ಮೈಸೂರು ದಸೆರಾ ಉತ್ಸವ ಸಂಭ್ರಮ : ಇಂದಿನ ದಸೆರಾ ಉತ್ಸವವನ್ನು ಹಿಂದೆಂದಾರೂ ನೋಡಿದ್ದೀರಾ?
ಈ ಭಾರಿಯ ದಸೆರಾ ಉತ್ಸವು ಸಮಾಜದಲ್ಲಿ ಗಟ್ಟಿಯಾಗಿ ನೆಲೆನಿಂತಿರುವ ಸಾಮರಸ್ಯದ ಸಂಕೇತವಾಗಿದೆ. ಇದು ಜನ ಸಾಮಾನ್ಯರಲ್ಲಿರುವ ನೆಮ್ಮದಿ ಮತ್ತು ಸಂತಸದ ಸೂಚ್ಯಂಕವಾಗದೆ. ಈ ಉತ್ಸವು ನಾಡಿಗೆ ಸಮೃದ್ಧಿಯನ್ನು ತರಲಿ, ಜನರಲ್ಲಿ ನೆಮ್ಮದಿ, ಸಂತಸವನ್ನು ಮೂಡಿಸಲಿ. ಈ ಉತ್ಸವವನ್ನು ವಿಶ್ವದಲ್ಲಿನ ಉತ್ತಮವಾದ ಸಾಂಸ್ಕೃತಿಕ ಆಚರಣೆಯ ಮಟ್ಟಕ್ಕೆ ಏರಿಸಿದೆ. ಈ ಕೀರ್ತಿ ಕರ್ನಾಟಕದ ಮುಖ್ಯಮಂತ್ರಿ ಸನ್ಮಾನ್ಯ ಶ್ರೀ. ಸದ್ಧರಾಮಯ್ಯನವರಿಗೆ ಸಲ್ಲುತ್ತದೆ.
ಮೈಸೂರು ದಸೆರಾ ಉತ್ಸವ ಸಂಭ್ರಮ : ಇಂದಿನ ದಸೆರಾವನ್ನು ಹಿಂದೆಂದಾರೂ ನೋಡಿದ್ದೀರಾ?
ಈ ಬಾರಿಯ ದಸೆರಾ ಉತ್ಸವವನ್ನು ನೋಡಿದ್ದೀರಾ? ಹಿಂದೆಂದೂ ಕಂಡಿರದ ಸಂಭ್ರವು ಮೈಸೂರಿನ ನಾಡ ಹಬ್ಬದಲ್ಲಿ ಆಚರಣೆಯಲ್ಲಿ ವಿಜೃಂಭಿಸುತ್ತಿದೆ. ಮೈಸೂರು ದಸೆರಾ ನಿಜಕ್ಕೂ ಕರ್ನಾಟಕದ ಶ್ರೀಮಂತ ಸಂಸ್ಕೃತಿ, ಇತಿಹಾಸ ಮತ್ತು ಪರಂಪರೆಯನ್ನು ಜಗತ್ತಿನ ಮುಂದೆ ಪ್ರದರ್ಶಿಸುವ ಉತ್ಸವವಾಗಿದೆ.
ಮೈಸೂರಿನ ಮಹಾರಾಜರು ಆರಂಭಿಸಿದ ಈ ನವರಾತ್ರಿಯ ಹಬ್ಬವನ್ನು ಸರಕಾರ ರಾಜ್ಯದ ಪ್ರಮುಖ ಉತ್ಸವವನ್ನಾಗಿ ಆಚರಿಸಿ ಈ ಬಾರಿ ವಿಶ್ವದ ಗಮನವನ್ನು ಸೆಳೆದಿದೆ. ಮೈಸೂರು ನಗರ ನಮ್ಮ ದೇಶದಲ್ಲಿ ಅತೀ ಹೆಚ್ಚು ಪ್ರವಾಸಿಗರನ್ನು ಆಕರ್ಷಿಸುವ ಪರಾಂಪರಿಕ ಕೇಂದ್ರವಾಗಿದೆ. ವಿವಿಧ ಕಲಾ ವೈಭವಗಳನ್ನು ಹೊಂದಿರುವ ಸಾಂಸ್ಕೃತಿಕ ನಗರವಾಗಿ ವಿಖ್ಯಾತವಾಗಿದೆ.
