ಯೆಮೆನ್:ಕೇರಳ ಮೂಲದ ನರ್ಸ್ ನಿಮಿಷ ಪ್ರಿಯಳ ಗಲ್ಲು ಶಿಕ್ಷೆ ರದ್ದು:ಕಾಂತಪುರಂ ಅಬೂಬಕ್ಕರ್ ಮುಸ್ಲಿಯಾರ್ ಸಂಧಾನ ಯಶಸ್ವಿ.

ಅರಬ್ ರಾಷ್ಟ್ರ ಯೆಮೆನ್ ನಲ್ಲಿ ಗಲ್ಲು ಶಿಕ್ಷೆಗೊಳಗಾಗಿದ್ದ ಕೇರಳ ಮೂಲದ ನರ್ಸ್ ನಿಮಿಷ ಪ್ರಿಯಳ ಶಿಕ್ಷೆ ರದ್ದಾಗಿದೆ. ಭಾರತೀಯ ಗ್ರ್ಯಾಂಡ್ ಮುಫ್ತಿ ಕಾಂತಪುರಂ ಅಬೂಬಕ್ಕರ್ ಮುಸ್ಲಿಯಾರ್ ಅವರು ಅಲ್ಲಿನ ಸರಕಾರದೊಂದಿಗೆ ಸಂಧಾನ ನಡೆಸಿ ಯಶಸ್ವಿಯಾಗಿದ್ದಾರೆ.ಈ ಕುರಿತು ಅವರ ಕಚೇರಿ ಹೇಳಿಕೆ ಬಿಡುಗಡೆ ಮಾಡಿದೆ. ಜೂನ್ 2018 ರಲ್ಲಿ ಅಲ್ಲಿನ ವ್ಯಕ್ತಿಯೊಬ್ಬನನ್ನು ಕೊಂದ ಆರೋಪದಲ್ಲಿ ಜುಲೈ 16 ರಂದು ಆಕೆಗೆ ಗಲ್ಲು ಶಿಕ್ಷೆ ನಿಗದಿಯಾಗಿತ್ತು. ಯೆಮೆನ್ ನ ಖಾಸಗಿ ಆಸ್ಪತ್ರೆಯಲ್ಲಿ ನರ್ಸ್ ಆಗಿದ್ದ ನಿಮಿಷ ಪ್ರಿಯ 2015 ರಲ್ಲಿ ಅಲ್ಲಿನ ನಿವಾಸಿ ತಲಾಲ್ ಅಬ್ದೊ ಮಹದಿ ಜೊತೆ ಸೇರಿ ಖಾಸಗಿ ಕ್ಲಿನಿಕ್ ಒಂದನ್ನು ಆರಂಬಿಸಿದ್ದರು.ಅದೇ ವರ್ಷ ಆಕೆಯೊಂದಿಗೆ ಕೇರಳಕ್ಕೂ ಬಂದು ಹೋಗಿದ್ದ,ಅಲ್ಲಿಗೆ ಹೋದ ನಂತರ ಆತ ಆಕೆಗೆ ಕಿರುಕುಳ ನೀಡುತ್ತಿದ್ದ, ದಿನವೂ ಆಕೆಯ ಸಂಪಾದನೆಯನ್ನು ಕಸಿಯುತ್ತಿದ್ದ ಆತ ಆಕೆ ಮರಳಿ ಊರಿಗೆ ಹೋಗದಂತೆ ಪಾಸ್ ಪೋರ್ಟ್ ಕಿತ್ತುಕೊಂಡಿದ್ದ.ಆಕೆಯನ್ನು ಮದುವೆ ಆಗಿರುವುದಾಗಿ ಹೇಳಿಕೊಂಡಿದ್ದ.ಆತನ ಕಿರುಕುಳ ತಾಳಲಾರದೆ ಅಲ್ಲಿನ ಪೊಲೀಸರಿಗೆ ದೂರು ನೀಡಿದರೂ ಕೇಳಿಸಿಕೊಳ್ಳದ ಪೊಲೀಸರು ಈಕೆಯದೆ ತಪ್ಪೆಂದು ಆರು ದಿನಗಳ ಜೈಲು ಶಿಕ್ಷೆ ವಿಧಿಸಿದ್ದರು.ಬಿಡುಗಡೆಯ ನಂತರವೂ ಕಿರುಕುಳ ಮುಂದುವರೆದು ಆತನಿಗೆ ಆಕೆ ಮತ್ತು ಬರೆಸುವ ಪಾನೀಯದೊಂದಿಗೆ ವಿಷ ಬೆರೆಸಿ ಕೊಲೆ ಮಾಡಿರುವ ಆರೋಪದ ಮೇಲೆ ಜೈಲಿಗೆ ಹಾಕಲಾಗಿತ್ತು.ವಿಚಾರಣೆನಡೆದು ಅಲ್ಲಿನ ಸುಪ್ರೀಂಕೋರ್ಟ್ ಮರಣ ದಂಡನೆ ಶಿಕ್ಷೆ ವಿಧಿಸಿತ್ತು.sdfg

ಯೆಮೆನ್:ಕೇರಳ ಮೂಲದ ನರ್ಸ್ ನಿಮಿಷ ಪ್ರಿಯಳ ಗಲ್ಲು ಶಿಕ್ಷೆ ರದ್ದು:ಕಾಂತಪುರಂ ಅಬೂಬಕ್ಕರ್ ಮುಸ್ಲಿಯಾರ್ ಸಂಧಾನ ಯಶಸ್ವಿ.