ನೆಹರು ಬುದ್ಧಿವಂತಿಕೆಗೆ ಒಲಿದ ಪ್ರಧಾನಿ ಪಟ್ಟ

ನೆಹರು ಬುದ್ಧಿವಂತಿಕೆಗೆ ಒಲಿದ ಪ್ರಧಾನಿ ಪಟ್ಟ

ಪಕ್ಕದ ಮನೆಯಲ್ಲಿ ಹಿರಿಯ ಸಹೋದರಿಗೆ ಇನ್ನೂ ಓದಬೇಕು ಎಂದು ಕಿರಿಯ ಸಹೋದರಿಗೆ ಮದುವೆ ಮಾಡಿಸುತ್ತಾರೆ.

ಮುಂದಿನ ಮನೆಯವನು ಹಿರಿಯ ಸಹೋದರಿಗೆ ಮದುವೆ ಆಗದಂತೆ ಯಾವಾಗಲೂ ಅಡೆ ತಡೆ ಮಾಡಿರುವವನಾಗಿದ್ದ.
ಆ ಮುಂದಿನ ಮನೆಯವನು " ಹಿರಿಯ ಸಹೋದರಿಯನ್ನು ಇಟ್ಟು ಕಿರಿಯಳನ್ನು ಮದುವೆ ಮಾಡಿಸಿದರು. ಏನೆಂತಾ ಅನ್ಯಾಯ" ಎಂದು ಬೀದಿ ಬೀದಿಯಲ್ಲಿ ಬೊಬ್ಬೆ ಹೊಡೆಯುತ್ತಾನೆ. ಜನರು ಅ ಅದನ್ನು ಗಮನಿಸದೇ ಇದ್ದಾಗ, 
 "ಮದುವೆಯಾದ ಕಿರಿಯ ಸಹೋದರಿಯ ಗಂಡ ಸರಿ ಇಲ್ಲ ಎಂದು ಪ್ರಚಾರ ಮಾಡುತ್ತಾನೆ".  ಇವನನ್ನು ಏನೆಂದು ಕರೆಯಬಹುದು? 

ಭಾರತದ ಸ್ವಾತಂತ್ರ್ಯ ಹೋರಾಟಕ್ಕೆ ಕಾಂಗ್ರೇಸ್ ಎಂಬ "ಸಮಾನ ಮನಸ್ಕರ ತಂಡ" ದ  ಮನೆಗೆ ಕಲ್ಲು ಹೊಡೆಯುವವರೂ ಹೀಗೆ ಬೊಬ್ಬೆ ಹಾಕುತ್ತಾರೆ. ಅವರು ಭಾರತಮಾತೆಯ ಸ್ವಾತಂತ್ರ್ಯಕ್ಕೆ ಅಡ್ಡಗಾಲು ಹಾಕಿದವರು. ಇಂದು ಎಲ್ಲಿಯವರೆಗೆ ಬಂದಿದ್ದಾರೆ ಎಂದರೆ....ಸಂವಿಧಾನ, ರಾಷ್ಟ್ರಧ್ವಜ, ರಾಷ್ಟ್ರಗೀತೆ, ರಾಷ್ಟ್ರಲಾಂಛನವನ್ನು ಅಳಿಸಲು ಪ್ರಯತ್ನಿಸುವ ಮಟ್ಟಕ್ಕೆ ಎಂದರೆ ತಪ್ಪಾಗಲಾರದು.

ಭಾರತಕ್ಕೆ ಸ್ವಾತಂತ್ರ್ಯ ಬಂದಿದ್ದು 1947 ಆಗಸ್ಟ್ ತಿಂಗಳು ಅಲ್ಲವೇ?

ಅಲ್ಲಿಯತನಕ ಕಾಂಗ್ರೇಸ್ ಪಕ್ಷ, ಬ್ರಿಟೀಷ್ ಆಡಳಿತ ವಿರೋಧದ ಪಕ್ಷವಾಗಿ , ಭಾರತದ ಜನರ ಪರವಾಗಿ ಪ್ರತಿನಿಧಿಸು/ represent ಮಾಡುತ್ತಿತ್ತು. ಬ್ರಿಟಿಷ್ ಆಡಳಿತದ ಸರ್ಕಾರದಲ್ಲಿ ಕಾಂಗ್ರೆಸ್ ಗೆ ಹಲವಾರು  ಪ್ರಾಂತೀಯ ಪತಿನಿಧಿತ್ವ ಇತ್ತು.

