ಧರ್ಮಸ್ಥಳದ ತನಿಖೆಗಳು

ಮಹೇಶ್ ತಿಮ್ಮರೋಡಿ ಸೌಜನ್ಯಳ ಕೊಲೆ ಪ್ರಕರಣವನ್ನು ಬೆನ್ನಟ್ಟದೇ ಇದ್ದಿದ್ದರೇ ಸೌಜನ್ಯಳ ಕೊಲೆ ಪ್ರಕರಣ ಎಂದೋ ಮುಕ್ತಾಯವಾಗಿ ಜನರಿಂದ ಮರೆಯಾಗಿ ಹೋಗುತ್ತಿತ್ತು. ಇದನ್ನು ಕರಾವಳಿಯ ಜನ ತಿಳಿದಿರಬೇಕು. ಹಾಗೆಯೇ ಸನ್ಮಾನ್ಯ ಶ್ರೀ. ಸಿದ್ಧರಾಮಯ್ಯನವರಲ್ಲದೇ ಬೇರೆ ಯಾರೇ ಮುಖ್ಯಮಂತ್ರಿ ಯಾರೇ ಇದ್ದರೂ ಈ ರೀತಿ ಎಸ್ಐಟಿ ರಚನೆಯಾಗುತ್ತಿರಲಿಲ್ಲ. ಈ ಇಚ್ಛಾಶಕ್ತಿ ಕೇವಲ ಸಿದ್ಧರಾಮಯ್ಯನವರಿಗೆ ಮಾತ್ರ ಇದೆಯೆಂಬುದನ್ನು ಕರ್ನಾಟಕದ ಜನ ಮರೆಯಬಾರದು.

ಧರ್ಮಸ್ಥಳದ ತನಿಖೆಗಳು

ಧರ್ಮಸ್ಥಳದ ತನಿಖೆಗಳು

ಧರ್ಮಸ್ಥಳದ ದೂರುಗಳು ಆರಂಭವಾಗಿ ಈಗಾಗಲೇ ತಿಂಗಳುಗಳೇ ಕಳೆದಿವೆ.  ಅನಾಮಧೇಯ ವ್ಯಕ್ತಿ ನೀಡಿದ ದೂರಿನ ಮೇಲೆ ಆದ ಪ್ರಕರಣದ ತನಿಖೆಯನ್ನು ಎಸ್ ಐಟಿ ನಡೆಸುತ್ತಿದೆ.   ತನಿಖೆ ಏನೇ ಆಗಲೀ, ಹೇಗೆ ನಡೆಯಲಿ. ಕರಾವಳಿಯ ಯಾವುದೇ ಪ್ರಕರಣಕ್ಕೂ ಒಂದು ಮಸಾಲೆ ಬೇಕೇ ಬೇಕು! ಅದು ಹಿಂದೂ ಮುಸ್ಲೀಮಿಕರಣ!  ವಿಚಾರ ಯಾವುದೇ ಇರಲಿ  ಅದರ ಚಕ್ರ ತಿರುಗಬೇಕಾದರೆ ಈ ವಿಚಾರವಿರುವ ಆಯಿಲ್  ಖಡಾಖಂಡಿತ ಇರಲೇ ಬೇಕು.

ಅನಾಮಧೇಯ ವ್ಯಕ್ತಿ  ಚಿನ್ನಯ್ಯ ಯಾವತ್ತೂ ಸೌಜನ್ಯಳ ಕೊಲೆ ಪ್ರಕರಣದ  ವಿಚಾರವಾಗಿ ದೂರು ನೀಡಿಲ್ಲ. ಆತನ ದೂರಿಗೂ ಸೌಜನ್ಯಳ ಪ್ರಕರಣಕ್ಕೂ ಯಾವುದೇ ಸಂಬಂಧ ಇಲ್ಲ.  ಆತ ನೀಡಿದ್ದು ತಾನು ಹಲವಾರು ಹೆಣಗಳನ್ನೂ ಹೂತು ಹಾಕಿದ್ದೆ. ಬಂದರೇ ತೋರಿಸಿ ಕೊಡುತ್ತೀನಿ ಎಂದು ದೂರು ನೀಡಿದ್ದ. ಆದರೆ ಧರ್ಮಸ್ಥಳಕ್ಕೆ ಸಂಬಂಧಿಸಿದ ಎಲ್ಲಾ ವಿಚಾರಗಳಲ್ಲಿ  ಕಂಡು ಬಂದಿರುವ ಪ್ರತಿಯೊಂದು ದೂರು ಆರೋಪ, ಸಂಶಯ, ಅನುಮಾನಗಳ ಎಲ್ಲಾ ಆಯಾಮಗಳನ್ನು ತನಿಖೆ ಮಾಡಿ ಸತ್ಯಾಸತ್ಯತೆಯನ್ನು ಜನರ ಮುಂದಿಡಲು ಸರಕಾರ ತೀರ್ಮಾನ ಕೈಗೊಂಡು  ಪರೊಮೋನ್ನತ ಪೊಲೀಸ್ ಅಧಿಕಾರಿಯ ನೇತೃತ್ವದಲ್ಲಿ ಒಂದು ಪ್ರತ್ಯೆಕ ತಂಡವನ್ನು ರಚಿಸಿ ಜವಾಬ್ದಾರಿಯನ್ನು ನೀಡಿತು. 

