ಅಮೇರಿಕ ಮತ್ತು ಇರಾನಿನ ನಡುವಿನ ಯುದ್ಧ ಮುಗಿಯುತ್ತದಾ? - ಭಾಗ-8

ಒಂದು ಡ್ರೋಣ್ ಅನ್ನು ನಾಶ ಪಡಿಸಲು ಮತ್ತೊಂದು ಡ್ರೋಣ್ ನಿಂದ ನಾಶಪಡಿಸಲು ಸಾಧ್ಯವಿಲ್ಲ ಅದನ್ನು ಅಮೇರಿಕಾದ ಪೆಟ್ರಿಯಾಟ್ ಕ್ಷಿಪಣಿಯಿಂದ ಮಾತ್ರ ಹೊಡೆದು ಹಾಕಲು ಸಾಧ್ಯ! ಒಂದು ಡ್ರೋನಿನ ಬೆಲೆ 18 ಲಕ್ಷ ರೂಪಾಯಿಯಾದರೆ ಪೆಟ್ರಿಯಾಟಿನ ಬೆಲೇ ಬರೋಬ್ಬರಿ 40 ಕೋಟಿ ರೂಪಾಯಿ! 100 ಡ್ರೋನಿಗೆ 1 ಕೋಟಿ 80 ಲಕ್ಷ ಬೆಲೆಯದ್ದಾಗಿದ್ದರೆ ಅದನ್ನು ಹೊಡೆದುರುಳಿಸಲು 4000 ಕೋಟಿ ಬೆಲೆ ಬಾಳುವ ಕ್ಷಿಪಣಿಗಳನ್ನು ಉಪಯೋಗಿಸ ಬೇಕು!

ಅಮೇರಿಕ ಮತ್ತು ಇರಾನಿನ ನಡುವಿನ ಯುದ್ಧ ಮುಗಿಯುತ್ತದಾ?  - ಭಾಗ-8

ಇರಾನ್ ಅಮೇರಿಕ ಮತ್ತು ಇಸ್ರೇಲಿನ ಗರ್ವಭಂಗ ಮಾಡಿದೆ.  ಇರಾನ್ ಡ್ರೋಣ್ ಗಳೇ ಈ ಯುದ್ಧದಲ್ಲಿ ವಜ್ರಾಯುಧವಾಗಿ ಪರಿಗಣಿಸಲ್ಪಟ್ಟಿದೆ. ಮದ್ಯಪ್ರಾಚ್ಯದಲ್ಲಿರುವ ಅಮೇರಿಕದ ಎಲ್ಲಾ ಸೇನಾ ನೆಲೆಗಳ ಮೇಲೆಯು ಇವು ದಾಳಿವೆ ಮಾಡಿವೆ. ಈ ದಾಳಿಗಳಿಂದಾಗಿ ಇಸ್ರೇಲಿನಲ್ಲಿ ನಂಬಲಿಕ್ಕಾಗದ ನಾಶ ನಷ್ಟವುಂಟಾಗಿವೆ. ಅಸಮ ಯುದ್ಧದಲ್ಲಿ ಇರಾನಿಗೆ ಎಷ್ಟು ನಾಶ ನಷ್ಟವಾಯಿತು ಎಂಬುದು ಮಹತ್ವದ ವಿಚಾರವಲ್ಲ.  ಆದರೆ ಅಮೇರಿಕಕ್ಕೆ ಎಷ್ಟು ಹಿನ್ನಡೆಯಾಯಿತು ಎಂಬುದು ಪ್ರಮುಖ ವಿಚಾರವಾಗಿದೆ.  

