ಸಾಹಿತಿ ಭಾನು ಮಷ್ತಾಕ್ ಹೊತ್ತು ತಂದಿರುವ ಬೂಕರ್ ಹಣತೆ!-1

ಹಿಂದಿ ಮತ್ತು ಕನ್ನಡದ ಅನುವಾದಿತ ಕೃತಿಗಳು ಬೂಕರ್ ಪ್ರಶಸ್ತಿಯನ್ನು ಪಡೆದ ಗೌರವಕ್ಕೆ ಪಾತ್ರವಾಗಿವೆ. ಈ ಮನ್ನಣೆಯು ಕನ್ನಡ ಸಾಹಿತ್ಯವನ್ನು ವಿಶ್ವಮಟ್ಟದಲ್ಲಿ ಮತ್ತಷ್ಟು ಪ್ರಚಾರ ಸಮೃದ್ಧಗೊಳಿಸಿದೆ. ಇದು ಪ್ರತಿಯೊಬ್ಬ ಕನ್ನಡಿಗನೂ ಅಭಿಮಾನ ಪಟ್ಟುಕೊಳ್ಳಬಹುದಾದ, ಹಾಗೆಯೇ ಕನ್ನಡ ಸಾಹಿತ್ಯ ಲೋಕವು ಸಂಭ್ರಮಿಸಿ ಕೊಳ್ಳಬಹುದಾದ ಹೆಮ್ಮೆಯ ಸಂಗತಿಯಾಗಿದೆ.

ಸಾಹಿತಿ ಭಾನು ಮಷ್ತಾಕ್ ಹೊತ್ತು ತಂದಿರುವ ಬೂಕರ್ ಹಣತೆ!-1

ಸಾಹಿತಿ ಭಾನು ಮಷ್ತಾಕ್ ಹೊತ್ತು ತಂದಿರುವ ಬೂಕರ್ ಹಣತೆ!-1

ಕನ್ನಡದ ಖ್ಯಾತ ಬರಹಗಾರರಾದ ಶ್ರೀಮತಿ ಭಾನು ಮಷ್ತಾಕ್ರವರ ಕೃತಿ ಎದೆಯ ಹಣತೆಗೆ ಅಂತರಾಷ್ಟ್ರೀಯ ಮನ್ನಣೆಯಾದ ಬೂಕರ್ ಪ್ರಶಸ್ತಿಯನ್ನು ಪಡೆದುಕೊಂಡಿದೆ. ಈ ಪ್ರಶಸ್ತಿಯನ್ನು ಒಟ್ಟು 7 ಜನ ಭಾರತೀಯರು ಇಲ್ಲಿಯವರೆಗೆ ಪಡೆದುಕೊಂಡಿದ್ದಾರೆ. ಖ್ಯಾತ ಬರಹಗಾರರಾದ 1) ವಿ.ಎಸ್. ನೈಪಾಲ್ ರವರ ಇನ್ ಎ ಫ್ರೀ ಸ್ಟೇಟ್, 2)ಸಲ್ಮನ್ ರಷ್ದಿರವರ ಮಿಡನೈಟ್ಸ್ ಚಿಲ್ಡ್ರನ್, 3)ಅರುಂದತಿ ರಾಯ್ರವರ ದಿ ಗಾಡ್ ಆಫ್ ಸ್ಮಾಲ್ ಥಿಂಗ್ಸ್,4) ಕಿರಣ್ ದೇಸಾಯಿರವರ ದಿ ಇನ್ ಹೆರಿಟೆನ್ಸ್ ಆಫ್ ಲಾಸ್, 5) ಆರವಿಂದ್ ಆಡಿಗರವರ ದಿ ವೈಟ್ ಟೈಗರ್ ಮತ್ತು 6) ಗೀತಾಂಜಲಿ ಶ್ರೀ ರವರ ಹಿಂದಿ ಭಾಷೆಯ ಕೃತಿ ರೇಥ್ ಸಮಾಧಿ: ದಿ ಟೂಂಬ್ ಆಫ್ ಸ್ಯಾಂಡ್ ಹಾಗೂ 7) ಭಾನು ಮಷ್ತಾಕ್ ರವರ ಭಾಷೆಯ ಕೃತಿ ಎದೆಯ ಹಣತೆ; ಹೆರ್ಟ್ ಲ್ಯಾಂಪ್ ಕೃತಿಗಳಿಗೆ ಈ ಪುರಸ್ಕಾರವು ಲಭ್ಯವಾಗಿವೆ.

