ಬೆಂಗಳೂರು ನಗರ್ತಪೇಟೆ ಅಗ್ನಿ ದುರಂತ: ಐವರ ಸಜೀವ ದಹನ
ಬೆಂಗಳೂರು ನಗರದ ನಗರ್ತಪೇಟೆಯಲ್ಲಿ ಇಂದು ಶನಿವಾರ ಮುಂಜಾನೆ ನಡೆದ ಬೆಂಕಿ ದುರಂತದಲ್ಲಿ ಒಂದೇ ಕುಟುಂಬದ ನಾಲ್ವರು ಸೇರಿದಂತೆ ಐವರು ಮೃತಪಟ್ಟಿದ್ದಾರೆ.
ಮುಂಜಾನೆ 3-30 ರ ಸಮಯದಲ್ಲಿ ಅಲ್ಲಿನ ಅಂಗಡಿ ಮಳಿಗೆಯೊಂದರಲ್ಲಿ ವಿದ್ಯುತ್ ಶಾರ್ಟ್ ಸರ್ಕ್ಯೂಟ್ ನಿಂದಾಗಿ ಬೆಂಕಿ ಹೊತ್ತಿಕೊಂಡಿತೆಂದು ಹೇಳಲಾಗಿದೆ.ಬೆಂಕಿ ಪಕ್ಕದ ನಾಲ್ಕು ಅಂತಸ್ತಿನ ಕಟ್ಟಡಕ್ಕೆ ವ್ಯಾಪಿಸಿ ಮದನ್ ಕುಮಾರ್(36), ಪತ್ನಿ ಸಂಗೀತ(33), ಮಕ್ಕಳಾದ ಮಿಥೇಶ್(8), ವಿಹಾನ್(5) ಹಾಗೂ ಮತ್ತೊಂದು ಅಂತಸ್ತಿನಲ್ಲಿದ್ದ ಕಾರ್ಮಿಕ ಸುರೇಶ್ (30) ಸಜೀವವಾಗಿ ದಹನವಾಗಿದ್ದಾರೆ.
ಹಲಸೂರು ಗೇಟ್ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.


