ಬಹುಪಯೋಗಿ ಈ ಸೊಪ್ಪುಹಕ್ಕರಕಿ-ಹತ್ತರಕಿ

ಬಹುಪಯೋಗಿ ಈ ಸೊಪ್ಪುಹಕ್ಕರಕಿ-ಹತ್ತರಕಿ

#ಹಕ್ಕರಕಿ / #ಹತ್ತರಕಿ (ಟರ್ಯಾಕ್ಸಕಮ್ ಅಫಿಷಿನೇಲ್ ಕುಲದ ಸಸ್ಯ)

ಹಕ್ಕರಕಿ ಅಥವಾ ಹತ್ತರಕಿ ಎನ್ನುವ ಸಸ್ಯವು ಹುಲ್ಲಿನಂತೆ ಕಾಣುವ, ಅಗಲವಾದ ಎಲೆಗಳನ್ನು ಬಿಡುವ ಒಂದು ವಿಶೇಷವಾದ ಸೊಪ್ಪಿನ ಗಿಡ. ಇದನ್ನು ಟರ್ಯಾಕ್ಸಕಮ್ ಅಫಿಷಿನೇಲ್ (Taraxacum officinale) ಎಂಬ ಸಸ್ಯಕುಲಕ್ಕೆ ಸೇರಿಸಿದವರು. ಮುಖ್ಯವಾಗಿ ಉತ್ತರ ಕರ್ನಾಟಕ ಭಾಗದಲ್ಲಿ ಇದು ಹೆಚ್ಚಾಗಿ ಕಂಡುಬರುತ್ತದೆ. ಬೆಳೆಯ ಮಧ್ಯ ವರ್ಷವಿಡೀ ತಾನೇ ತಾನಾಗಿ ಹುಟ್ಟಿ ಬೆಳೆಯುವ ಈ ಸಸ್ಯವನ್ನು ರೈತರು ಸಾಮಾನ್ಯವಾಗಿ ಹೊಲಗಳಲ್ಲಿ ಕಾಣುತ್ತಿದ್ದರು.

ಈ ಸೊಪ್ಪು ಅತ್ಯಂತ ಬಹುಪಯೋಗಿ. ಅದಕ್ಕಾಗಿ ಇದನ್ನು ಯಾರೂ ಬೀಜ ಬಿತ್ತನೆ ಮಾಡಿ ಬೆಳೆಯುವುದಿಲ್ಲ; ಬದಲಿಗೆ ಗಾಳಿಯಿಂದ ಬೀಜ ಹರಡಿಕೊಂಡು ಎಲ್ಲೆಡೆ ತಾನೇ ಬೆಳೆಯುತ್ತದೆ.

ರೈತರ ಬದುಕಿನ ಅಂಗವಾಗಿ ಹತ್ತರಕಿ
ಹತ್ತರಕಿ ಪಲ್ಲೆ ರೈತರ ಜೀವನದ ಜೊತೆ ಬೆಸೆದುಕೊಂಡಿತ್ತು. ಹೊಲದಲ್ಲಿ ಬುತ್ತಿ ಬಿಚ್ಚಿ ಊಟಕ್ಕೆ ಕುಳಿತಾಗ, ಪಕ್ಕದಲ್ಲೇ ನೆಲದಲ್ಲಿ ಹರಡಿಕೊಂಡಿರುವ ಈ ಹತ್ತರಕಿ ಪಲ್ಲೆ ಕಿತ್ತು ತಿನ್ನುವ ರೂಢಿ ಇತ್ತು. ಆಗ ಹಿರಿಯರು "ಹತ್ತರಕಿ ಪಲ್ಲೆ ತಿಂದರೆ ಹೊಟ್ಟೆಯಲ್ಲಿರುವ ಕಲ್ಲು ಸಹ ಕರಗುತ್ತದೆ" ಎಂದು ನಂಬಿಕೆ ಹೊಂದಿದ್ದರು. ಅಂದರೆ, ಇದು ಜೀರ್ಣಕ್ರಿಯೆಗೆ ಸಹಾಯಕ, ಹೊಟ್ಟೆ ಶುದ್ಧಿ ಮಾಡುವ ಗುಣವನ್ನು ಹೊಂದಿದೆ ಎಂಬುದೇ ಜನಪದ ಜ್ಞಾನ.