ನಿಮಗೆ ಈ ಬಾರಿಯ ದಸೆರಾ ವೈಭವದ ಆಚರಣೆಯಲ್ಲಿ ಜನ ಸಾಮಾನ್ಯರು ಹಿಂದೆಂದಿಗಿಂತಲೂ ಹೆಚ್ಚು ಉತ್ಸಾಹದಿಂದ ಭಾಗವಹಿಸುತ್ತಿದ್ದಾರೆಂದು ಅನಿಸದೇ ಇರದು. ನಗರ ಪೂರ್ಣ ಜನಸಂಧಣಿಯಿಂದ ತುಂಬಿ ಹೋಗಿದೆ. ನಾಡಹಬ್ಬಕ್ಕಿರುವ ಸಂಪೂರ್ಣ ಗುಣ ಮತ್ತು ಸ್ವಭಾವಗಳ ಆಕರ್ಷಣೆಯು ಈ ಬಾರಿಯ ನವರಾತ್ರಿಯ ದಿನಗಳಲ್ಲಿ ವಿಶೇಷವಾಗಿ ಕಾಣಿಸಿತು. ನವರಾತ್ರಿಯ ಎಲ್ಲಾ ದಿನಗಳಲ್ಲೂ ಮಹಿಳೆಯರು ಮತ್ತು ಮಕ್ಕಳು ಅತೀ ಹೆಚ್ಚಿನ ಸಂಖ್ಯೆಯಲ್ಲಿ ಚಾಮುಂಡಿ ಬೆಟ್ಟಕ್ಕೆ ಬೇಟಿ ನೀಡಿ, ಚಾಮುಂಡಿ ದೇವಿಯ ದರ್ಶನ, ಶ್ರದ್ಧೆ ಮತ್ತು ಭಕ್ತಿ ಭಾವಗಳಿಂದ ಪೂಜೆಗಳ ಅರ್ಪಣೆ ಇತ್ಯಾದಿ ವಿಧಿ ಕಾರ್ಯಗಳನ್ನು ಭಕ್ತಿಭಾವಗಳಿಂದ ನೆರವೇರಿಸುತ್ತಿದ್ದರು. ಬರೀ ಮೈಸೂರು ಮಾತ್ರವಲ್ಲ, ಸಮೀಪದ ಧಾರ್ಮಿಕ ಕೇಂದ್ರಗಳಲ್ಲೂ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತಾಧಿಗಳು, ಆಸ್ತಿಕರು ಬೇಟಿಯನ್ನು ನೀಡುತ್ತಿದ್ದರು. ಪ್ರವಾಸಿ ಕೇಂಧ್ರ, ವಿನೋಧ ಸ್ಥಳಗಳಂತೂ ಪ್ರವಾಸಿಗಳಿಂದ ಸದಾ ಕಿಕ್ಕಿರಿದಿತ್ತು.
