ಆಹಾರ ಬದುಕುವ ಸಾಧನ-ಮೌಲ್ಯಯುತವಾಗಿರಬೇಕು

ಆಹಾರ ಬದುಕುವ ಸಾಧನ-ಮೌಲ್ಯಯುತವಾಗಿರಬೇಕು

Let food be thy medicine and medicine be thy food - Hippocrates

ಪುರಾತನ ಗ್ರೀಕ ಫಿಜಿಷಿಯನ್ ಆಹಾರದ ಬಗ್ಗೆ ಹೇಳಿದ ಮಾತಿದು. ಆಹಾರವೆಂದರೆ ಬರೀ ತಿನ್ನುವುದಲ್ಲ, ಅದು ಬದುಕುವ ಸಾಧನ, ಮೌಲ್ಯಯುತವಾಗಿರಬೇಕು.  ಆಹಾರ ಸುರಕ್ಷತಾ ಉಲ್ಲಂಘನೆಯ ವಿರುದ್ಧ ಅಧಿಕಾರಿಗಳು  ಸಮಗ್ರ ಕ್ರಮ ಕೈಗೊಂಡ ನಂತರ 84 ಆಹಾರ ವಲಯಗಳನ್ನು ರದ್ದುಗೊಳಿಸಲಾಯಿತು.  ಆಹಾರ ಪದ್ಧತಿಯಿಂತ ಮಧ್ಯ ವಯಸ್ಕರಲ್ಲಿ ಸಂಭವಿಸುತ್ತಿರುವ ಹೃದಯಾಘಾತ, ಜನರಲ್ಲಿ ಕಾಣಿಸಿಕೊಳ್ಳುತ್ತಿರುವ ನವನವೀನ ರೀತಿಯ ಆರೋಗ್ಯ ಸಮಸ್ಯೆಗಳು, ಚಿಕ್ಕ ಮಕ್ಕಳಿಗೂ ಸಹ  ಪಾಸ್ಟಪುಡ್ ಅಡಿಕ್ಶನ ನಿರಂತರವಾದಾಗ, ಇದಕ್ಕೊಂದು ಕಡಿವಾಣ ಹಾಕಲು ಕಲಬೆರಕೆಯ ಆಹಾರ ತಯಾರಿಸುವ ಉದ್ಯಮವನ್ನು , ಆ ಅಹಾರ ಪದಾರ್ಥಗಳನ್ನು ಬಳಸುವ ಹಲವು ರೆಸ್ಟೊರೆಂಟಗಳನ್ನು ಸೌದಿ ಅರೇಬಿಯಾ ರದ್ದುಗೊಳಿಸಿತು. ಕಾರಣ ಆಹಾರ ಮೌಲ್ಯಯುತವಾಗಿರಲಿಲ್ಲ. 

ಆಹಾರವು ಜೀವನಾಧಾರಕ್ಕಾಗಿ ಮಾನವ ಮತ್ತು ಇತರ ಜೀವಿಗಳಿಗೆ ಮೂಲಭೂತ ಅವಶ್ಯಕತೆಯಾಗಿದೆ.

ಮನುಷ್ಯನ ಮೂಲಭೂತ ಅವಶ್ಯಕತೆಗಳಲ್ಲಿ ಗಣನೀಯ ಬದಲಾವಣೆಗಳಾಗಿವೆ. ಇತರ ಜೀವಿಗಳ ಅವಶ್ಯಕತೆ ಮೊದಲಿನಂತೆ ಇದೆ.
ಈಗ ಆರೋಗ್ಯಕ್ಕಾಗಿ ಯಾರು ಆಹಾರ ಸೇವನೆ ಮಾಡುವುದಿಲ್ಲ, ರುಚಿಗಾಗಿ. ರುಚಿ ಕೇವಲ ಆನಂದಕ್ಕಾಗಿ ಇರುವಂಥದ್ದು. ಒಂದು ಕ್ಷಣಿಕ ಸಂವೇದನೆ. ರುಚಿ ಎನ್ನುವಂಥದ್ದು ಆಹಾರ ಸೇವಿಸುವ ಕ್ರಿಯೆಯನ್ನು  ಆನಂದದ ಕ್ಷಣವಾಗಿ ಮಾರ್ಪಡಿಸುತ್ತದೆ ಎನ್ನುತ್ತಾರೆ ಇಂದಿನ ಯುವ ಜನಾಂಗ.