 ಒಂದು ಡ್ರೋಣ್ ಅನ್ನು ನಾಶ ಪಡಿಸಲು ಮತ್ತೊಂದು ಡ್ರೋಣ್ ನಿಂದ ನಾಶಪಡಿಸಲು ಸಾಧ್ಯವಿಲ್ಲ ಅದನ್ನು ಅಮೇರಿಕಾದ ಪೆಟ್ರಿಯಾಟ್ ಕ್ಷಿಪಣಿಯಿಂದ ಮಾತ್ರ ಹೊಡೆದು ಹಾಕಲು ಸಾಧ್ಯ!  ಒಂದು ಡ್ರೋನಿನ ಬೆಲೆ 18 ಲಕ್ಷ ರೂಪಾಯಿಯಾದರೆ ಪೆಟ್ರಿಯಾಟಿನ ಬೆಲೇ ಬರೋಬ್ಬರಿ 40 ಕೋಟಿ ರೂಪಾಯಿ! 100 ಡ್ರೋನಿಗೆ 1 ಕೋಟಿ 80 ಲಕ್ಷ ಬೆಲೆಯದ್ದಾಗಿದ್ದರೆ ಅದನ್ನು ಹೊಡೆದುರುಳಿಸಲು 4000 ಕೋಟಿ ಬೆಲೆ ಬಾಳುವ ಕ್ಷಿಪಣಿಗಳನ್ನು ಉಪಯೋಗಿಸ ಬೇಕು!  ಇರಾನಿನ ಬಳಿ ತೆರಳಿದ ಅಮೇರಿಕದ ಯುದ್ಧ ನೌಕೆಗಳು  2000 ಕಿ.ಮೀಟರ್ ಹಿಂದಕ್ಕೆ ವಾಪಾಸು ಹೋಗ ಬೇಕಾಯಿತು!  ಒಂದು ಡ್ರೋನ್ ಯುದ್ಧ ನೌಕೆಯ ಮೇಲೆ ಎರಗಿದರೆ ಅದರಲ್ಲಿರುವ ಒಂದು ಯುದ್ಧ ವಿಮಾನ ಮೇಲಕ್ಕೆ ಎಗರಿ ಹೋಗಿ ಅದನ್ನು ಹೊಡೆದು ಹಾಕಬಹುದು.  ಆದರೆ 50 ಡ್ರೋನ್ ಗಳು ಒಮ್ಮೆಗೆ ಯುದ್ಧ ನೌಕೆಯ ಮೇಲೆ ಹಾಯ್ದರೆ? ಇರುವ 50 ವಿಮಾನಗಳೂ ಒಟ್ಟಿಗೆ ಹಾರ ಬೇಕು, ಎಲ್ಲವನ್ನು ಹೊಡೆದು ಹಾಕಬೇಕು! ಯಾವುದೇ ದೇಶದ ಯುದ್ಧ ತಂತ್ರಕ್ಕೆ ಇರಾನಿನ ಯುದ್ಧ ತಂತ್ರ ಒಂದು ಅನುಕರಣೀಯ ಯುದ್ಧ ತಂತ್ರವೇ ಸರಿ.

