ಭಾರತ ಹಿರಿಯ ಪತ್ರಕರ್ತರ ಒಕ್ಕೂಟಕ್ಕೆ ರಾಜ್ಯದ ಸಾಂಬಸದಾಶಿವ ರೆಡ್ಡಿ ನೇಮಕ

ಭಾರತ ಹಿರಿಯ ಪತ್ರಕರ್ತರ ಒಕ್ಕೂಟಕ್ಕೆ ರಾಜ್ಯದ ಸಾಂಬಸದಾಶಿವ ರೆಡ್ಡಿ ನೇಮಕ

'ಎಸ್‌ಜೆಎಫ್‌ಐʼ ಕಾರ್ಯಕಾರಿ ಸಮಿತಿ ಸದಸ್ಯರಾಗಿ  ಸಾಂಬಸದಾಶಿವ ರೆಡ್ಡಿ ನೇಮಕ
ಬೆಂಗಳೂರು, ಆಗಸ್ಟ್‌ 24, 2025: ಭಾರತದ ಹಿರಿಯ ಪತ್ರಕರ್ತರ ಒಕ್ಕೂಟದ (ಎಸ್‌ಜೆಎಫ್‌ಐ) ಕಾರ್ಯಕಾರಿ ಸಮಿತಿಗೆ  ಬೆಂಗಳೂರಿನ ಹಿರಿಯ ಪತ್ರಕರ್ತರ ವೇದಿಕೆಯ ಅಧ್ಯಕ್ಷರಾಗಿರುವ ಶ್ರೀ  ಆರ್. ಪಿ. ಸಾಂಬಸದಾಶಿವ ರೆಡ್ಡಿ ಅವರನ್ನು ನೇಮಕ ಮಾಡಲಾಗಿದೆ.

ತಿರುವನಂತಪುರದಲ್ಲಿ ಮೂರು ದಿನಗಳ ಕಾಲ ನಡೆದ ಒಕ್ಕೂಟದ ಪ್ರಪ್ರಥಮ ಸಭೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದೆ. ಕರ್ನಾಟಕದ ಕೆ. ಶಾಂತಕುಮಾರಿ ಅವರು ಕಾರ್ಯದರ್ಶಿಯಾಗಿ ನೇಮಕಗೊಂಡಿದ್ದಾರೆ.
ಒಕ್ಕೂಟದ ಅಧ್ಯಕ್ಷರಾಗಿ  ಸಂದೀಪ್‌ ದೀಕ್ಷಿತ್‌ (ದೆಹಲಿ) ಮತ್ತು ಉಪಾಧ್ಯಕ್ಷರಾಗಿ ಆನಂದಂ ಪುಳಿಪಳುಪುಳ, ಸುಹಾಸಿನಿ ಪ್ರಭುಗಾಂವಕರ್‌, ಡಾ. ಟಿ. ಜನಾರ್ದನ, ಹಾಗೂ ಪ್ರಧಾನ ಕಾರ್ಯದರ್ಶಿಯಾಗಿ  ಎನ್‌. ಪಿ. ಚೆಕ್ಕುಟ್ಟಿ ಅವರು ನೇಮಕಗೊಂಡಿದ್ದಾರೆ.

ನಿವೃತ್ತ ಪತ್ರಕರ್ತರಿಗೆ ಪ್ರತ್ಯೇಕ ಪಿಂಚಣಿ ಯೋಜನೆ, ರಾಷ್ಟ್ರೀಯ ಆರೋಗ್ಯ ಯೋಜನೆ ಜಾರಿ ಮತ್ತು   ರೈಲ್ವೆ ರಿಯಾಯ್ತಿ ಪ್ರಯಾಣ ಸೌಲಭ್ಯ ಪುನರಾರಂಭಿಸಲು ಕೇಂದ್ರ ಸರ್ಕಾರವನ್ನು ಒತ್ತಾಯಿಸುವ ನಿರ್ಣಯವನ್ನು ಸಮಾವೇಶವು ಕೈಗೊಂಡಿದೆ.