ಮೊದಲೆಲ್ಲ ಬಟ್ಟೆಗಳು, ಆಭರಣಗಳು  fashion  Symbol ಆಗಿದ್ದವು. ಆರಾಮದಾಯಕ ಬಟ್ಟೆ ಧರಿಸುವ ಕಾಲ ಮುಗಿದಿದೆ. ಕೆಲವು ಉಡುಪು ಉಸಿರುಗಟ್ಟಿಸಿದರೂ ಪ್ಯಾಷನಗಾಗಿ  ಧರಿಸುವ ಅಭ್ಯಾಸ ಚಾಲ್ತಿಯಲ್ಲಿದೆ.ಆಭರಣದ ವಿಚಾರ ತೆಗೆದುಕೊಂಡರೆ ಇದು ಶ್ರೀಮಂತಿಕೆ ಪ್ರದರ್ಶಿಸುವ ಸಾಧನ. ಈ ಫ್ಯಾಷನ್ ಈಗ ಆಹಾರ ಪದಾರ್ಥಗಳ ಮೇಲೆ ತನ್ನ ಛಾಪು ಮೂಡಿಸಿದೆ. ಜನರು ಕೇವಲ ತೋರಿಕೆಗೆ, rich food , ಪಾಶ್ವಿಮಾತ್ಯ ಆಹಾರ ಸೇವಿಸುತ್ತೇವೆ, ಆಧುನಿಕ ಜನರು ನಾವು ಎಂದು ಬಿಂಬಿಸುವ ಖಯಾಲಿಗೆ ತಲುಪಿದ್ದಾರೆ., ಕೇವಲ ರುಚಿಗಾಗಿ ಮೋಜಿಗಾಗಿ ಆಹಾರ ಪದಾರ್ಥಗಳನ್ನು ಬಳಸತೊಡಗಿದಾಗ , ಆಹಾರ ಉದ್ಯಮಗಳು ಸಹ ಅಂತಹ ಉತ್ಪನ್ನವನ್ನು ಮಾರುಕಟ್ಟೆಗೆ ತರುತ್ತಿದೆ.

ಇವೆಲ್ಲ ಆಹಾರ ಮನುಷ್ಯನಿಗೆ ಮಾರಕ, ಸೇವಿಸಬಾರದೆಂದು ತಿಳಿದರೂ ಅದಕ್ಕೆ ಮುಗಿಬೀಳುವ ಜನರು, ಮಕ್ಕಳನ್ನೂ ಸೇರಿಸಿ ಜಗತ್ತಿನಾದ್ಯಂತ ಮುಂದುವರಿಯುತ್ತಿರುವ ಹಾನಿಕಾರಕ ಪ್ರವೃತ್ತಿ ಬೆಳೆದಿದೆ.
 ಮೋಜು, ರುಚಿಗಾಗಿ ಆಹಾರ ಸೇವನೆ ಮಾನಸಿಕ ಖಾಯಿಲೆಯ ಒಂದು ರೂಪವಾಗಿದೆ. ಈ ಮಾನಸಿಕ ಸಮಸ್ಯೆಯನ್ನು ನಿಯಂತ್ರಿಸುವುದು ಅಸಾಧ್ಯವಾಗಿದೆ. ಹಾನಿಕಾರಕ ಆಹಾರ ಮಾರಕವೆಂದು ಹಲವು ದೇಶಗಳು ಆಹಾರದ ಮೇಲೆ ನಿಷೇಧ ಹೇರುತ್ತವೆ.  ಸೌದಿ ಅರೇಬಿಯಾದ food and safety ಡಿಪಾರ್ಟಮೆಂಟ ಸಹ ನಿಷೇಧ ಹೇರುತ್ತದೆ.

ಅಗಸ್ಟ ತಿಂಗಳಲ್ಲಿ ಕ್ರಮವಾಗಿ 84 ಆಹಾರ ವಲಯಗಳನ್ನು ಇಲ್ಲಿಯ ಅಧಿಕಾರಿಗಳು ರದ್ದುಗೊಳಿಸಿದರು.  ಇಲ್ಲಿಯ ಹಲವಾರು ರೆಸ್ಟೋರೆಂಟ್ , ಖಾನಾವಳಿಗಳನ್ನು ಗಮನಿಸಿದರೆ ಕಟ್ಟುನಿಟ್ಟಿನ ಕಾನೂನು ಪಾಲನೆಯನ್ನು ನಾವು ಗಮನಿಸಬಹುದು.