 ಇನ್ನು ಹೊರ್ಮೋಜ್ ಕಡಲ ಸಂಧಿಯನ್ನು ಇರಾನ್ ವಶಕ್ಕೆ ಪಡೆದುಕೊಂಡ ವಿಚಾರ.  ಇರಾನ್ ಅಮೇರಿಕಾದ ಇಷ್ಟಕ್ಕೆ ವಿರುದ್ಧವಾಗಿ ಅಣು ಸಂಶೋಧನಾ ಕಾರ್ಯವನ್ನು ನಡೆಸುತ್ತಿದೆ ಎಂಬುದೇ ದೊಡ್ಡ  ಆರೋಪ.  ಇಸ್ರೇಲಿನಲ್ಲಿ ಅಣು ಬಾಂಬ್ ಇರುವುದರಿಂದ ಇರಾನ್ ಕೂಡ ಅಣುಬಾಂಬ್ ನಿರ್ಮಿಸಿದರೇ ಪ್ರಾಧೇಶಿಕ ಸಮತೋಲನವನ್ನು ಕಾಪಾಡಲು ಸಾಧ್ಯವಿಲ್ಲವೆಂಬ ಆತಂಕ.  ಆದ್ದರಿಂದಲೇ ಇರಾನಿಗೆ ಪಾಠ ಕಲಿಸಲು ಈ ಯುದ್ಧ.  ಆದರೆ ಅಮೇರಿಕ್ಕೆ ಈ ಯುದ್ಧ ವಿಚಿತ್ರ ರೀತಿಯಲ್ಲಿ ತಿರುಗುಬಾಣವಾಗಿದೆ. ಅಲ್ಲಿಯವರೆಗೆ ಸುಮ್ಮನೇ ಇದ್ದ ಹಾರ್ಮೋಜ್ ಕಡಲ ಸಂಧಿಯನ್ನು ಈಗ ಇರಾನ್ ತನ್ನ ವಶಕ್ಕೆ ತೆಗೆದುಕೊಂಡಿದೆ! ಇದು ಇರಾನಿನ ಗಡಿಯಲ್ಲಿದೆ. ಅಮೇರಿಕ ಈಗ ಹಾರ್ಮೋಜನ್ನು ಇರಾನಿನ ವಶದಿಂದ ಬಿಡಿಸುವ ಯುದ್ದದಲ್ಲಿದೆ!  ಇರಾನ್ ಹಾರ್ಮೋಜ್ ನಿಂದ  ಹೋಗುವ ತೈಲ ಟ್ಯಾಂಕರುಗಳಿಂದ 2 ಕೋಟಿ ರೂಪಾಯಿ ಯುದ್ಧ ಸುಂಕವನ್ನು ನಿಗದಿಪಡಿಸಿ  ವಸೂಲು ಮಾಡಲು ತೊಡಗಿದೆ. ಇದು  ಜಾಗತಿಕ ಸೂಪರ್ ಎಂದು ಅಮೇರಿಕದ ಮದವೇರಿದ ಗರ್ವಕ್ಕೆ ಆದ  ಮುಖಭಂಗ.  

ಈಗ ಜಾಗತಿಕ ದೇಶಗಳು ಸುಮ್ಮನೆ ಇದ್ದ ಹಾರ್ಮೋಜ್ ಜಲಸಂಧಿಯನ್ನು ಇರಾನ್ ವಶಕ್ಕೆ ತೆಗೆದುಕೊಳ್ಳಲು ಕಾರಣವಾದ ಅಮೇರಿಕಕುಟಿಲ ಯುದ್ಧ  ತಂತ್ರವನ್ನೇ ದೂಷಿಸುತ್ತಿದೆ.  ಈ ಯುದ್ಧದಲ್ಲಿ ಭಾಗಿಯಾಗಲು ಅಮೇರಿಕಾ ಇತರೆ ದೇಶಗಳಿಗೆ ಕರೆ ನೀಡಿದ್ದರೂ ಅಚ್ಚರಿಯ ರೀತಿಯಲ್ಲಿ ಯಾವ ದೇಶಗಳೂ ಸ್ಪಂಧಿಸುತ್ತಿಲ್ಲ! ಈ ವಿಚಾರದಲ್ಲಿ ಅಮೇರಿಕಾ ಒಬ್ಬಂಟಿಯಾಗುತ್ತಿದೆ. ಇಸ್ರೇಲನ್ನು ಅತಿಯಾಗಿ ಓಲೈಸಿ ಅಮೇರಿಕ ಈ ಯುದ್ಧ ಸಹಚರ್ಯದಲ್ಲಿ ಎಡವಿಬಿದ್ದಿದೆ. ಈಗ ಅಮೇರಿಕದ ಸೇನೆಯು ಹಾರ್ಮೋಜ್ ಜಲ ಸಂಧಿಯಲ್ಲಿ ಕಾವಲು ನಿಂತು ಎಲ್ಲಾ ಹಡಗುಗಳಿಗೆ ಸುಂಕ ಪಾವತಿಸದೇ  ಸಂಚರಿಸಲು ಧೈರ್ಯ ತುಂಬುತ್ತಿದೆ.  ಆದರೆ ಅದಕ್ಕೆ ಪೂರಕವಾದ  ಶಾಂತಿಯ ಪರಿಸ್ಥಿತಿ ಇನ್ನೂ ಅಲ್ಲಿ ನಿರ್ಮಾಣವಾಗಿಲ್ಲ.  ಅಮೇರಿಕ ತಾನಂದುಕೊಂಡಂತೆ ಯಶಸ್ವಿಯಾಗುತ್ತದೆ ಎಂಬ ಬಗ್ಗೆ ನಂಬಿಕೆ ಇಲ್ಲ.

