ಧರ್ಮಸ್ಥಳದಲ್ಲಿ ಏನಾಗಿದೆ? ಭಾಗ-4

ಧರ್ಮಸ್ಥಳದಲ್ಲಿ ಅಪರಿಚಿತ ಮೃತದೇಹಗಳ ಪತ್ತೆ ಪ್ರಯತ್ನ ಮುಂದುವರಿಯುತ್ತಿರುವ ಹಾಗೆಯೇ ದೂರಿನ ರಹಸ್ಯವು ಬಹಿರಂಗವಾಗದೇ ಮತ್ತೆ ಮತ್ತೆ ನಿಗೂಡ ಸ್ವರೂಪವನ್ನು ಪಡೆದುಕೊಳ್ಳುತ್ತಿದೆ.  ದೂರುದಾರ ತೋರಿಸಿದ ಜಾಗವನ್ನು ಅಗೆದು ನೋಡಿದೆವು, ಏನೂ ಸಿಗಲಿಲ್ಲ, ಆದ್ದರಿಂದ ಪ್ರಕರಣವನ್ನು ಇಲ್ಲಿಗೆ ಮುಗಿಸುತ್ತೇವೆ ಎಂದು ತನಿಖೆಯನ್ನು ಕೈಬಿಡಲು  ಸಾಧ್ಯವಿಲ್ಲ.  ಪ್ರಕರಣಕ್ಕೆ ತಾರ್ಕಿಕ ಅಂತ್ಯ ಸಿಗಲೇಬೇಕು.

ಧರ್ಮಸ್ಥಳದಲ್ಲಿ ಏನಾಗಿದೆ?  ಭಾಗ-4

ಧರ್ಮಸ್ಥಳದಲ್ಲಿ ಏನಾಗಿದೆ?

