ಮೈಸೂರು ಉಪ ವಿಭಾಗದ ಡಿವೈಎಸ್ಪಿ ಕರೀಂ ರಾವುತರಗೆ ಭಾವಪೂರ್ಣ ಬೀಳ್ಕೊಡುಗೆ.

ಪೊಲೀಸ್ ಇಲಾಖೆಯಲ್ಲಿ 32 ವರ್ಷಗಳ ಸುದೀರ್ಘ ಸೇವೆ ಸಲ್ಲಿಸಿ ಇಂದು ಗುರುವಾರ ನಿವೃತ್ತರಾದ ಮೈಸೂರು ದಕ್ಷಿಣ ಉಪ ವಿಭಾಗದ ಡಿವೈಎಸ್ಪಿ ಕರೀಂ ರಾವುತರ್ ಅವರನ್ನು ಸಿಬ್ಬಂದಿ ವರ್ಗ ಭಾವಪೂರ್ಣವಾಗಿ ಆತ್ಮೀಯತೆಯಿಂದ ಬೀಳ್ಕೊಟ್ಟರು. ಮನೆಯಿಂದ ಅವರ ಕಚೇರಿ ಮೈಸೂರು ದಕ್ಷಿಣ ಪೊಲೀಸ್ ಠಾಣೆಗೆ ಆಗಮಿಸಿದ ಅವರನ್ನು ಸಿಬ್ಬಂದಿ ವರ್ಗ ಮತ್ತು ಅಭಿಮಾನಿಗಳು ವಾದ್ಯ ಗೋಷ್ಠಿಯೊಂದಿಗೆ ಬರಮಾಡಿಕೊಂಡರು. ಪತ್ನಿ ಶ್ರೀಮತಿ ಸೈದಾ,ಮಗ ವಕೀಲ ರಾಹಿಲ್ ಒಂದಿಗೆ ಸನ್ಮಾನ ಸ್ವೀಕರಿಸಿ ಮಾತನಾಡಿದ ಅವರು ಇಲಾಖೆಯ ಎಲ್ಲಾ ವಿಭಾಗಗಳಲ್ಲಿ ಪ್ರಾಮಾಣಿಕವಾಗಿ ಜನಮೆಚ್ಚುವ ರೀತಿಯಲ್ಲಿ ಸೇವೆ ಸಲ್ಲಿಸಿದ ತೃಪ್ತಿ ಇದೆ ಎಂದರು. ಸೇನಾ ಕುಟುಂಬದ ಹಿನ್ನೆಲೆಯಿಂದ ಬಂದ ನನ್ನ ಸಹೋದರರಿಬ್ಬರು ಸೇನೆ ಮತ್ತು ಪೊಲೀಸ್ ಇಲಾಖೆಯಲ್ಲಿ ಅಧಿಕಾರಿಗಳಾಗಿ ಸೇವೆ ಸಲ್ಲಿಸುತ್ತಿದ್ದಾರೆ ಎಂದು ಹೆಮ್ಮೆಯಿಂದ ಹೇಳಿಕೊಂಡರು. ಈ ಸಂದರ್ಭ ಸಿಬ್ಬಂದಿ ವರ್ಗ,ಸ್ನೇಹಿತರು ತೀರಾ ಭಾವುಕರಾಗಿದ್ದರು. ಮುಖ್ಯಮಂತ್ರಿಗಳ ಖಾಸಗಿ ಕಾರ್ಯದರ್ಶಿ ಸಿ.ಟಿ.ಕುಮಾರ್,ಶಾಸಕ ಯತೀಂದ್ರ ಅವರ ಖಾಸಗಿ ಕಾರ್ಯದರ್ಶಿ ರಾಯನಹುಂಡಿ ರವಿ,ನಗರ ಅಪರಾಧ ಪತ್ತೆ ದಳದ ಎಸಿಪಿ ಮೊಹಮ್ಮದ್ ಶರೀಫ್, ದಕ್ಷಿಣ ಠಾಣೆ ಇನ್ಸ್‌ಪೆಕ್ಟರ್ ಡಾ.ಎಂ.ಎಲ್.ಶೇಖರ್,ಗ್ರಾಮಾಂತರ ಠಾಣೆ ಇನ್ಸ್‌ಪೆಕ್ಟರ್ ಶಿವನಂಜ ಶೆಟ್ಟಿ, ಕೆ.ಆರ್.ನಗರ ಇನ್ಸ್‌ಪೆಕ್ಟರ್ ಶಿವಪ್ರಕಾಶ್, ಸಾಲಿಗ್ರಾಮ ಇನ್ಸ್‌ಪೆಕ್ಟರ್ ಶಶಿಕುಮಾರ್,ವರುಣಾ ಸಬ್ ಇನ್ಸ್‌ಪೆಕ್ಟರ್ ಸದಾನಂದ ತಿಪ್ಪಣ್ಣನವರ್,ಇಲವಾಲ ಸಬ್ ಇನ್ಸ್‌ಪೆಕ್ಟರ್ ಮಹೇಂದ್ರ, ಜಯಪುರ ಸಬ್ ಇನ್ಸ್‌ಪೆಕ್ಟರ್ ಹೇಮಲತ ಹಾಗೂ ನೂರಾರು ಅಭಿಮಾನಿಗಳು ಉಪಸ್ಥಿತರಿದ್ದು ಅವರ ಜನ ಮೆಚ್ಚಿದ ಸೇವೆಯನ್ನು ಸ್ಮರಿಸಿದರು. ಸಮಾರಂಭದ ನಂತರ ವಾದ್ಯಗೋಷ್ಠಿ ಒಂದಿಗೆ ಠಾಣೆಯ ಗೇಟ್ ವರೆಗೆ ಹಾಸಿದ್ದ ಕೆಂಪು ಹಾಸಿನಲ್ಲಿ ಸಿಬ್ಬಂದಿ ವರ್ಗ ಅವರ ಮೇಲೆ ಪುಷ್ಪ ವೃಷ್ಟಿಯೊಂದಿಗೆ ಆತ್ಮೀಯವಾಗಿ ಬೀಳ್ಕೊಟ್ಟರು. ಈ ಸಂದರ್ಭ ಎಲ್ಲರ ಕಣ್ಣಂಚಿನಲ್ಲಿ ನೀರಾಲಿ ಕಂಡುಬಂತು. ಗೇಟಿನ ಹೊರಭಾಗ ಅಭಿಮಾನಿಗಳು ಅವರನ್ನು ಹೊತ್ತು ಮೆರೆಸಿದರು.

ಮೈಸೂರು ಉಪ ವಿಭಾಗದ ಡಿವೈಎಸ್ಪಿ ಕರೀಂ ರಾವುತರಗೆ ಭಾವಪೂರ್ಣ ಬೀಳ್ಕೊಡುಗೆ.