ಬಾನು ಮುಷ್ತಾಕ್ ನಾಡಿನ ಮಸೀದಿಯಲ್ಲಿ ಸರ್ವ ಧರ್ಮ ಮಹಿಳೆಯರ ದರ್ಶನ

ಬಾನು ಮುಷ್ತಾಕ್ ನಾಡಿನ ಮಸೀದಿಯಲ್ಲಿ ಸರ್ವ ಧರ್ಮ ಮಹಿಳೆಯರ ದರ್ಶನ

ಮಸೀದಿಯ ದರ್ಶನ ಕಾರ್ಯಕ್ರಮವು 
ಗ್ರಾಮದಲ್ಲಿ ಸೌಹಾರ್ದ ವಾತವಾರಣವನ್ನು ಸೃಷ್ಟಿಸಿತು, ಸರ್ವಧರ್ಮದ, ಸರ್ವ ಪಕ್ಷದ ಹಿರಿಯರು, ಕಿರಿಯರು, ಮಹಿಳೆಯರು, ಪುರುಷರು, ವಿದ್ಯಾರ್ಥಿಗಳು ಭಾಗವಹಿಸುವ ಮೂಲಕ ಸೌಹಾರ್ದ ಹಬ್ಬಕ್ಕೆ ಸಾಕ್ಷಿಯಾದರು.

**"
ಸಕಲೇಶಪುರ ಬಾಳ್ಳುಪೇಟೆ ಜುಮ್ಮ ಮಸೀದಿಯ 
 ಗ್ರಾಮದ ಬಿ.ಎಂ.ರಸ್ತೆ, ಇಂದಿರಾನಗರ,
ದಲ್ಲಿರುವ 
ಪುನರ್ ನಿರ್ಮಾಣಗೊಂಡ ಜುಮ್ಮ ಮಸೀದಿಯ ಉದ್ಘಾಟನಾ ಕಾರ್ಯಕ್ರಮಕ್ಕೆ ಮಸೀದಿ ಆಡಳಿತ ಸಮಿತಿ ಮಸೀದಿ ದರ್ಶನ ಕಾರ್ಯಕ್ರಮ ಹಮ್ಮಿಕೊಂಡಿತ್ತು,

ಯಾವುದೇ ಧಾರ್ಮಿಕ ಸ್ಥಳಗಳು ಒಂದು ಸಮುದಾಯಕ್ಕೆ ಸೀಮಿತವಾಗಿರದೇ ಎಲ್ಲರಿಗೂ ಧರ್ಮಿಯರಿಗೆ  ಶ್ರದ್ದಾಕೇಂದ್ರವಾಗಿರಬೇಕು ಎಂದು ತುಮಕೂರಿನ ಹಜರತ್ ಮೌಲಾನ ಖಾಲಿದ್ ಬೇಗ್ ನದ್ವಿ ಸಾಹೇಬ್ ಹೇಳಿದರು.
ಇಂದು ಎಲ್ಲ ಸಮುದಾಯದವರ ಮುಂದೆ ಮಾತನಾಡುತ್ತಿರುವುದು ಸಂತೋಷದ ವಿಚಾರವಾಗಿದೆ.ಈ ಭೂಮಿಯ ಮೇಲೆ ನಾವು ನಿವೆಲ್ಲರೂ ನೂರಾರು ವರ್ಷಗಳಿಂದ ಜೀವಿಸುತ್ತಿದ್ದೇವೆ  ಆದರೆ ಕೆಲವರಿಗೆ ಮಸೀದಿಯೊಳಗೆ ಏನಿದೆ,ಮುಂಜಾನೆ ನಮಾಜ್ ಕೂಗುವ ಉದ್ದೇಶ ಎನೆಂಬುವುದು ತಿಳಿಯದೆ ಕೆಲವರಲ್ಲಿ ತಪ್ಪು ಮಾಹಿತಿಗಳಿವೆ .ನಾನು ಕುರಾನ್, ಬೈಬಲ್ ವೇದ ಹಾಗೂ ಗೀತೆಗಳನ್ನು ಅಧ್ಯಾಯನ ಮಾಡಿದ್ದೇನೆ. ಎಲ್ಲ ಧರ್ಮದ ಮಾತುಗಳು ಒಂದೇ ಅಗಿದೆ.ಇಡೀ ಈ ಭೂ ಮಂಡಲದ ಸೃಷ್ಟಿಗೆ ಹಾಗೂ ಇಲ್ಲಿರುವ ಮನುಷ್ಯರು,ಪ್ರಾಣಿ ಪಕ್ಷಿಗಳು,ಕಷ್ಟ ಸುಖಗಳಿಗೆ ದೇವರು ಒಬ್ಬನೇ ಕಾರಣನಾಗಿದ್ದಾನೆ. ಎಲ್ಲ ಧರ್ಮದರುವವರ ಹೃದಯದ ವ್ಯವಸ್ಥೆ ಹಾಗೂ ರಕ್ತದ ಬಣ್ಣ ಒಂದೇ ಅಗಿದೆ ಆದ್ದರಿಂದ  ಎಲ್ಲರಿಗೂ ಪ್ರೀತಿಯನ್ನು ಹಂಚಿ,ಶಾಂತಿ ಸಹಬಾಳ್ವೆಯಿಂದ ಬುದುಕುವುದನ್ನು ಕಲಿಯಬೇಕು ಎಂದು ಹೇಳಿದರು.
***
 ಮನುಷ್ಯ ಎಲ್ಲಾ ದರ್ಮದ ಉತ್ತಮ ಅಂಶಗಳನ್ನು ಪಡೆದು ಬದುಕ ಬೇಕು.
ನಾನು ಮೂಲ ಆರೆಸ್ಸೆಸ್ ಸಂಘಟನೆಯಿಂದ ಬಂದವನು.. ಬಾಳ್ಳುಪೇಟೆಯಲ್ಲಿ  ಎಲ್ಲಾ ಜನಾಂಗದವರ ಜೊತೆ ಸಂತೋಷ ವಾಗಿ ಬದುಕುತ್ತಿದ್ದೇನೆ.