ಬೂಕರ್ ಪ್ರಶಸ್ತಿಯು ಆಂಗ್ಲ ಸಾಹಿತ್ಯದ ಅತೀ ಪ್ರತಿಷ್ಟೆಯ ಪುರಸ್ಕಾರವಾಗಿದೆ.  ಇದನ್ನು ಪಡೆಯಬೇಕಾದರೆ ಕೃತಿಯು ಆಂಗ್ಲಭಾಷೆಯಲ್ಲಿರಬೇಕು ಮತ್ತು ಅವುಗಳನ್ನು ಇಂಗ್ಲೇಂಡಿನಲ್ಲಿಯೇ  ಪ್ರಕಾಶನ ಮತ್ತು ಪ್ರಕಟಣೆ ಮಾಡಿರಬೇಕು.  ಅಂತಹ ಕೃತಿಗಳನ್ನು ಮಾತ್ರ ಈ ಪುರಸ್ಕಾರಕ್ಕೆ ಪರಿಗಣಿಸಲಾಗುತ್ತದೆ.  ಈ ಪುರಸ್ಕಾರ ಪರಿಗಣನೆಗೆ ಕೃತಿ ರಚನಾಕಾರರಾಗಲೀ, ಅನುವಾದಕರಾಗಲೀ ಅರ್ಜಿ ಸಲ್ಲಿಸುವ ಹಾಗಿಲ್ಲ.  ಕೃತಿಯನ್ನು ಪ್ರಕಾಶನ ಮಾಡಿದ ಪ್ರಕಾಶಕರು ಮಾತ್ರ ಕೃತಿಯನ್ನು ಪ್ರಶಸ್ತಿಯ ಆಯ್ಕೆಗೆ  ಸಮರ್ಪಿಸಬಹುದಾಗಿದೆ! ಗೀತಾಂಜಲಿ ಶ್ರೀ ರವರ ಹಿಂದಿ ಮೂಲದ ರೇಥ್ ಸಮಾಧಿಯನ್ನು ಅಮೇರಿಕದ ಬರಹಗಾರತಿ ಡೈಸಿ ರಾಕ್ ವೆಲ್ ಮತ್ತು ಭಾನು ಮಷ್ತಾಕ್ರವರ ಎದೆಯ ಹಣತೆಯನ್ನು ಬರಹಗಾರತಿ ದೀಪಾ ಭಾಸ್ತಿರವರು ಅನುವಾದಿಸಿದ್ದಾರೆ.

