ಸರಕಾರದ ಜಮೀನನ್ನು ಮರುವಶಕ್ಕೆ ತೆಗೆದುಕೊಳ್ಳಲು ಇಲಾಖೆ ಮುಂದಾಗಿದೆ!
ಮೈಸೂರು ಜಿಲ್ಲೆ ಹುಣಸೂರು ತಾಲೂಕು ಅಂಕನಹಳ್ಳಿ ಗ್ರಾಮದಲ್ಲಿರುವ ಸರ್ವೆ ನಂಬರ್ 90ರಲ್ಲಿ 3 ಏಕರೆ ವಿಸ್ತೀರ್ಣದ ಜಮೀನನ್ನು ಎಸ್. ಎಸ್. ಯಶೋಧ ಎಂಬವರ ಹೆಸರಿಗೆ ಅಧಿಕಾರಿಗಳು ಅಕ್ರಮ ಮಂಜೂರು ಮಾಡಿರುವ ಬಗ್ಗೆ ವಾಕಿಟಾಕಿ.ನ್ಯೂಸ್ ಸುದ್ಧಿ ಜಾಲವು ಸರಕಾರಿ ಜಮೀನನ್ನು ಅಕ್ರಮ ಮಂಜೂರಾಗಿರುವ ಬಗ್ಗೆ ಸಾರ್ವಜನಿಕರ ಗಮನಕ್ಕೆ ತರುವಲ್ಲಿ ಯಶಸ್ವಿಯಾಗಿದೆ.ಈ ಜಮೀನಿನ ಅಕ್ರಮ ಮಂಜೂರಾತಿಯನ್ನು ರದ್ದುಪಡಿಸಲು ಸರಕಾರದ ವಶಕ್ಕೆ ತೆಗೆದುಕೊಳ್ಳಲು ರೆವಿನ್ಯೂ ಅಧಿಕಾರಿಗಳು ಮುಂದಾಗಿದ್ದಾರೆ.
ಸರಕಾರದ ಜಮೀನನ್ನು ಮರುವಶಕ್ಕೆ ತೆಗೆದುಕೊಳ್ಳಲು ಇಲಾಖೆ ಮುಂದಾಗಿದೆ!
ಸರಕಾರಿ ಗೋಮಾಳ, ಖರಾಬು ಜಮೀನುಗಳನ್ನು ನಾಜೂಕಾಗಿ ಖಾತೆ ವಗೈರೆಗಳನ್ನು ಮಾಡಿಕೊಂಡು ಸ್ವಾಧೀನ ಪಡಿಸಿಕೊಂಡು ಕೋಟ್ಯಾಂತರ ರೂಪಾಯಿ ಮೌಲ್ಯದ ಜಮೀನುಗಳನ್ನು ಕಬಳಿಸುತ್ತಿರುವ ತಂಡಗಳು ಮೈಸೂರಿನಲ್ಲಿ ಸಕ್ರಿಯರಾಗುತ್ತಿರುವ ಬಗ್ಗೆ ಈ ಸುದ್ಧಿ ಜಾಲದಲ್ಲಿ ಈ ಹಿಂದೆ ಬರೆಯಲಾಗಿತ್ತು.
ಅಂಕನಹಳ್ಳಿ ಗ್ರಾಮದಲ್ಲಿರುವ ಸರ್ವೆ ನಂಬರ್ 90ರಲ್ಲಿ ಸುಮಾರು 6 ಏಕರೆ ಸರಕಾರಿ ದರಖಾಸ್ತು ಪೈಕಿ ಸುಮಾರು 3 ಏಕರೆ ವಿಸ್ತೀರ್ಣದ ಜಮೀನನ್ನು ಎಸ್. ಎಸ್. ಯಶೋಧ ಎಂಬವರ ಹೆಸರಿಗೆ ಅಧಿಕಾರಿಗಳು ಮಂಜೂರು ಮಾಡಿ ಖಾತೆ ವಗೈರೆ ಮಾಡಿಕೊಟ್ಟು ಸರಕಾರದ ಸಂಭಳದ ಋಣವನ್ನು ಸರಿಯಾಗಿಯೇ ತೀರಿಸಿಕೊಂಡಿದ್ದರು.
