ಅಮೇರಿಕ ಮತ್ತು ಇರಾನ್ ನಡುವಣ ಯುದ್ಧ ಮುಗಿಯುತ್ತದಾ? ಭಾಗ-4
ರಷ್ಯಾ ಮತ್ತು ಉಕ್ರೇನಿನ ಯುದ್ಧ ಆರಂಭವಾಯಿತು. ಎರೆಡು ದಿವಸದಲ್ಲಿ ಯುದ್ಧ ಮುಗಿಸಲು ಯೋಜನೆಯನ್ನು ಹಾಕಿಕೊಂಡಿದ್ದ ರಶ್ಯಾ ಅಮೇರಿಕವು ಉಕ್ರೇನಿಗೆ ಬೆಂಬಲ ನೀಡಿದ ಕಾರಣ ಯುದ್ಧವು ಎರೆಡು ವರ್ಷಗಳ ಕಾಲ ದಾಟಿ ಯುದ್ಧ ಮುಂದುವರಿಯುತ್ತಿದೆ. ಇದು ಅಮೇರಿಕ ಮತ್ತು ರಶ್ಯಾದ ನಡುವೆ ಬಿನ್ನಾಭಿಪ್ರಾಯಕ್ಕೆ ಕಾರಣವಾಯಿತು. ಈ ಯುದ್ಧದಲ್ಲಿ ಇರಾನ್ ನಿರ್ಮಿಸಿದ್ದ ಶೆಹದ್ ಡ್ರೋಣ್ ಗಳನ್ನು ರಶ್ಯಾಕ್ಕೆ ಪೂರೈಕೆ ಮಾಡಿತು. ಇದರಿಂದಾಗಿ ರಶ್ಯವು ಮತ್ತು ಇರಾನಿನ ಸಂಬಂಧ ಮತ್ತಷ್ಟು ನಿಕಟವಾಗ ತೊಡಗಿತು. ಇದರಿಂದಾಗಿ ವ್ಯಗ್ರಗೊಂಡ ಅಮೇರಿಕ ಇರಾನನ್ನು ನಿರ್ನಾಮ ಮಾಡಲು ಶಪಥಮಾಡಿತು.
ಪಶ್ಚಿಮ ಏಷ್ಯಾ ದೇಶಗಳ ಯಾವುದೇ ರಾಜಕೀಯ ಮತ್ತು ಸಾಮಾಜಿಕ ಚಟುವಟಿಕೆಗಳಲ್ಲಿ ಅಮೇರಿಕಾದ ಸಿಐಎ ಮತ್ತು ಇಸ್ರೇಲಿನ ಮೊಸ್ಸಾದ್ ಏಜೆಂಟರುಗಳ ಗಾಢ ಹಸ್ತಕ್ಷೇಪವಿರುತ್ತದೆ. ಸರಕಾರವನ್ನು ದುರ್ಬಲಗೊಳಿಸಲು ಮತ್ತು ಸಮಾಜದಲ್ಲಿ ನಾಗರೀಕ ಕ್ಷೋಭೆಯುಂಟು ಮಾಡುವ ರಹಸ್ಯ ಬೇಹುಗಾರಿಕೆಯನ್ನು ನಡೆಸುತ್ತದೆ. ರಾಜ ಮತ್ತು ರಾಜನ ಆಡಳಿತದ ಮೇಲೆ ಈ ಬೇಹುಗಾರಿಕಾ ಸಂಸ್ಥೆಗಳು ಇವುಗಳು ನಿಗಾ ಇಟ್ಟುಕೊಂಡಿರುತ್ತದೆ. ಗಲ್ಫ್ ರಾಷ್ಟ್ರಗಳಲ್ಲಿ ಅಧಿಕಾರದಲ್ಲಿರುವ ರಾಜಪ್ರಭುತ್ವದ ಲಫಂಗದಾಸರುಗಳು ಅಮೇರಿಕ ಹೇಳುವುದನ್ನು ಕೇಳುತ್ತಾರೆ, ಇಲ್ಲವೇ ಹೇಳಿದಂತೆಯೇ ನಡೆಯುತ್ತಾರೆ. ಒಂದು ರೀತಿಯಲ್ಲಿ ರಾಜಕೀಯ ಗುಲಾಮಗಿರಿ! ಆದರೆ ಇರಾನ್ ಒಂದು ತಡೆಗಲ್ಲಾಗಿ ಕಾಣಿಸಿತು. ತೈಲ್ ಉತ್ಪಾದನೆ, ಮಾರಾಟ, ಅವುಗಳ ಮೇಲಿನ ಹಕ್ಕು ಸ್ವಾಧೀನ ಹೀಗೆ ಯಾವ ವಿಚಾರದಲ್ಲಿಯೂ ಅಮೇರಿಕದ ಕುತಂತ್ರ ವ್ಯಾಪಾರಿ ಧೋರಣೆಯು ಇರಾನಿನ ಸಂಸ್ಕಾರದ ಜೊತೆಗೆ ಹೊಂದಾಣಿಕೆಯಾಗುತ್ತಿರಲಿಲ್ಲ.