ಇಲ್ಲಿಯ ಹಲವಾರು ರೆಸ್ಟೋರೆಂಟಗಳಲ್ಲಿ ನೆಲದ ಮೇಲೆ ಕುಳಿತು ಆರಾಮವಾಗಿ ಊಟ ಮಾಡುವ ಪದ್ಧತಿ ಇಂದಿಗೂ ಜಾರಿಯಲ್ಲಿದೆ. 
ಆಹಾರ ನಿರೀಕ್ಷಕರು ಸಮವಸ್ತ್ರ ಧರಿಸದೆ ಆಹಾರ ವಲಯಗಳಿಗೆ ಭೇಟಿ ನೀಡುತ್ತಾರೆ. 
ನಾಲ್ಕು ಜನರಲ್ಲಿ ಒಂದಾಗಿ ಬೆರೆತು, ಎಲ್ಲರ ಜೊತೆಗೆ , ಜನರ ಮಧ್ಯೆ ಕುಳಿತು ಆಹಾರ ಸೇವಿಸಿ ಗಮನಿಸುತ್ತಾರೆ. ಕಾನೂನಿಗೆ ವಿರುದ್ಧವಾದ ನಿಯಮಗಳಿದ್ದರೆ, ಆಹಾರದ ಕಲಬೆರಕೆ,ಸ್ವಚ್ಛತೆ, ಅನಾನುಕೂಲ ಸೌಲಭ್ಯಗಳನ್ನು ಒಳಗೊಂಡು, ಇವನ್ನೆಲ್ಲ  ಗಮನಿಸಿ, ಪರೀಕ್ಷಿಸಿದ ನಂತರ ಎಚ್ಚರಿಕೆಯ  ಸೂಚನೆಯನ್ನು ಕಳುಹಿಸುತ್ತಾರೆ.ನಮೂದಿತ ಅಂಶಗಳನ್ನು ತಕ್ಷಣ ಸರಿಪಡಿಸಿಕೊಳ್ಳಬೇಕು. ಆಹಾರ ನಿರೀಕ್ಷಕರು ಪುನಃ ಪುನಃ ತಪಾಸಣೆ ಮಾಡುತ್ತಲೇ ಇರುತ್ತಾರೆ ಅರಿವಿಗೆ ನಿಲುಕದಂತೆ. ಇದು street food ನಿಂದ five star ಹೊಟೇಲಗಳಿಗೆ ಸಮಾನವಾದ ನಿಯಮಾವಳಿಗಳಿವೆ. ಕೆಲವೊಮ್ಮೆ 15 ದಿನಗಳಿಗೆ ರೆಸ್ಟೋರೆಂಟ್ ಇಲ್ಲವೆ ಆಹಾರ ತಯಾರಕ ವಲಯಗಳನ್ನು ಸೀಸ್ ಮಾಡುತ್ತಾರೆ. ಮತ್ತೆ ಅವಕಾಶ ಕೊಡುತ್ತಾರೆ, food and safety ಯ ಸೂಚನೆಯ ಮೂಲಕ ಆಹಾರ ಸುರಕ್ಷತೆಯನ್ನು ಪುನಃ ಪುನಃ ಉಲ್ಲಂಘಿಸಿದಾಗ, ಜನರ ಆರೋಗ್ಯಕ್ಕೆ ಮಾರಕವೆನಿಸಿದಾಗ ಆ ವಲಯವನ್ನು ರದ್ದುಗೊಳಿಸುತ್ತಾರೆ. ಸಾಮಾನ್ಯ ಜನರು ಸಹ ತಮ್ಮ ದೂರುಗಳನ್ನು ದಾಖಲಿಸಬಹುದು. ಅದರ ವಿಚಾರಣೆಯ ಜೊತೆಗೆ ಕ್ರಮವನ್ನು ಜಾರಿಗೊಳಿಸುತ್ತಾರೆ.

