ಧರ್ಮಸ್ಥಳ: ಗುಂಡಿಯಲ್ಲಿ ಮಹಿಳೆಯ ರವಿಕೆ ಪಾನ್ ಕಾರ್ಡ್ ಪುರುಷನ ಎಟಿಎಂ ಕಾರ್ಡ್ ಪತ್ತೆ.
ಧರ್ಮಸ್ಥಳ: ಗುಂಡಿಯಲ್ಲಿ ಮಹಿಳೆಯ ರವಿಕೆ ಪಾನ್ ಕಾರ್ಡ್ ಪುರುಷನ ಎಟಿಎಂ ಕಾರ್ಡ್ ಪತ್ತೆ.
ಎರಡನೆ ದಿನದ ಕಾರ್ಯಾಚರಣೆಯಲ್ಲೂ ಕಳೇಬರ ಪತ್ತೆಯಾಗಿಲ್ಲ,ಆದರೆ ತೋಡಿದ ಗುಂಡಿಯೊಂದರಲ್ಲಿ ಹರಿದ ಕೆಂಪು ಬಣ್ಣದ ರವಿಕೆ,ಮಹಿಳೆಯ ಪಾನ್ ಕಾರ್ಡ್,ಪುರುಷನ ಎಟಿಎಂ ಕಾರ್ಡ್ ದೊರೆತಿದೆ. ವಿಶೇಷ ತನಿಖಾ ದಳವು ಇಂದು ಬೆಳಿಗ್ಗೆಯಿಂದಲೇ ಧರ್ಮಸ್ಥಳದ ಕಾಡಿನಲ್ಲಿ ಎರಡು,ಮೂರು,ನಾಲ್ಕನೆಗುರುತಿನ ಸ್ಥಳದಲ್ಲಿ ಗುಂಡಿ ಅಗೆಯುವ ಕಾರ್ಯ ನಡೆಸಿತು.ಎರಡನೆ ಗುಂಡಿಯನ್ನು ಎರಡೂವರೆ ಅಡಿ ತೋಡಿದ್ದಾಗ ಹರಿದ ಕೆಂಪು ಬಣ್ಣದ ರವಿಕೆ,ಲಕ್ಷ್ಮಿ ಎಂಬಾಕೆಯ ಪಾನ್ ಕಾರ್ಡ್, ಪುರುಷನ ಎಟಿಎಂ ಕಾರ್ಡ್ ದೊರೆತಿದೆ.ಗುಂಡಿಯನ್ನು ಮತ್ತಷ್ಟು ಆಳಕ್ಕೆ ತೋಡಿದರೂ ಕಳೇಬರ ಪತ್ತೆಯಾಗಿಲ್ಲ.ಮೂರು ಮತ್ತು ನಾಲ್ಕನೆ ಗುಂಡಿಯಲ್ಲೂ ಏನೂ ಸಿಕ್ಕಿಲ್ಲ.
ಗುಂಡಿಯಲ್ಲಿ ಸಿಕ್ಕಿರುವ ಈ ಮೂರು ವಸ್ತುಗಳು ತೀವ್ರ ಕುತೂಹಲಕ್ಕೆ ಕಾರಣವಾಗಿದ್ದು,ತನಿಖೆ ಮತ್ತೊಂದು ಧಿಕ್ಕಿಗೆ ಹೊರಳುವ ಸಾಧ್ಯತೆ ಇದೆ.ಆ ಮಹಿಳೆ ಮತ್ತು ಪುರುಷ ಯಾರಿರಬಹುದು?ಅವರ ಕೊಲೆಯಾಗಿರಬಹುದೆ?ಎನ್ನುವುದು ನಿಗೂಢ.
ಈ ಕುರಿತು ದೂರುದಾರನ ಪರ ವಕೀಲ ಮಂಜುನಾಥ್ ಪತ್ರಿಕಾ ಪ್ರಕಟಣೆ ಹೊರಡಿಸಿದ್ದಾರೆ.
ಈ ದಿನವೂ ಪುತ್ತೂರು ಉಪ ವಿಭಾಗಾಧಿಕಾರಿ ಸಮ್ಮುಖದಲ್ಲಿ ಕಾರ್ಯಾಚರಣೆ ನಡೆಯಿತು.ತನಿಖೆಯ ಮುಖ್ಯಸ್ಥರಾದ ಪ್ರಣಬ್ ಕುಮಾರ್ ಮೊಹಾಂತಿ ಸ್ಥಳದಲ್ಲಿದ್ದು ಮಾರ್ಗದರ್ಶನ ಮಾಡಿದರು.