ಇಲ್ಲಿ ಎರೆಡು ವಿಷಯಗಳನ್ನು ಗಮನಿಸಬೇಕು. ಮೊದಲನೇಯದಾಗಿ  ಸೌಜನ್ಯಳ ಕೊಲೆ ಪ್ರಕರಣ ಇಷ್ಟೊಂದು ತೀವ್ರ ಮಟ್ಟಕ್ಕೆ ತೆಗೆದುಕೊಂಡು ಹೋಗಲು ಮಹೇಶ್ ತಿಮ್ಮರೋಡಿ ಎಂಬ ವ್ಯಕ್ತಿಗೆ ಬಿಟ್ಟರೆ ಬೇರೆ ಯಾರಿಂದಲೂ ಸಾಧ್ಯವಿಲ್ಲ. ಮಂಗಳೂರಿನಲ್ಲಿ ಸಂಘಪರಿವಾರವನ್ನು ಎದುರುಹಾಕಿಕೊಂಡು ಯಾರಿಗೂ ಯಾವ ಮರ ಹತ್ತಲೂ ಸಾಧ್ಯವಿಲ್ಲ. ಒಂದೋ ಕಲ್ಲು ಹೊಡೆಯುತ್ತಾರೆ ಇಲ್ಲವಾದರೆ ಮರವನ್ನೇ ಕಡಿದು ಬಿಡುತ್ತಾರೆ.  ಆದರೆ ಆ ಸಾಹಸ ಧೈರ್ಯವನ್ನು ತೋರಿಸಿದವರು ಮಹೇಶ್ ತಿಮ್ಮರೋಡಿ ಮಾತ್ರ. ಕರಾವಳಿಯ ಒಳಹೊರವನ್ನು  ಸಂಪೂರ್ಣ ತಿಳಿದಿರುವ ಸಂಘಪರಿವಾರದಿಂದಲೇ ಬೆಳೆದು ಬಂದಿರುವ ಚಾಣಾಕ್ಷ ನಾಯಕ.   ಅವರಿಗೆ ಧರ್ಮಸ್ಥಳದಲ್ಲಿ ನಡೆಯುತ್ತಿರುವ ವಿದ್ಯಾಮಾನಗಳ ಬಗ್ಗೆ ಆಕ್ರೋಶವಿದೆ.  ಅವರು ಹೇಳುವುದನ್ನು ಕೇಳಿಸಿಕೊಂಡರೇ ಎಲ್ಲಿಯೋ ಎಡವಟ್ಟಾಗಿದೆ ಎಂದೆನಿಸದೇ ಇರದು.  ತಿಮ್ಮರೋಡಿ ಹೇಳುವುದೆಲ್ಲಾ ಸತ್ಯವಾಗಿರದೇ ಇರಬಹುದಾದರೂ ಎಲ್ಲವೂ ಸುಳ್ಳು ಎಂದು ಸಾರಸಗಟಾಗಿ ತಿರಸ್ಕರಿಸಲು ಆಗದು ಎಂಬ ನಿಲುವು ಕರಾವಳಿಯ ಜನರ ಮನಸ್ಸಿನಲ್ಲಿ ಈಗಲೂ ಗಟ್ಟಿಯಾಗಿಯೇ ಉಳಿದಿದೆ.

