ರಂಗನತಿಟ್ಟು ಪಕ್ಷಿಧಾಮದ ಪ್ರವೇಶ-ದೋಣಿ ವಿಹಾರ ಶುಲ್ಕ ಹೆಚ್ಚಳ.

ರಂಗನತಿಟ್ಟು ಪಕ್ಷಿಧಾಮದ ಪ್ರವೇಶ-ದೋಣಿ ವಿಹಾರ ಶುಲ್ಕ ಹೆಚ್ಚಳ.

ಶ್ರೀರಂಗಪಟ್ಟಣ ತಾಲೂಕಿನ ರಂಗನತಿಟ್ಟು ಪಕ್ಷಿಧಾಮದ ಪ್ರವೇಶ ಶುಲ್ಕ ಮತ್ತು ದೋಣಿ ವಿಹಾರ ಶುಲ್ಕವನ್ನು ಅರಣ್ಯ ಇಲಾಖೆ ಹೆಚ್ಚಿಸಿದೆ.
    ಹೊಸ ದರದಂತೆ ಪ್ರವೇಶ ಶುಲ್ಕವನ್ನು ರೂ75 ರಿಂದ 80 ಕ್ಕೆ ಏರಿಸಲಾಗಿದೆ.ಮಕ್ಕಳು ಮತ್ತು ವಿದ್ಯಾರ್ಥಿಗಳಿಗೆ ರೂ 25 ರಿಂದ 40 ಕ್ಕೆ, ವಿದೇಶಿಯರಿಗೆ ರೂ 500 ರಿಂದ 600 ಕ್ಕೆ, ವಿದೇಶಿ ಮಕ್ಕಳು ಮತ್ತು ವಿದ್ಯಾರ್ಥಿಗಳಿಗೆ ರೂ 250 ರಿಂದ 300 ಕ್ಕೆ ಏರಿಸಲಾಗಿದೆ.
    ದೋಣಿ ವಿಹಾರದ ಶುಲ್ಕವನ್ನು ರೂ 100 ರಿಂದ 130 ಕ್ಕೆ, ವಿದೇಶಿಯರಿಗೆ ರೂ 500 ರಿಂದ 600 ಕ್ಕೆ, ವಿಶೇಷ ದೋಣೆ ವಿಹಾರಕ್ಕೆ ರೂ ರೂ 2,000 ದಿಂದ 2,500 ಕ್ಕೆ, ವಿದೇಶಿಯರಿಗೆ ರೂ2,500 ರಿಂದ 4,000 ಕ್ಕೆ ಏರಿಸಲಾಗಿದೆ.
     ವಾಹನಗಳ ಪಾರ್ಕಿಂಗ್ ಶುಲ್ಕವನ್ನು ಸಹ ಹೆಚ್ಚಿಸಲಾಗಿದ್ದು, ದ್ವಿಚಕ್ರ ಕ್ಕೆ ರೂ15 ರಿಂದ 20 ಕ್ಕೆ, ನಾಲ್ಕು ಚಕ್ರಕ್ಕೆ ರೂ60 ರಿಂದ 70 ಕ್ಕೆ ಹೆಚ್ಚಿಸಲಾಗಿದೆ. ಐದು ವರ್ಷಗಳಿಗೊಮ್ಮೆ ದರ ಪರಿಷ್ಕರಣೆಯಾಗಲಿದ್ದು,ಪರಿಷ್ಕೃತ ದರಗಳು ಆಗಸ್ಟ್ ನಿಂದಲೇ ಜಾರಿಯಾಗಿವೆ ಎಂದು ವನ್ಯಜೀವಿ ವಿಭಾಗದ ವಲಯ ಅರಣ್ಯಾಧಿಕಾರಿ ಸೈಯ್ಯದ್ ನದೀಂ ತಿಳಿಸಿದ್ದಾರೆ.