          ಹಿಂದಿ ಮತ್ತು ಕನ್ನಡದ ಅನುವಾದಿತ ಕೃತಿಗಳು ಈ ಬೂಕರ್ ಪ್ರಶಸ್ತಿಯನ್ನು ಪಡೆದ ಗೌರವಕ್ಕೆ ಪಾತ್ರವಾಗಿವೆ. ಈ ಮನ್ನಣೆಯು ಕನ್ನಡ ಸಾಹಿತ್ಯವನ್ನು ವಿಶ್ವಮಟ್ಟದಲ್ಲಿ ಮತ್ತಷ್ಟು ಪ್ರಚಾರ ಸಮೃದ್ಧಗೊಳಿಸಿದೆ. ಇದು ಪ್ರತಿಯೊಬ್ಬ ಕನ್ನಡಿಗನೂ ಅಭಿಮಾನ ಪಟ್ಟುಕೊಳ್ಳಬಹುದಾದ, ಹಾಗೆಯೇ ಕನ್ನಡ ಸಾಹಿತ್ಯ ಲೋಕವು ಸಂಭ್ರಮಿಸಿ ಕೊಳ್ಳಬಹುದಾದ ಹೆಮ್ಮೆಯ ಸಂಗತಿಯಾಗಿದೆ. ಹಾಸನ ಜಿಲ್ಲೆಯ   ಶ್ರೀಮತಿ ಭಾನು ಮಷ್ತಾಕ್ ರವರ ಭಾಷೆ ಉರ್ದುವಾದರೂ ಕನ್ನಡದಲ್ಲೇ ಬರೆಯುವ ಸಾಹಿತಿ. ಇವರ ಕೃತಿಯನ್ನು ಕೊಡಗು ಜಿಲ್ಲೆಯ ಕನ್ನಡಿಗರಾದ  ಶ್ರೀಮತಿ ದೀಪಾ ಭಾಸ್ತಿಯವರು ಆಂಗ್ಲ ಭಾಷೆಗೆ ಅನುವಾದಿಸಿದ್ದಾರೆ. ಈ ಇಬ್ಬರು ಸಾಹಿತ್ಯ ಸೇವಕರುಗಳು ಕನ್ನಡದ ತೇರನ್ನು ಅಂತರಾಷ್ಟ್ರಮಟ್ಟದಲ್ಲಿ ಎಳೆದು ಬೆಳಗಿದ ಕನ್ನಡದ ಅಪೂರ್ವ ರತ್ನಮಣಿಗಳಾಗಿದ್ದಾರೆ. 

ಭಾನು ಮಷ್ತಾಕರ್ ರವರು ಸಾಹಿತ್ಯಕ್ಷೇತ್ರದ ಬಂಡಾಯ ಪ್ರಕಾರದಲ್ಲಿ ಗುರುತಿಸಿಕೊಂಡವರು.  ತಮ್ಮ ಲೇಖನ, ಕಥೆಗಳಿಂದ ವೈಚಾರಿಕ ವಿಚಾರಗಳನ್ನು ಸಮಾಜದ ಚರ್ಚೆಗೆ ತೆರೆದಿಟ್ಟು ವಿವಾದಕ್ಕೊಳಗಾದವರು.  ಬೆಳಗಾವಿಯಲ್ಲಿ ಮುಸ್ಲಿಂ ಶಿಕ್ಷಕಿಯೊಬ್ಬರು ಸಿನಿಮಾ ನೋಡಲು ಹೋಗಿದ್ದನ್ನು ಆಗ ಸಂಪ್ರದಾಯವಾದಿಗಳೆಂದು ಕರೆಯುತ್ತಿದ್ದ ಮುಸ್ಲೀಮರು ಶಿಕ್ಷಕಿಯ ಮೇಲೆ ನಡೆಸಿದ ಬಗ್ಗೆ, ಬೆದರಿಕೆ ಹಾಕಿದ ಬಗ್ಗೆ, ಬಹಿಷ್ಕಾರ ಹಾಕಿದ ಬಗ್ಗೆ, ಫತ್ವಾ ನೀಡಿದ ಆಕ್ಷೇಪಿಸಿ ಲೇಖನ ಬರೆದರು.  ಮುಸ್ಲೀಂ ಮಹಿಳೆಯರ ಹಕ್ಕು ಸ್ವಾತಂತ್ರ್ಯದ ಬಗ್ಗೆ, ಸ್ವಾಭಿಮಾನ ಸಂರಕ್ಷಣೆಯ ಬಗ್ಗೆ ಸ್ವರ ಎತ್ತಿದ್ದರು.  ಆವಾಗಲೇ ಇದೇ ಕಾರಣಕ್ಕಾಗಿಯೇ ಸಂಪ್ರದಾಯಸ್ಥ ಮುಸ್ಲೀಮರಿಂದ ಹಲ್ಲೆ ಅಕ್ರಮಣಗಳನ್ನು  ಅನುಭವಿಸಬೇಕಾಯಿತು. ಲಂಕೇಶ್ ಪತ್ರಿಕೆ ಮತ್ತು ಪ್ರಗತಿಪರ ಹೋರಾಟಗಾರರು ಭಾನು ಮಷ್ತಾಕರ ಬೆಂಬಲಕ್ಕೆ ನಿಂತರು. ಅಂದಿನಿಂದಲೂ ದಿಟ್ಟತನದಿಂದ ಕಥೆ, ಲೇಖನಗಳನ್ನು ಬರೆಯುತ್ತಿದ್ದಾರೆ.  ಮುಸ್ಲೀಂ ಸಮಾಜದಲ್ಲಿ ಕೊಳೆಗಟ್ಟಿ ನಿಂತಿರುವ ಅವ್ಯವಸ್ಥೆಗಳು  ಬಡತನ, ಶಿಕ್ಷಣ ಕೊರತೆ, ಪುರುಷ ಮೇಧಾವಿತನದ ಅಸಮಾನತೆಗಳು, ಸಂಪ್ರದಾಯಗಳು, ಅದರಿಂದಾಗುತ್ತಿರುವ ಮಹಿಳೆಯರ ಶೊಷಣೆ, ಹೊಂದಾಣಿಕೆಯಾಗದ ಆಚಾರ ವಿಚಾರಗಳು,  ಹೀಗೆ ಸಮಾಜ ಮತ್ತು ಅದರಲ್ಲಿಯೂ ವಿಶಿಷ್ಟವಾಗಿ ಮುಸ್ಲೀಮರು ಎದುರಿಸುತ್ತಿರುವ ಹತ್ತು ಹಲವು ಸಮಸ್ಯೆಗಳನ್ನು ಸಮಾಜದ ಗಮನ ಸೆಳೆದು  ಸುಧಾರಣೆಯನ್ನು ತರುವುದಕ್ಕಾಗಿಯೇ ಕಥೆ, ಕಾದಂಬರಿ, ಲೇಖನಗಳನ್ನು ಬರೆದು ಸ್ಪುಟವಾಗಿ ವಿವರಿಸಿ ದಾಖಲು ಇಡುತ್ತಿದ್ದ  ಮಾನವಹಕ್ಕಿಗಾಗಿ ಹೋರಾಡುತ್ತಿರುವ ಆ ತಾಯಿಗೆ ಇವತ್ತಿಗೆ 77ರ ಪ್ರಾಯ. ಅಂದಿನಿಂದಲೂ ವಿವಾದಕ್ಕೊಳಗಾಗುತ್ತಿದ್ದವರೂ ಈಗ ಬೂಕರ್ ಪ್ರಶಸ್ತಿಯನ್ನು ಪಡೆದುಕೊಂಡು ಸಂಭ್ರಮ ಆಚರಿಸುವಾಗಲೂ ವಿವಾದಿತರಾಗಿದ್ದಾರೆ. 

