ಮನೆ ಕೆಲಸದಾಕೆ ಮೇಲೆ ಅತ್ಯಾಚಾರ: ಪ್ರಜ್ವಲ್ ರೇವಣ್ಣಗೆ ಜೀವಾವಧಿ-11.60 ಲಕ್ಷ ರೂ ದಂಡ

ಮನೆ ಕೆಲಸದಾಕೆ ಮೇಲೆ ಅತ್ಯಾಚಾರ: ಪ್ರಜ್ವಲ್ ರೇವಣ್ಣಗೆ ಜೀವಾವಧಿ-11.60 ಲಕ್ಷ ರೂ ದಂಡ

ಮನೆ ಕೆಲಸದಾಕೆಯ ಮೇಲಿನ ಅತ್ಯಾಚಾರ-ಅಪಹರಣ ಪ್ರಕರಣದಲ್ಲಿ ಹಾಸನದ ಮಾಜಿ ಸಂಸದ ಪ್ರಜ್ವಲ್ ರೇವಣ್ಣಗೆ ಬೆಂಗಳೂರಿನ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ ಜೀವಾವಧಿ ಶಿಕ್ಷೆ ಮತ್ತು ಹನ್ನೊಂದು ಲಕ್ಷದ ಅರುವತ್ತು ಸಾವಿರ ರೂ ದಂಡ ವಿಧಿಸಿದೆ.
    ಅಪರಾಧಿಗೆ ಒಟ್ಟು ಎಂಟು ಸೆಕ್ಷನ್ ಗಳ ಅಡಿಯಲ್ಲಿ ಶಿಕ್ಷೆ ಮತ್ತು ದಂಡ ವಿಧಿಸಲಾಗಿದೆ.ಸೆಕ್ಷನ್ 376(2)ಕೆ ಅಡಿಯಲ್ಲಿ ಜೀವಾವಧಿ ಮತ್ತು ಐದು ಲಕ್ಷ ರೂ ದಂಡ,376(2)ಎನ್ ಅಡಿಯಲ್ಲಿ ಪದೇ ಪದೇ ಅತ್ಯಾಚಾರ ಅಪರಾಧದಲ್ಲಿ ಜೀವಾವಧಿ ಮತ್ತು ಐದು ಲಕ್ಷ ರೂ ದಂಡ,354(ಎ)ಅಡಿಯಲ್ಲಿ ಲೈಂಗಿಕ ಕಿರುಕಳ ಅಪರಾಧದಲ್ಲಿ ಮೂರು ವರ್ಷ ಜೈಲು,ಇಪ್ಪತ್ತೈದು ಲಕ್ಷ ರೂ ದಂಡ,354(ಬಿ)ಅಡಿಯಲ್ಲಿ  ಶರೀರ ಸ್ಪರ್ಶದ ಹೀನಕೃತ್ಯದಲ್ಲಿ ಏಳು ವರ್ಷ ಜೈಲು, ಐವತ್ತು ಸಾವಿರ ರೂ ದಂಡ,354(ಸಿ)ಅಡಿಯಲ್ಲಿ ಮೂರು ವರ್ಷ ಜೈಲು ಇಪ್ಪತ್ತೈದು ಸಾವಿರ ರೂ ದಂಡ,506 ಅಡಿಯಲ್ಲಿ ಬೆದರಿಕೆಗೆ ಎರಡು ವರ್ಷ ಜೈಲು ಹತ್ತು ಸಾವಿರ ರೂ ದಂಡ,201 ಅಡಿಯಲ್ಲಿ ಸಾಕ್ಷ್ಯ ನಾಶಕ್ಕಾಗಿ ಮೂರು ವರ್ಷ ಜೈಲು,ಇಪ್ಪತ್ತೈದು ಸಾವಿರ ರೂ ದಂಡ, ಐಟಿ ಕಾಯ್ದೆ 66(ಇ) ಅಡಿಯಲ್ಲಿ ಖಾಸಗಿ ವೀಡಿಯೋ ಹಂಚಿಕೆಗಾಗಿ ಮೂರು ವರ್ಷ ಜೈಲು, ಇಪ್ಪತ್ತೈದು ಸಾವಿರ ರೂ ದಂಡ ವಿಧಿಸಲಾಗಿದೆ. ನ್ಯಾಯಾಧೀಶರಾದ ಸಂತೋಷ್ ಗಜಾನನ ಭಟ್ ಇಂದು ಶನಿವಾರ ಶಿಕ್ಷೆ  ಪ್ರಕಟಿಸುವ ಮುನ್ನ ಅಪರಾಧಿಗೆ ಮಾತನಾಡುವ ಅವಕಾಶ ನೀಡಿದರು.ಇದೊಂದು ರಾಜಕೀಯ ಪಿತೂರಿಯಾಗಿದ್ದು,ನಾನು ಅತ್ಯಾಚಾರ ನಡೆಸಿಲ್ಲ,ನಾನೋರ್ವ ಪ್ರತಿಭಾವಂತ ಇಂಜಿನಿಯರಿಂಗ್ ಪದವೀಧರನಾಗಿದ್ದೇನೆ.ಲೋಕಸಭಾ ಚುನಾವಣೆಗೆ ಆರು ದಿನಗಳ ಮೊದಲು ನಮ್ಮ ಕುಟುಂಬವನ್ನು ರಾಜಕೀಯವಾಗಿ ಮುಗಿಸಲು ಪಿತೂರಿ ನಡೆಸಲಾಗಿದೆ ಎಂದು ಭಿನ್ನವಿಸಿಕೊಂಡರು.ತೀರ್ಪಿಗೂ ಮೊದಲು ಶಿಕ್ಷೆ ಪ್ರಮಾಣವನ್ನು ಕಡಿಮೆ ಮಾಡುವಂತೆ ಪ್ರಜ್ವಲ್ ಪರ ವಕೀಲರು ನ್ಯಾಯಾಧೀಶರಲ್ಲಿ ಮನವಿ ಮಾಡಿಕೊಂಡರು.