ಮೈಸೂರು ಅಥ್ಲೆಟಿಕ್ ಕ್ಲಬ್ಬಿನಿಂದ ಪತ್ರಿಕೋದ್ಯಮಿ ಗಣಪತಿಗೆ ಶ್ರದ್ಧಾಂಜಲಿ

ಮೈಸೂರು ಅಥ್ಲೆಟಿಕ್ಸ್ ಕ್ಲಬ್ ವತಿಯಿಂದ ಇತ್ತೀಚೆಗೆ ನಿಧನರಾದ ಮೈಸೂರು ಮಿತ್ರ, ಸ್ಟಾರ್ ಆಫ್ ಮೈಸೂರು ಪತ್ರಿಕೆಯ ಸಂಸ್ಥಾಪಕ ಸಂಪಾದಕ ಕೆ.ಬಿ.ಗಣಪತಿ ಅವರಿಗೆ ಶ್ರದ್ಧಾಂಜಲಿ ಸಲ್ಲಿಸಲಾಯಿತು. ಮೈಸೂರು ವಿಶ್ವವಿದ್ಯಾನಿಲಯದ ಓವಲ್ ಮೈದಾನದಲ್ಲಿ ಇಂದು ಶನಿವಾರ ಬೆಳಿಗ್ಗೆ ನಡೆದ ಸಂತಾಪ ಸೂಚಕ ಸಭೆಯಲ್ಲಿ ಅವರ ಆರು ದಶಕಗಳ ಪತ್ರಿಕೋದ್ಯಮದ ಸೇವೆಯನ್ನು ಸ್ಮರಿಸಲಾಯಿತು.ಮುಖ್ಯ ಅತಿಥಿಯಾಗಿದ್ದ ವಿಶ್ರಾಂತ ಪ್ರಾಧ್ಯಾಪಕ ಪ್ರೊಫೆಸರ್ ಸಿ.ನಾಗಣ್ಣ ಮಾತನಾಡಿ ಕ್ಷಾತ್ರ ಪರಂಪರೆಯಿಂದ ಬಂದ ಗಣಪತಿ ಅವರು ಹೋರಾಟ ಮನೋಭಾವದಿಂದ ಕೌಶಲ್ಯ ಪೂರ್ಣವಾದ ಪತ್ರಿಕೋದ್ಯಮವನ್ನು ಆರು ದಶಕಗಳ ಕಾಲ ಸವಾಲಾಗಿ ಸ್ವೀಕರಿಸಿ ನಡೆಸಿದರು ಎಂದರು.ಕ್ರೀಡೆಯಿಂದ ಸಾಮಾಜಿಕ ಸದೃಢತೆ ತರುವುದರೊಂದಿಗೆ ಉತ್ತಮ ಮೌಲ್ಯವನ್ನು ರೂಪಿಸಿ ಜನರನ್ನು ಬೆಳೆಯಬಹುದು ಎಂದರಿತಿದ್ದ ಅವರು ತಮ್ಮ ಪತ್ರಿಕೆಯಲ್ಲಿ ಕ್ರೀಡೆಗೆ ಮಹತ್ವದ ಪ್ರೋತ್ಸಾಹ ನೀಡಿದರು ಎಂದು ಸ್ಮರಿಸಿದರು. ಕ್ರೀಡಾ ಅಂಕಣಕಾರ ಸಿ.ಕೆ.ಮುರಳೀಧರನ್, ದೈಹಿಕ ಶಿಕ್ಷಣ ನಿರ್ದೇಶಕ ಡಾ.ವೆಂಕಟೇಶ್, ಡಾ.ಸದಾಶಿವ ಭಟ್,ಡಾ.ಪಿ.ಕೃಷ್ಣಯ್ಯ,ಪತ್ರಕರ್ತ ಟಿ.ಆರ್.ಸತೀಷ್,ಕ್ಲಬ್ ಉಪಾಧ್ಯಕ್ಷ ರಾಜ್ ಪುರೋಹಿತ್,ವಕೀಲ ಸುರೇಶ್ ಕುಮಾರ್ ಮಾತನಾಡಿದರು. ಕ್ಲಬ್ಬಿನ ಉಪಾಧ್ಯಕ್ಷ ಚೈನ್ ಸಿಂಗ್,ಕಾರ್ಯದರ್ಶಿ ಎಂ.ಯೋಗೇಂದ್ರ, ಕೋಚ್ ಜಿ.ಆರ್.ಪ್ರಭಾಕರ್,ರಾಷ್ಟ್ರೀಯ ಅಥ್ಲೆಟ್ ಗುರುರಾಜ್,ಕೆ.ಮಹದೇವಯ್ಯ,ಶ್ರೀಕಾಂತ್,ಎಂ.ಪಿ.ಚಂದ್ರಶೇಖರ, ಎಸ್.ಮಹದೇವ, ಎಂ.ಉಮೇಶ್, ಗಣೇಶ್, ಕರಾಟೆ ಸಿದ್ಧರಾಜು,ಸ್ವಿಮ್ಮಿಂಗ್ ಕೋಚ್ ಜಗದೀಶ್, ಪತ್ರಕರ್ತರಾದ ಎಂ.ಎಸ್.ರಾಜೇಂದ್ರಕುಮಾರ್,ಬಿ.ಆರ್.ಮಂಜುನಾಥ, ಪತ್ರಿಕಾ ಛಾಯಾಗ್ರಹಕರ ಯಾದವ್ ಉಪಸ್ಥಿತರಿದ್ದರು.

1.