ಸರಕಾರಿ ದಸರಾ ಸಾಂಸ್ಕೃತಿಕ ಆಚರಣೆಯಷ್ಟೆ-ಧಾರ್ಮಿಕ ಸ್ವರೂಪದಲ್ಲ:ಪ್ರಮೋದಾದೇವಿ ಒಡೆಯರ್

ಸರಕಾರಿ ದಸರಾ ಸಾಂಸ್ಕೃತಿಕ ಆಚರಣೆಯಷ್ಟೆ-ಧಾರ್ಮಿಕ  ಸ್ವರೂಪದಲ್ಲ:ಪ್ರಮೋದಾದೇವಿ ಒಡೆಯರ್

ರಾಜ್ಯ ಸರಕಾರ ಆಚರಿಸುವ ಮೈಸೂರು ದಸರಾ ಸಾಂಸ್ಕೃತಿಕ ಆಚರಣೆಯಷ್ಟೆ ಅದು ಧಾರ್ಮಿಕ ಸ್ವರೂಪ ಪಡೆದಿಲ್ಲ ಎಂದು ರಾಜವಂಶಸ್ಥೆ ಪ್ರಮೋದಾದೇವಿ ಒಡೆಯರ್ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
     ದಸರಾ ಉದ್ಘಾಟಕರ ಕುರಿತು ವಿವಾದ ಎದ್ದಿರುವ ಹಿನ್ನೆಲೆಯಲ್ಲಿ ಪತ್ರಿಕಾ ಪ್ರಕಟಣೆ ಹೊರಡಿಸಿರುವ ಅವರು ವಿವಾದದ ಕುರಿತು ತೀವ್ರ ಕಳವಳ ವ್ಯಕ್ತಪಡಿಸಿದ್ದಾರೆ.
     ಸರಕಾರದ ಈ ಉತ್ಸವ  ಪರಂಪರೆ, ಸಂಪ್ರದಾಯ ಹಾಗೂ ಧಾರ್ಮಿಕ ಪಾವಿತ್ರ್ಯವನ್ನು ಪ್ರತಿಪಾದಿಸುವುದಿಲ್ಲ.ಅದು ಕೇವಲ ಆಚರಣೆಯಷ್ಟೆ ಧಾರ್ಮಿಕ ಸ್ವರೂಪದಲ್ಲ ಎಂದು ತಿಳಿಸಿದ್ದಾರೆ.
    ಚಾಮುಂಡಿ ಬೆಟ್ಟ ಕೇವಲ ಹಿಂದೂಗಳಿಗೆ ಮಾತ್ರ ಸೇರಿದ್ದಲ್ಲ ಎಂದು ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಹೇಳಿಕೆಯನ್ನು ಅವರ ಹೆಸರು ಹೇಳದೆ ಪ್ರಸ್ತಾಪಿಸಿದ ಅವರು ಅದೊಂದು ಸಂವೇದನಾರಹಿತ ಹೇಳಿಕೆಯಾಗಿದ್ದು,ಹಿಂದೂಗಳಿಗೆ ಸೇರಿಲ್ಲವಾದರೆ ಮುಜರಾಯಿ ಇಲಾಖೆಗೆ ಏಕೆ ಒಳಪಡುತ್ತಿತ್ತು ಎಂದು ಪ್ರಶ್ನಿಸಿದ್ದಾರೆ.
   ದಸರಾ ಉದ್ಘಾಟನೆಗೆ ಆಹ್ವಾನಿಸಿರುವ ಗಣ್ಯರ ಆಯ್ಕೆ ರಾಜಕೀಯ ಸಂಘರ್ಷಕ್ಕೆ ಕಾರಣವಾಗಿದ್ದು ಬೇಸರ ಮೂಡಿಸಿದೆ ಎಂದಿದ್ದಾರೆ.

ಸರಕಾರದ ನಿರ್ಧಾರವನ್ನು ಮೈಸೂರು ಸಂಸದ, ರಾಜವಂಶಸ್ಥ ಯದುವೀರ್ ಪರೋಕ್ಷವಾಗಿ ಸಮರ್ಥಿಸಿರುವುದರಿಂದ ಅವರದೇ ಪಕ್ಷ ಬಿಜೆಪಿ ಎಬ್ಬಿಸಿದ್ದ ವಿವಾದ ಈಗಾಗಲೇ ತಣ್ಣಗಾಗಿದೆ.ಈಗ ಪ್ರಮೋದಾದೇವಿ ಒಡೆಯರ್ ನೀಡಿರುವ ಹೇಳಿಕೆ ರಾಜಕೀಯವಾಗಿ ಮಹತ್ವ ಪಡೆದುಕೊಂಡಿದೆ.