  ಒಂದು ಟ್ಯಾಂಕರ್ ಬೆಲೆ ಸುಮಾರು 1500 ಕೋಟಿ ಬೆಲೆ ಬಾಳುತ್ತದೆ.  1500 ಕೋಟಿ ಬೆಲೆಯ ತೈಲವನ್ನು ತುಂಬಿಸಿದ ಹಡಗು ಹಾರ್ಮೋಜ್ ಜಲಸಂಧಿ ದಾಟಲು 2 ಕೋಟಿ ರೂಪಾಯಿ ಅಂದರೆ  ಒಂದು ಬ್ಯಾರೆಲ್ ತೈಲಕ್ಕೆ 1 ಡಾಲರ್ ಯುದ್ಧ ಸುಂಕವನ್ನು ಇರಾನ್  ಕೇಳುತ್ತಿದೆ.  ಒಂದು ಬ್ಯಾರೆಲ್ ಅಂದರೆ 160 ಲೀಟರ್. ಅಂದರೆ ಇನ್ನು ಮೇಲೆ ಜಗತ್ತಿನಲ್ಲಿ ಮಾರಾಟವಾಗುವ ಒಂದು ಲೀಟರ್ ಪೆಟ್ರೋಲಿಗೆ ಇರಾನ್ 50 ಪೈಸೆ ಯುದ್ಧ ಸುಂಕ ಕೇಳುತ್ತಿದೆ! 

ಆದರೆ ಇರಾನಿನ ಒಪ್ಪಿಗೆ ಇಲ್ಲದೇ  ಜಲ ಸಂಧಿಯಿಂದ ಯಾವ ಹಡಗಿಗೂ ಮುಂದೆ ಸಾಗಲು ಸಾಧ್ಯವಾಗುವುದು ಸುಲಭದ ಮಾತಲ್ಲ.  ಅಮೇರಿಕಾದ ಅಧ್ಯಕ್ಷರ ಮಾತನ್ನು ಯಾರೂ ನಂಬುತ್ತಿಲ್ಲ.   ಸುಮಾರು 3 ಸಾವಿರ ಕೋಟಿ ಬೆಲೆ ಬಾಳುವ ತೈಲ ಟ್ಯಾಂಕರುಗಳು  2 ಕೋಟಿ ರೂಪಾಯಿ ಸುಂಕ ನೀಡದೇ ಮುಂದೆ ಬಂದರೆ ಹಾರ್ಮೋಜ್ ಜಲಸಂಧಿಯ 200 ಕಿ ಮೀಟರ್ ವ್ಯಾಪ್ತಿಯಲ್ಲಿ ಎಲ್ಲಿಯಾದರೂ ಒಂದು ಸಣ್ಣ  ಡ್ರೋಣ್ ಬಿದ್ದರೂ ತೈಲ ಟ್ಯಾಂಕರ್ ನ ಮಾಲೀಕ 3000 ಕೋಟಿ ರೂಪಾಯಿ ಕಳೆದು ಕೊಳ್ಳುತ್ತಾನೆ. ಇದಕ್ಕೆ ಪರಿಹಾರವನ್ನು ಯಾವ ದೇಶವು ಕೊಡುವುದಿಲ್ಲ.  ಅಲ್ಲದೇ ಇಲ್ಲಿಂದ ಸಾಗುವ ಯಾವುದೇ ಹಡಗುಗಳಿಗೆ ವಿಮೆ ಸೌಲಭ್ಯವನ್ನು ನಿರಾಕರಿಸಲಾಗಿದೆ. ಅಂದ ಮೇಲೆ ಯಾವ ವ್ಯಾಪಾರಿ ತೈಲ ಟ್ಯಾಂಕರುಗಳು ಆ ಮಾರ್ಗದಲ್ಲಿ ಹೋದಾವು?  ಈ ಯುದ್ಧ ಇಂತಹ ಸಂಧಿಗ್ದತೆಯನ್ನು ಸೃಷ್ಟಿಸಿದೆ. 