ಮೈಸೂರು ನಗರವೂ ಅಷ್ಟೇ, ಹಿಂದೆಂದಿಗಿಂತಲೂ ಅದ್ಭುತಕರವಾದ ವಿದ್ಯುತ್ ಅಲಂಕಾರ ತೋರಣಗಳಿಂದ ಶೃಂಗಾರಗೊಂಡಿತ್ತು. ವಿಧ್ಯುತ್ ಅಲಂಕಾರಗಳಂತೂ ಬಹಳ ಮನೋಹರವಾಗಿತ್ತು. ನಾಡಿನ ಜನರಂತೂ ಮೈಸೂರು ನಗರದ ಸೊಬಗು ಸೌಂದರ್ಯಕ್ಕೆ ಮಂತ್ರ ಮುಗ್ಧರಾದವರಂತೆ ಮನಸೋತ್ತಿದ್ದರು. ಮೈಸೂರು ಪೂರ್ಣ ಸಂಭ್ರಮದ ತಾಣಗಳಾಗಿ ಬದಲಾದಂತೆ ಅನಿಸಿತು. ನಗರದೆಲ್ಲೆಲ್ಲೂ ಕ್ರೀಡೆ, ಕಲೆ, ಸಂಗೀತ, ನೃತ್ಯ ಸಾಹಿತ್ಯ, ಸಾಂಸ್ಕೃತಿಕ ಕಾರ್ಯಕ್ರಮಗಳ ಆಯೋಜನೆ, ಪ್ರದರ್ಶನ ಚಟುವಟಿಕೆಗಳಿಂದ ಉತ್ಸವವು ಅರ್ಥಪೂರ್ಣವಾಗಿತ್ತು. ಆಹಾರ ಮೇಳ. ಸಂಗೀತ ಕಾರ್ಯಕ್ರಮ, ಜನಪದ ವಸ್ತು ಪದಾರ್ಥಗಳ ಪ್ರದರ್ಶನ ಮಾರಾಟಗಳ, ವಸ್ತು ಪ್ರದರ್ಶನ, ಮೃಗಾಲಯ, ಹೀಗೆ ಅನೇಕ ಕಾರ್ಯಕ್ರಮಗಳು, ಹತ್ತು ಹಲವು ಚಟುವಟಿಕೆಗಳು ಮೈಸೂರಿನಲ್ಲಿ ಸಡಗರದಿಂದಲೇ ನಡೆಯುತ್ತಿದ್ದವು. ಎಲ್ಲಾ ಸ್ಥಳಗಳಲ್ಲಿಯೂ ನಾಡಿನ ಜನತೆ ಮತ್ತು ಪ್ರವಾಸಿಗರು ಉತ್ಸಾಹದಿಂದ ಬೇಟಿಕೊಡುತ್ತಿದ್ದರು. ಮೈಸೂರಿನ ವಿಶ್ವ ವಿಖ್ಯಾತ ಅರಮನೆಯ ಶೃಂಗಾರ, ಸಿರಿ ವೈಭೋಗದ ಅಲಂಕಾರಗಳ ಪ್ರದರ್ಶನಗಳಂತೂ ಕಣ್ಣು ತುಂಬಿಕೊಂಡಷ್ಟೂ ಮನಸೋಲುವ ಮನೋಹರವಾದ ಸೊಬಗನ್ನು ಹರಡಿಕೊಂಡಿತ್ತು.
ಮೈಸೂರು ದಸೆರಾವು ಪರಾಂಪರಿಕವಾಗಿ ಆಚರಿಸಿಕೊಂಡು ಬಂದಿರುವ ಸಾಂಸ್ಕೃತಿಕ ಹಬ್ಬ. ಮೈಸೂರಿಗರ ಸ್ವಾಭಿಮಾನದ ನಾಡ ಹಬ್ಬ. ದಸೆರಾ ಅಂದರೆ ಹತ್ತನೇ ದಿವಸ ಎಂದರ್ಥ. ದಸ್ –ರಾ; ನವರಾತ್ರಿಯ ನಂತರದ ದಿನ. ದಸೆರಾವನ್ನು ವಿಜಯನಗರದ ಅರಸ 2ನೇ ದೇವರಾಯ ಆರಂಭಿಸಿದ್ದರು. ವಿಜಯನಗರದ ಸಾಮಂತರಾಜರಾಗಿದ್ದ ಮೈಸೂರು ಮಹಾರಾಜ 1ನೇ ರಾಜಾ ಒಡೆಯರ್ ರವರು ಈ ಹಬ್ಬವನ್ನು ವಿಜಯದಶಮಿಯಾಗಿ ಮೈಸೂರಿನಲ್ಲಿ ಮುಂದುವರಿಸಿದರು. ಮಹಾರಾಜ ನಾಲ್ವಡಿ ಕೃಷ್ಣರಾಜ ಒಡೆಯರ್ ಈ ಉತ್ಸವವನ್ನು ಅತೀ ವಿಜೃಂಬಣೆಯಿಂದ ಆಚರಿಸಿದರು. ಈ ಬಾರಿಯ ದಸೆರಾ ಉತ್ಸವು ಐತಿಹಾಸಿಕ ಮಹತ್ವವನ್ನು ಹೊಂದಿರುವ 414ನೇ ವರ್ಷದ ಉತ್ಸವವಾಗಿದೆ. ಇದು ಮೈಸೂರಿಗರ ನಾಡ ಹಬ್ಬ. ಕನ್ನಡ ರಾಜ್ಯದ ಉತ್ಸವ!
