ಮತಗಳ್ಳತನ:ರಾಹುಲ್ ಗಾಂಧಿಯಿಂದ ಲಾಪಾತಾ ವೋಟ್ ವೀಡಿಯೋ ಬಿಡುಗಡೆ
ಮತಗಳ್ಳತನ ಕುರಿತು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಲಾಪಾತ ವೋಟ್ ಹೆಸರಿನಲ್ಲಿ ವಿಡಿಯೋ ಮಾಡಿ ತಮ್ಮ ಯೂಟ್ಯೂಬ್ ಚಾನಲ್ ನಲ್ಲಿ ಬಿಡುಗಡೆ ಮಾಡಿದ್ದಾರೆ.
ಬಾಲಿವುಡ್ ನಿರ್ದೇಶಕಿ ಕಿರಣ್ ರಾವ್ ನಿರ್ದೇಶಿಸಿದ್ದ ಲಾಪತಾ ಲೇಡೀಸ್ ಚಿತ್ರದ ಹೆಸರಲ್ಲಿ ಲೇಡೀಸ್ ಪದ ತೆಗೆದು ವೋಟ್ ಅನ್ನು ಸೇರಿಸಲಾಗಿದೆ.ಒಂದು ನಿಮಿಷದ ವೀಡಿಯೋ ಇದಾಗಿದ್ದು,ಚೋರಿ ಚೋರಿ ಚುಪ್ಕೆ ಚುಪ್ಕೆ ಇನ್ನು ಮುಂದೆ ನಡೆಯಲ್ಲ ಎಂದು ವೀಡಿಯೋದಲ್ಲಿ ಲೇವಡಿ ಮಾಡಲಾಗಿದೆ.ಕಳ್ಳತನದ ದೂರು ದಾಖಲಿಸಲು ವ್ಯಕ್ತಿಯೊಬ್ಬ ಪೊಲೀಸ್ ಠಾಣೆಗೆ ಬರುತ್ತಾನೆ.ಏನು ಕಳುವಾಗಿದೆ ಎಂದು ಪೊಲೀಸ್ ಕೇಳುವಾಗ ನನ್ನ ಮತ ಎಂದು ಆತ ಉತ್ತರಿಸುತ್ತಾನೆ.ಆಶ್ಚರ್ಯಗೊಂಡ ಪೊಲೀಸ್ ಮತವನ್ನು ಹೇಗೆ ಕದಿಯಲು ಸಾಧ್ಯ ಎಂದು ಪ್ರಶ್ನಿಸುತ್ತಾನೆ.ನಕಲಿ ಮತದಾನದ ಮೂಲಕ ಲಕ್ಷಾಂತರ ಮತಗಳನ್ನು ಕದಿಯಲಾಗುತ್ತಿದೆ ಎಂದು ಆತ ಹೇಳುತ್ತಾನೆ.ಮತವನ್ನು ಕದಿಯುವುದು ಅವನ ಹಕ್ಕನ್ನು ಕದ್ದಂತೆ ಎಂಬ ಸಂದೇಶದೊಂದಿಗೆ ವೀಡಿಯೋ ಅಂತ್ಯವಾಗುತ್ತದೆ.
ಕಾಂಗ್ರೆಸ್ ನಡೆಸುತ್ತಿರುವ ನಿರಂತರ ಚಳವಳಿ, ವಾಗ್ದಾಳಿಗಳಿಂದ ಬೆದರಿರುವ ಕೇಂದ್ರ ಚುನಾವಣಾ ಆಯೋಗ ನಾಳೆ ತುರ್ತು ಪತ್ರಿಕಾಗೋಷ್ಠಿ ಕರೆದಿದೆ.ಇಡೀ ದೇಶದ ಚಿತ್ತ ಈಗ ಚುನಾವಣಾ ಆಯೋಗದ ಮೇಲೆ ನೆಟ್ಟಿದೆ.


