ಮತಗಳ್ಳತನದ ಆರೋಪ:ನಾಲ್ಕು ರಾಜ್ಯಗಳ ಚುನಾವಣಾ ವೆಬ್ ಸೈಟ್ ಬಂದ್ ಮಾಡಿದ ಆಯೋಗ.
ಕಾಂಗ್ರೆಸ್ ಮತಗಳ್ಳತನದ ಆರೋಪ ಮಾಡುತ್ತಿದ್ದಂತೆ ಚುನಾವಣಾ ಆಯೋಗವು ಮಹಾರಾಷ್ಟ್ರ, ಮಧ್ಯಪ್ರದೇಶ, ಬಿಹಾರ ಮತ್ತು ರಾಜಸ್ಥಾನದ ಚುನಾವಣಾ ವೆಬ್‌ಸೈಟ್ ಅನ್ನು ಬಂದ್ ಮಾಡಿದೆ.
ರಾಹುಲ್ ಗಾಂಧಿ ಆರೋಪಕ್ಕೆ ಪ್ರತಿಯಾಗಿ ಆಯೋಗವು ಈ ಕುರಿತು ಪ್ರಮಾಣ ಪತ್ರ ಸಲ್ಲಿಸುವಂತೆ ಕೇಳಿಕೊಂಡಿದೆ.ಸಂಸತ್ತಿನಲ್ಲಿ ಸಂವಿಧಾನ ಹಿಡಿದು ಪ್ರಮಾಣ ವಚನ ಸ್ವೀಕರಿಸಿದ್ದೇನೆ ಎಂದು ರಾಹುಲ್ ಗಾಂಧಿ ಇದಕ್ಕೆ ತೀಕ್ಷ್ಣವಾಗಿ ಪ್ರತಿಕ್ರಿಯಿಸಿದ್ದಾರೆ.
ಆಯೋಗವನ್ನು ಮತದಾರರು ಆರೋಪದ ಕುರಿತಂತೆ ಪ್ರಶ್ನಿಸುತ್ತಿದ್ದಂತೆ ಅದು ನಾಲ್ಕು ರಾಜ್ಯಗಳ ವೆಬ್ ಸೈಟ್ ಅನ್ನು ಬಂದ್ ಮಾಡಿದೆ ಎಂದು ಲೇವಡಿ ಮಾಡಿದರು.
ಮಹಾರಾಷ್ಟ್ರದ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಮೈತ್ರಿಗೆ ಉತ್ತಮ ಸ್ಥಾನ ಲಭಿಸಿತ್ತು.ನಂತರ ನಡೆದ ಅಲ್ಲಿನ ವಿಧಾನಸಭೆ ಚುನಾವಣೆಯಲ್ಲಿ ಒಂದು ಕೋಟಿ ಹೊಸ ಮತದಾರರ ಸೇರ್ಪಡೆಯಿಂದಾಗಿ ಬಿಜೆಪಿ ಮೈತ್ರಿ ಕೂಟ ಬಹುಮತ ಪಡೆಯಿತು.ಈ ಸೇರ್ಪಡೆ ಹೇಗಾಯಿತು?ಈ ಎರಡೂ ಚುನಾವಣೆಯಲ್ಲಿ ಕಾಂಗ್ರೆಸ್ ಪಡೆದ ಮತ ಪ್ರಮಾಣದಲ್ಲಿ ಯಾವುದೇ ಬದಲಾವಣೆ ಆಗಿರಲಿಲ್ಲ.ಈ ರೀತಿಯಾಗಿ ಹೊಸ ಮತದಾರರ ಸೇರ್ಪಡೆಯಾದ ರಾಜ್ಯದಲ್ಲೆಲ್ಲಾ ಬಿಜೆಪಿ ಗೆದ್ದಿದೆ ಎಂದವರು ಆರೋಪಿಸಿದ್ದಾರೆ.