ಈ ವರ್ಷದ ದಸೆರಾ ಉತ್ಸವದಲ್ಲಿ ಭಾಗವಹಿಸುತ್ತಿದ್ದ ಜನರಲ್ಲಿ ಹಿಂದೆಂದೂ ಕಾಣದ ಸಡಗರ, ಸಂಭ್ರಮವನ್ನು ಕಾಣಬಹುದು. ಜನ ಸಾಮಾನ್ಯರು ತೋರಿಸುತ್ತಿರುವ ಆಸಕ್ತಿ, ಹುಮ್ಮಸ್ಸು ಆಶ್ಚರ್ಯವನ್ನುಂಟು ಮಾಡದೇ ಇರದು. ಆದರೆ ದಸೆರಾ ಹಬ್ಬನ್ನು ಇಷ್ಟೊಂದು ಉತ್ಸಾಹ, ಸಡಗರದಿಂದ ಆಚರಿಸುವುದಕ್ಕೆ ಸರಕಾರ ನೀಡುತ್ತಿರುವ ಸೌಲಭ್ಯಗಳೂ ಒಂದು ಕಾರಣ. ಬಡವರಿಗೆ ಉಚಿತ ಪಡಿತರ, ಮಹಿಳೆಯರಿಗೆ ಉಚಿತ ಪ್ರಯಾಣ ಸೌಕರ್ಯ, ಇಂದಿರಾ ಕ್ಯಾಂಟೀನ್, ವಯಸ್ಕ ಮಹಿಳೆಯರಿಗೆ ಎರಡು ಸಾವಿರ ರೂಪಾಯಿಗಳ ಮಾಸಿಕ ಗೌರವಧನ, ಇತರೇ ಮಾಸಾಶನ ಸೌಲಭ್ಯಗಳು ಇತ್ಯಾದಿ ಬಡಜನರಿಗೆ ನೀಡುತ್ತಿರುವ ಮೂಲಭೂತ ಸಹಾಯ ನೆರವುಗಳೂ ಕಾರಣವಾಗಿವೆ. ಇವುಗಳುಎಲ್ಲವೂ ಸಮಾಜ ಕಲ್ಯಾಣಕ್ಕೆ ನೆರವಾಗಿದೆ, ಜನ ಸಾಮನ್ಯರ ಬಡತನವನ್ನು ನಿರ್ಮೂಲನಗೊಳಿಸಲು ಸಹಕಾರಿಯಾಗಿದೆ. ಬಡಜನರಿಗೆ ನೀಡಿದ ಈ ಸವಲತ್ತುಗಳು ಪರೋಕ್ಷವಾಗಿ ರಾಜ್ಯದಲ್ಲಿ ಆರ್ಥಿಕ ಚಲನೆಗೆ ಪೂರಕವಾಗಿ ಪ್ರವರ್ತಿಸಿದಂತೆ ಕಾಣುತ್ತಿವೆ.