ಭಾಗ-4

ಧರ್ಮಸ್ಥಳದಲ್ಲಿ ಅಪರಿಚಿತ ಮೃತದೇಹಗಳ ಪತ್ತೆ ಪ್ರಯತ್ನ ಮುಂದುವರಿಯುತ್ತಿರುವ ಹಾಗೆಯೇ ದೂರಿನ ರಹಸ್ಯವು ಬಹಿರಂಗವಾಗದೇ ಮತ್ತೆ ಮತ್ತೆ ನಿಗೂಡ ಸ್ವರೂಪವನ್ನು ಪಡೆದುಕೊಳ್ಳುತ್ತಿದೆ.  ಅನುಮಾನಗಳು ಹೆಚ್ಚಾಗ ತೊಡಸಗಿವೆ. ನಾವು ಮೊದಲೇ ಹೇಳಿದ್ದೆವು. ದೂರುದಾರನನ್ನು ಕೂಲಂಕುಶವಾಗಿ ವಿಚಾರಣೆ ನಡೆಸಿ ಮಾಹಿತಿ ಸಂಗ್ರಹಿಸಿ ಪ್ರಕರಣದ ನಿಗೂಡತೆಯನ್ನು ಅನಾವರಣಗೊಳಿಸಲು ಪ್ರಯತ್ನಿಸ ಬೇಕಿತ್ತು. ದೂರುದಾರನು ಸುಮಾರು 10 ವರ್ಷಗಳ ಹಿಂದೆ ಮೃತದೇಹಗಳನ್ನು ವಿಲೇವಾರಿ ಮಾಡಿದ ಸ್ಥಳಗಳನ್ನು ತೋರಿಸುವುದಾಗಿ ಹೇಳಿದ್ದು ಅದರಂತೆ ಉತ್ಖನನ ಕಾರ್ಯವನ್ನು ಪೊಲೀಸ್ ಎಸ್ಐಟಿ ತಂಡವು ಕೈಗೊಂಡಿತ್ತು.  ದೂರುದಾರ ಕರಾರುವಕ್ಕಾಗಿ ಮೃತದೇಹವನ್ನು ಇಲ್ಲೇ ಹೂತು ಹಾಕಿದ್ದೇನೆ ಎಂದು ಎಲ್ಲಾ ಮೃತ ದೇಹವನ್ನು ತೋರಿಸಿ ಕೊಡುತ್ತಾರೆ ಎಂಬ  ವಿಚಾರದ ಬಗ್ಗೆ ಅನುಮಾನವಿತ್ತು. ಏಕೆಂದರೆ ಅಷ್ಟೊಂದು ಖಚಿತವಾಗಿ ಅಕ್ಷಾಂಶ ಮತ್ತು ರೇಖಾಂಶದ ಆಧಾರದಲ್ಲಿ ಮೃತದೇಹದ ದಫನ ಕಾರ್ಯವನ್ನು ಮಾಡಿರಲಾರರು.  ಸ್ಥಳದ ಬೌಗೋಳಿಕ ಸ್ಥಿತಿಗತಿಗಳೂ ಸಹ ಯಾವಾಗಲೂ ಒಂದೇ ತರಹ ಇರಲಾರದು.  ಹಿಂದೆ ಅರಣ್ಯ ಪ್ರದೇಶವಾಗಿದ್ದ ಸ್ಥಳವು ಇವತ್ತು ಜಮೀನಾಗಿ ಬದಲಾಗಿರಬಹುದು, ಜಮೀನು ಆಗಿದ್ದ ಪ್ರದೇಶವು ಈಗ ತೋಟವಾಗಿರಬಹುದು, ಅಲ್ಲದೇ ಒಂದು ಸ್ಥಳ  ಅರಣ್ಯ ಪ್ರದೇಶವಾಗಿದ್ದರೂ ಸಹ ಹಲವು ಕಾರಣಗಳಿಂದಾಗಿ ಅವುಗಳ ಸ್ವರೂಪ ಬದಲಾಗುವ ಸಾದ್ಯತೆಗಳು ಹೆಚ್ಚಿವೆ.  ಹತ್ತು ವರ್ಷದ ಹಿಂದೆ ವಾಸವಿದ್ದ  ವ್ಯಕ್ತಿಯೊಬ್ಬನ ವಾಸವಿರುವ ಸ್ಥಳವನ್ನು ಈವಾಗ್ಗೆ ಗುರುತಿಸಲು ಹೋದರೆ ನಾವು ಎಷ್ಟೋ ವ್ಯತ್ಯಾಸಗಳನ್ನು ಕಾಣಬಹುದಾಗಿದೆ, ಪತ್ತೆ ಮಾಡಲು ಎಷ್ಟೋ ಜನರನ್ನು ವಿಚಾರಿಸಿ ಮಾಹಿತಿ ಪಡೆದುಕೊಂಡು ವಾಸ ಸ್ಥಳವನ್ನು ಕಂಡು ಹಿಡಿಯ ಬೇಕಾಗಿದೆ.   ಹಾಗಿರುವಾಗ ವ್ಯಕ್ತಿಯೊಬ್ಬ ಹಗಲೋ ,ರಾತ್ರಿಯೋ ಹೋಗಿ ಅವಸರದಿಂದ ಹೂತು ಹಾಕಿದ ಮೃತದೇಹದ ಸ್ಥಳವನ್ನು ಹತ್ತು ಹನ್ನೆರೆಡು ವರ್ಷಗಳ ನಂತರ  ಕರಾರುವಕ್ಕಾಗಿ ಗುರುತಿಸಿ ಕೊಡುತ್ತಾನೆ ಎಂಬುದನ್ನು ನಂಬುವುದೇ ಒಂದು ಕಷ್ಟದ ವಿಚಾರ. ಹಾಗಿರುವಾಗ ಈ ಒಂದೇ ಮಾಹಿತಿಯ ಆಧಾರದಲ್ಲಿ ಮೃತದೇಹಗಳನ್ನು  ಹುಡುಕಾಡುತ್ತಿರುವುದು ಅಭಾಸಕಾರಿ ವಿಚಾರವಾಗಿದೆ.  ಈಗ ದೃಶ್ಯ ಮಾದ್ಯಮಗಳಲ್ಲಿ ಉತ್ಖನನ ದೃಶ್ಯವನ್ನು ಪ್ರಸಾರ ಮಾಡುತ್ತಿರುವುದನ್ನು ನೋಡಿದರೆ ಆಶ್ಚರ್ಯವಾಗುತ್ತಿದೆ.   ಈ ದೃಶ್ಯಗಳು ಹೂತ ಹೆಣವನ್ನು ಹೊರತೆಗೆಯುತ್ತಿರುವುದಕ್ಕೆ ನಡೆಸುತ್ತಿರುವ ಪ್ರಯತ್ನದಂತೆ ಕಾಣಿಸುತ್ತಿಲ್ಲ.  ಬದಲಾಗಿ ಬಾವಿ ಕೊರೆದು ನೀರು ತೆಗೆಯಲು ನಡೆಸುತ್ತಿರುವ ಕಾಮಗಾರಿಯಂತೆ ಕಾಣಿಸುತ್ತಿದೆ.  ಈ ರೀತಿಯ ತನಿಖೆಯನ್ನು ಆರೋಪದ ಪರ ಅಥವಾ ವಿರೋಧವಿರುವ ಉಭಯಕಡೆಯವರು ಸಹಾ ವಿರೋಧಿಸುವ ಸಾಧ್ಯತೆಯೇ ಹೆಚ್ಚು. ಅಪರಿಚಿತ ಮೃತದೇಹಗಳು ಅಥವಾ ದೂರುದಾರ ಹೇಳಿರುವ ಕೊಲೆ ಮಾಡಿರುವ ಹೆಣಗಳನ್ನು ಗರಿಷ್ಟವೆಂದರೂ 4 ಅಡಿಗಳಿಗಿಂತಲೂ ಕೆಳಗೆ ಹೂತು ಹಾಕಿರಲಾರರು. ಹೀಗಿರುವಾಗ ಆಳವಾಗಿ ಗುಂಡಿ ತೋಡುವ ಪ್ರಕ್ರಿಯೆಯು ತನಿಖೆಗೆ ಪ್ರಯೋಜನವೊದಗಿಸದು. ಅದರ ಬದಲಾಗಿ ಅಗೆಯುವ ಪ್ರದೇಶವನ್ನು ಮತ್ತಷ್ಟು ವಿಸ್ತಾರಗೊಳಿಸುವುದರಿಂದ  .ತನಿಖೆಗೆ ಸಹಕಾರಿಯಾದೀತು