ಇರಾನಿನ ಖೊಮೇನಿಯ ಆಡಳಿತ ಮಾತ್ರ ಯಾವುದೇ ಕಾರಣಕ್ಕೂ ಅಮೇರಿಕ ಒತ್ತಾಸೆಗೆ ಮಣಿಯಲೇ ಇಲ್ಲ. ಇರಾನಿನಲ್ಲಿ ಅಲಿ ಖೊಮೇನಿಯು ಅಧಿಕಾರ ವಹಿಸಿದ ಕೂಡಲೇ ತನ್ನದೇ ಆದ ‘ಇಸ್ಲಾಮಿಕ್ ರೆವಲ್ಯೂಷನರಿ ಗಾರ್ಡ್ ಕಾರ್ಪ್ಸ್’ (IRGC) ದಳವನ್ನು ಎಂಬ ದಳವನ್ನು ರಚಿಸಿದರು ರೊಹಲ್ಲಾ ಖಮಿನಿಯವರ ಹತ್ಯಗೆ ಪ್ರಯತ್ನ ಪಟ್ಟಿದ್ದ ಷಾ ಪೆಹ್ಲಾವಿಯ ಸರಕಾರದ ಸೇನೆಯನ್ನು ನಂಬಲಿಲ್ಲ. ಷಾ ಪೆಹ್ಲಾವಿಯ ಅಧೀನ ಸರಕಾರದ ಸೇನೆಯು ಅಮೇರಿಕ ಪರ ನಿಲುವು ಹೊಂದಿದ್ದ ಕಾರಣ ಖಮೇನಿಯು ತನ್ನ ಹೊಸ ಸರ್ಕಾರಕ್ಕೆ ನಿಷ್ಠರಾಗಿರುವ ಅರೆಸೈನಿಕ ಪಡೆಗಳನ್ನು ಒಟ್ಟುಗೂಡಿಸಿ ವಿಶೇಷವಾದ ‘ಇಸ್ಲಾಮಿಕ್ ರೆವಲ್ಯೂಷನರಿ ಗಾರ್ಡ್ ಕಾರ್ಪ್ಸ್’ (IRGC) ಎಂಬ ದಳವನ್ನು ರಚಿಸಿ ಇರಾನನ್ನು ಸಂರಕ್ಷಿಸುವ ಜವಾಬ್ದಾರಿಯನ್ನು ನೀಡಿತು. ಅಲ್ಲಿಂದೀಚೆಗೆ ಈ ‘ಇಸ್ಲಾಮಿಕ್ ರೆವಲ್ಯೂಷನರಿ ಗಾರ್ಡ್ ಕಾರ್ಪ್ಸ್’ (IRGC) ಪಡೆಯು ಖಮೇನಿ ನಿಷ್ಠ ನಂಬಿಕಸ್ಥರ ದಳವಾಗಿ ಕಾರ್ಯನಿರ್ವಹಿಸುತ್ತಿದೆ. ಇರಾನಿನಲ್ಲಿ ಸೇನೆಯು ನಿರ್ವಹಿಸುವ ಎಲ್ಲಾ ಕಾರ್ಯಗಳನ್ನು ಐಆರ್‌ಜಿಸಿಯು ನಿಯಂತ್ರಿಸುತ್ತದೆ. ಇರಾನಿನಲ್ಲಿರುವ ಮೂಲ ಸೇನೆಯು ಮಾತ್ರ ಒಂದು ಮೀಸಲು ಪಡೆಯ ಜವಬ್ದಾರಿಯನ್ನಷ್ಟೇ ನಿರ್ವಹಿಸುತ್ತದೆ.
