ಭಾನು ಮಷ್ತಾಕ್ ಹೊತ್ತು ತಂದಿರುವ ಬೂಕರ್ ಹಣತೆ ! - 2
ಭಾಷೆಯು ಸಮಾಜ ಮತ್ತು ಸಂಸ್ಕಾರದ ಸಂಪರ್ಕ ಕೊಂಡಿಯಾಗಿದೆ. ಸಾಹಿತಿಯು ಅದರ ಪ್ರತಿನಿಧಿಯಾಗಿರುತ್ತಾರೆ. ಭಾನುಮಷ್ತಾಕ್ ರವರು ಕೂಡಾ ಕನ್ನಡದ ಮೇರು ಸಾಹಿತಿಗಳ ಸ್ಥಾನದಲ್ಲಿ ನಿಂತು ದಸೆರಾ ಸಾಂಸ್ಕೃತಿಕ ಉತ್ಸವದ ಉದ್ಘಾಟನೆಯನ್ನು ನಡೆಸಲಿದ್ದಾರೆ. ಆ ಮೂಲಕ ಮೂಲಕ ಬಹುತ್ವದ ಸಂಸ್ಕಾರದಲ್ಲಿ ಭಾಗಿಯಾಗಿ ಸಮಾಜದ ಭಾವೈಕ್ಯತೆಯನ್ನು ಬೆಳೆಸುವುದಕ್ಕಾಗಿ, ಕೋಮು ಸಾಮರಸ್ಯವನ್ನು ಕಾಪಾಡುವ ಅಭಿಯಾನದ ಹಣತೆಯನ್ನು ಬೆಳಗಿದ್ದಾರೆ.
ಭಾನು ಮಷ್ತಾಕ್ ಹೊತ್ತು ತಂದಿರುವ ಬೂಕರ್ ಹಣತೆ ! - 2
ಕನ್ನಡ ಸಾಹಿತ್ಯ ಸೇವೆಯ ಮೂಲಕ ಕನ್ನಡದ ಕಂಪನ್ನು ಅಂತರಾಷ್ಟ್ರೀಯ ಮಟ್ಟದಲ್ಲಿ ಬೆಳಗಿ ಪ್ರಶಸ್ತಿ ಪಡೆದವರನ್ನು ಕರ್ನಾಟಕ ಸರಕಾರವು ಈ ಪ್ರಶಸ್ತಿಗೆ ವಿಶೇಷ ಮನ್ನಣೆ ನೀಡಿದೆ. ಈ ಭಾರಿಯ ದಸರಾ ಉತ್ಸವದ ಉದ್ಘಾಟನೆಗೆ ಭಾನು ಮಷ್ತಾಕ್ ರವರು ಆಯ್ಕೆಯಾಗಿದ್ದಾರೆ. ಆದರೆ ವಿವಾದ ಸೃಷ್ಟಿಯಾಗಿರುವುದು ಇಲ್ಲಿಂದಲೇ!