ಬ್ರಿಟೀಷ್ ಆಡಳಿತದೊಂದಿಗೆ ಕೆಲಸ ಮಾಡುವವರಲ್ಲಿ ಭಾರತೀಯರೂ , ಬ್ರಿಟೀಷರೂ ಇದ್ದರು. ಅವರೆಲ್ಲಾ ಬ್ರಿಟೀಷ್ ಆಡಳಿತದ ಕೆಲಸದ ಪರವಾಗಿ ಇದ್ದರು. ಕಾಂಗ್ರೆಸಿನಂತೆ ಭಾರತೀಯರ ಸ್ವಾತಂತ್ರ್ಯದ ಪರವಾಗಿ ಇರಲಿಲ್ಲ. ಅಂದರೆ ಆಡಳಿತದ ಚುಕ್ಕಾಣಿ ಕಾಂಗ್ರೆಸ್ ಕೈಯಲ್ಲಿ ಇರಲಿಲ್ಲ. 

ಈ ಸಂದರ್ಭದಲ್ಲಿ ಕಾಂಗ್ರೆಸ್ ಖಾಸಗೀ ನಾಯಕತ್ವದಲ್ಲಿ ಯಾರೇ ಏನೇ ಆಗಲಿ , ಅಂದಿನ ಬ್ರಿಟೀಷ್ ಆಡಳಿತ ತಲೆ ಹಾಕುತ್ತಿರಲಿಲ್ಲ.  ಯಾಕೆಂದರೆ ಕಾಂಗ್ರೆಸಿಗೆ ಬ್ರಿಟಿಷರು ಯಾವತ್ತೂ ಸರ್ಕಾರ ಮಾಡುವಂತಹಾ ಅಧಿಕಾರ ಕೊಡುತ್ತಿರಲಿಲ್ಲ. ಬರೇ ವಿರೋಧ ಪಕ್ಷ ಪ್ರತಿನಿಧಿಗಳು ಅಷ್ಟೇ.
 
ನೆಹರು ಅವರು, 1929,1936 ಮತ್ತು 1937 ರಲ್ಲಿ ಮೂರು ಬಾರಿ ಕಾಂಗ್ರೇಸ್ (ಖಾಸಗಿ) ಪಕ್ಷದ ಅಧ್ಯಕ್ಷ ಆಗಿದ್ದರು. ಅದು ಪ್ರಧಾನಿ ಪಟ್ಟ ಅಲ್ಲ. ಎಲೆಕ್ಷನ್ ಇರಲಿಲ್ಲ.ಭಾರತದ ಸಂವಿಧಾನ ಇರಲಿಲ್ಲ. ಒಂದು ಸಮಾನ ಮನಸ್ಕರ ಒಳಗೆ ಆಯ್ಕೆ ಅಷ್ಟೇ.

1940 ರಿಂದ 1946ರ ವರೆಗೆ ಮೌಲಾನಾ ಅಬುಲ್ ಕಲಾಂ ಅಜಾದ್ ಕಾಂಗ್ರೇಸ್ (ಖಾಸಗಿ) ಪಕ್ಷದ ಅಧ್ಯಕ್ಷ ಆಗಿದ್ದರು. ಅದು ಪ್ರಧಾನಿ ಪಟ್ಟ ಅಲ್ಲ. ಚುನಾವಣೆ- ಸಂವಿಧಾನ ಇರಲಿಲ್ಲ. ಸಮಾನ ಮನಸ್ಕರ ಆಯ್ಕೆಯ ಒಂದು ಕಾಂಗ್ರೇಸ್ ನಿಯಮಾವಳಿ.

