ಆರ್ ಸಿ ಬಿ ವಿಜಯೋತ್ಸವ ದುರಂತ:ಐವರು ಪೊಲೀಸ್ ಅಧಿಕಾರಿಗಳ ಅಮಾನತು ಹಿಂಪಡೆದ ರಾಜ್ಯ ಸರಕಾರ.
ಆರ್ ಸಿ ಬಿ ವಿಜಯೋತ್ಸವ ದುರಂತ:ಐವರು ಪೊಲೀಸ್ ಅಧಿಕಾರಿಗಳ ಅಮಾನತು ಹಿಂಪಡೆದ ರಾಜ್ಯ ಸರಕಾರ.
ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಆರ್ ಸಿ ಬಿ ವಿಜಯೋತ್ಸವದ ವೇಳೆ ನಡೆದ ಕಾಲ್ತುಳಿತ ದುರಂತಕ್ಕೆ ಕಾರಣರೆಂದು ಆರೋಪಿಸಲಾಗಿದ್ದ ಐವರು ಪೊಲೀಸ್ ಅಧಿಕಾರಿಗಳ ಅಮಾನತು ಆದೇಶವನ್ನು ಸರಕಾರ ಹಿಂಪಡೆದಿದೆ.
ಜೂನ್ ನಾಲ್ಕರಂದು ಈ ದುರಂತ ನಡೆದು ಹನ್ನೊಂದು ಮಂದಿ ಮೃತಪಟ್ಟಿದ್ದರು.ಈ ಸಂಬಂಧ ಆಗಿನ ಬೆಂಗಳೂರು ನಗರ ಪೊಲೀಸ್ ಕಮೀಷನರ್ ಬಿ.ದಯಾನಂದ,ಹೆಚ್ಚುವರಿ ಕಮೀಷನರ್ ವಿಕಾಸ್ ಕುಮಾರ್ ವಿಕಾಸ್,ಡಿಸಿಪಿ ಶೇಖರ್,ಎಸಿಪಿ ಬಾಲಕೃಷ್ಣ, ಇನ್ಸ್‌ಪೆಕ್ಟರ್ ಗಿರೀಶ್ ಅವರನ್ನು ಸರಕಾರ ಅಮಾನತುಗೊಳಿಸಿತ್ತು.
ದುರಂತದ ತನಿಖೆಗಾಗಿ ನಿವೃತ್ತ ನ್ಯಾಯಮೂರ್ತಿ ಜಾನ್ ಡಿಕುನ್ನಾ ಏಕ ಸದಸ್ಯ ಆಯೋಗವನ್ನು ಸರಕಾರ ರಚಿಸಿತ್ತು,ಆಯೋಗದ ಶಿಫಾರಸ್ಸಿನಂತೆ ಇವರ ವಿರುದ್ದ ಇಲಾಖಾ ವಿಚಾರಣೆ ನಡೆಸುವಂತೆ ಸಚಿವ ಸಂಪುಟ ನಿರ್ಧರಿಸಿತ್ತು.
ಈ ಮಧ್ಯೆ ಕೇಂದ್ರೀಯ ಆಡಳಿತಾತ್ಮಕ ನ್ಯಾಯಮಂಡಳಿ ವಿಕಾಸ್ ಕುಮಾರ್ ವಿಕಾಸ್ ಅವರ ಅಮಾನತ್ತನ್ನು ರದ್ದುಗೊಳಿಸಿತ್ತು.
ಈ ಐವರ ಮನವಿಯನ್ನು ಪುರಸ್ಕರಿಸಿದ ಸರಕಾರ ಇಲಾಖಾ ವಿಚಾರಣೆಯನ್ನು ಬದಿಗಿರಿಸಿ ಅಮಾನತು ಆದೇಶವನ್ನು ರದ್ದುಗೊಳಿಸಿದೆ.ನಾಳೆ ಇವರಿಗೆ ಹೊಸ ಹುದ್ದೆ ನೀಡುವ ಸಾಧ್ಯತೆ ಇದೆ.