ಅದೇನೇ ಹೇಳಿ, ಮನುಷ್ಯನ ಹಸಿವು ಇಂಗಿದರೆ ಸಾಕು ಆತನ ಚಿಂತೆ ದೂರವಾಗುತ್ತದೆ, ಜನರ ಹಸಿವನ್ನು ಶಮನಗೊಳಿಸುವ ಯಾವುದೇ ವ್ಯವಸ್ಥೆಯು ಜನರಲ್ಲಿ ಬದುಕಿನ ಭರವಸೆಯನ್ನು ಮೂಡಿಸುತ್ತದೆ. ಜನರು ಹೆಚ್ಚು ಶ್ರದ್ಧೆಯಿಂದ ಅಸ್ಮಿತೆಯನ್ನು ಬೆಳಿಸಿಕೊಳ್ಳುತ್ತಾರೆ, ಸಂಸ್ಕೃತಿಯನ್ನು ಭಕ್ತಿಯಿಂದ ಆಚರಿಸುತ್ತಾರೆ, ಸಂಸ್ಕಾರವನ್ನು ಗೌರವದಿಂದ ಕಾಪಾಡಿಕೊಳ್ಳುತ್ತಾರೆ. ಸಮಾಜದಲ್ಲಿ ನೆಮ್ಮದಿ ಮತ್ತು ಜನರಲ್ಲಿ ಸಮದಾನವಿದ್ದಾಗ ಮಾತ್ರ ಸಮಾಜದಲ್ಲಿ ಒಗ್ಗಟ್ಟು, ಸಾಮರಸ್ಯಗಳು ಗಟ್ಟಿಯಾಗಿ ನೆಲೆ ನಿಲ್ಲುತ್ತವೆ. ಯಾವುದೇ ಶಕ್ತಿಗಳು ಎಷ್ಟು ವಿರೋಧಿಸಿದರೂ, ಪ್ರತಿಭಟಿಸಿದರೂ ಆ ಎಲ್ಲಾ ಪ್ರಯತ್ನಗಳನ್ನು ಸಮಾಜವು ಒಟ್ಟಾಗಿ ನಿಂತು ಪ್ರತಿರೋಧಿಸುತ್ತದೆ, ಮೆಟ್ಟಿನಿಲ್ಲುತ್ತದೆ.
ಈ ಭಾರಿಯ ದಸೆರಾ ಉತ್ಸವು ಸಮಾಜದಲ್ಲಿ ಗಟ್ಟಿಯಾಗಿ ನೆಲೆನಿಂತಿರುವ ಸಾಮರಸ್ಯದ ಸಂಕೇತವಾಗಿದೆ. ಇದು ಜನ ಸಾಮಾನ್ಯರಲ್ಲಿರುವ ನೆಮ್ಮದಿ ಮತ್ತು ಸಂತಸದ ಸೂಚ್ಯಂಕವಾಗಿದೆ. ವಿಶ್ವ ಮಾನವ ಕುವೆಂಪುರವರ ನಮ್ಮ ನಾಡು ಸರ್ವ ಜನಾಂಗದ ಶಾಂತಿಯ ತೋಟವಾಗಲಿ. ಎಲ್ಲರಲ್ಲೂ ಪ್ರೀತಿ ಅರಳಿಸಲಿ .ಈ ಉತ್ಸವು ನಾಡಿಗೆ ಸಮೃದ್ಧಿಯನ್ನು ತರಲಿ, ಜನರಲ್ಲಿ ನೆಮ್ಮದಿ, ಸಂತಸವನ್ನು ಮೂಡಿಸಲಿ. ಸರಕಾರವು ಈ ಭಾರಿಯ ದಸೆರಾ ಉತ್ಸವವನ್ನು ಅತೀ ವಿಜೃಂಬಣೆಯಿಂದ ಆಚರಿಸಿದೆ. ಎಲ್ಲಾ ಕಾರ್ಯಕ್ರಮಗಳನ್ನು ವ್ಯವಸ್ಥಿತವಾಗಿ ಏರ್ಪಾಡು ಮಾಡಲಾಗಿತ್ತು. ಈ ಉತ್ಸವವನ್ನು ವಿಶ್ವದಲ್ಲಿನ ಉತ್ತಮವಾದ ಸಾಂಸ್ಕೃತಿಕ ಆಚರಣೆಯ ಮಟ್ಟಕ್ಕೆ ಏರಿಸಿದೆ. ಈ ಕೀರ್ತಿ ಕರ್ನಾಟಕದ ಮುಖ್ಯಮಂತ್ರಿ ಸನ್ಮಾನ್ಯ ಶ್ರೀ. ಸದ್ಧರಾಮಯ್ಯನವರಿಗೆ ಸಲ್ಲುತ್ತದೆ.
#ಕರೀಂ ರಾವ್ ತರ್.