ಮೌಲಾನಾ ಆಜಾದ್ ನೇತೃತ್ವದ ಸಂದರ್ಭದಲ್ಲಿ ಕ್ವಿಟ್ ಇಂಡಿಯಾ ಚಳುವಳಿ ತಾರಕಕ್ಕೇರಿತು. ನೆಹರೂ ಸೇರಿ ಹೆಚ್ಚಿನ ಎಲ್ಲಾ ಕಾಂಗ್ರೆಸ್ ನಾಯಕರು ಜೈಲು ಸೇರಿದರು. ಬ್ರಿಟೀಷ್ ಸರ್ಕಾರ ಕಾಂಗ್ರೆಸನ್ನು ಬ್ಯಾನ್ ಮಾಡಿದರು. ಬ್ರಿಟೀಷ್ ಆಡಳಿತಾತ್ಮಕ ಕಡತ/ಫಯಲುಗಳನ್ನು ಚರ್ಚೆ ಮಾಡಲು ವಿರೋಧ ಪಕ್ಷವಾದ ಕಾಂಗ್ರೆಸ್ ಪ್ರತಿನಿಧಿಗಳು ಇಲ್ಲವಾದರು. ಬ್ರಿಟಿಷ್ ಆಡಳಿತದ ನಿಯಮಾವಳಿಗಳ ಪ್ರಕಾರ  ಯಾವುದೇ ಕಡತವನ್ನು ಸಮರ್ಪಿಸುವ ಮೊದಲು ಅದು ಪಾರ್ಲಿಮೆಂಟಲ್ಲಿ ಎಲ್ಲಾ (ಪರ ಹಾಗೂ ವಿರೋಧ) ಪ್ರತಿನಿಧಿ ಗಳೊಂದಿಗೆ ಚರ್ಚಿಸಬೇಕಾಗಿತ್ತು. 
 
ಅಂದು ಬ್ರಿಟೀಷ್ ವೈಸರಾಯ್ ಅವರು  ಕಾಂಗ್ರೆಸ್ ಪಕ್ಷದಲ್ಲಿ ಯಾರನ್ನಾದರೂ  ಕಡತಗಳ ವಿಲೇವಾರಿ ಚರ್ಚೆಗೆ ನಾಯಕನನ್ನಾಗಿ ಕಳುಹಿಸಿ ಎಂದು ಪತ್ರ ಬರೆದರು.  
ಯಾರೂ ನಾಯಕತ್ವ ಇಲ್ಲದ ಕಾಂಗ್ರೆಸ್,  1946ರಲ್ಲಿ Provincial Congress Committee /PCC ಸಭೆ ಮಾಡಿದರು. ಬರೇ ಹದಿನೈದು ಪ್ರಾಂತೀಯ ಪ್ರತಿನಿಧಿಗಳು ಮಾತ್ರ ಉಪಸ್ಥಿತರಾಗಲು  ಇದ್ದರು. ಅಲ್ಲಿ ಕೆಲವರು ಆಚಾರ್ಯ ಕೃಪಲಾನಿಯ ಹೆಸರು ,ಈ ಇನ್ನು ಕೆಲವರು ವಲ್ಲಭಭಾಯಿ ಪಟೇಲರ ಹೆಸರನ್ನು ಹೇಳಿದರು.  ಅಂದು ಆ 15 ಜನ ಉಪಸ್ಥಿತರಲ್ಲಿ  12 ಜನ ಪಟೇಲರನ್ನು , ಮೂರು ಜನ ಆಚಾರ್ಯ ಕೃಪಲಾನಿಯನ್ನು ಹೆಸರಿಸಿದ್ದರು. ಯಾರು ಕೂಡ ನೆಹರು ಅವರ ಹೆಸರು ನಾಮಿನೇಟ್ ಮಾಡಲೇ ಇಲ್ಲ. 
ಅಂದರೆ 
      ಪಟೇಲರನ್ನು ಒಪ್ಪಿದವರು - ಹದಿನೈದು 
      ಆಚಾರ್ಯ ಕೃಪಲಾನಿಯವರನ್ನು ಒಪ್ಪಿದವರು - ಎರಡು
      ಜೈಲಿನಲ್ಲಿ ಇದ್ದ ನೆಹರೂರವರನ್ನು ನೋಮಿನೇಟ್ ಮಾಡಲೇ ಇಲ್ಲ. ಅಂದರೆ   ನೆಹರೂ ರವರನ್ನು ಒಪ್ಪಿದವರು -- ಸೊನ್ನೆ ಎಂದು ಹೇಳಬಹುದೋ....
              
