ಡಾ.ರಾಜ್ ಸಹೋದರಿ ನಾಗಮ್ಮ ನಿಧನ
ಡಾ.ರಾಜ್ ಸಹೋದರಿ ನಾಗಮ್ಮ ನಿಧನ
ವರನಟ ಡಾ.ರಾಜಕುಮಾರ್ ಅವರ ಸಹೋದರಿ ನಾಗಮ್ಮ(94) ಇಂದು ಶುಕ್ರವಾರ ದೊಡ್ಡಗಾಜನೂರಿನ ಅವರ ಮನೆಯಲ್ಲಿ ನಿಧನರಾಗಿದ್ದಾರೆ.
ವಯೋಸಹಜ ಅನಾರೋಗ್ಯದಿಂದ ಅವರು ಬಳಲುತ್ತಿದ್ದರು.ಅಂತ್ಯಕ್ರಿಯೆ ನಾಳೆ ಶನಿವಾರ ಸ್ವಗ್ರಾಮದಲ್ಲಿ ನಡೆಯಲಿದೆ.
ವಿಷಯ ತಿಳಿದ ತಕ್ಷಣ ನಟ ಶಿವರಾಜಕುಮಾರ್ ಗೋವಾದಲ್ಲಿ ನಡೆಯುತ್ತಿದ್ದ ಶೂಟಿಂಗ್ ರದ್ದು ಮಾಡಿ ಗ್ರಾಮದತ್ತ ಪಯಣ ಬೆಳೆಸಿದ್ದಾರೆ.ರಾಜ್ ಕುಟುಂಬದ ಸದಸ್ಯರೆಲ್ಲರೂ ಈ ದಿನವೇ ಆಗಮಿಸಿದ್ದಾರೆ.
ಪುನೀತ್ ಮೇಲೆ ತುಂಬಾ ಪ್ರೀತಿ ಇರಿಸಿದ್ದ ಅಜ್ಜಿಗೆ ಅವರ ನಿಧನದ ಸುದ್ಧಿಯೇ ತಿಳಿದಿರಲಿಲ್ಲ.ನಾನು ಸಾಯುವುದರ ಒಳಗೆ ಬಂದು ಹೋಗು,ನಿನ್ನನ್ನು ನೋಡುವ ಆಸೆಯಾಗಿದೆ ಎಂದು ಅಜ್ಜಿ ಸದಾ ಪುನೀತ್ ಬಗ್ಗೆಯೇ ಚಿಂತಿಸುತ್ತಿತ್ತು.