2017ರ ದಸರಾ ಉತ್ಸವವನ್ನು ನಿತ್ಯೋತ್ಸವ ಕವಿ ಕೆ.ಎಸ್. ನಿಸಾರ್ ಅಹಮ್ಮದ್ ರವರು ನೆರವೇರಿಸಿದ್ದರು. ಆವಾಗ ಕಂಡು ಬರದಿದ್ದ ಪ್ರತಿರೋಧ ಈವಾಗ್ಗೆ ಕಂಡು ಬಂದಿರುತ್ತವೆ. ಭಾನು ಮಷ್ತಾಕ್ ಉದ್ಘಾಟನೆ ಮಾಡಬಾರದೆಂದು ಬಿಜೆಪಿ ಪಕ್ಷ ಪ್ರತಿಭಟಿಸುತ್ತಿದೆ. ಈಗ ಕಂಡು ಬರುತ್ತಿರುವ ಪ್ರತಿಭಟನೆಗಳನ್ನು ಗಮನಿಸಿದರೇ ಭಾನು ಮಷ್ತಾಕರನ್ನು ಸರಕಾರ ದಸರೆ ಕಾರ್ಯಕ್ರಮಗಳ ಔಪಚಾರಿಕ ಉದ್ಘಾಟನೆಗೆ ಆಹ್ವಾನಿಸಿದೆಯೇ ಅಥವಾ ಅರ್ಚಕ ಹುದ್ದೆಗೆ ನೇಮಕ ಮಾಡಿದ್ದಾರೆಯೇ ಎಂಬ ಅನುಮಾನ ಬರುವ ರೀತಿಯಲ್ಲಿ ತೀವ್ರ ಸ್ವರೂಪದಲ್ಲಿ ಪರ ವಿರೋಧ ವಾದ ವಿವಾದಗಳು ನಡೆಯುತ್ತಿವೆ. ಇವುಗಳು ಫ್ಯಾಸಿಸ್ಟ್ ಚಿಂತನೆಯ ಪ್ರಭಾವಕ್ಕೆ ಒಳಗಾಗುತ್ತಿರುವಂತೆ ಕಾಣುತ್ತಿದೆ. ಫ್ಯಾಸಿಸ್ಟ್ ಚಿಂತನೆಗಳಿಗೆ ಸೈದ್ಧಾಂತಿಕ ನಿಲುವುಗಳಿರುತ್ತವೆ ಮತ್ತು ಅವುಗಳಿಗೆ ರಾಜಕೀಯ ಧ್ಯೇಯ ದೋರಣೆಗಳಿರುತ್ತವೆ. ಈಗಿನ ಹೋರಾಟಗಳು ಮುಖ್ಯವಾಗಿ ಅಲ್ಪ ಸಂಖ್ಯಾತ ಸಮುದಾಯದ ವಿರುದ್ಧವಾಗಿರುವ ತಕರಾರುಗಳಾಗಿವೆ. ಅಲ್ಪಸಂಖ್ಯಾತರು ದಸೆರಾ ಉತ್ಸವವನ್ನು ಉದ್ಘಾಟನೆ ಮಾಡಬಾರದು ಮತ್ತು ದಲಿತ ಸಮುದಾಯದವರು ಮಹಿಷ ಉತ್ಸವವನ್ನು ಮಾಡಬಾರದು ಹೀಗೆ ಹಲವು ಪ್ರತಿರೋಧಗಳು ಸಹಾ ಫ್ಯಾಸಿಸ್ಟ್ ಚಿಂತನೆಗಳ ಮುಖ್ಯ ವಿಷಯಗಳಾಗಿವೆ. ನಾವು ಹೇಳುವುದನ್ನೇ ಮಾಡ ಬೇಕು, ನಾವು ಬೇಡವೆಂದರೇ ಬೇಡ ಎಂಬ ವೈಚಾರಿಕ ಪ್ರತಿಬಾಸವನ್ನು ಸಮಾಜದಲ್ಲಿ ಅಲಿಖಿತವಾಗಿ ಜ್ಯಾರಿ ಮಾಡುತ್ತಿರುವ ಪ್ರಯತ್ನಗಳು ನಡೆಯುತ್ತಿದೆ. ಇದು ದಸೆರಾ ಉತ್ಸವವನ್ನು ಹಿಂದೆ ಉದ್ಘಾಟನೆ ಮಾಡಿ ನಿತ್ಯೋತ್ಸವ ಕವಿ ಶ್ರೀ. ಕೆ.ಎಸ್. ನಿಸಾರ್ ಅಹಮ್ಮದ್ ರವರು ಮತ್ತು ದಸೆರಾ ಉತ್ಸವವನ್ನು ಉದ್ಘಾಟನೆ ಮಾಡಲಿರುವ ನಡುವಿನ ಅಂತರದಲ್ಲಿ ಸಮಾಜದಲ್ಲಿರುವ ಭಾವೈಕ್ಯತೆ, ಕೋಮು ಸಾಮರಸ್ಯಗಳಿಗೆ ದಕ್ಕೆಯಾಗುವ ಈ ರೀತಿಯ ದ್ವೇಷ ಭಾವನೆಯು, ಜನಾಂಗ, ಧಾರ್ಮಿಕ ಅಸಹಿಷ್ಣುತೆಗಳು ಅಪಾಯಕಾರಿ ರೀತಿಯಲ್ಲಿ ಬೆಳೆದಿರುವುದನ್ನು ಕಾಣಬಹುದಾಗಿದೆ. ಅಲ್ಲದೇ ಈ ರೀತಿಯ ಚಟುವಟಿಕೆಗಳಲ್ಲಿ ನಿರತರಾಗಿರುವವರುಗಳು ಮತ್ತು ಸಮಸ್ಯೆಗಳನ್ನು ಸೃಷ್ಟಿಸುವವರೇ ಸಮಾಜದ ನಾಯಕತ್ವವನ್ನು ವಹಿಸಿಕೊಳ್ಳುವಲ್ಲಿ ಯಶಸ್ವಿಯಾಗುತ್ತಿರುವುದು ಆತಂಕಕಾರಿ ವಿಚಾರವಾಗಿದೆ.