ವಿಷಯ‌ಗೊತ್ತಾದ ಪಟೇಲರು " 1931ರಲ್ಲಿ ನಾನು ಅಧ್ಯಕ್ಷ ಆಗಿದ್ದೆ.  ಆದರೆ ಇಂದು ನನ್ನ ಆರೋಗ್ಯ ಸರಿ ಇಲ್ಲ.  ಆದ್ದರಿಂದ ನಾನಿಲ್ಲ, ನನ್ನ ಬಿಟ್ಟು ಬಿಡಿ”  ಎಂದು ಸಂದೇಶ ಕಳುಹಿಸಿದರು. ನೆನಪಿಡಿ ಇಲ್ಲಿ  ಬ್ಯಾಲೆಟ್ ಅಥವಾ ಎಲೆಕ್ಷನ್ ನಡೆದಿಲ್ಲ. ಅದೊಂದು ವಿಧಿವತ್ತಲ್ಲದ/ ಇನ್ಫಾರ್ಮಲ್ ಪಕ್ಷದ ""ಖಾಸಗೀ"""  Choosing /ಆರಿಸು/ ಹೆಕ್ಕುವ ನಿರ್ಣಯ ಆಗಿತ್ತು.

ಎಲ್ಲರೂ ಪಟೇಲರನ್ನು ಬೇಟಿ ಮಾಡಲು‌ಹೋಗುತ್ತಾರೆ.
13 ಓಟು ಪಡೆದ ಪಟೇಲ್  ತನ್ನನ್ನು ಕಾಣಲು‌ ಬಂದವರಲ್ಲಿ
 " 1946 ಫೆಬ್ರವರಿಯಿಂದ  ತನ್ನ ಆರೋಗ್ಯ ಸರಿ ಇಲ್ಲ ಒಂದು ವೇಳೆ ಸರಿಯಾದರೆ ನಂತರದ ವರ್ಷ ನಿಲ್ಲುತ್ತೇನೆ " ಎಂದರು. ಎಲ್ಲರೂ ಅದನ್ನು ಬರೆದು ಕೊಡಲು ಹೇಳಿದರು. ಅದರಂತೆ ಅವರು ತನ್ನ ಗುರುಗಳಾದ ಗಾಂಧಿಯವರಿಗೆ ಪತ್ರ ಬರೆದು ಅದರಲ್ಲಿ ನೆಹರೂ ಅವರನ್ನು ಆರಿಸಿ ಎಂದು ತನ್ನ ಅಭಿಪ್ರಾಯ ವ್ಯಕ್ತಪಡಿಸಿದರು.
 
 ಅವರು ಬರೆದ ಪತ್ರದ ಪ್ರತಿ  ಈಗಲೂ ಆರ್‌ಟಿಐ RTI 2005 Act ಪ್ರಕಾರ ನೀವು, ಕೇಂದ್ರ ಸರ್ಕಾರದಿಂದ ಪಡೆಯಬಹುದು.‌