‘ಇಸ್ಲಾಮಿಕ್ ರೆವಲ್ಯೂಷನರಿ ಗಾರ್ಡ್ ಕಾರ್ಪ್ಸ್’ (IRGC) ಪಡೆಯು ಇರಾನಿನ ಇಸ್ಲಾಮಿಕ್ ಗಣರಾಜ್ಯದ ಸಾರ್ವಭೌಮತ್ವ ಮತ್ತು ಸಂವಿಧಾನಿಕ ಸಮಗ್ರತೆಯನ್ನು ರಕ್ಷಿಸುವ ಮೂಲಭೂತ ಸೈದ್ಧಾಂತಿಕ ಸೇನೆಯ ಪಾತ್ರವನ್ನು ನಿರ್ವಹಿಸುತ್ತಿದೆ. ಅಲ್ಲದೇ ಖಮೇನಿಯ ನಿಷ್ಠಾವಂತ ಸೇನಾಪಡೆಯಾಗಿದೆ. ಇರಾನಿನ ರಾಜಕೀಯ, ಸಾಮಾಜಿಕ, ಆರ್ಥಿಕ ವ್ಯವಸ್ಥೆಯ ಮೇಲೆ ತೀವ್ರ ಪ್ರಭಾವವನ್ನು ಹೊಂದಿದ್ದು ಸಮಾಜದ ಬಹುತೇಕ ಎಲ್ಲಾ ಅಂಶಗಳಲ್ಲಿಯು ನೇರ ಪಾತ್ರವನ್ನು ವಹಿಸುತ್ತದೆ. ಇರಾನಿನಲ್ಲಿ ಐಆರ್‌ಜಿಸಿ ಪಡೆಯ ಅನುಮತಿ ಮತ್ತು ಒಪ್ಪಿಗೆಯಿಲ್ಲದ ಯಾವುದೇ ಚಟುವಟಿಕೆಯು ನಡೆಯುವಂತಿಲ್ಲ. ಅಷ್ಟು ಮಾತ್ರ ಅಪರಿಮಿತ ಅಧಿಕಾರ ಮತ್ತು ಶಕ್ತಿಯನ್ನು ಅದು ಹೊಂದಿದೆ.