ಮಸೀದಿಯನ್ನು ದಿನನಿತ್ಯ ದುಡಿಯುವ ಜನರು ಶ್ರಮಪಟ್ಟು ಕಟ್ಟಿದ್ದಾರೆ ಸರ್ವರೊಂದಿಗೆ ಸತತವಾಗಿ ಬದುಕುತ್ತಿದ್ದಾರೆ ಈ ಮಸೀದಿಯ ಉದ್ಘಾಟನೆ ಸಮಾಜಕ್ಕೆ ಮಾದರಿಯಾಗಿದೆ.

ಹೋರಾಟಗಾರ ಹಾಗೂ ಪತ್ರಕರ್ತ ಬಾಳ್ಳು ಗೋಪಾಲ್ 
**
 ಇದೊಂದು ಸುಂದರವಾದ ಸಮಯ ಇಂದು ನಾನು ಈ ಕಾರ್ಯಕ್ರಮದಲ್ಲಿ ಭಾಗವಹಿಸುತ್ತಿರುವುದು ಆರಿಸಲಾಗಿದೆ ಸರ್ವ ಧರ್ಮಗಳ ಸಾರ ಒಂದೇ ಆಗಿದೆ ಬಸವಣ್ಣನವರ ವಚನಗಳು ವರದಿಗಳು ಆದರ್ಶಗಳು ಎಲ್ಲವೂ ಸಹ ಜೀವಪರವಾಗಿದೆ.

ಮಾಜಿ ತಾಲ್ಲೂಕು ಪಂಚಾಯತಿ ಉಪಧ್ಯಾಕ್ಷ ಎಡೇಹಳ್ಳಿ ಆರ್ ಮಂಜುನಾಥ್ , 

***
 ನನಗೆ ಬಹಳ ಖುಷಿಯಾಗಿದೆ ನಾನು ಅನೇಕ ಮಸೀದಿಗಳಿಗೆ ಭೇಟಿ ನೀಡಿದ್ದೇನೆ. ಈ ಮಸೀದಿಯ ಆಡಳಿತ ಸಮಿತಿಯ ಸದಸ್ಯರು ಸೌಹಾರ್ದ ವಾತಾವರಣದಲ್ಲಿ ಸರ್ವರನ್ನು ಆಹ್ವಾನಿಸಿ ನಡೆಸುತ್ತಿರುವುದು ಸಂತೋಷದ ವಿಷಯ.