ಇಬ್ಬನಿಯ ಕಾವು, ಬಡವರ ಮಗಳು ಹೆಣ್ಣಲ್ಲ, ಒದ್ದೆ ಕಣ್ಣಿನ ಬಾಗಿನ, ಹಸೀನಾ ಮತ್ತು ಇತರ ಕಥೆಗಳು, ಹೆಣ್ಣು ಹದ್ದಿನ ಸ್ವಯಂವರ   ಮುಂತಾದ ಸಾಹಿತ್ಯ ಕೃತಿಗಳನ್ನು ರಚಿಸಿದ್ದಾರೆ. ಎದೆಯ ಹಣತೆ ಕೃತಿಯು ಕನ್ನಡದ ಹಸೀನಾ ಮತ್ತು ಇತರೆ ಕಥೆಗಳು ಎಂಬ ಕಥಾ ಸಂಕಲನವಾಗಿದೆ. ಇದರಲ್ಲಿ 12 ಆಯ್ದ ಅನುವಾದಿತ ಕಥೆಗಳಿವೆ.  ಯಲ್ಲಿ ಒಟ್ಟು  ಕರಿನಾಗರ ಎಂಬ ಕಥೆಯನ್ನು ಗಿರೀಶ್ ಕಾಸರವಳ್ಳಿರವರು ಹಸೀನಾ ಎಂಬ ಹೆಸರಿನಲ್ಲಿ ಚಲನ ಚಿತ್ರವನ್ನು ಮಾಡಿದ್ದಾರೆ. ಒಮ್ಮೆ ಹೆಣ್ಣಾಗು ಪ್ರಭುವೆ ಎಂಬ ಕಥೆಯು ರೂಪಾಂತರವಾಗಿ ನಾಟಕಗಳಾಗಿ ಪ್ರದರ್ಶನವಾಗಿವೆ. ಎದೆಯ ಹಣತೆ ಎಂಬ ಕಥೆಯನ್ನು ಸುಮಾರು 25 ವರ್ಷದ ಹಿಂದೆ ಬರೆದು ಭಾವನಾ ಎಂಬ ಮಾಸ ಪತ್ರಿಕೆಯಲ್ಲಿ ಪ್ರಕಟವಾಗಿತ್ತು.