ಇನ್ನು ಈ ಮಹೇಶ್ ತಿಮ್ಮರೋಡಿಯನ್ನು ಬಿಟ್ಟರೆ ಎದ್ದು ಕಾಣುವ ಖಾವಂದರು ಎಂದರೆ ಕರ್ನಾಟಕದ ಹೆಮ್ಮೆಯ ಟಗರು ಮುಖ್ಯಮಂತ್ರಿ ಸನ್ಮಾನ್ಯ ಶ್ರೀ. ಸಿದ್ದರಾಮಯ್ಯನವರು. ಧರ್ಮಸ್ಥಳದ ಸಂಬಂಧವಾಗಿ ಆಗಿಂದಾಗ್ಗೆ ಬರುತ್ತಿರುವ ದೂರು ಆರೋಪಗಳ ಬಗ್ಗೆ ಸರಿಯಾದ ವಿಚಾರಣೆಯನ್ನು ಮಾಡಲು ಒಂದು ಎಸ್ಐಟಿಯನ್ನೇ ರಚನೆ ಮಾಡಿದರು.  ಮಹೇಶ್ ತಿಮ್ಮರೋಡಿ ಸೌಜನ್ಯಳ ಕೊಲೆ ಪ್ರಕರಣವನ್ನು ಬೆನ್ನಟ್ಟದೇ ಇದ್ದಿದ್ದರೇ ಸೌಜನ್ಯಳ ಕೊಲೆ ಪ್ರಕರಣ ಎಂದೋ ಮುಕ್ತಾಯವಾಗಿ ಜನರಿಂದ ಮರೆಯಾಗಿ ಹೋಗುತ್ತಿತ್ತು. ಇದನ್ನು ಕರಾವಳಿಯ ಜನ ತಿಳಿದಿರಬೇಕು.  ಹಾಗೆಯೇ ಸನ್ಮಾನ್ಯ ಶ್ರೀ. ಸಿದ್ಧರಾಮಯ್ಯನವರಲ್ಲದೇ ಬೇರೆ ಯಾರೇ ಮುಖ್ಯಮಂತ್ರಿ ಯಾರೇ ಇದ್ದರೂ ಈ ರೀತಿ ಎಸ್ಐಟಿ ರಚನೆಯಾಗುತ್ತಿರಲಿಲ್ಲ. ಈ ಇಚ್ಛಾಶಕ್ತಿ ಕೇವಲ ಸಿದ್ಧರಾಮಯ್ಯನವರಿಗೆ ಮಾತ್ರ ಇದೆಯೆಂಬುದನ್ನು ಕರ್ನಾಟಕದ ಜನ ಮರೆಯಬಾರದು.

ಎಸ್ಐಟಿ ತನಿಖೆ ಹಳ್ಳ ಹಿಡಿಯುತ್ತದೋ ಇಲ್ಲಾ ಬೆಟ್ಟ ಹತ್ತುತದೋ ಎಂಬುದನ್ನು ಈಗಲೇ ಹೇಳಲು ಸಾಧ್ಯವಿಲ್ಲ. ಆದರೆ ಒಂದು ವಿಚಾರವನ್ನಂತೂ ಖಡಾಖಂಡಿತವಾಗಿ ಹೇಳಬಹುದು. ಈ ಘಟನೆಯಿಂದಾಗಿ ಧರ್ಮಸ್ಥಳದಲ್ಲಿ ಮಾತ್ರವಲ್ಲ, ಬೇರೆ ಎಲ್ಲಿಯೆ ಆಗಲೀ, ಯಾವುದೇ ಅಪರಿಚಿತ ವ್ಯಕ್ತಿ ಅಥವಾ  ಅನಾಥ ಹೆಣ್ಣುಮಕ್ಕಳು  ಇಲ್ಲಿಯವರೆಗೆ ಸತ್ತಹಾಗೇ ಇನ್ನು ಮೇಲೆ ಸಾಯಲಾರರು! ಪೊಲೀಸರು ಅನಾಥ ವ್ಯಕ್ತಿ ಅಥವಾ ಅಪರಿಚಿತ ಮಹಿಳೆಯ ಹೆಣ ಎಂದು ಹೆಣಗಳನ್ನು ಗ್ರಾಮ ಪಂಚಾಯಿತಿಗೆ ಒಪ್ಪಿಸಲಾರರು! ಗ್ರಾಮಪಂಚಾಯಿತಿಯು ಬಿಲ್ಲು ಬರೆದು ಹೆಣವನ್ನು  ಹೂತು ಹಾಕುವವನಿಗೆ ಚೀಟಿ ಕೊಡಲಾರದು! ಹೂತು ಹಾಕುವವನೂ ಸಹ ಹೆಣವನ್ನು ಅನಾಮತ್ತಾಗಿ ಎತ್ತಿಕೊಂಡು ಹೋಗಿ ಎಲ್ಲೋ ಬಯಲಲ್ಲಿ ಬಿಸಾಡಿಯೋ ಅಥವಾ ಅರಣ್ಯದೊಳಗೆ ಎಲ್ಲೋ ಮಣ್ಣು ಮಾಡಿಯೋ ಬರಲಾರ!  ಆ ರೀತಿಯ ಹೆಣದ ತನಿಖೆ ಇನ್ನು ಮೇಲೆ ಸಂಭವಿಸದು!  ಅಷ್ಟರ ಮಟ್ಟಿಗೆ ಈ ಚಳುವಳಿಗೆ  ನ್ಯಾಯ ಸಿಕ್ಕಿದೆಯೆಂದು ಜನರು ತೃಪ್ತಿಪಟ್ಟುಕೊಳ್ಳಬಹುದು! ಈ ದೂರುಗಳಿಂದ, ಈ ತನಿಖೆಗಳಿಂದ ಈ ಹೋರಾಟ ಯಶಸ್ವಿಯಾಗಿದೆಯೆಂದು  ಸಮಾದಾನ ಪಟ್ಟುಕೊಳ್ಳಬಹುದು.