ಭಾನುಮಷ್ತಾಕ್ ದಸೆರಾ ಉತ್ಸವದ ಉದ್ಘಾಟನೆ ಮಾಡುತ್ತಿರುವುದನ್ನು ಕೇವಲ ಸಂಘ ಪರಿವಾರದವರು ಮಾತ್ರ ಆಕ್ಷೇಪಣೆ ಮಾಡುತ್ತಿಲ್ಲ. ಅವರು ಸುಮ್ಮನೆ ಇದ್ದಿದ್ದರೇ ಸಮಸ್ಯೆಯಂತೂ ಇಲ್ಲದಿರುತ್ತಿರಲಿಲ್ಲ! ಈ ವಿಚಾರದಲ್ಲಿ ಮುಸ್ಲಿಂ ಮೂಲಭೂತವಾದಿಗಳೂ ಹೊಸ ಫತ್ವಾಗಳನ್ನು ಹೊರಡಿಸಿ ಬಿಡುತ್ತಿದ್ದರು! ಸಧ್ಯಕ್ಕೆ ಅವರು ಮಾಡ ಬೇಕಾಗಿದ್ದ ಆಕ್ಷೇಪ, ಅಸಮದಾನಗಳನ್ನು ಸಂಘಪರಿವಾರದವರು ಮಾಡುತ್ತಿದ್ದಾರೆಂದು ಸುಮ್ಮನಿದ್ದಾರೆ ಅಷ್ಟೇ! ಭಾನುಮಷ್ತಾಕ್ ರವರು ವಿವಾದವನ್ನಂತೂ ಎದುರಿಸಲೇ ಬೇಕಾಗಿತ್ತು! ಒಂದು ವೇಳೆ ಈ ಗೋಜಲುಗಳು ಬೇಡವೆಂದು ಭಾನು ಮಷ್ತಾಕ್ ರವರು ಸರಕಾರದ ಆಹ್ವಾನವನ್ನು ನಿರಾಕರಿಸಿದರು ಎಂದಿಟ್ಟುಕೊಳ್ಳಿ, ಸಮಸ್ಯೆ ಬಗೆಹರಿಯುತ್ತಿರಲಿಲ್ಲ. ಆವಾಗಲೂ ಇದೇ ಅಸಹಿಷ್ಣುತಾವಾದಿಗಳು ಭಾನುಮಷ್ತಾಕ್ ರವರಿಗೆ ಇರುವ ಜಾತೀ ಭಾವನೆಹಯಿಂದಾಗಿ ಇಡೀ ಧರ್ಮ, ಪರಂಪರೆ, ಸಂಸ್ಕಾರಗಳನ್ನು ವಿರೋಧ ಮಾಡಿದ್ದಾರೆಂಬ ಆರೋಪ ಚೇಷ್ಟೆಗಳನ್ನು ಮಾಡುತ್ತಿದ್ದರು. ಆವಾಗ್ಗೆ ಆ ಆರೋಪಗಳನ್ನು ಕೇವಲ ಭಾನುಮಷ್ತಾಕ್ ರವರು ಮಾತ್ರವಲ್ಲ ಇಡೀ ಮುಸ್ಲಿಂ ಸಮಾಜವೇ ಎದುರಿಸಬೇಕಾದ ಸನ್ನಿವೇಶ ಉಂಟಾಗುತ್ತಿತ್ತು. ಒಂದು ರೀತಿಯ ಇಸ್ಲಾಮೋಫೋಬಿಯಾ ಇದೆ.
