ಜನಪರ ಹೋರಾಟಗಾರರಿಗೆ ದೇಶದ್ರೋಹಿ ಹಣೆಪಟ್ಟಿ : ಎಲ್ ಹನುಮಂತಯ್ಯ ಆತಂ

ಜನಪರ ಹೋರಾಟಗಾರರಿಗೆ ದೇಶದ್ರೋಹಿ ಹಣೆಪಟ್ಟಿ : ಎಲ್ ಹನುಮಂತಯ್ಯ ಆತಂ

ಸಮುದಾಯಪರ ಚಿಂತಕರನ್ನು ದೇಶದ್ರೋಹಿಗಳೆಂದು ಹಣೆಪಟ್ಟಿ ಹಚ್ಚುವ ಕಾಲಘಟ್ಟ ಅಪಾಯಕಾರಿ ಎಂದು ಸಾಹಿತಿ,  ರಾಜ್ಯಸಭೆಯ ಮಾಜಿ ಸದಸ್ಯರಾದ ಡಾ. ಎಲ್ ಹನುಮಂತಯ್ಯ ಅವರು ಅಭಿಪ್ರಾಯಪಟ್ಟರು. 

ರವೀಂದ್ರ ಕಲಾಕ್ಷೇತ್ರದಲ್ಲಿ  ಸಮುದಾಯ ಸಾಂಸ್ಕೃತಿಕ ಸಂಘಟನೆಯ ಸುವರ್ಣ ಸಂಭ್ರಮದ ಅಂಗವಾಗಿ ಹಮ್ಮಿಕೊಂಡಿದ್ದ ನಾಟಕೋತ್ಸವದಲ್ಲಿ ಅವರು ಮಾತನಾಡಿದರು.

ಐವತ್ತು ವರ್ಷಗಳ ಹಿಂದೆ ಸಮುದಾಯ ಹುಟ್ಟಿದಾಗ ಸಮಾಜಮುಖಿ ವಾತಾವರಣವಿತ್ತು. ಇಂದು ಸಂದರ್ಭ ಬೇರೆಯಾಗಿದೆ, ಕಾಲ ತಿರುಗು ಮುರುಗಾಗಿದೆ ಆಗ   ಎಡಪಂಥೀಯರು  ಹೆಮ್ಮೆಯಿಂದ ಎದೆಯುಬ್ಬಿಸಿ ನೆಡೆಯುತ್ತಿದ್ದರು, ಆದರೆ ಅವರನ್ನು ಇಂದು  ದೇಶದ್ರೋಹಿಗಳು ಎಂದು ಬಿಂಬಿಸಲಾಗುತ್ತಿದೆ , ಅಂದು ತಲೆಮರೆಸಿಕೊಂಡು ಓಡಾಡುತ್ತಿದ್ದ ಬಲಪಂಥಿಯರು ಇಂದು ದೇಶಭಕ್ತರಾಗಿಬಿಟ್ಟಿದ್ದಾರೆ ಎಂದು ಡಾ. ಎಲ್ ಹನುಮಂತಯ್ಯ ಅಭಿಪ್ರಾಯ ಪಟ್ಟರು, . 

ಸಾಂಸ್ಕೃತಿಕ ತುರ್ತುಪರಿಸ್ಥಿತಿಯ ಇಂತಹ ಸಂದರ್ಭದಲ್ಲಿ ಕಲೆಯನ್ನು ಜನರ ಬಳಿಗೆ ತೆಗೆದುಕೊಂಡು ಹೋಗುವ ಸವಾಲು ನಮ್ಮ ಮುಂದಿದೆ.  ಹಾಗಾಗಿಯೇ ಸಮುದಾಯದ ಜವಾಬ್ದಾರಿ ಇಮ್ಮಡಿಯಲ್ಲ ನೂರ್ಮಡಿಯಾಗಿದೆ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತಾಡಿದ ಬೆಂಗಳೂರು ಸಮುದಾಯದ ಕಾರ್ಯಧ್ಯಕ್ಷರಾದ ಡಾ. ಬಿ ಆರ್ ಮಂಜುನಾಥ್, ಇಂದಿನ ಯುವ ಸಮೂಹ ಕ್ರಿಯಾಶೀಲವಾಗಿದೆ, ಅವರಲ್ಲಿ ಹೊಸ ಆಲೋಚನೆಗಳಿವೆ ಫಾಸಿಸ್ಟ್ ವಿರೋಧಿ ಹೋರಾಟದಲ್ಲಿ ಅವರು ತೊಡಗಿಸಿಕೊಳ್ಳುತ್ತಾರೆ ಎಂಬ ಆಶಾಭಾವ ನನಗಿದೆ ಎಂದರು.

ಶ್ರೀ ಐ. ಬಿ ಈಳಿಗೇರ,( ಧಾರವಾಡ ರಾಜ್ಯ ಸಮುದಾಯ ಉಪಾಧ್ಯಕ್ಷರು ) ಶ್ರೀ ಅಚ್ಯುತ kgf,(ಮಾಜಿ ಅಧ್ಯಕ್ಷರು ಸಮುದಾಯ ರಾಜ್ಯ ಸಮಿತಿ ) ಹಿರಿಯ ಕಲಾವಿದರಾದ ಶ್ರೀ ಹೆಚ್ ಜಿ ದತ್ತಾತ್ರೇಯ, ನಿರ್ದೇಶಕ ಡಾ. ಟಿ ಎಸ್ ನಾಗಭರಣ,(ಬೆನಕ )ರಂಗಕರ್ಮಿ ಶ್ರೀ ಬಿ ವಿ ರಾಜಾರಾಮ್ (ಕಲಾ ಗಂಗೋತ್ರಿ ) ಅವರಿಗೆ ರಂಗ ಗೌರವ ಸಲ್ಲಿಸಲಾಯಿತು 
ಜನಾರ್ಧನ್ ಕಾರ್ಯಕ್ರಮ ನಿರೂಪಿಸಿದರು.