ಇಸ್ರೇಲ್ ಅಣ್ವವಸ್ತ್ರವನ್ನು ಹೊಂದಿದ್ದರೂ ಇರಾನ್ ಅಣ್ವಸ್ತ್ರವನ್ನು ಹೊಂದಲೇಬಾರದೆಂದು ಅಮೇರಿಕ ವಾದಿಸ ತೊಡಗಿತು. ಇರಾನ್ ಅಣುಬಾಂಬ್ ತಯಾರಿಸಲು ಅಗತ್ಯವಾಗಿ ಬೇಕಾಗಿರುವ ಯುರೇನಿಯಂ ಅನ್ನು ರಹಸ್ಯವಾಗಿ ತಯಾರಿಸುತ್ತಿದೆಯೆಂದು ಆರೋಪಿಸಿತು. 47 ವರ್ಷಗಳಿಂದಲೂ ಇರಾನಿನ ಮೇಲೆ ರಾಜಕೀಯ ದಿಗ್ಬಂಧನ ಮುಂದುವರಿಸಿ ಇರಾನಿನ ವಿದೇಶಿ ಆಸ್ತಿಪಾಸ್ತಿಗಳನ್ನು ಮುಟ್ಟಗೋಲು ಹಾಕಿಕೊಂಡಿತು. ರಾಜಕೀಯ ನಾಯಕರ ಹತ್ಯೆಗಳನ್ನು ಮಾಡಿ ಆಂತರಿಕ ದಂಗೆಗಳಿಗೆ ಪ್ರಚೋಧಿಸಿತು. ಅಂತರಾಷ್ಟ್ರೀಯ ವ್ಯಾಪಾರವನ್ನು ನಿಷೇಧಿಸಿದೆ. ತಂತ್ರಜ್ಞಾನಗಳ ವರ್ಗಾವಣೆಯನ್ನು ತಡೆಹಿಡಿಯಿತು. ಇದರಿಂದಾಗಿ ಇರಾನ್ ಆರ್ಥಿಕವಾಗಿ ಸಂಕಷ್ಟಕ್ಕೀಡಾಯಿತು. ಇರಾನ್ ಆರ್ಥಿಕತೆಯು ತೀವ್ರವಾಗಿ ಕುಸಿಯಿತು. ತೈಲ ರಫ್ತಿಗೆ ಅಡಚಣೆ, ದಿಗ್ಬಂಧನಗಳ ಪರಿಣಾಮವಾಗಿ ಅಗತ್ಯ ವಸ್ತುಗಳ ಬೆಲೆ ಏರಿಕೆ, ನಿರುದ್ಯೋಗ ಮತ್ತು ನಾಗರಿಕರ ಜೀವನಮಟ್ಟ ಕುಸಿದು ಬಿತ್ತು. ಆಹಾರ ಔಷಧಿಗಳಿಗಾಗಿ ಇರಾನ್ ಪರಿತಪಿಸುವಂತಾಯಿತು. ಈ ದಿಗ್ಬಂಧನಗಳನ್ನು ವಿಧಿಸಿ ಇರಾನ್ ಅನ್ನು ಅಂತರರಾಷ್ಟ್ರೀಯ ಮಟ್ಟದಲ್ಲಿ ಪ್ರತ್ಯೇಕಿಸಿ, ಅದರ ಸೇನಾ ಮತ್ತು ಆರ್ಥಿಕ ಸಾಮರ್ಥ್ಯವನ್ನು ಕುಗ್ಗಿಸುವ ಉದ್ದೇಶವನ್ನು ಅಮೇರಿಕ ಹೊಂದಿತ್ತು. ಹೀಗೆ ಹತ್ತು ಹಲವು ಕ್ರಮಗಳನ್ನು ಕೈಗೊಂಡರೂ ಇರಾನ್ ಯಾವುದೇ ಕಾರಣಕ್ಕೂ ತನ್ನ ನಿಲುವಿನಲ್ಲಿ ಸಡಿಲುಗೊಳಲಿಲ್ಲ ಅಮೇರಿಕದ ಒತ್ತಾಸೆಗೆ ಮಣಿಯಲೇ ಇಲ್ಲ. ಅಮೇರಿಕಕ್ಕೆ ಕೊಲ್ಲಿ ದೇಶಗಳಲ್ಲಿರುವ ಹಿತಾಸಕ್ತಿಗೆ ಇರಾನ್ ಒಂದು ಕಂಟಕ ದೇಶವಾಗಿ ಪರಿಣಮಿಸಿತು.
