ಮೈಸೂರಿನಲ್ಲಿ 2578 ಕೋಟಿ ವೆಚ್ಚದ ಅಭಿವೃದ್ಧಿ ಕಾಮಗಾರಿಗಳ ಶಂಕು ಸ್ಥಾಪನೆ - ಉದ್ಘಾಟನೆ ------------------------------------------ ಬಿಜೆಪಿ, ಜೆಡಿಎಸ್ ಗೆ ಸಿದ್ದರಾಮಯ್ಯ ಬಹಿರಂಗ ಸವಾಲ್
ಮೈಸೂರಿನಲ್ಲಿ 2578 ಕೋಟಿ ವೆಚ್ಚದ ಅಭಿವೃದ್ಧಿ ಕಾಮಗಾರಿಗಳ ಶಂಕು ಸ್ಥಾಪನೆ - ಉದ್ಘಾಟನೆ ------------------------------------------ ಬಿಜೆಪಿ, ಜೆಡಿಎಸ್ ಗೆ ಸಿದ್ದರಾಮಯ್ಯ ಬಹಿರಂಗ ಸವಾಲ್
ಮೈಸೂರು ಜಿಲ್ಲೆಯಲ್ಲಿ 2578 ಕೋಟಿ ರೂ. ವೆಚ್ಚದ ಅಭಿವೃದ್ಧಿ ಕಾಮಗಾರಿಗಳ ಶಂಕು ಸ್ಥಾಪನೆ ಹಾಗೂ ಉದ್ಘಾಟನೆ ಯನ್ನು ಇಂದು ಶನಿವಾರ ಮುಖ್ಯಮಂತ್ರಿ ಸಿದ್ದರಾಮಯ್ಯ ನೇರವೇರಿಸಿದರು.
ಮೈಸೂರು ಮಹಾರಾಜ ಕಾಲೇಜು ಮೈದಾನದಲ್ಲಿ ನಡೆದ ಬೃಹತ್ ಸಮಾವೇಶದಲ್ಲಿ ಮಾತನಾಡಿದ ಅವರು ನಾವು ರಾಜ್ಯದಲ್ಲಿ ಕೈಗೊಂಡ ಅಭಿವೃದ್ಧಿ ಯನ್ನು ಸಹಿಸದೆ ಬಿಜೆಪಿ ಹಾಗೂ ಜೆಡಿಎಸ್ ಮುಖಂಡರು ಜನರನ್ನು ದಾರಿ ತಪ್ಪಿಸುವ ಹೇಳಿಕೆ ನೀಡುತ್ತಿದ್ದಾರೆ. ಇವರು ಒಂದೇ ವೇದಿಕೆಗೆ ಬಂದರೆ ರಾಜ್ಯದಲ್ಲಿ ಅವರೇನು ಅಭಿವೃದ್ಧಿ ಮಾಡಿದ್ದಾರೆ ನಾವೇನು ಮಾಡಿದ್ದೇವೆ ಎಂಬುದನ್ನು ಬಹಿರಂಗ ವಾಗಿ ಚರ್ಚೆ ಮಾಡೋಣ ಎಂದು ಸಾವಲು ಹಾಕಿದರು.
ಜೆಡಿಎಸ್ ಯಾವುದೇ ಕಾರಣಕ್ಕೂ ಸ್ವಂತ ಬಲದಿಂದ ಅಧಿಕಾರಕ್ಕೆ ಬರುವುದಿಲ್ಲ ನಾನು ಜೆಡಿಎಸ್ ಅಧ್ಯಕ್ಷ ನಾಗಿದ್ದಾಗ 58 ಸ್ಥಾನ ಗೆದ್ದಿದ್ದೆವು ಈಗ ಅವರು ಗೆದ್ದಿರುವುದು 18 ಸ್ಥಾನ ಮಾತ್ರ. ಜೆಡಿಎಸ್ ದುರ್ಬಲ ವಾಗಿದೆ ಹೀಗಾಗಿ ಬಿಜೆಪಿ ಜೊತೆ ಸೇರಿದ್ದಾರೆ ಈ ಎರಡು ಪಕ್ಷಗಳು ರಾಜ್ಯದಲ್ಲಿ ಜನರ ಪ್ರೀತಿ ಉಳಿಸಿ ಕೊಂಡಿಲ್ಲ ಎಂದು ಲೇವಡಿ ಮಾಡಿದರು.
