ಮುಡಾ ಪ್ರಕರಣ:ಸುಪ್ರೀಂಕೋರ್ಟ್ ತೀರ್ಪಿನಿಂದ ಸಿದ್ಧರಾಮಯ್ಯನವರ ರಾಜಕೀಯ ಶಕ್ತಿ ವೃದ್ಧಿ: ಲೋಕಸಭೆ ಚುನಾವಣೆಯಲ್ಲಿ ಅಕ್ರಮ ನಡೆದಿಲ್ಲ-ಯತೀಂದ್ರ.
ಮುಡಾ ಪ್ರಕರಣ:ಸುಪ್ರೀಂಕೋರ್ಟ್ ತೀರ್ಪಿನಿಂದ ಸಿದ್ಧರಾಮಯ್ಯನವರ ರಾಜಕೀಯ ಶಕ್ತಿ ವೃದ್ಧಿ: ಲೋಕಸಭೆ ಚುನಾವಣೆಯಲ್ಲಿ ಅಕ್ರಮ ನಡೆದಿಲ್ಲ-ಯತೀಂದ್ರ.
ಮುಡಾ ಪ್ರಕರಣದ ಸುಪ್ರೀಂಕೋರ್ಟ್ ತೀರ್ಪಿನಿಂದಾಗಿ ಮುಖ್ಯಮಂತ್ರಿ ಸಿದ್ಧರಾಮಯ್ಯನವರ ರಾಜಕೀಯ ಶಕ್ತಿ ವೃದ್ಧಿಯಾಗಿದೆ ಎಂದು ಅವರ ಮಗ ವಿಧಾನಪರಿಷತ್ ಸದಸ್ಯ ಯತೀಂದ್ರ ಹೇಳಿದ್ದಾರೆ.
ಮೈಸೂರಿನಲ್ಲಿ ಪತ್ರಕರ್ತರೊಂದಿಗೆ ಔಪಚಾರಿಕವಾಗಿ ಮಾತನಾಡಿದ ಅವರು ತಂದೆಯವರ ರಾಜಕೀಯ ಬಲವನ್ನು ನೈತಿಕವಾಗಿ ಕುಗ್ಗಿಸುವ ಷಡ್ಯಂತ್ರ ನಡೆದಿತ್ತು,ಅದೀಗ ನಿವಾರಣೆಯಾಗಿದೆ ಎಂದು ಸಂತಸ ವ್ಯಕ್ತಪಡಿಸಿದರು.
ಪಕ್ಷದ ಶಾಸಕರು ಮತ್ತು ಹೈಕಮಾಂಡ್ ತಂದೆಯ ಪರ ಇರುವಾಗ ಅವರನ್ನೇಕೆ ಮುಖ್ಯಮಂತ್ರಿ ಸ್ಥಾನದಿಂದ ಕೆಳಗಿಳಿಸುತ್ತಾರೆ ಎಂದು ಪ್ರಶ್ನಿಸಿದ ಅವರು ಅಧಿಕಾರ ಹಂಚಿಕೆ ಎಂಬುದು ವಿರೋಧ ಪಕ್ಷಗಳ ಸೃಷ್ಟಿ ಎಂದರು.ಮುಖ್ಯಮಂತ್ರಿಯಾಗಿ ಮುಂದುವರೆಯುತ್ತಾರೋ ಇಲ್ಲವೋ ಎಂಬ ಚರ್ಚೆಯೇ ಅಪ್ರಸ್ತುತ, ಈ ಬಗ್ಗೆ ಕಾಂಗ್ರೆಸ್ ನಾಯಕರು ಯಾರಾದರು ಮಾತನಾಡಿದ್ದಾರೆಯೇ? ಸಿದ್ಧರಾಮಯ್ಯನವರು ಮಾಸ್ ಲೀಡರ್ ಆಗಿದ್ದು, ಅವರನ್ನು ನೈತಿಕವಾಗಿ ಕುಗ್ಗಿಸಿದರೆ ಕಾಂಗ್ರೆಸ್‌ಗೆ ಹಿನ್ನಡೆಯಾಗುತ್ತದೆ ಎಂದು ವಿರೋಧ ಪಕ್ಷಗಳು ಟಾರ್ಗೆಟ್ ಮಾಡುತ್ತಿವೆ,ಅವೆಲ್ಲವನ್ನೂ ಮೀರಿ ನಾವು ನಿಂತಿದ್ದೇವೆ ಎಂದರು.
ರಾಜ್ಯದಲ್ಲಿ ಸೆಪ್ಟೆಂಬರ್ ನಲ್ಲಿ ರಾಜಕೀಯ ಕ್ರಾಂತಿಯಾಗಲಿದೆ ಎಂದು ಸಚಿವ ರಾಜಣ್ಣನವರ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು ಕ್ರಾಂತಿ ಎಂದರೆ ಮುಖ್ಯಮಂತ್ರಿ ಬದಲಾವಣೆ ಎಂದರ್ಥವೇ ಎಂದು ಪ್ರಶ್ನಿಸಿದ ಅವರು ಬೇರೆ ಕ್ರಾಂತಿ ಇರಬಹುದು ಅದನ್ನು ಅವರ ಹತ್ತಿರವೇ ಕೇಳಬೇಕು ಎಂದರು.
ಲೋಕಸಭಾ ಚುನಾವಣೆಯಲ್ಲಿ ಕರ್ನಾಟಕದ ಯಾವೊಂದು ಕ್ಷೇತ್ರದಲ್ಲೂ ಅಕ್ರಮ ನಡೆದಿಲ್ಲ ಎಂದವರು ರಾಹುಲ್ ಗಾಂಧಿಯವರ ಆರೋಪವನ್ನು ನಿರಾಕರಿಸಿದರು.ಚುನಾವಣೆಯಲ್ಲಿ ಭಾರಿ ಅಕ್ರಮ ನಡೆದಿದ್ದಲ್ಲಿ ಈಗಾಗಲೇ ಅದು ನಮ್ಮ ಗಮನಕ್ಕೆ ಬರುತಿತ್ತು, ಮೈಸೂರು ಕ್ಷೇತ್ರದಲ್ಲಿ ನಮಗೆ ಸೋಲಾಗಿದೆ ನಿಜ ಆದರೆ ಗೋಲ್ ಮಾಲ್ ನಡೆದಿಲ್ಲ ಎಂದು ಹೇಳಿದರು.