ಧರ್ಮಸ್ಥಳ ಅಸಹಜ ಸಾವಿನ ಪ್ರಕರಣ: ಬೆಳ್ತಂಗಡಿಯಲ್ಲಿ ಎಸ್ ಐ ಟಿ ತನಿಖಾ ಕಚೇರಿ‌ ಆರಂಭ.

ಧರ್ಮಸ್ಥಳ ಅಸಹಜ ಸಾವಿನ ಪ್ರಕರಣದ ತನಿಖೆಗಾಗಿ ವಿಶೇಷ ತನಿಖಾ ದಳದ(SIT)ಕಚೇರಿಯನ್ನು ಬೆಳ್ತಂಗಡಿಯಲ್ಲಿ ಇಂದಿನಿಂದ ಆರಂಭಿಸಲಾಗಿದೆ. ಎಸ್ಪಿ ಜಿತೇಂದ್ರ ಕುಮಾರ್ ದಯಾಮ ಅವರನ್ನು ತನಿಖಾಧಿಕಾರಿಯಾಗಿ ನೇಮಿಸಲಾಗಿದೆ.ಆಂತರಿಕ ಭದ್ರತಾ ವಿಭಾಗದ ಪೊಲೀಸ್ ಮಹಾ ನಿರ್ದೇಶಕ ಪ್ರಣಬ್ ಮೊಹಂತಿ ನೇತ್ರತ್ವದ ಪೊಲೀಸ್ ಅಧಿಕಾರಿಗಳ ತಂಡ ಇಂದು ಬೆಳ್ತಂಗಡಿಗೆ‌ ಆಗಮಿಸಿದ್ದು,ಇನ್ನು ಕೆಲವು ಅಧಿಕಾರಿಗಳು ನಾಳೆ ಬರುವವರಿದ್ದಾರೆ.ಅವರಲ್ಲಿ ಡಿಸಿಪಿ ಸೌಮ್ಯಲತ ಅವರು ತನಿಖೆಯಿಂದ ಹಿಂದೆ ಸರಿದಿದ್ದಾರೆ ಎಂದು ಹೇಳಲಾಗುತ್ತಿದ್ದು,ಅಧಿಕೃತ ಮಾಹಿತಿ ಲಭ್ಯವಾಗಿಲ್ಲ. ನೇಮಕಾತಿ ವಿಭಾಗದ ಡಿಐಜಿ ಎಂ.ಎನ್. ಅನುಚೇತ್ ತಂಡದಲ್ಲಿದ್ದು, ದಕ್ಷಿಣ ಕನ್ನಡ, ಉಡುಪಿ, ಚಿಕ್ಕಮಗಳೂರಿನ ಪೊಲೀಸ್ ಅಧಿಕಾರಿಗಳನ್ನು ತನಿಖೆಗಾಗಿ ಸರಕಾರ ನಿಯೋಜಿಸಿದೆ.ನಾಳೆಯಿಂದ ತನಿಖೆ ಆರಂಭವಾಗಲಿದೆ ಎಂದು ಹೇಳಲಾಗುತ್ತಿದೆ. ಅನನ್ಯ ಭಟ್ ಎನ್ನುವ ಯುವತಿ ನಾಪತ್ತೆ ಆಗಿರುವ ಪ್ರಕರಣದಲ್ಲಿ ಕೆಲವು ವಿಜ್ಞಾನಿಗಳು, ತಂತ್ರಜ್ಞರು ತನಿಖೆಯ ಸಂದರ್ಭದಲ್ಲಿ ನ್ಯಾಯಾಲಯದ ಅನುಮತಿ ಪಡೆದು ಸಹಾಯ ಮಾಡುವುದಾಗಿ ಆಕೆಯ ತಾಯಿಗೆ ಸಹಾಯ ಮಾಡುವುದಾಗಿ ಭರವಸೆ ನೀಡಿದ್ದಾರೆ ಎಂದು ಹೇಳಲಾಗುತ್ತಿದೆ.

ಧರ್ಮಸ್ಥಳ ಅಸಹಜ ಸಾವಿನ ಪ್ರಕರಣ: ಬೆಳ್ತಂಗಡಿಯಲ್ಲಿ ಎಸ್ ಐ ಟಿ ತನಿಖಾ ಕಚೇರಿ‌ ಆರಂಭ.