ಭಾರತದ "ಎಜ್ಯುಕೇಟ್ ಗರ್ಲ್ಸ್" ಗೆ ರಾಮನ್ ಮ್ಯಾಗ್ಸೆಸ್ಸೆ ಪ್ರಶಸ್ತಿ

ಭಾರತದ "ಎಜ್ಯುಕೇಟ್ ಗರ್ಲ್ಸ್" ಗೆ ರಾಮನ್ ಮ್ಯಾಗ್ಸೆಸ್ಸೆ ಪ್ರಶಸ್ತಿ

ಭಾರತದ ಕುಗ್ರಾಮಗಳಲ್ಲಿ ಹೆಣ್ಣು ಮಕ್ಕಳ ಶಿಕ್ಷಣಕ್ಕಾಗಿ ಶ್ರಮಿಸುತ್ತಿರುವ ಸರಕಾರೇತರ ಲಾಭರಹಿತ ಸಂಸ್ಥೆ "ಎಜ್ಯುಕೇಟ್ ಗರ್ಲ್ಸ್" ಗೆ ಈ ಬಾರಿಯ ಪ್ರತಿಷ್ಠಿತ ರಾಮನ್ ಮ್ಯಾಗ್ಸೆಸ್ಸೆ ಪ್ರಶಸ್ತಿ ಲಭಿಸಿದೆ.
     ಪ್ರಶಸ್ತಿ ಪ್ರಧಾನ ಸಮಾರಂಭವು ನವೆಂಬರ್ ಏಳರಂದು ಮನಾಲಿಯಲ್ಲಿ ನಡೆಯಲಿದೆ.ರಾಮನ್ ಮ್ಯಾಗ್ಸೆಸ್ಸೆ ಅವರ ಭಾವಚಿತ್ರ ಇರುವ ಪದಕ ಮತ್ತು ಪ್ರಮಾಣ ಪತ್ರವನ್ನು ಪ್ರಶಸ್ತಿಯು ಒಳಗೊಂಡಿದೆ.
      ನೋಬೆಲ್ ಪ್ರಶಸ್ತಿಗೆ ಸಮಾನಾದ ಈ ಪ್ರಶಸ್ತಿಯನ್ನು ಏಷ್ಯಾದಲ್ಲಿ ನಿಸ್ವಾರ್ಥ ಸೇವೆ ಸಲ್ಲಿಸಿರುವ ವ್ಯಕ್ತಿಗೆ ಅಥವಾ ಸಂಸ್ಥೆಗೆ ನೀಡಲಾಗುತ್ತದೆ. ಈ ಸಂಸ್ಥೆ ಪ್ರಶಸ್ತಿ ಪಡೆದ ಭಾರತದ ಮೊದಲ ಸಂಸ್ಥೆ ಎನ್ನುವ ಗೌರವಕ್ಕೆ ಪಾತ್ರವಾಗಿದೆ.
      ಮಾಲ್ಡೀವ್ಸ್‌ನ ಶಾಹಿನಾ ಆಲಿ ಹಾಗೂ ಫಿಲಿಫೈನ್ಸ್ ನ ಪ್ಲೇಮಿಯಾನೋ ಆಂಟೋನಿಯೋ ಎಲ್ ವಿಲ್ಲಾನುಯೇವಾ ಅವರಿಗೂ ಸಹ ಈ ಬಾರಿಯ ಮ್ಯಾಗ್ಸೆಸ್ಸೆ ಪ್ರಶಸ್ತಿ ಗೌರವ ಸಿಕ್ಕಿದೆ.