ಹಾರ್ಮೋಜ್ ಜಲ ಸಂಧಿಯಲ್ಲಿ ಪ್ರತಿ ನಿತ್ಯ 150 ಹಡಗುಗಳು ಸಂಚರಿಸುತ್ತವೆ.  ಇರಾನಿನ ಲೆಕ್ಕದಲ್ಲಿ ಹೇಳುವುದಾದರೆ ಪ್ರತಿ ದಿವಸ 300 ಕೋಟಿ ರೂಪಾಯಿ ಅನಾಯಾಸವಾಗಿ ಸುಂಕ ಸಂಗ್ರಹಿಸುತ್ತದೆ.  ಪ್ರತಿ ವರ್ಷ 10000 ಸಾವಿರ ಕೋಟಿ ರೂಪಾಯಿಗಳ ಸುಂಕ ಸಂಗ್ರಹಿಸುತ್ತದೆ! ಈ ಸುಂಕವನ್ನು ಅಮೇರಿಕಾದ ಹಡಗುಗಳೂ ಪಾವತಿಸಬೇಕಾಗಿರುವುದೂ ಅಮೇರಿಕಾಕ್ಕೆ ಆಗಿರುವ ಗರ್ವಭಂಗವಾಗಿದೆ. ಸುಮ್ಮನೇ ಇದ್ದ ಇರಾನಿಗೆ ಅಮೇರಿಕವೇ ಲಾಟರಿ ಹೊಡೆದ  ಅದೃಷ್ಟವನ್ನು ಒದಗಿಸಿಕೊಟ್ಟಿದೆ.

ಯುದ್ಧದಲ್ಲಿ ಅಮೇರಿಕ ಜಾಗತಿಕ ಸಮುದಾಯದಿಂದ ಒಂಟಿಯಾಗುತ್ತಿರುವುದು ಗೋಚರಿಸುತ್ತಿರುವ ಹಾಗೆಯೇ ಇರಾನಿಗೆ ರಶ್ಯಾ, ಚೀನಾ ಮತ್ತು ಉತ್ತರ ಕೊರಿಯಾಗಳಂತಹ ದೇಶಗಳ ಪೂರ್ಣ ಬೆಂಬಲ ಸಿಗುತ್ತಿರುವುದು ಹೊಸ ಜಾಗತಿಕ ಬೆಳವಣಿಗೆಯಾಗಿವೆ. ಹೊಸದಾಗಿ ಹೊಂದಾಣಿಕೆ ಮಾಡಿಕೊಂಡು ಅಮೇರಿಕವನ್ನು ಎದುರಿಸುತ್ತಿರುವ ದೇಶಗಳ ಗುಂಪು ಪ್ರಭಲವಾಗಿ ಬೆಳೆಯುತ್ತಿದೆ.  ಅಥವಾ ಇರಾನ್, ರಶ್ಯಾ, ಚೀನಾ ಮತ್ತು ಉತ್ತರ ಕೊರಿಯಾಗಳು ಜಾಗತಿಕ ಸಮುದಾಯದ ಮುಂದೆ ಒಂದು ಪ್ರಭಲ ಶಕ್ತಿಯಾಗಿ ಹೊಮ್ಮಲಿದೆ.  