          ದೂರುದಾರ ಭೀಮ ಅಪರಿಚಿತ ಮೃತದೇಹಗಳನ್ನು ಹೂತು ಹಾಕಿದ್ದಾನೆ ಎಂಬುದು ಈಗ ಇವರು ದೂರಿನ ಸಾರಾಂಶ. ಇದನ್ನು ಧರ್ಮಸ್ಥಳದಲ್ಲಿರುವ ಗ್ರಾಮಪಂಚಾಯಿತಿಯ ಪ್ರತಿನಿಧಿಗಳು, ಗ್ರಾಮಸ್ಥರು ಸಮರ್ಥಿಸಿದ್ದಾರೆ. ದೂರುದಾರ ಭೀಮ ಹಿಂದೆ ಧರ್ಮಸ್ಥಳದಲ್ಲಿ ಗ್ರಾಮ ಶುಚೀಕರಣದ ಕೆಲಸವನ್ನು ಮಾಡಿರುವ ಬಗ್ಗೆಯೂ ಸಾರ್ಜನಿಕರೂ ಸಹ ಸಮರ್ಥಸಿದ್ದಾರೆ. ಹಾಗಿದ್ದ ಮೇಲೆ ಒಂದೇ ಒಂದು ಹೆಣವು ಸಿಗದೇ ಹೋಗಿರುವುದಾದರೂ ಹೇಗೆ? ಕೊಲೆ ಅಥವಾ ಅತ್ಯಾಚಾರಕ್ಕೆ ಒಳಗಾಗದೇ ಮೃತಪಟ್ಟ  ಅಮಾಯಕ ಹೆಣಗಳಾದರೂ ಪತ್ತೆಯಾಗ ಬೇಕಲ್ಲ? ಏಕೆಂದರೆ ದೃಶ್ಯ ಮಾದ್ಯಮಗಳ ಮಾಹಿತಿಗಳನ್ನು ಗಮನಿಸಿದರೆ ಇಲ್ಲಿಯವರೆ ಅರಣ್ಯದಲ್ಲಿ, ತೋಡಿನಲ್ಲಿ ಜಮೀನಿನಲ್ಲಿ ಕಾಡಿನಲ್ಲಿ ಹೀಗೆ ಎಲ್ಲಾ ಕಡೆಯೂ ಉತ್ಖನನವನ್ನು ನಡೆಸಲಾಗಿದೆ. ಆದರೆ ಎಲ್ಲಿಯೂ ಮೃತ ದೇಹದ ಪತ್ತೆಯಾಗಿರುವುದಿಲ್ಲ.  ಹಾಗಿದ್ದ ಮೇಲೆ ಹಿಂದೆ ಧರ್ಮಸ್ಥಳದಲ್ಲಿ ಮೃತಪಟ್ಟು ಅಪರಿಚಿತ ಮೃತದೇಹಗಳು ಏನಾದವು ಮತ್ತು ಅವುಗಳ ವಿಲೇವಾರಿ ಹೇಗೆ ಆದವು ಎಂಬ ಬಗ್ಗೆ ಸಂದೇಹಗಳು ತಲೆದೋರಿವೆ. ಇದು ಈಗಾಗಲೇ ತಲೆಕೆಡಿಸಿರುವ ದೂರಿನಿಂದ ಹುಟ್ಟಿಕೊಂಡಿರುವ ಮರಿ ದೂರಾಗಿದೆ! ಈ ಬಗ್ಗೆ ಈಗಲೇ ಪೊಲೀಸ್ ಸ್ಪಷ್ಟೀಕರಣವನ್ನು ನೀಡುವುದು ಸೂಕ್ತ. ದೂರುದಾರ ತೋರಿಸಿದ ಜಾಗವನ್ನು ಅಗೆದು ನೋಡಿದೆವು, ಏನೂ ಸಿಗಲಿಲ್ಲ, ಆದ್ದರಿಂದ ಪ್ರಕರಣವನ್ನು ಇಲ್ಲಿಗೆ ಮುಗಿಸುತ್ತೇವೆ ಎಂದು ತನಿಖೆಯನ್ನು ಕೈಬಿಡಲು  ಸಾಧ್ಯವಿಲ್ಲ.  ಪ್ರಕರಣಕ್ಕೆ ತಾರ್ಕಿಕ ಅಂತ್ಯ ಸಿಗಲೇಬೇಕು.

ಬಿ.ಆರ್. ಮಂಜುನಾಥ್, ಮೊ: 7353353797