ಗೃಹ ಸಚಿವರ ಹೇಳಿಕೆ, ಉಪ ಮುಖ್ಯಮಂತ್ರಿಗಳ  ಅಭಿಪ್ರಾಯಗಳನ್ನು ಒಟ್ಟಾಗಿ ಕೂಡಿಸಿ ಓದಿದರೆ  ಎಸ್ ಐಟಿ ತನಿಖೆಗೆ ಅಗಲೇ ಎಳ್ಳುನೀರು ಬಿಟ್ಟಾಗಿದೆ ಎಂದೆನಿಸುತ್ತಿದೆ.  ಆದರೆ, ಈಗ ಆಗುತ್ತಿರುವ ವೈರಲ್ ಆರೋಪವಾಗಿರುವ  ಪೊಲೀಸರು ಹಿಂದೆ ಸತ್ತಿದ್ದ ಅಪರಿಚಿತ ಹುಡುಗಿಯ ದೇಹವನ್ನು ಏಕೆ ಗ್ರಾಮ ಪಂಚಾಯಿತಿಗೆ ಕೊಡುತ್ತಿದ್ದರು ಮತ್ತು ಗ್ರಾಮ ಪಂಚಾಯಿತಿ ಏಕೆ ಸ್ವಿಕರಿಸಿ ವಿಲೇವಾರಿ ಮಾಡುತ್ತಿದ್ದರು ಎಂಬುದಾಗಿದೆ. ದನ್ನು ಪತ್ತೆ ಮಾಡಲೇ ಬೇಕು. ಪೊಲೀಸರು ಕಾನೂನಿಗೆ ವಿರುದ್ಧವಾಗಿ ಏಕೆ ನಡೆದುಕೊಳ್ಳುತ್ತಿದ್ದರು ಎಂಬುದನ್ನು ಪತ್ತೆ ಮಾಡಲೇ ಬೇಕು.  ಸ್ವತ: ಪೊಲೀಸ್ ಘಟಕವೇ ಆಗಿರುವ ಎಸ್ಐಟಿ ಈ ಬಗ್ಗೆ ಮಾಹಿತಿಯನ್ನು ಜನರ ಮುಂದೆ ಇಡಬೇಕು.