ಇರಾನಿನ ಸರ್ವೊಚ್ಛ ನಾಯಕ ಅಲಿ ಖೊಮೆನಿ ಧರ್ಮಗುರು ಮಾತ್ರವಲ್ಲ ಚತುರ ರಾಜಕೀಯ ನೀತಿಜ್ಞರಾಗಿದ್ದರು. ಅಮೇರಿಕಾದ ಧಾಷ್ಟ್ಯಕ್ಕೆ ಒಳಗಾಗದೇ ಎಲ್ಲಾ ಸಂಕಷ್ಟಗಳನ್ನು ಮೆಟ್ಟಿ ನಿಂತು ಇರಾನಿನ ಸಾರ್ವಭೌಮತೆಯನ್ನು ಮತ್ತು ಸ್ವಾಭಿಮಾನವನ್ನು ಕಾಪಾಡುವ ಮನೋಧೈರ್ಯವನ್ನು ಇರಾನಿಗೆ ಕಲಿಸಿದರು.
ಆದರೆ ಇರಾನಿಗೆ ಈ ಸಮಸ್ಯೆಗಳಿಂದಾಗಿ ಜರ್ಜರಿತವಾಗಿತ್ತು. ಆಂತರಿಕವಾಗಿ ತೀವ್ರ ಆರ್ಥಿಕ ಸಂಕಷ್ಟವನ್ನು ಎದುರಿಸ ತೊಡಗಿತು. ವಿಧೇಶಿ ವಿನಿಮಯವಂತೂ ನೆಲಕಚ್ಚಿತ್ತು. ಒಂದು ಯುಎಸ್ ಡಾಲರ್ ನಮ್ಮ ದೇಶದಲ್ಲಿ 90 ರೂಪಾಯಿ ಇದ್ದರೆ ಇರಾನಿನಲ್ಲಿ ಸರಿಸುಮಾರು 1.42 ಮಿಲಿಯನ್ ರಿಯಾಲ್‌ಗಳಿಗೆ ಸಮಾನವಾಗಿದೆ! ಇರಾನ್ ತೀವ್ರ ಆರ್ಥಿಕ ಮತ್ತು ರಾಜಕೀಯ ಪ್ರಕ್ಷುಬ್ಧತೆಯನ್ನು ಎದುರಿಸತೊಡಗಿತು. ಅಂತರಾಷ್ಟ್ರೀಯ ವ್ಯಪಾರವನ್ನು ನಡೆಸದಂತೆ ದಿಗ್ಬಂಧನ ವಿಧಿಸಿದಾಗ ಇರಾನ್ ತನ್ನ ತೈಲವನ್ನು ಚೀನಾ ದೇಶಕ್ಕೆ ಕೊಟ್ಟು ಅಗತ್ಯ ವಸ್ತುಗಳನ್ನು ಖರೀಧಿ ಮಾಡಿಕೊಂಡಿತು. ರಷ್ಯಾ ಮತ್ತು ಉತ್ತರ ಕೊರಿಯಾಕ್ಕೆ ತೈಲ ಪೂರೈಸಿ ಯಂತ್ರ ತಂತ್ರಗಾರಿಕೆಯನ್ನು ಪಡೆದುಕೊಂಡಿತು. ಭಾರತಕ್ಕೆ ತೈಲ ಸರಬರಾಜು ಮಾಡಿ ಆಹಾರ ಖರೀಧಿಸ ತೊಡಗಿತು. ಮೆಲ್ಲಗೆ ಇರಾನ್ ಆರ್ಥಿಕ ದಿಗ್ಬಂಧನದ ನಡುವೆ ರಶ್ಯಾದ ನೆರವಿನಿಂದ ಪರಮಾಣು ಶಕ್ತಿ ಉತ್ಪಾಧನೆಯಲ್ಲಿ ತೊಡಗಿತು. ಇರಾನ್‌ನ ಅಣು ವಿಜ್ಞಾನಿಗಳ ಕಾರ್ಯಾಚರಣೆಯನ್ನು ಯಶಸ್ವಿಗೊಳಿಸ ತೊಡಗಿದರು.