ಪೌಷ್ಠಿಕ ಮೌಲ್ಯ
ಹತ್ತರಕಿ ಸೊಪ್ಪು ಪೌಷ್ಠಿಕಾಂಶಗಳಲ್ಲಿ ಶ್ರೀಮಂತ. ಇದರಲ್ಲಿ

ಕಬ್ಬಿಣ,

ಕ್ಯಾಲ್ಸಿಯಂ,

ವಿಟಮಿನ್ A, C, K,

ನೈಸರ್ಗಿಕ ಖನಿಜಾಂಶಗಳು,

ಆ್ಯಂಟಿ-ಆಕ್ಸಿಡೆಂಟ್‌ಗಳು ಹೆಚ್ಚಾಗಿ ದೊರೆಯುತ್ತವೆ.

ಇವು ದೇಹಕ್ಕೆ ಅಗತ್ಯವಾದ ಶಕ್ತಿ ನೀಡುವುದಲ್ಲದೆ, ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುವುದರಲ್ಲಿ ಮಹತ್ವದ ಪಾತ್ರ ವಹಿಸುತ್ತವೆ.

ಪೂರ್ವಜರ ಜ್ಞಾನ ಮತ್ತು ಉಪಯೋಗ
ನಮ್ಮ ಪೂರ್ವಜರು, ರೈತರ ಸಮುದಾಯವು ಪ್ರಕೃತಿಯ ಈ ಸಸ್ಯವನ್ನು ಬಹು ಉಪಯುಕ್ತವೆಂದು ಗುರುತಿಸಿ, ಅದನ್ನು ನಿತ್ಯ ಜೀವನದಲ್ಲಿ ಬಳಸಿಕೊಂಡಿದ್ದರು. ಹತ್ತರಕಿ ಪಲ್ಲೆ, ಮೆಂತೆ ಪಲ್ಲೆ, ಸೌತೆಕಾಯಿ, ಗಜ್ಜರಿ, ಮೂಲಂಗಿ ಇತ್ಯಾದಿ ತರಕಾರಿಗಳನ್ನು ಹಸಿಯಾಗಿ ತಿನ್ನುವ ಅಭ್ಯಾಸದ ಮೂಲಕ ದೇಹದಲ್ಲಿ ರೋಗ ನಿರೋಧಕ ಶಕ್ತಿ ಹೆಚ್ಚುತ್ತದೆ ಎಂಬ ಸಂದೇಶವನ್ನು ಸಾವಿರಾರು ವರ್ಷಗಳ ಹಿಂದೆಯೇ ನೀಡಿದ್ದಾರೆ.

ಇಂದಿನ ವಿಜ್ಞಾನವು ಸಹ ಈ ನಂಬಿಕೆಯನ್ನು ದೃಢಪಡಿಸಿದೆ. ಹತ್ತರಕಿ ಸೊಪ್ಪು ಜೀರ್ಣಕ್ರಿಯೆಯನ್ನು ಸುಧಾರಿಸುವುದು, ರಕ್ತವನ್ನು ಶುದ್ಧಗೊಳಿಸುವುದು, ಚರ್ಮದ ಆರೋಗ್ಯ ಕಾಪಾಡುವುದು, ಹಾಗೂ ಶಕ್ತಿದಾಯಕ ಆಹಾರವಾಗಿರುವುದು ಎಂದು ಗುರುತಿಸಲಾಗಿದೆ.

ಅಂತರರಾಷ್ಟ್ರೀಯ ಹೆಸರು
ಈ ಹತ್ತರಕಿಗೆ ಆಂಗ್ಲ ಭಾಷೆಯಲ್ಲಿ Dandelion Greens (ಡ್ಯಾಂಡಿಲಿಯನ್ ಸೊಪ್ಪು) ಎಂದು ಕರೆಯುತ್ತಾರೆ. 

ಬೇರು ಭೂಮಿ