ಈಗ ಈ ಜಮೀನಿನ ಅಕ್ರಮ ಮಂಜೂರಾತಿಯನ್ನು ರದ್ದುಪಡಿಸಲು ರೆವಿನ್ಯೂ ಅಧಿಕಾರಿಗಳು ಜಿಲ್ಲಾಧಿಕಾರಿಗಳಿಗೆ ವರದಿಯನ್ನು ಸಲ್ಲಿಸಿಕೊಂಡಿದ್ದಾರೆ. ರೆವಿನ್ಯೂ ಇಲಾಖೆಯು ಎಚ್ಚೆತ್ತುಕೊಂಡು ಸರಕಾರದ ಜಮೀನನ್ನು ಮರು ವಶಕ್ಕೆ ತೆಗೆದುಕೊಳ್ಳುವ ಕ್ರಮವನ್ನು ಕೈಗೊಂಡಿದೆ. ಈ ವಾಕಿಟಾಕಿ.ನ್ಯೂಸ್ ಸುದ್ಧಿ ಜಾಲವು ಸರಕಾರಿ ಜಮೀನನ್ನು ಅಕ್ರಮ ಮಂಜೂರಾಗಿರುವ ಬಗ್ಗೆ ಸಾರ್ವಜನಿಕರ ಗಮನಕ್ಕೆ ತರುವಲ್ಲಿ ಯಶಸ್ವಿಯಾಗಿದೆ. ಕೇವಲ ಖಾತೆ ರದ್ಧತಿ ಮಾಡಿದರೇ ಸಾಲದು ಈ ಅಕ್ರಮಕ್ಕೆ ನೆರವು ನೀಡಿದ ರೆವಿನ್ಯೂ ಅಧಿಕಾರಿಗಳ ಮೇಲೆಯೂ ಕಾನೂನು ಕ್ರಮ ಜರುಗಿಸಬೇಕು.
ಬಿಳಿಕೆರೆಯ ಅಂಕನಹಳ್ಳಿಯಲ್ಲಿರುವ ಜಮೀನಿನ ಖಾತೆ ರದ್ಧತಿಯಾಗಿದೆ. ಆದರೆ ಕೊಡಗು ಜಿಲ್ಲೆಯಲ್ಲಿಯೂ ಇದೇ ರೀತಿ ಎಸ್. ಎಸ್. ಯಶೋಧ ಇವರು ಸೋಮವಾರಪೇಟೆ ತಾಲೂಕು ಕೊಡ್ಲಿಪೇಟೆಯ ಶಿರಂಗಾಲದಲ್ಲಿ ಸರ್ವೆ ಸಂಖ್ಯೆ: 33ರಲ್ಲಿ 1.ಏಕರೆ 23 ಗುಂಟೆ, ಸರ್ವೆ ನಂ. 38 ರಲ್ಲಿ 88 ಸೆಂಟು ಹಾಗೂ ಕೊಡ್ಲಿಪೇಟೆಯ ಹಳ್ಳಿಬೈಲು ಗ್ರಾಮದ ಸರ್ವೆ ನಂಬರ್ 19/5ರಲ್ಲಿ 38 ಸೆಂಟು ಒಟ್ಟು ಸುಮಾರು 3 ಏಕರೆ ಜಮೀನನ್ನು ಅಕ್ರಮ ದರಖಾಸ್ತು ಮಂಜೂರು ಮಾಡಿಸಿಕೊಂಡಿದ್ದಾರೆ. ಸರಕಾರಿ ದರಖಾಸ್ತು ಜಮೀನುಗಳನ್ನು ಮಂಜೂರು ಮಾಡಿಸಿಕೊಂಡಿರುವ ಬಗ್ಗೆ ವಿಚಾರಣೆಯನ್ನು ನಡೆಸಲು ಕೋರಲಾಗಿತ್ತು. ರೆವಿನ್ಯೂ ಅಧಿಕಾರಿಗಳೊಂದಿಗೆ ಸೇರಿಕೊಂಡು ನಕಲಿ ದಾಖಲಾತಿಗಳನ್ನು ಸೃಷ್ಟಿಸಿ ಸರಕಾರದ ಜಮೀನುಗಳನ್ನು ಕಬಳಿಸುತ್ತಿರುವ ಬಗ್ಗೆ ವಿಚಾರಣೆಯನ್ನು ನಡೆಸಿ ತಪ್ಪಿತಸ್ತರ ಮೇಲೆ ಕಾನೂನು ಕ್ರಮ ಕೈಗೊಳ್ಳಲು ಇಲಾಖೆಯು ಮುಂದಾಗುತ್ತದೆ ಎಂಬ ಆಶಯವನ್ನು ಇಟ್ಟು ಕೊಂಡಿದ್ದೇವೆ.
# ಮಂಜುನಾಥ್ ಆರಾಧ್ಯ