ಅದರಿಂದ ಕಾಂಗ್ರೆಸ್ ವರ್ಕಿಂಗ್ ಕಮಿಟಿ ಅವರು ಪಟೇಲರನ್ನು ಸಂದರ್ಶಿಸಿ ಅವರ ವೈದ್ಯರ ಜೊತೆ ಮಾತನಾಡಿ ವಿಷಯ ಮನವರಿಕೆ ಆಗಿ,  ಕೃಪಾಲಾನಿಯಲ್ಲಿ ನೀವೇ ಪ್ರೆಸಿಡೆಂಟಾಗಿ ಎಂದರು.  ಆದರೆ ಅದೇ ಸಂದರ್ಭದಲ್ಲಿ ಸರ್ಕಾರದ ಹಲವಾರು ಮೀಟಿಂಗ್ ಗಳು,  ಒಂದರ ಮೇಲೆ ಒಂದರಂತೆ ಸಾಲು ಸಾಲು ವಿವಿಧ ವಿಷಯಗಳಲ್ಲಿ ಇದ್ದುದು , ಹಲವಾರು ಕಡತಗಳು, ಅದನ್ನು ಓದಿ ಅರ್ಥೈಸಲು ಸಮಯ‌ದ ಆವಶ್ಯಕತೆ......ನೋಡಿ ,  ಕೃಪಲಾನಿ ಹೇಳಿದರು " ನನಗೆ ವೇಗವಾಗಿ ಅಷ್ಟೊಂದು ಕಡತ ನಿರ್ವಹಿಸಲು ಅಸಾಧ್ಯ‌.  ನನಗೂ ರೋಗ ಬರಬಹುದು.” ಎಂದು ತಿರಸ್ಕರಿಸಿದರು. 

ಕೊನೆಗೆ ಬಾಬು ರಾಜೇಂದ್ರ ಪ್ರಸಾದ್, ಗಾಂಧೀಜಿ ಮುಂತಾದ ವರ್ಕಿಂಗ್ ಕಮಿಟಿ ಹಾಗೂ PCC ಸೇರಿ , ಪಟೇಲರು ಹೇಳಿದರು “  ಮೂರು ಬಾರಿ ಪ್ರೆಸಿಡೆಂಟ್ ಆದ , ಪಾದರಸದಂತೆ ಓಡಾಡುವ ನೆಹರುವಿಗೆ ಸೂಕ್ತ ಭಾಷೆಗಳು,  ಕಡತಗಳ ನಿರ್ವಹಣೆ ಓಡಾಟ ಮಾಡುವ ಶಕ್ತಿ ಇದೆ, ಕ್ಷಮೆ ಇದೆ .ಅವರೇ ಸದ್ಯಕ್ಕೆ ಪ್ರೆಸಿಡೆಂಟ್ ಆಗಲಿ. ನಾವೆಲ್ಲರೂ ಅವರಿಗೆ ಸೂಕ್ತ ಸಮಯದಲ್ಲಿ ಸಾಯಿಸುವ “ ಎಂದರು. ಆ ಕಾಂಗ್ರೇಸ್ ಏಕಪಕ್ಷಿಯ ಬಹು ಒಪ್ಪಿಗೆಯ ನಿರ್ಣಯಕ್ಕೆ ಎಲ್ಲರೂ ಸಹಿ ಹಾಕಿದರು.  ಪಾರ್ಟಿಯ ನಿರ್ಣಯ , ಇನ್ನೊಬ್ಬರು ವಹಿಸುವ ವರೆಗೆ ನಾನು ಶಿರಸಾ ವಹಿಸುವೆ ಎಂದರು ನೆಹರು.

ಅಲ್ಲದೆ ಇಂದು ವಾಟ್ಸಾಪ್ ವಿಶ್ವ ವಿದ್ಯಾಲಯದ ಫಂಟರು ನಿರ್ಮಿಸಿದ ಕಥೆಯಂತೆ ನೆಹರು ವಿಗೆ 2 ಓಟು ಸಿಕ್ಕಿರಲಿಲ್ಲ. ನೆಹರು ಅಲ್ಲಿ ಸ್ಪರ್ಧಿ ಆಗಿರಲಿಲ್ಲ ಎಂಬುವುದು ವಾಸ್ತವ.
(ಕುರುಹು/Proof : ಅಂದಿನ ವಾರ್ತಾ ಪತ್ರಿಕೆಗಳಾದ ಹಿಂದುಸ್ತಾನ್ ಟೈಮ್ಸ್, ಇಂಡಿಯನ್ ಎಕ್ಸ್ಪ್ರೆಸ್, ದಿ ಸಿವಿಲ್ ಎಂಡ್ ಮಿಲಿಟರಿ ಗೆಜೆಟ್ಟಿ, ಅಮೃತ ಬಾಜಾರ್ ಪತ್ರಿಕಾ, ದಿ ಹಿಂದು....ಮುಂತಾದ ಪತ್ರಿಕೆಯ ಪ್ರತಿ ನೇರವಾಗಿ ಪಡೆದು ಓದಬಹುದು ಅಥವಾ ಗೂಗಲ್ ನಲ್ಲಿ ಹುಡುಕಬಹುದು)