ಮಾಜಿ ಶಾಸಕ ಬಿಜೆಪಿ ಮುಖಂಡ ಬಿ ಆರ್ ಗುರುದೇವ್, 
**
 ಬಾಳ್ಳು ಪೇಟೆ ಸೌಹಾರ್ದತೆಗೆ ಪ್ರೀತಿ-ವಿಶ್ವಾಸಕ್ಕೆ ಮಾದರಿಯಾದ ಗ್ರಾಮವಾಗಿದೆ ಮಸೀದಿ ಉದ್ಘಾಟನೆಗೆ ಭಾಗವಹಿಸಿ ನನಗೆ ಸಂತೋಷವಾಗಿದೆ 

ಕರ್ನಾಟಕ ರಕ್ಷಣಾ ವೇದಿಕೆ ತಾಲೂಕು ಅಧ್ಯಕ್ಷ ದಿನೇಶ್ ,

***

 ಮಸೀದಿಯ ಉದ್ಘಾಟನೆಗೆ ನನ್ನನ್ನು ಆಹ್ವಾನಿಸಿದಾಗ ಮಸೀದಿಯ ಬಗ್ಗೆ ಕುತೂಹಲವಾಯಿತು ಇಲ್ಲಿಗೆ ಬಂದು ನೋಡಿದಾಗ ಇಲ್ಲಿಯ ಧರ್ಮಗುರುಗಳು ಸಾಮೂಹಿಕ ಪ್ರಾರ್ಥನೆಯ ಬಗ್ಗೆ ವಿವರಣೆ ನೀಡಿದರು ಇದೊಂದು ಸುಂದರ ಅನುಭವ.

ಗ್ರಾಮ  ಪಂಚಾಯತಿ ಸದಸ್ಯೆ ಹಾಗೂ ರಾಜ್ಯ ವೀರಶೈವ ಸಮಾಜದ ಕಾರ್ಯದರ್ಶಿ ಅಕ್ಷಿತಾ.

 ಮಸೀದಿಯ ಒಳಗೆ ಮಹಿಳೆಯರಿಗೆ ಪ್ರವೇಶವಿಲ್ಲ ಎಂದು ಕೇಳಿದ್ದೆ ಆದರೆ ಇಲ್ಲಿ ನಮ್ಮನ್ನು ಆಹ್ವಾನಿಸಿ ಮಸೀದಿಯನ್ನು ವೀಕ್ಷಣೆ ಮಾಡಲು ತಿಳಿಸಿದರು ನಾನು ಮಸೀದಿಯ ಒಳಗೆಲ್ಲ ತಿರುಗಿ ಬಂದೆ. ಸ್ನೇಹಿತರೆಲ್ಲ ಒಳಗೆ ಹೋಗಿ ನೋಡಿಕೊಂಡು ಬಂದೆವು ಇಂತಹ ಕಾರ್ಯಕ್ರಮಗಳು ಹೆಚ್ಚು ಹೆಚ್ಚು ಮೂಡಿಬರಬೇಕು.

ಗ್ರಾಮ ಪಂಚಾಯತಿ ಸದಸ್ಯೆ ಗೌರಮ್ಮ,

**
 ನನಗೆ ಈ ಮಸೀದಿ ನೋಡಿದರೆ ತಾಜ್ಮಹಲ್ ನೆನಪಾಗುತ್ತದೆ ನಾನೊಮ್ಮೆ ತಾಜ್ಮಹಲ್ ನೋಡಿದ್ದೇನೆ ಈ ಸುಂದರ ಪ್ರದೇಶದಲ್ಲಿ ಒಂದು ಸುಂದರವಾದ ಮಸೀದಿ ನಿರ್ಮಾಣವಾಗಿದೆ ಮಸೀದಿಯ ಒಳಗೆ ಪ್ರವೇಶ ಮಾಡಿ ಬಂದೆ ನಿಜಕ್ಕೂ ಖುಷಿಯಾಯಿತು.