ಇರಾನಿಗೆ ಯುದ್ಧದಲ್ಲಿ ಕೌಶಲ್ಯಗಳು, ಅನುಸರಿಸಬೇಕಾದ ಗುರಿಗಳು, ಅದನ್ನು ಕಾರ್ಯಗತಗೊಳಿಸಲು ಬೇಕಾದ ಮಾಹಿತಿಗಳು ಮತ್ತು ಯುದ್ಧೋಪಕರಣಗಳು ಹೊರ ದೇಶಗಳು ಸರಬರಾಜು ಮಾಡುತ್ತಿರುವುದರಿಂದಲೇ ಅಮೇರಿಕದ ಮುಂದೆ ಇರಾನ ಜಗ್ಗುತ್ತಿಲ್ಲ. ಇದಕ್ಕೆ ಕಾರಣ ಕೆಲವು ದೇಶಗಳ ಹಿತಾಸಕ್ತಿಗಳು. ಚೀನಾವು ಮಾಡಿರುವ ಸುಮಾರು 40 ಲಕ್ಷ ರೂಪಾಯಿ ಹೂಡಿಕೆ ಮತ್ತು ರಶ್ಯಾದ ಮಾಡಿರುವ 10 ಲಕ್ಷ ರೂಪಾಯಿಗಳಿಗೂ ಹೆಚ್ಚಿನ ಹೂಡಿಕೆಗಳ ಹಿತಾಸಕ್ತಿಗಳನ್ನು ಕಾಪಾಡಲು ಆ ದೇಶಗಳು ಇರಾನಿಗೆ ರಕ್ಷಣೆ ನೀಡಬೇಕಾಗಿರುವ ಅನಿವಾರ್ಯತೆಯನ್ನು ಸೃಷ್ಟಿಸಿದೆ. ಅಮೇರಿಕ ಇಸ್ರೇಲನ್ನು ಹೇಗೆ ಸಂರಕ್ಷಿಸುತ್ತಿದೆಯೋ ಹಾಗೆಯೇ ಚೀನಾ ಮತ್ತು ರಶ್ಯಾ ಇನ್ನು ಮುಂದೆ ಇರಾನನ್ನು ಸಂರಕ್ಷಿಸುತ್ತದೆ.  ಇದನ್ನು ಎದುರಿಸಲು ಅಮೇರಿಕ ಸಿದ್ಧತೆ ನಡೆಸಬೇಕಾಗಿರುವುದೇ ಇಂದಿನ ಬದಲಾಗುತ್ತಿರುವ ಜಾಗತಿಕ ವಿದ್ಯಾಮಾನಗಳು.

 ದಿನಾಂಕ ಮಾರ್ಚ 7 ತಾರೀಕಿನಂದು ಅಮೇರಿಕಾವು ಇರಾನಿನ ಮೇಲೆ  ಅತ್ಯಂತ ಕಠಿಣ ಕ್ರಮವನ್ನು ತೆಗೆದು ಕೊಳ್ಳುವುದಾಗಿ ಎಚ್ಚರಿಸಿತ್ತು. ಈ ವಾದ ಅಣುಬಾಂಬನ್ನು ಇರಾನಿನ ಮೇಲೆ ಹಾಕುವುದಾಗಿತ್ತು. ಆದರೆ ಇರಾನಿನಲ್ಲಿ ಆಗಲೇ ರಹಸ್ಯವಾಗಿ ಶೇಖರಿಸಿಟ್ಟಿರುವ ಉತ್ತರಕೊರಿಯಾದ ಹೊಸಾಂಗ್ ಖಂಡಾಂತರ ಕ್ಷಿಪಣಿಗಳು, ರಶ್ಯಾ ಸರಬರಾಜು ಮಾಡಿದ ಸತಾನ್ ಕ್ಷಿಪಣಿಗಳು ಮತ್ತು ಇರಾನಿನಲ್ಲಿ ಅಣು ಬಾಂಬ್ ಇದೆ ಎಂಬ ಬಗ್ಗೆ ಗಟ್ಟಿಯಾಗಿ ಹರಿದಾಡುತ್ತಿರುವ ಗುಮಾನಿಯು ಅಮೇರಿಕಾವನ್ನು ಈ ಯತ್ನದಿಂದ ಹಿಂದೆ ಸರಿಯುವಂತೆ ಮಾಡಿತು. 

