ಕಾಲ್ತುಳಿತ ದುರಂತ: ಮೃತಪಟ್ಟ ಕುಟುಂಬಕ್ಕೆ ತಲಾ 25 ಲಕ್ಷ ಪರಿಹಾರ-ಆರ್ ಸಿ ಬಿ

ಕಾಲ್ತುಳಿತ ದುರಂತ: ಮೃತಪಟ್ಟ ಕುಟುಂಬಕ್ಕೆ ತಲಾ 25 ಲಕ್ಷ ಪರಿಹಾರ-ಆರ್ ಸಿ ಬಿ

ಜೂನ್ ನಾಲ್ಕರಂದು ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ವಿಜಯೋತ್ಸವದ ಸಂದರ್ಭ ಸಂಭವಿಸಿದ ಕಾಲ್ತುಳಿತ ದುರಂತದಲ್ಲಿ ಮೃತಪಟ್ಟವರ ಕುಟುಂಬಗಳಿಗೆ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ತಲಾ ಇಪ್ಪತ್ತೈದು ಲಕ್ಷ ರೂ ಪರಿಹಾರ ಘೋಷಿಸಿದೆ.
        ದುರಂತದಲ್ಲಿ ಹನ್ನೊಂದು ಮಂದಿ ಮೃತಪಟ್ಟಿದ್ದರು.ಘಟನೆ ನಡೆದಾಗ ತಂಡವು ಮೃತರ ಕುಟುಂಬಗಳಿಗೆ ತಲಾ ಹತ್ತು ಲಕ್ಷ ರೂ ಹಾಗೂ ರಾಜ್ಯ ಸರಕಾರ ತಲಾ ಇಪ್ಪತ್ತೈದು ಲಕ್ಷ ರೂ ಪರಿಹಾರ ಘೋಷಿಸಿದ್ದರು.
      ದುರಂತ ನಡೆದು ಮೂರು ತಿಂಗಳವರೆಗೂ ಮೌನವಹಿಸಿದ್ದ ಆರ್ ಸಿ ಬಿ ತನ್ನ ತಪ್ಪಿಗೆ ಪ್ರಾಯಶ್ಚಿತ್ತ ಮಾಡಿಕೊಂಡಿತ್ತು.
    ಶುಕ್ರವಾರ ತಮ್ಮ ಎಕ್ಸ್ ಖಾತೆಯಲ್ಲಿ ಹೇಳಿಕೆಯೊಂದನ್ನು ಬಿಡುಗಡೆ ಮಾಡಿದ್ದ ಆರ್ ಸಿ ಬಿ ಕಳೆದ ಮೂರು ತಿಂಗಳಿನಿಂದ ನಮ್ಮನ್ನು ಖಾಲಿತನದೊಂದಿಗೆ ದುಃಖ ಆವರಿಸಿತ್ತು.ಈ ಅವಧಿಯಲ್ಲಿ ಸಾಕಷ್ಟು ಪಾಠಗಳನ್ನು ಕಲಿತ್ತಿದ್ದೇವೆ ಎಂದಿತ್ತು.
     ಈ ನೋವನ್ನೇ ನಂಬಿಕೆಯಾಗಿ ಪರಿವರ್ತಿಸಲು ನಾವು ತೀರ್ಮಾನಿಸಿದ್ದೇವೆ.ತಂಡದ ಅಭಿಮಾನಿಗಳಿಗಾಗಿ,ಸಮುದಾಯಕ್ಕಾಗಿ ಆರ್ ಸಿ ಬಿ ಕೇರ್ಸ್ ಆರಂಭಿಸುವುದಾಗಿ ತಿಳಿಸಿತ್ತು.