ಭಾಷೆಯು ಸಮಾಜ ಮತ್ತು ಸಂಸ್ಕಾರದ ಸಂಪರ್ಕ ಕೊಂಡಿಯಾಗಿದೆ. ಸಾಹಿತಿಯು ಅದರ ಪ್ರತಿನಿಧಿಯಾಗಿರುತ್ತಾರೆ. ಭಾನುಮಷ್ತಾಕ್ ರವರು ಕೂಡಾ ಕನ್ನಡದ ಮೇರು ಸಾಹಿತಿಗಳ ಸ್ಥಾನದಲ್ಲಿ ನಿಂತು ದಸೆರಾ ಸಾಂಸ್ಕೃತಿಕ ಉತ್ಸವದ ಉದ್ಘಾಟನೆಯನ್ನು ನಡೆಸಲಿದ್ದಾರೆ. ಆ ಮೂಲಕ ಮೂಲಕ ಬಹುತ್ವದ ಸಂಸ್ಕಾರದಲ್ಲಿ ಭಾಗಿಯಾಗಿ ಸಮಾಜದ ಭಾವೈಕ್ಯತೆಯನ್ನು ಬೆಳೆಸುವುದಕ್ಕಾಗಿ, ಕೋಮು ಸಾಮರಸ್ಯವನ್ನು ಕಾಪಾಡುವ ಅಭಿಯಾನದ ಹಣತೆಯನ್ನು ಬೆಳಗಿದ್ದಾರೆ. ಅದು ಕನ್ನಡಾಭಿಮಾನಿಗಳ ಪರಂಪರೆ ಸಂಸ್ಕಾರಗಳನ್ನು ಪೋಷಿಸುವ ದಿವಟಿಕೆಗಳಾಗಿ ಸದಾ ಉರಿದು ಬೆಳಗುತ್ತಿರಲಿ. ಭಾನು ಮಷ್ತಾಕ್ ರವರು ಅನ್ಯ ಧರ್ಮದವರಾಗಿ, ಮಹಿಳೆಯಾಗಿ, ಪ್ರಗತಿಪರ ಹೋರಾಟಗಾರತಿಯಾಗಿ, ಕನ್ನಡದ ಹೆಮ್ಮೆಯ ಸಾಹಿತಿಯಾಗಿ ವಿಶಿಷ್ಟ ವ್ಯಕ್ತಿಯಾಗಿದ್ದು ಜಾತ್ಯಾತೀತ ಭಾವನೆಗಳನ್ನು ಮತ್ತು ಪ್ರಜಾಪ್ರಭುತ್ವದ ಮೌಲ್ಯಗಳನ್ನು ಎತ್ತಿಹಿಡಿಯುವ ಇಂದಿನ ಹೋರಾಟದಲ್ಲಿ ಭಾಗಿಯಾಗಿದ್ದಾರೆ. ಸಮಯೋಚಿತವಾಗಿ ಇವರನ್ನು ಆಯ್ಕೆ ಮಾಡಿದ ಸರಕಾರ ಮತ್ತು ಕರ್ನಾಟಕದ ಖಾವಂದರಾದ ಸನ್ಮಾನ್ಯ ಶ್ರೀ. ಸಿದ್ಧರಾಮಯ್ಯನವರಿಗೆ ಕೋಟಿ ಕೋಟಿ ಪ್ರಣಾಮಗಳು.