ಇರಾನಿನ ಅಸ್ಮಿತೆಯನ್ನು ಕಾಪಾಡಲು ಇರಾನಿನ ಜನತೆಯ  ಖಂಡಿತವಾಗಿಯು ಪರಾಕ್ರಮದಿಂದ ಹೋರಾಡಿ ಜೀವತ್ಯಾಗವನ್ನು ಮಾಡುತ್ತಾರೆ.  ಇರಾನಿನಲ್ಲಿರುವ ತೈಲ, ಅನಿಲ ಮತ್ತು ಖನಿಜ ಸಂಪತ್ತುಗಳು ಇರಾನು ಕಾಪಾಡಿಕೊಳ್ಳುತ್ತದೆ. ಅಮೇರಿಕದ ಈಗ ಇರುವ ಹಂತದಿಂದ ಮುಂದೆ ಹೋಗಿ ಹೆಚ್ಚಿನ ಶಕ್ತಿ-ಸಾಮರ್ಥ್ಯವನ್ನು ಪ್ರದರ್ಶಿಸಲು ಆಗದಿದ್ದಲ್ಲಿ ಇರಾನ್ ಅಮೇರಿಕದ ಮುಂದೆ ಪ್ರಬಲ ಶಕ್ತಿಯಾಗಿ ಬೆಳೆಯುತ್ತದೆ.  ಮದ್ಯಪ್ರಾಚ್ಯದಲ್ಲಿ ಇರಾನನ್ನು ಮತ್ತೆ ಕಡೆಗಣಿಸಲು ಸಾಧ್ಯವಿಲ್ಲದಂತಹ ಪರಿಸ್ಥಿತಿ ನಿರ್ಮಾಣವಾಗುತ್ತದೆ. ಆದರೆ ಈ ಪರಿಸ್ಥಿತಿಯನ್ನು ಯಾರೂ ಇಚ್ಚಿಸುವುದಿಲ್ಲ.  ಹಾಗೇ ಆದರೇ ಅದಕ್ಕೆ ಅಮೇರಿಕ ಮತ್ತು ಇಸ್ರೇಲ್ ದೇಶಗಳ ದುಸ್ಸಾಹಸಗಳೇ ಕಾರಣ. ಈ ಸಂದರ್ಭವನ್ನು ಚೀನಾ ಮತ್ತು ರಶ್ಯಾ ಬಳಸಿಕೊಂಡು ಇರಾನಿನ ಬೆನ್ನಿಗೆ ನಿಂತಿದೆ. ಇದು ಇರಾನಿಗರ ಮೇಲೆ ಅಭಿಮಾನದಿಂದಾಗಿ ಅಲ್ಲ ಬದಲಾಗಿ ಇರಾನಿನಲ್ಲಿರುವ ಅಪಾರವಾದ ಸಂಪತ್ತಿನಲ್ಲಿ ತಮ್ಮ ತಮ್ಮ ಪಾಲನ್ನು ಖಾತ್ರಿ ಮಾಡಿಕೊಳ್ಳುವುದಕ್ಕಾಗಿದೆ.!

ಕರೀಂ ರಾವ್ ತರ್ – ಇಷ್ಟವಾದಲ್ಲಿ ಶೇರ್ ಮಾಡಿ.