ಹಬ್ಬಗಳಲ್ಲಿ, ಜನ್ಮದಿನದ ಆಚರಣೆಯಲ್ಲಿ , ವಾರ್ಷಿಕೋತ್ಸವಗಳಂತಹ ವಿಷೇಶ ಸಂದಂರ್ಭದಲ್ಲಿ ಅಥವಾ ಪ್ರೀತಿ  ಪಾತ್ರರನ್ನು ಭೋಜನಕ್ಕೆ, ಆತಿಥ್ಯಕ್ಕೆ ಆಹ್ವಾನಿಸಿದ ವೇಳೆಯಲ್ಲಿ (ಆಹಾರ,  ಊಟ- ತಿಂಡಿಗಳು) ಕುಟುಂಬದ ಸದಸ್ಯರನ್ನು ಒಗ್ಗೂಡಿಸುವಲ್ಲಿ, ಜನರನ್ನು ಪ್ರೀತಿಯಿಂದ ಒಟ್ಟಿಗೆ ಸೇರಿಸುವ ಕೆಲಸವನ್ನು ಮಾಡುವ ಮಾಧ್ಯಮ ಆಹಾರ.

ಆಹಾರದ ಸಮತೋಲನವನ್ನು ಮನುಷ್ಯ ತನ್ನ ಆರೋಗ್ಯದ ದೃಷ್ಟಿಯಿಂದ ಕಾಪಾಡಿಕೊಳ್ಳಬೇಕು. 

ಇಲ್ಲಿ ಸ್ವಾಮಿ ವಿವೇಕಾನಂದರ ಮಾತನ್ನು ಸಹ ಸ್ಮರಿಸಬಹುದು. ವಿವೇಕಾನಂದರು ಕಟ್ಟು ನಿಟ್ಟಾದ ಸಸ್ಯಾಹಾರಿಯಾಗಿರಲಿಲ್ಲ. ಅವರು ಆಗಾಗ್ಗೆ ಪಶ್ಚಿಮಕ್ಕೆ ಪ್ರಯಾಣಿಸುತ್ತಿದ್ದಾಗ ಸಸ್ಯಾಹಾರಿ ಆಹಾರವನ್ನು ಹುಡುಕುವಲ್ಲಿ ತೊಂದರೆಯಾಗುತ್ತಿತ್ತು.  ಒಮ್ಮೆ ಅಮೇರಿಕಾದ ಭೇಟಿಯಲ್ಲಿ,  ಅಲ್ಲಿ ತಂಗಿದ್ದಾಗ, ಪರಿಸರಕ್ಕೆ ಅನುಕೂಲವಾಗುವಂತೆ ಆಹಾರ ಸೇವನೆ ಮಾಡಬೇಕು. ಇಲ್ಲಿಯ ಚಳಿಗೆ ಕೇವಲ ಪೊಟೇಟೋ ಸೇವಿಸಿದರೆ ನನಗೆ ಶಕ್ತಿ ದೊರಕದು, ಮಾಂಸ ಸೇವಿಸಬೇಕು ಎಂದಿದ್ದಾರೆ. ಯಾವುದೇ ಆಹಾರವಿರಲಿ, ಕಲಬೆರಕೆಯಿಲ್ಲದೆ ಮನುಷ್ಯನಿಗೆ ಆರೋಗ್ಯದಾಯಕವಾಗಿರಬೇಕು, ಆಹಾರ ಮೋಜಿಗಾಗಿ ಅಲ್ಲ ಎಂಬುದನ್ನು ತಿಳಿಸಿದ್ದಾರೆ. Guru to the World - ರುತ್ ಹೇರಿಸ ಬರೆದ ಬಯೋಗ್ರಾಫಿಯಲ್ಲಿ ಹೇಳಿದ್ದಾರೆ.

ಜಗತ್ತಿನ ಯಾವುದೇ ದೇಶವಾಗಿರಲಿ, ಸರ್ಕಾರ ಮತ್ತು ಆಹಾರ ವಲಯಗಳು, ವ್ಯವಹಾರಗಳು ಒಟ್ಟಾಗಿ ಹಲವಾರು ನಿಯಮಗಳು ಮತ್ತು ನಿರ್ಬಂಧನೆಗಳನ್ನು ಜಾರಿಗೆ ತರುವ ಮೂಲಕ ಉದ್ದೇಶ ಪೂರ್ವಕ ಕಲಬೆರಕೆಯ ಪ್ರಯತ್ನಗಳನ್ನು ಹತ್ತಿಕ್ಕಬಹುದು. ಹಾನಿಕಾರಕ ಆಹಾರಗಳ ನಿರ್ಬಂಧನಗಳು ಜನರ ಆರೋಗ್ಯಯುತ ಜೀವನಕ್ಕೆ, ದೀರ್ಘಾಯುಷ್ಯಕ್ಕೆ ನಾಂದಿಯಾಗಬಹುದು.

-ಡಾ.ವಾಣಿ ಸಂದೀಪ್