ಕಾಂಗ್ರೆಸ್ ಜಿಲ್ಲಾ ಕಾರ್ಯದರ್ಶಿ ಸರೋಜ, 

***
ಮಸೀದಿಯಲ್ಲಿ ದೇವರು ಕಾಣಲಿಲ್ಲ ಹತ್ತನೇ ತರಗತಿಯ ವಿದ್ಯಾರ್ಥಿನಿ  ಸ್ಪೋರ್ತಿ ಹಾಗೂ ಲಕ್ಷ್ಮಿ ತಮ್ಮ ಅಭಿಪ್ರಾಯ ವ್ಯಕ್ತಪಡಿಸುತ್ತಾ ನಾವು ದೇವಸ್ಥಾನಕ್ಕೆ ಹೋದಾಗ ದೇವರ ಮೂರ್ತಿಗಳು ಇರುತ್ತವೆ ಚರ್ಚಿನಲ್ಲಿ ಸಹ ಮೂರ್ತಿಗಳನ್ನು ಕಂಡಿದ್ದೇವೆ ಆದರೆ ಅವಳಿಗೆ ಗೋಡೆಗಳ ಬಿಟ್ಟರೆ ಯಾವ ಚಿತ್ರಗಳಾಗಲಿ ಮೂರ್ತಿಗಳಲ್ಲಿ ಏನು ಇಲ್ಲ ಏಕೆಂದು ಪ್ರಶ್ನಿಸುತ್ತಿದ್ದರು ನಮಗೆ ಮಸೀದಿಯ ಒಳಗೆ ಪ್ರವೇಶಿಸಿ ಖುಷಿಯಾಗುತ್ತಿತ್ತು ಒಂದು ಹೊಸ ಅನುಭವ ಇದೇ ಮೊದಲ ಬಾರಿಗೆ ಮಸೀದಿಯ ಒಳಗೆ ನಾವುಗಳು ಪ್ರವೇಶಿಸಿದ್ದೇವೆ ಎಂದು ಹೇಳಿದರು

ಅನೇಕ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿ, ತಮ್ಮ ಅನಿಸಿಕೆ ಗಳನ್ನ ಹಂಚಿಕೊಂಡರು.

ಮಸೀದಿ ಉದ್ಘಾಟನೆ ಹಿನ್ನಲೆಯಲ್ಲಿ ಸರ್ವರಿಗೂ ಅನ್ನ ದಾಸೋಹವನ್ನು ಏರ್ಪಡಿಸಲಾಗಿತ್ತು.

ಗ್ರಾಮ ಪಂಚಾಯತಿ ಅಧ್ಯಕ್ಷ ಎಚ್ ಎಂ ಸ್ವಾಮಿ,ವರ್ತಕರ ಸಂಘದ ಅಧ್ಯಕ್ಷ ಬಿ.ಎನ್ ನಾಗೇಂದ್ರ.ಸಮಾಜ ಸೇವಕರಾದ ಅಮರ್ ನಾಥ್,
ಹಾಸನದ ಜಾಮಿಯಾ ಮಸೀದಿಯ ಧರ್ಮಗುರುಗಳು ಜನಾಬ್ ಅಸ್ಲಂ  ಸಾಬ್,   ಜಿಲ್ಲಾ ಪಂಚಾಯತ್ ಮಾಜಿ ಸದಸ್ಯೆ ಜ್ಯೋತಿ ಗುರುದೇವ್,     ಮಸೀದಿ ಅಧ್ಯಕ್ಷ  ತೌಫೀಕ್ ಅಹಮ್ಮದ್, ರೈತ ಸಂಘದ ಪಾಳ್ಯ ರಘು, ಅಲೂರು ಕರವೇ ನಟರಾಜ್, ಗ್ರಾ ಪಂ ಅಧ್ಯಕ್ಷ ಸ್ವಾಮಿ,  ಕಾಂಗ್ರೆಸ್ ಜಿಲ್ಲಾ ಕಾರ್ಯದರ್ಶಿ ಸರೋಜ,
ಗ್ರಾಮ ಪಂಚಾಯತಿ ಸದಸ್ಯರು ಉದಯಶಂಕರ್  ಸೇರಿದಂತೆ ಜುಮಾ ಮಸೀದಿಯ ಅಧ್ಯಕ್ಷರು ,ಕಾರ್ಯದರ್ಶಿ ಹಾಗೂ ಸದಸ್ಯರು ಸೇರಿದಂತೆ ಸುತ್ತಮುತ್ತಲಿನ ನೂರಾರು ಗ್ರಾಮಸ್ಥರು ಉಪಸ್ಥಿತರಿದ್ದರು.