ಶಾಯಿಸ್ತಾ ಮಹಲಿನ ಕಲ್ಲು ಚಪ್ಪಡಿಗಳು, ಬೆಂಕಿ ಮಳೆ, ಕರಿನಾಗರಗಳು, ಹೈದಯ ತೀರ್ಪು, ಕೆಂಪು ಲುಗಂಗಿ, ಎದೆಯ ಹಣತೆ, ಹೈಹೀಲ್ಡ್ ಶೂ, ಒಮ್ಮೇ ಹೆಣ್ಣಾಗು ಪ್ರಭುವೆ, ಮೆಲುದನಿಗಳು, ಸ್ವರ್ಗವೆಂದರೆ, ಕಫನ್ ಅರಬಿ ಮೇಷ್ಟ್ರು, ತೊಲೆಗಂಬವಿಲ್ಲದ ಗಗನ ಹೀಗೆ ಹಲವು ಕತೆಗಳು ಇವೆ

          ಅನುವಾದಗಳಿಂದಲೇ ಕೃತಿಗಳ ಪರಿಚಯವಾಗುವುದು. ಅನುವಾದಕ ಕೃತಿ ರಚನಾಕಾರರ ಪರವಾಗಿ ಮಾತನಾಡುತ್ತಾರೆ.  ಅನುವಾದಕರ  ಅಸಾಧಾರಣ ಪ್ರತಿಭಾ ಸಾಮರ್ಥ್ಯವಿರಬೇಕು.  ಭಾಷೆಯ ಸಾಹಿತ್ಯ ಜ್ಞಾನವಿರಬೇಕು. ಕೃತಿ ರಚನೆಕಾರರ ಮೂಲ ಬಾಷೆ ಮತ್ತು ಅನುವಾದಗೊಳ್ಳುವ ಭಾಷೆಯ ಎರೆಡರ ಭಾಷಾ ಸಾಹಿತ್ಯದ  ಪರಿಜ್ಞಾನ, ಪದ ಶಬ್ದಗಳಿಗಿರುವ ಅರ್ಥ ವಿಶಾಲತೆ, ವ್ಯಾಕರಣಗಳ ತಿಳುವಳಿಕೆ, ಸ್ವರ ವರ್ಣಾಲಂಕಾರಗಳ ಅರಿವು ಎಲ್ಲವೂ ಅನುವಾದಕರಿಗಿರಬೇಕು. ಹಾಗಿದ್ದಲ್ಲಿ ಮಾತ್ರ ಮೂಲ ಕೃತಿಯನ್ನು ಅದೇ ವಿಷಯ ನೈಜತೆಯ ದಾಟಿಯಲ್ಲಿಯೆ ಮತ್ತೊಂದು ಭಾಷೆಗೆ ಪರಿಚಯ ಮಾಡುವ ಪ್ರಯತ್ನವನ್ನು ಯಶಸ್ವಿ ಗೊಳಿಸಲು ಸಾಧ್ಯ. ಅಷ್ಟು ಮಾತ್ರಕ್ಕೆ ಅನುವಾದಕ ಕೃತಿಯ ಕತೃವಾಗಲಾರ. ಪ್ರತಿಭಾವಂತ ಭಾಷಾ ಜ್ಞಾನಿಯೊಬ್ಬ ಕೃತಿಯನ್ನು ಅನುವಾದಿಸಿದಲ್ಲಿ ಮಾತ್ರ ಕೃತಿಯ ಪ್ರಚಾರವು  ಯಶಸ್ವಿಯಾಗುತ್ತದೆ.  