2015ರಲ್ಲಿ ಅಮೇರಿಕ ಇರಾನ್ ಜತೆ ಒಂದು ಒಪ್ಪಂದ ಮಾಡಿಕೊಂಡು ಅಣ್ವಸ್ತ್ರ ಅಭಿವೃದ್ಧಿ ಪಡಿಸುವುದನ್ನು ನಿಲ್ಲಿಸಲು ಸೂಚಿಸಿತು. ಈ ಸಮಯದಲ್ಲಿ ಇರಾನ್ ತನ್ನ ಸೈನ್ಯವನ್ನು ಬಲಪಡಿಸಿಕೊಂಡಿತು. ಭೂಗರ್ಭದಲ್ಲಿ ರಹಸ್ಯ ಮಿಸೈಲ್ ಸಿಟಿಗಳನ್ನು ನಿರ್ಮಿಸತೊಡಗಿತು. ತನ್ನ ಸೈನ್ಯ ಮತ್ತು ಶಸ್ತ್ರಾಸ್ತ್ರಗಳನ್ನು ಯುದ್ಧೋಪಕರಣಗಳನ್ನು ಆಧುನಿಕರಣಗೊಳಿಸಿ ಮತ್ತಷ್ಟು ಬಲಪಡಿಸಿತು. ಆರ್ಥಿಕ ದಿಗ್ಬಂಧನದಿಂದಾಗಿ ಇರಾನಿಗೆ ಬಲವಾದ ವಾಯುಸೇನೆಯಿಲ್ಲದ ಕಾರಣ ಕ್ಷಿಪಣಿಗಳ ತಯಾರಿಕೆಗೆ ಆಧ್ಯತೆ ನೀಡಿತು. ಇರಾನಿನ ಈ ಬೆಳವಣಿಗೆಗೆ ರಷ್ಯಾ, ಚೀನಾ ಮತ್ತು ಉತ್ತರ ಕೊರಿಯಾ ದೇಶಗಳು ನೆರವು ನೀಡಿದವು. ಕ್ರಮೇಣ ಚೀನಾವು ಇರಾನಿಗೆ ಬೆಂಬಲ ನೀಡಲು ಆರಂಭಿಸಿತು. ಮೂಲ ಸೌಕರ್ಯಗಳ ನಿರ್ಮಾಣಕ್ಕೆ ಚೀನಾವು 40 ಲಕ್ಷ ಕೋಟಿ ರೂಪಾಯಿಗಳ ಹೂಡಿಕೆಯನ್ನು ಮಾಡಿದೆ. ರಶ್ಯಾ 10 ಲಕ್ಷ ಕೋಟಿ ರೂಪಾಯಿಗಳ ಹೂಡಿಕೆಯನ್ನು ಮಾಡಿದೆ. ಇದರಿಂದಾಗಿ 47 ವರ್ಷದ ದೀರ್ಘವಾದ ದಿಗ್ಬಂಧನದ ನಂತರ ಇರಾನ್ ಚೇತರಿಸ ತೊಡಗಿದೆ. ಈ ಸುಧಾರಣೆಗಳು ಅಮೇರಿಕದ ಕೆಂಗಣ್ಣಿಗೆ ಗುರಿಯಾಯಿತು.
