ.ಜಿ.ಆರ್. ಎಂದು ಕನಸುಕಂಡಿದ್ದ ತಮಿಳು ವೆಟ್ರಿ ಕಳಗಂನ ಮುಖಂಡ ನಟ ವಿಜಯ್ ಗೆ ಅನಿರೀಕ್ಷಿತವಾಗಿ ಎರಗಿದ ಈ ದುರಂತದಿಂದಾಗಿ ದಿಗ್ಬ್ರಮೆಗೊಳಗಾಗಿದ್ದಾರೆ. ಸಾರ್ವಜನಿಕ ಖಂಡನೆ, ಕ್ರಿಮಿನಲ್ ಕೇಸುಗಳು ಎಲ್ಲವನ್ನು ಎದುರಿಸುವಂತಾಗಿದೆ. ಜನರು ಸರಕಾರದ ಮೇಲೆ, ಪೊಲೀಸರ ಮೇಲೆ ದೂರು ಹೇಳುತ್ತಾ ಕೂತಿದ್ದಾರೆ.