ಹೀಗೆ ಏಕೆ  ಹೇಳ ಬೇಕಾಯಿತೆಂದರೆ, ಈಗಾಗಲೇ ವಾಟ್ಸಪ್ ವಿದ್ವಾಂಸರುಗಳು ಈ ವಿಚಾರಕ್ಕೆ ಏನೇನೋ ವಿವರಣೆಗಳನ್ನು ನೀಡಿ ಅಪಾರ್ಥಗಳನ್ನು ಪ್ರಚಾರ ಮಾಡಿ ಮತ್ತಷ್ಟು ಸತ್ಯಾಂಶ ಏನು ಎಂಬುದನ್ನು ತಿಳಿದು ಕೊಳ್ಳಲಾಗದಷ್ಟರ ಮಟ್ಟಿಗೆ ಗೊಂದಲ ಮಾಡುತ್ತಿದ್ದಾರೆ.

ಕರ್ನಾಟಕದ ಮುಸ್ಲೀಮರ ಕತೆಗಳನ್ನು ಹೇಳುತ್ತಿದೆಯಾದರೂ ಇದು ಎಲ್ಲಾ ಕಾಲದ ಎಲ್ಲಾ ಮುಸ್ಲೀಂ ಜನಾಂಗದವರು ಅನುಭವಿಸುತ್ತಿರುವ ವಿಚಾರಗಳೇ ಆಗಿವೆ.  ಮುಸ್ಲಿಂ ಸಮಾಜದ ಮಹಿಳೆಯರು ಅನುಭವಿಸುತ್ತಿರುವ ಸಮಸ್ಯೆಗಳನ್ನು ಕತೆಯಲ್ಲಿ ಬರುವ ಪಾತ್ರಗಳು ವಿವರಿಸುವ ಪ್ರಯತ್ನವನ್ನು ಮಾಡುತ್ತಿವೆ.  ಅವು ಕೇವಲ ಕರ್ನಾಟಕ ಮುಸ್ಲೀಮರ ಕತೆಗಳಾಗಿ ಕಾಣುವುದಿಲ್ಲ. ಬದಲಾಗಿ ದೇಶದ ಅಷ್ಟೇ ಏಕೆ ವಿಶ್ವ ಮುಸ್ಲಿಂ ಜನಾಂಗದ ಸಮಸ್ಯೆಯಾಗಿ ಕಂಡರೂ ಆಶ್ಚರ್ಯವಿಲ್ಲ. ಕತೆಯಲ್ಲಿ ಬರುವ ಪಾತ್ರಗಳು ಅದರಲ್ಲಿಯೂ ವಿಶೇಷವಾಗಿ ಮುಸ್ಲೀಂ ಮಹಿಳೆಯರು ಅನುಭವಿಸುತ್ತಿರುವ ಮಾನಸಿಕ ಯಾತನೆ, ಆತಂಕ, ಶೋಷಣೆ, ದೌರ್ಜನ್ಯ,  ಅಭದ್ರತೆಗಳೆಲ್ಲವೂ ಮುಸ್ಲೀಂ ಸಮುದಾಯದಲ್ಲಿ ಪ್ರಚಲಿತವಾಗಿಯೇ ಇದೆಯೆಂದು ಅನಿಸುತ್ತದೆ. ಕತೆಗಳು ಅವುಗಳ ಪ್ರತಿಬಿಂಭಗಳಾಗಿ ಸಮಾಜದ ಸ್ಥಿತಿಗತಿಗಳನ್ನು ಪ್ರತಿನಿಧಿಸುತ್ತಿವೆ. ಬೂಕರ್ ಪ್ರಶಸ್ತಿಯು ಈ ವಿದ್ಯಾಮಾನವನ್ನು ಸಮಾಜದ ಮುಂದೆ ಇಡುವ ಪ್ರಯತ್ನವನ್ನು ಮಾಡಿದೆ.

ಬಿ.ಆರ್. ಮಂಜುನಾಥ್