ಆರ್ ಸಿ ಬಿ ವಿಜಯೋತ್ಸವ ದುರಂತ: ಕಾರಣರ ವಿರುದ್ಧ ಕಾನೂನು ಕ್ರಮ-------ಸಚಿವ ಸಂಪುಟ ನಿರ್ಧಾರ.
ಆರ್ ಸಿ ಬಿ ವಿಜಯೋತ್ಸವ ದುರಂತ: ಕಾರಣರ ವಿರುದ್ಧ ಕಾನೂನು ಕ್ರಮ-------ಸಚಿವ ಸಂಪುಟ ನಿರ್ಧಾರ.
ಬೆಂಗಳೂರಿನ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ರಾಯಲ್ ಚಾಲೆಂಜರ್ಸ್ ವಿಜಯೋತ್ಸವದ ವೇಳೆ ಕಾಲ್ತುಳಿತದಿಂದ ಹನ್ನೊಂದು ಮಂದಿ ಮೃತಪಟ್ಟ ದುರಂತಕ್ಕೆ ಕಾರಣರಾದವರ ವಿರುದ್ಧ ಕಾನೂನು ಕ್ರಮ ಜರುಗಿಸಲು ರಾಜ್ಯ ಸರ್ಕಾರ ನಿರ್ಧರಿಸಿದೆ.
ಇಂದು ಗುರುವಾರ ನಡೆದ ಸಚಿವ ಸಂಪುಟ ಸಭೆಯಲ್ಲಿ ನ್ಯಾಯಮೂರ್ತಿ ಜಾನ್ ಮೈಕೆಲ್ ಡಿಕುನ್ಹಾ ವರದಿಯ ಶಿಫಾರಸುಗಳನ್ನು ಅಂಗೀಕರಿಸಲಾಯಿತು. ಅದರಂತೆ ದುರಂತಕ್ಕೆ ಕಾರಣರಾದ ಪೊಲೀಸ್ ಅಧಿಕಾರಿಗಳ ವಿರುದ್ಧ ಇಲಾಖಾ ವಿಚಾರಣೆ ನಡೆಸಲು ವರದಿಯ ಶಿಫಾರಸಿನಂತೆ ತೀರ್ಮಾನಿಸಲಾಯಿತು.
ಬೆಂಗಳೂರು ನಗರದ ಈ ಹಿಂದಿನ ಪೊಲೀಸ್ ಕಮೀಷನರ್ ಬಿ.ದಯಾನಂದ, ಹೆಚ್ಚುವರಿ ಕಮೀಷನರ್ ವಿಕಾಸ್ ಕುಮಾರ್ ವಿಕಾಸ್, ಕೇಂದ್ರ ವಿಭಾಗದ ಡಿಸಿಪಿ ಆಗಿದ್ದ ಶೇಖರ್ ಎಚ್.ಚಿಕ್ಕಣ್ಣನವರ್, ಕಬ್ಬನ್ ಪಾರ್ಕ್ ಉಪ ವಿಭಾಗದ ಎಸಿಪಿ ಆಗಿದ್ದ ಸಿ.ಬಾಲಕೃಷ್ಣ, ಪೊಲೀಸ್ ಇನ್ಸ್‌ಪೆಕ್ಟರ್ ಎ.ಕೆ.ಗಿರೀಶ್, ಇವರಲ್ಲದೆ ಕರ್ನಾಟಕ ಕ್ರಿಕೆಟ್ ಅಸೋಸಿಯೇಷನ್ ಅಧ್ಯಕ್ಷ ರಘುರಾಂ ಭಟ್, ಮಾಜಿ ಕಾರ್ಯದರ್ಶಿ ಎಸ್.ಶಂಕರ್, ಮಾಜಿ ಖಜಾಂಚಿ ಇ.ಎಸ್.ಜಯರಾಂ, ಆರ್ ಸಿ ಬಿ ಯ ಉಪಾಧ್ಯಕ್ಷ ರಾಜೇಶ್ ಮೆನನ್, ಡಿಎನ್ಎ ಎಂಟರ್ಟೈನ್ಮೆಂಟ್ ನ ಎಂ.ಡಿ.ವೆಂಕಟದರ್ಶನ್, ಉಪಾಧ್ಯಕ್ಷ ಸುನಿಲ್ ಮಾಥುರ್ ಈ ದುರಂತಕ್ಕೆ ಕಾರಣರು ಎಂದು ವರದಿಯಲ್ಲಿ ಹೇಳಲಾಗಿದೆ.