 ಸೌಜನ್ಯ ಕೊಲೆ ವಿರೋಧಿ ಹೋರಾಟವನ್ನಂತೂ ಅತ್ಯಂತ ಶ್ರದ್ಧೆಯಿಂದ ಅಚ್ಚುಕಟ್ಟಾಗಿ ಧಮನಿಸಲಾಗುತ್ತಿದೆ.  ಮುಂದಿನ ಆಧೇಶದವರೆಗೆ  ತನಿಖೆಯನ್ನು ಸಂಕೋಲೆಗೆ ಕಟ್ಟಿದ್ದಾರೆ. ಲಾಕಪ್ ಸೆಲ್, ಜೈಲುಗಳನ್ನು ತೋರಿಸಿಯೇ ಹೋರಾಟದ ಧ್ವನಿಯನ್ನು ಹಿಸುಕುತ್ತಿದ್ದಾರೆ.  ಮೂಲ ಹೋರಾಟಗಾರನನ್ನು ಅತ್ಯಂತ ಜಾಣ್ಮೆಯಿಂದ ಜೈಲಿಗೆ ಕಳುಹಿಸಿ ಪೊಲೀಸರು ಎಲ್ಲರಿಗೂ ಮಾದರಿಯನ್ನು ತೋರಿಸಿದ್ದಾರೆ. ತಿಮ್ಮರೋಡಿಯನ್ನು ದಸ್ತಗಿರಿ ಮಾಡಿ ಜೈಲಿಗೆ ಕಳುಹಿಸಿದನ್ನಂತೂ ಹೊಗಳಲೇ ಬೇಕು!  ಪೊಲೀಸರು ಸೆಟೆದು ನಿಂತು ಡ್ಯೂಟಿ ಮಾಡಿದ್ದಾರೆ.  ಹಾಗೆಯೇ ಜಾತಿ ಜನಾಂಗ, ದ್ವೇಷ, ಅಸೂಯೆ, ಅಸಭ್ಯತೆ, ಅಶ್ಲೀಲತೆಗಳ ಹೊಲಸುಗಳಿಂದಾಗಿ  ಸಾಮಾಜಿಕ ಜಾಲದ ಯಾವುದೇ ಮಾದ್ಯಮಗಳ ಒಳ ಹೊಕ್ಕರೂ  ಸಾಕು ಕಾರ್ಪೋರೇಶನ್ ತೊಟ್ಟಿಗೆ ಬಿದ್ದಂತೆ ಭಾಸವಾಗುವಷ್ಟು ಹೇಸಿಗೆ ಅನಿಸುತ್ತೆ. ಅಷ್ಟು ಮಲೀನಸವಾಗಿದೆ. ಈ ರಾಜ್ಯದ ಮುಖ್ಯಮಂತ್ರಿಯವರ  ವಿರುದ್ಧ ಎಷ್ಟೊಂದು ಕೆಟ್ಟದಾಗಿ ಬೈಯೋದನ್ನು ಜಾಲತಾಣದಲ್ಲಿ ಕಾಣ ಸಿಗೋದಿಲ್ಲ?  ಏಕೆ ಕ್ರಮ ಇಲ್ಲ?  ಕರ್ನಾಟಕದಲ್ಲಿ ಬ್ರಹ್ಮಾವರ ಪೊಲೀಸರು ಮಾತ್ರ ಪೊಲೀಸರಾ? ಅವರಿಗೆ ಮಾತ್ರ ಸರಕಾರ ಸಂಬಳ ಕೊಡುತ್ತಿದೆಯಾ?  ಕರ್ನಾಟಕದ  ಪೊಲೀಸರಿಗೆ ಇದೇ ರೀತಿ ಸೆಟೆದು ನಿಂತು ಫೇಸ್ ಬುಕ್, ವಾಟ್ಸಪ ಇತ್ಯಾದಿಗಳನ್ನು ಶುಚಿಗೊಳಿಸುವುದಕ್ಕೆ ಬಿಗಿ ಕ್ರಮ ಕೈಗೊಳ್ಳಲು  ಇದು ಮಾದರಿಯಾಗಿರಲಿ.  

ಈಗ ತನಿಖೆ ನಡೆಸಲು ಎಸ್ ಐಟಿ ಸಾಲದೆಂದು ಹೊಸ ಹೊಸ ತಂತ್ರಗಾರಿಕೆಗಳನ್ನು ಬಳಸಲಾಗುತ್ತಿದೆ.   ಇ.ಡಿ. ಸಿಬಿಐ, ಎನ್ಐಎ, ಇಂಕಂಟ್ಯಾಕ್ಸ್ ಎಲ್ಲವೂ ಬರುತ್ತಿವೆ. ಪಿರ್ಯಾದಿಯನ್ನು ಆರೋಪಿಯನ್ನಾಗಿ ಮಾಡಲಾಗುತ್ತಿದೆ. ಯೂಟ್ಯೂಬರುಗಳಿಗೆ,  ಇತರೇ ಹೋರಾಟಗಾರರುಗಳಿಗೆ ನೋಟಿಸು ಕೊಟ್ಟು ಹೆದರಿಸಲಾಗುತ್ತಿದೆ. ನ್ಯಾಯ ಕೇಳುವವರು ಎಲ್ಲರೂ ಹೆದರಿ ಕೊಂಡಿದ್ದಾರೆ.  ಜನರಿಗೆ ಸಂಶಯ ಹುಟ್ಟಿಕೊಂಡಿರುವುದು ಇಲ್ಲಿಂದಲೇ.  ಏನೆನ್ನೋ ಮುಚ್ಚಿಹಾಕುವುದಕ್ಕಾಗಿಯೇ ನ್ಯಾಯ ಕೇಳುವವರ ಕತ್ತನ್ನು ಹಿಸುಕುವ  ಪ್ರಯತ್ನ ನಡೆಯುತ್ತಿದೆ  ಎಂಬ ಅನುಮಾನ ಕರಾವಳಿಯ ಜನರ ಮನಸ್ಸಿನಲ್ಲಿ  ತೀವ್ರ ಸ್ವರೂಪದಲ್ಲಿದೆ.