ಇರಾನ್ ರಾಜಕೀಯವಾಗಿ ಅಮೇರಿಕದ ಜಾಗತಿಕ ಸಾಮರ್ಥ್ಯಕ್ಕೆ ಸವಾಲಾಗಿ ಬೆಳೆಯುತ್ತಿರುವಂತೆ ಕಾಣಿಸತೊಡಗಿತು. 2018ರಲ್ಲಿ ಅಮೆರಿಕದ ಟ್ರಂಪ್ ಸರಕಾರ ಹಿಂದೆ ಮಾಡಿದ್ದ ಒಪ್ಪಂದವನ್ನು ರದ್ಧುಗೊಳಿಸಿ ಮತ್ತೆ ಇರಾನಿನ ಮೇಲೆ ಹೆಚ್ಚಿನ ಅನೇಕ ನಿರ್ಬಂಧಗಳನ್ನು ಹೇರಿತು. ಕಬ್ಬಿಣ, ಅಲುಮಿನಿಯಂ, ತಾಮ್ರಗಳನ್ನೂ ಖರೀಧಿಸದಂತೆ ನಿಶೇಧ ಹೇರಿತು. ಇರಾನಿನ ಐಆರ್ಜಿಸಿ ಗಾರ್ಡನ್ನು ಜಾಗತಿಕ ಭಯೋತ್ಪಾದಕ ಸಂಘಟನೆಯ ಪಟ್ಟಿಗೆ ಸೇರಿಸಿತು. ಇರಾನ್ ಇದಕ್ಕೆ ಪ್ರತಿಕಾರವಾಗಿ ನಿಧಾನವಾಗಿ ಲೆಬನಾನ್, ಪ್ಯಾಲೇಸ್ತೀನ್, ಯಮನ್ ಮುಂತಾದ ದೇಶಗಳಿಗೆ ಬೆಂಬಲ ನೀಡತೊಡಗಿತು. ಲೆಬನಾನಿನಲ್ಲಿ ಹಿಸ್ಬುಲ್ಲಾ, ಪ್ಯಾಲೇಸ್ತೀನಿನಲ್ಲಿ ಹಮಾಸ್, ಯೆಮನಿನಲ್ಲಿ ಹೂತಿ, ಸಿರಿಯಾದಲ್ಲಿ ಖುದ್ಸ್, ಗಾಜಾದಲ್ಲಿ ಇಸ್ಲಾಮಿಕ್ ಜಿಹಾದ್ ಪಡೆಗಳಿಗೆ ಬೆಂಬಲ ನೀಡತೊಡಗಿತು. ಇದು ಅಮೇರಿಕದ ಮದ್ಯಪ್ರಾಚ್ಯ ದೇಶಗಳ ರಾಜತಾಂತ್ರಿಕ ಧೋರಣೆಗೆ ವಿರುದ್ಧವಾಗಿದ್ದವು. ಇದನ್ನು ಅಮೇರಿಕಾವು ಸಹಿಸಲಿಲ್ಲ. ಇರಾನನ್ನು ಹೇಗಾದರೂ ಹಣಿಯಲು ಷಡ್ಯಂತ್ರ ರೂಪಿಸ ತೊಡಗಿತು. ಇಸ್ರೇಲಿನೊಂದಿಗೆ ಸೇರಿಕೊಂಡು ಇರಾನನ್ನು ಅಸ್ಥಿರಗೊಳಿಸುವ ಯೋಜನೆಯನ್ನು ಕಾರ್ಯರೂಪಕ್ಕೆ ತರಡೊಡಗಿದವು.
2020ರಲ್ಲಿ ಅಧ್ಯಕ್ಷ ಟ್ರಂಪ್ ಆದೇಶದಂತೆ ಕಾರ್ಯಾಚರಣೆ ನಡೆಸಿ, ಐಆರ್‌ಜಿಸಿಯ ಮೇ.ಜ.ಖಾಸಿಂ ಸೊಲೇಮಾನಿಯ ಹತ್ಯೆ ಮಾಡಿತು. ಈ ಹತ್ಯೆಗೆ ಪ್ರತೀಕಾರ ನಡೆಸುವುದಾಗಿ ಇರಾನ್ ಪ್ರಮಾಣ ಮಾಡಿತು. ಈ ಮದ್ಯೆ ರಷ್ಯಾ ಮತ್ತು ಉಕ್ರೇನಿನ ಯುದ್ಧ ಆರಂಭವಾಯಿತು. ಎರೆಡು ದಿವಸದಲ್ಲಿ ಯುದ್ಧ ಮುಗಿಸಲು ಯೋಜನೆಯನ್ನು ಹಾಕಿಕೊಂಡಿದ್ದ ರಶ್ಯಾ ಅಮೇರಿಕವು ಉಕ್ರೇನಿಗೆ ಬೆಂಬಲ ನೀಡಿದ ಕಾರಣ ಯುದ್ಧವು ಎರೆಡು ವರ್ಷಗಳ ಕಾಲ ದಾಟಿ ಯುದ್ಧ ಮುಂದುವರಿಯುತ್ತಿದೆ. ಇದು ಅಮೇರಿಕ ಮತ್ತು ರಶ್ಯಾದ ನಡುವೆ ಬಿನ್ನಾಭಿಪ್ರಾಯಕ್ಕೆ ಕಾರಣವಾಯಿತು. ಈ ಯುದ್ಧದಲ್ಲಿ ಇರಾನ್ ನಿರ್ಮಿಸಿದ್ದ ಶೆಹದ್ ಡ್ರೋಣ್ ಗಳನ್ನು ರಶ್ಯಾಕ್ಕೆ ಪೂರೈಕೆ ಮಾಡಿತು. ಇದರಿಂದಾಗಿ ರಶ್ಯವು ಮತ್ತು ಇರಾನಿನ ಸಂಬಂಧ ಮತ್ತಷ್ಟು ನಿಕಟವಾಗ ತೊಡಗಿತು. ಇದರಿಂದಾಗಿ ವ್ಯಗ್ರಗೊಂಡ ಅಮೇರಿಕ ಇರಾನನ್ನು ನಿರ್ನಾಮ ಮಾಡಲು ಶಪಥಮಾಡಿತು.