ಒಂದು ವೇಳೆ ಯಾರೇ ಕಾಂಗ್ರೇಸ್ ಪ್ರತಿನಿಧಿಯಾಗಿ ಬಂದರೂ ಬ್ರಿಟೀಷ್ ಸರ್ಕಾರ ಕಾಂಗ್ರೆಸಲ್ಲಿ ಕೇಳುತ್ತಲೂ ಇರಲಿಲ್ಲ. ಯಾಕೆಂದರೆ ಇನ್ನೊಬ್ಬರ ಖಾಸಗೀ ವಿಷಯಕ್ಕೆ, ಪ್ರತ್ಯೇಕವಾಗಿ ಶ್ವೇತ  ಬಣ್ಣರಲ್ಲದ ಭಾರತೀಯರ ಪಾರ್ಟಿಗೆ ಅವರು ಮನ್ನಣೆ ಇಟ್ಟಿರಲಿಲ್ಲ. 
ಒಂದು ವೇಳೆ ಅಂದಿನ ಕಾಂಗ್ರೆಸ್ಸಿನಲ್ಲಿ ನೆಹರು ಬಗ್ಗೆ ವಿರೋಧ ಇದ್ದಿದ್ದರೆ,  ಎಲ್ಲಾ ಪತ್ರಿಕೆಗಳಲ್ಲೂ ಅದು ಕಾಂಟ್ರವರ್ಸಿಯಾಗಿ ಬರುತ್ತಿತ್ತು ಹಾಗೂ ಆ ಪತ್ರಿಕೆಗಳ ಪ್ರತಿಗಳು ಇವಾಗ್ಲೂ ವಾಟ್ಸಾಪ್ನಲ್ಲಿ ಓಡಾಡುತ್ತಿರುತ್ತಿತ್ತು. 

1947ರ ಫೆಬ್ರುವರಿ ತಿಂಗಳಲ್ಲಿ ಬ್ರಿಟೀಷರು ಅಧಿಕಾರ ಹಸ್ತಾಂತರ/Transfer of power ಘೋಷಿಸಿದರು. ಅದರ ಚರ್ಚೆಗೆ ಕಾಂಗ್ರೆಸಿನ ಎಲ್ಲಾ ಪ್ರತಿನಿಧಿಗಳು ಭಾಗವಹಿಸಿ, ನೆಹರು ಅವರನ್ನೇ ಕಾಂಗ್ರೆಸ್ ವಕ್ತಾರ/spokes man ಆಗಿ ಮುಂದೂಡಿದರು.

ಭಾರತಕ್ಕೆ ಸ್ವಾತಂತ್ರ್ಯ ಬಂದಿದ್ದು 1947.
1950 ಡಿಸೆಂಬರ್ 15ರಂದು ಸರ್ದಾರ್ ವಲ್ಲಭಭಾಯ್ ಪಟೇಲರು ನಮ್ಮನ್ನು ಅಗಲಿದರು.
ಸ್ವತಂತ್ರ ಭಾರತದ ಮೊದಲ ಸಾರ್ವತ್ರಿಕ ಚುನಾವಣೆ ನಡೆದಿದ್ದು 
1951 ಅಕ್ಟೋಬರ್ 25 ರಿಂದ 21 ಡಿಸೆಂಬರ್ ವರೆಗೆ.
ಅಂದರೆ ಸರ್ದಾರ್ ವಲ್ಲಭಭಾಯ್ ಪಟೇಲರ ಮರಣದ ಒಂದು ವರುಷದ ನಂತರ......

ಸುಳ್ಳು ಹಾಗೂ ಸತ್ಯದ ಅಂತರ
ಅರಿಯುವವರಾಗಿ 

ಸಂಗ್ರಹ
ರೂಪೇಶ್ ಪುತ್ತೂರು