ಧರ್ಮಸ್ಥಳ:ಮೊದಲ ದಿನ ಪತ್ತೆಯಾಗದ ಕಳೇಬರ.

ಹದಿನೈದು ವರ್ಷಗಳ ಹಿಂದೆ ಹೂತಿರಬಹುದಾದ ಕಳೇಬರಗಳಿಗೆ ಈಗ ಹುಡುಕಾಟ ನಡೆಸಿ ಪತ್ತೆ ಹಚ್ಚುವುದು ಕಷ್ಟವೆ...ಮಳೆಯ ನಡುವೆಯೂ ಧರ್ಮಸ್ಥಳದ ಸ್ನಾನಘಟ್ಟದ ಪಕ್ಕದ ಕಾಡಿನಲ್ಲಿ ಹೂತಿರಬಹುದಾದ ಶವಗಳಿಗೆ ಇಂದು ಮಧ್ಯಾಹ್ನದಿಂದ ಹುಡುಕಾಟ ನಡೆಸಲಾಯಿತು.ದೂರುದಾರ ಗುರುತಿಸಿದ ಮೊದಲ ಜಾಗದಲ್ಲಿ ಇಂದು ಸಂಜೆವರೆಗೆ ಎಂಟು ಅಡಿಗಳವರೆಗೆ ಗುಂಡಿ ಅಗೆದರೂ ಅಸ್ಥಿಪಂಜರ ಪತ್ತೆಯಾಗಲಿಲ್ಲ.ಈ ಕಾರ್ಯಕ್ಕಾಗಿ ಹನ್ನೆರಡು ಕಾರ್ಮಿಕರನ್ನು ಬಳಸಿಕೊಳ್ಳಲಾಗಿತ್ತು,ಮೂರು ಅಡಿಗಳವರೆಗೆ ಗುಂಡಿ ಅಗೆದ ನಂತರ ಜೆಸಿಬಿ ಯಂತ್ರದಿಂದ ಅಗೆದರೂ ಫಲ ಸಿಗಲಿಲ್ಲ.ಸಂಜೆಯಾಗಿದ್ದರಿಂದ ಈ ಕಾರ್ಯವನ್ನು ನಾಳೆಗೆ ಮುಂದೂಡಲಾಗಿದೆ.ಸ್ಥಳಕ್ಕೆ ಮಂಗಳೂರು ಕೆಎಂಸಿ ಯಿಂದ ನಾಲ್ವರು ವೈದ್ಯರನ್ನು ಕರೆಸಲಾಗಿತ್ತು,ಎಫ್ ಎಸ್ ಎಲ್ ತಂಡದವರು ಹಾಜರಿದ್ದರು. ದೂರುದಾರ ಗುರುತಿಸಿರುವಂತೆ ಖಾಸಗಿ ವ್ಯಕ್ತಿಯೊಬ್ಬರಿಗೆ ಸೇರಿದ ತೋಟವೊಂದರಲ್ಲಿ ಸಹ ಪೊಲೀಸರು ಗುರುತು ಮಾಡಿದ್ದಾರೆ.ಶವಗಳನ್ನು ಒಂದೇ ಕಡೆ ಮತ್ತು ಬಿಡಿ ಬಿಡಿಯಾಗಿಯೂ ಹೂಳಲಾಗಿದೆ ಎಂದು ಆತ ಹೇಳಿಕೆ ನೀಡಿದ್ದಾರೆ.ಈಗಾಗಲೆ ತಲೆಬುರುಡೆ ತೆಗೆದಿರುವ ಜಾಗವನ್ನು ಮೊದಲೇ ಅಗೆಯಬಹುದಾಗಿತ್ತು. ಪುತ್ತೂರು ಉಪ ವಿಭಾಗಾಧಿಕಾರಿ,ಬೆಳ್ತಂಗಡಿ ತಹಸಿಲ್ದಾರ್,ತನಿಖಾಧಿಕಾರಿ ಅನುಚೇತ್, ಜಿತೇಂದ್ರ ಕುಮಾರ್ ದಯಾಮ,ಸೈಮನ್ ತನಿಖೆಯ ನೇತೃತ್ವ ವಹಿಸಿದ್ದರು.