ಕೇಂದ್ರದ ಬಿಜೆಪಿ ಸರ್ಕಾರದಿಂದ ರಾಜ್ಯಕ್ಕೆ ತೆರಿಗೆ ಹಂಚಿಕೈಯಲ್ಲಿ ಬಾರಿ ಅನ್ಯಾಯ ವಾಗುತ್ತಿದ್ದರೂ ಮೋದಿ ಮುಂದೆ ನಿಂತು ಈ ಅನ್ಯಾಯವನ್ನು ಪ್ರಶ್ನೆಸುವ ಧೈರ್ಯ ಬಿಜೆಪಿ, ಜೆಡಿಎಸ್ ಸಂಸದರಿಗೆ ಇಲ್ಲ ಇವರಿಗೆ ನಾಚಿಕೆ ಆಗಬೇಕು ಎಂದು ಹೀಯಾಳಿಸದರು.
ನಮ್ಮ ಗ್ಯಾರಂಟಿ ಯೋಜನೆಗಳನ್ನು ಬಿಜೆಪಿ ಬೇರೆ ಬೇರೆ ರಾಜ್ಯದಲ್ಲಿ ನಕಲು ಮಾಡುತ್ತಿದೆ ನಮ್ಮ ಗ್ಯಾರಂಟಿಯನ್ನು ಟೀಕಿಸಿ ಈಗ ಅದನ್ನೇ ಎಲ್ಲಾ ಕಡೆ ಕೊಡುತ್ತಿರುವ ಮೋದಿಗೆ ನಾಚಿಕೆ ಆಗಬೇಕು. ಈ ಯೋಜನೆಯಿಂದ ಬಡವರು, ದಲಿತರು, ಅಲ್ಪಸಂಖ್ಯಾತರು ಖುಷಿ ಯಾಗಿದ್ದಾರೆ. ಇದೆ ಜೆಡಿಎಸ್, ಬಿಜೆಪಿಗೆ ಹೊಟ್ಟೆ ಉರಿ ಆಗಿದೆ. ಇದನ್ನು ಬಿಡಿ ನಾನು ಏನಾದರೂ ತಪ್ಪು ಮಾಡಿದ್ದ ರೆ ದಾಖಲೆ ಸಮೇತ ಹೇಳಿ ಎಂದು ಸವಾಲು ಎಸೆದರು.
ಕಾಂಗ್ರೆಸ್ ಬಡವರು, ದಲಿತರ ಪರ ಕೆಲಸ ಮಾಡುವ ಪಕ್ಷ ಬುದ್ಧ, ಬಸವ, ಅಂಬೇಡ್ಕರ್ ತತ್ವ ದಲ್ಲಿ ಕಾಂಗ್ರೆಸ್ ನಂಬಿಕೆ ಇಟ್ಟಿದೆ. ಬಿಜೆಪಿ,ಆರ್ ಎಸ್ ಎಸ್ ಮನುವಾದಿಗಳು, ಸಂವಿಧಾನ ವಿರೋದಿಗಳು ಎಂದು ಟೀಕಿಸಿದರು.
AICC ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಹಾಗೂ ಉಪ ಮುಖ್ಯಮಂತ್ರಿ ಡಿ. ಕೆ. ಶಿವಕುಮಾರ್ ಮಾತನಾಡಿದರು. ವೇದಿಕೆ ಯಲ್ಲಿ ಜಿಲ್ಲಾ ಉಸ್ತುವಾರಿ ಸಚಿವ H. C. ಮಹದೇವಪ್ಪ ಸೇರಿದಂತೆ ವಿವಿಧ ಇಲಾಖೆ ಗಳ ಸಚಿವರು ಸ್ಥಳೀಯ ಕಾಂಗ್ರೆಸ್ ಶಾಸಕರು, ಪಕ್ಷದ ಮುಖಂಡರು ಉಪಸ್ಥಿತರಿದ್ದರು. ಸಾವಿರಾರು ಸಂಖ್ಯೆ ಯಲ್ಲಿ ಪಕ್ಷದ ಕಾರ್ಯಕರ್ತರು ಭಾಗವಹಿಸಿದ್ದರು.