2025ರ ಜೂನ್‌ನಲ್ಲಿ ಅಮೆರಿಕ ಮತ್ತು ಇಸ್ರೇಲ್ ಜಂಟಿಯಾಗಿ ಇರಾನ್‌ನ ಅಣುಕೇಂದ್ರದ ಮೇಲೆ ವಾಯುದಾಳಿ ನಡೆಸಿದವು. ಇದು ಉಭಯ ದೇಶಗಳ ನಡುವಿನ ಹಗೆತನವನ್ನು ಮತ್ತಷ್ಟು ಹೆಚ್ಚಿಸಿತು. ಇಸ್ರೇಲಿನ ಮೊಸ್ಸಾದ್ ಮತ್ತು ಅಮೇರಿಕದ ಸಿಐಎ ಬೇಹುಗಾರಿಕಾ ಸಂಸ್ಥೆಗಳು ರಹಷ್ಯವಾಗಿ ಕಾರ್ಯಾಚರಣೆ ಮಾಡಿ ಇರಾನಿನ ಸೇನಾಧಿಕಾರಿಗಳನ್ನು ಹತ್ಯೆಮಾಡಿತು. ಇರಾನ್ ಪ್ರತಿಕಾರ ಕ್ರಮಕೈಗೊಳ್ಳಲು ಸಿದ್ಧತೆ ನಡೆಸತೊಡಗಿತು.
ಅಮೇರಿಕ ಮತ್ತಷ್ಟೂ ಕಠಿಣವಾದ ಕ್ರಮಗಳನ್ನು ಕೈಗೊಂಡಿತು. ಜನವರಿ ತಿಂಗಳಿನಲ್ಲಿ ಖಮೇನಿ ಖಮೇನಿ ಆಡಳಿತದ ವಿರುದ್ಧ ಇರಾನಿಗರು ದಂಗೆಯೇಳುವಂತೆ ಪ್ರಚೋಧಿಸಿತು. ಅಮೇರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅದನ್ನು ಬಹಿರಂಗವಾಗಿ ಬೆಂಬಲಿಸಿ ಇರಾನಿನಲ್ಲಿ ಹೊಸ ಸರಕಾರದ ರಚನೆಗೆ ಸಹಕಾರದ ಭರವಸೆ ನೀಡಿದ್ದರು. ಇರಾನ್ ಮತ್ತು ಅಮೇರಿಕದ ನಡುವಿನ ಯುದ್ಧಕ್ಕೆ ಕಾರಣವಾಯಿತು. ಇರಾನಿನ ನಿಜವಾದ ಶಕ್ತಿ ಸಾಮರ್ಥ್ಯ ಜಗತ್ತಿಗೆ ತಿಳಿಯ ತೊಡಗಿತು. (ಮುಂದುವರಿಯುವುದು)
-ಕರೀಂ ರಾವತರ್


